ಮತದಾನ ಚಿತ್ರಗಳು : ಹಿರಿಯರೇ ಮತ ಹಾಕುವಲ್ಲಿ ಮುಂದು

Posted By:
Subscribe to Oneindia Kannada

ಬೆಂಗಳೂರು, ಏ.24: ಲೋಕಸಭಾ ಚುನಾವಣೆಯ 6ನೇ ಹಂತದ ಮತದಾನ ಪ್ರಕ್ರಿಯೆಗೆ ಚುರುಕಿನಿಂದ ಸಾಗಿದೆ. ಮಧ್ಯಾಹ್ನದ ತನಕದ ವರದಿಯಂತೆ ತಮಿಳುನಾಡು, ಪಶ್ಚಿಮ ಬಂಗಾಳದಲ್ಲಿ ಉತ್ತಮ ಮತದಾನ ಕಂಡು ಬಂದಿದೆ. 6ನೇ ಹಂತದಲ್ಲಿ 11 ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶ ಸೇರಿದಂತೆ 117 ಕ್ಷೇತ್ರಗಳಲ್ಲಿ ಮತದಾನ ಹಬ್ಬ ನಡೆದಿದೆ.

ಲೋಕಸಭೆಯ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್, ಕೇಂದ್ರ ಸಚಿವರಾದ ಮಿಲೇಂದ್ ದೇವೂರ, ನಮೋ ನಾರಾಯಣ್ ಮೀನ, ಜಿತೇಂದ್ರ, ಮಾಜಿ ಸಚಿವರಾದ ಎ.ರಾಜ, ದಯಾನಿಧಿ ಮಾರನ್, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹಮ್ಮದ್ ಅಜರುದ್ದೀನ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಪತ್ನಿ ಡಿಂಪಲ್, ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಪುತ್ರ ಕಾರ್ತಿಕ್ ಚಿದಂಬರಂ, ಬಾಲಿವುಡ್ ‌ನ ಕನಸಿನ ಕನ್ಯೆ ಹೇಮಾಮಾಲಿನಿ, ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಷಿದ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್‌ಸಿಂಗ್ ಸಹೋದರ ಲಕ್ಷ್ಮಣ್‌ಸಿಂಗ್, ಬಾಲಿವುಡ್ ನಟ ಸಂಜಯ್‌ದತ್ ಸಹೋದರಿ ಪ್ರಿಯಾದತ್, ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪುತ್ರ ಅಭಿಜಿತ್ ಸೇರಿದಂತೆ ಅನೇಕರು ಸ್ಪರ್ಧಾ ಕಣದಲ್ಲಿದ್ದಾರೆ.[ಚಿತ್ರಗಳಲ್ಲಿ: ಚೆನ್ನೈ ತಾರೆಯರು, ಮುಂಬೈ ನೀರೆಯರು]

ಉಗ್ರರು ಹಾಗೂ ನಕ್ಸಲ್ ಪೀಡಿತ ರಾಜ್ಯಗಳಲ್ಲಿ ಮತದಾನ ನಡೆಯುತ್ತಿರುವುದರಿಂದ ಈ ಬಾರಿ ಹಿಂದೆಂದಿಗಿಂತಲೂ ಭದ್ರತೆಯನ್ನು ಕೈಗೊಳ್ಳಲಾಗಿದೆ. ದೇಶದೆಲ್ಲೆಡೆಯಿಂದ ಸಂಗ್ರಹಿತವಾಗಿರುವ ಚಿತ್ರಗಳು, ಮೊದಲ ಬಾರಿ ವೋಟ್ ಮಾಡಿದವರ ಟ್ವೀಟ್ ಇಲ್ಲಿದೆ ನೋಡಿ

ತಮಿಳುನಾಡಿನ ಹಿರಿಯ ನಾಗರಿಕರಿಂದ ಮತದಾನ
  

ತಮಿಳುನಾಡಿನ ಹಿರಿಯ ನಾಗರಿಕರಿಂದ ಮತದಾನ

ತಮಿಳುನಾಡಿನ ಗೋಪುಲಾಪುರಂನಲ್ಲಿ ಮತಯಂತ್ರ ದೋಷ ಕಂಡು ಬಂದಿದ್ದು ಹಿರಿಯ ನಾಗರಿಕರು ಕೆಲ ಹೊತ್ತು ಕಾದು ನಂತರ ಮತ ಹಾಕಿದರು.

ಗುವಾಹಟಿಯಲ್ಲಿ ಹಿರಿಯಜ್ಜಿಯಿಂದ ಮತದಾನ
  

ಗುವಾಹಟಿಯಲ್ಲಿ ಹಿರಿಯಜ್ಜಿಯಿಂದ ಮತದಾನ

ಗುವಾಹಟಿಯಲ್ಲಿ 96ರ ಹರೆಯ ಹಿರಿಯಜ್ಜಿಯಿಂದ ಮತದಾನ

ನಾನು ವೋಟ್ ಮಾಡಿದೆ ನೀವು
  

ನಾನು ವೋಟ್ ಮಾಡಿದೆ ನೀವು

ನಾನು ವೋಟ್ ಮಾಡಿದೆ ನೀವು ಪ್ರಶ್ನಿಸುತ್ತಿರುವ ಗುವಾಹಟಿಯ ಹಿರಿಯ ಅಜ್ಜಿ

ಬಿಹಾರ, ಜಾರ್ಖಂಡ್ ನಲ್ಲಿ ಮತದಾನ
  

ಬಿಹಾರ, ಜಾರ್ಖಂಡ್ ನಲ್ಲಿ ಮತದಾನ

ಬಿಹಾರ, ಜಾರ್ಖಂಡ್ ನಲ್ಲಿ ಮತದಾನ ಪ್ರಕ್ರಿಯೆ ನಿಧಾನಗತಿಯಿಂದ ಚುರುಕುಗೊಳ್ಳುತ್ತಿದೆ. ನಿರ್ಸಾ ಕ್ಷೇತ್ರದ ಮಹಿಳಾ ಮತದಾರರ ಚಿತ್ರ

ಗುವಾಹಟಿಯಲ್ಲಿ ಬಿಸಿಲಿನಲ್ಲಿ ಮತದಾನ ಜೋರು
  

ಗುವಾಹಟಿಯಲ್ಲಿ ಬಿಸಿಲಿನಲ್ಲಿ ಮತದಾನ ಜೋರು

ಗುವಾಹಟಿಯಲ್ಲಿ ಬಿರು ಬಿಸಿಲಿನಲ್ಲಿ ಮತದಾನ ಜೋರು

ಕ್ರೈಸ್ತ ಸನ್ಯಾಸಿನಿಯರಿಂದ ಮತದಾನ
  

ಕ್ರೈಸ್ತ ಸನ್ಯಾಸಿನಿಯರಿಂದ ಮತದಾನ

ಮಧ್ಯಪ್ರದೇಶದಲ್ಲಿ ಕ್ರೈಸ್ತ ಸನ್ಯಾಸಿನಿಯರಿಂದ ಮತದಾನ

ಗುವಾಹಟಿಯಲ್ಲಿ ಮತದಾರರ ಸಾಲು
  

ಗುವಾಹಟಿಯಲ್ಲಿ ಮತದಾರರ ಸಾಲು

ಗುವಾಹಟಿಯಲ್ಲಿ ಗುರುವಾರ ಕಂಡು ಬಂದ ಮತದಾರರ ಸಾಲು

ಚೆನ್ನೈನ ಮತದಾನದ ಚಿತ್ರಗಳು
  

ಚೆನ್ನೈನ ಮತದಾನದ ಚಿತ್ರಗಳು

39ಕ್ಷೇತ್ರಗಳಲ್ಲಿ ಬಿರುಸಿನ ಮತದಾನ ಕಂಡು ಬಂದಿದೆ. ಮೊದಲ ಬಾರಿಗೆ ವೋಟ್ ಮಾಡಿದ ಖುಷಿಯಲ್ಲಿ ಅನೇಕರು ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.

  

ಮುಂಬೈನಲ್ಲಿ ಮತದಾನದ ಬಗ್ಗೆ ಟ್ವೀಟ್

ಮುಂಬೈನಲ್ಲಿ ಶೇಕಡಾವಾರು ಮತದಾನ ಕಡಿಮೆಯಾಗಿರುವ ಬಗ್ಗೆಬಗ್ಗೆ ಟ್ವೀಟ್

  

ಮುಂಬೈನಲ್ಲಿ ಮತದಾನದ ಬಗ್ಗೆ ಟ್ವೀಟ್

ಮುಂಬೈನಲ್ಲಿ ಶೇಕಡಾವಾರು ಮತದಾನ ಕಡಿಮೆಯಾಗಿದೆ ಏಳಿ ಎದ್ದೇಳಿ ವೋಟ್ ಮಾಡಿ ಎಂದು ಟ್ವೀಟ್

ಪಹಲ್ ಗಾಮ್ ನಲ್ಲಿ ಮತದಾನ
  

ಪಹಲ್ ಗಾಮ್ ನಲ್ಲಿ ಮತದಾನ

ದಕ್ಷಿಣ ಕಾಶ್ಮೀರದ ಪಹಲ್ ಗಾಮ್ ನಲ್ಲಿ ಮತದಾನ


English summary
Eleven states and one Union Territory will go to the election in the sixth phase of the Lok Sabha election 2014 on Thursday. A total number of 117 constituencies will go to the election in this phase, Oneindia brings news, images related to the upcoming election in pictures.

Please Wait while comments are loading...