Live : ಉತ್ತರಪ್ರದೇಶ, ಬಿಹಾರದಲ್ಲಿ ಉಪ ಚುನಾವಣೆ ಮತದಾನ

Posted By:
Subscribe to Oneindia Kannada

ಲಕ್ನೋ, ಮಾರ್ಚ್ 11: ಇಲ್ಲಿನ ಫುಲ್ ಪುರ್ ಹಾಗೂ ಗೋರಖಪುರ್ ಉಪಚುನಾವಣೆ ನಡೆದಿದ್ದು, ಮತದಾನ ಜಾರಿಯಲ್ಲಿದೆ. ಸಿಎಂ ಯೋಗಿ ಆದಿತ್ಯನಾಥ್ ಹಾಗೂ ಬಿಜೆಪಿಗೆ ಸೆಡ್ಡು ಹೊಡೆಯಲು ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜವಾದಿ ಪಕ್ಷಗಳು ಜಂಟಿಯಾಗಿ ಸಮರ ಸಾರಿವೆ. ಜತೆಗೆ ಬಿಹಾರದ ಅರಾರಿಯಾ ಕ್ಷೇತದಲ್ಲೂ ಮತದಾನ ಸಾಗಿದೆ.

ಉತ್ತರಪ್ರದೇಶದ ಮಾಜಿ ಸಿಎಂಗಳಾದ ಅಖಿಲೇಶ್ ಯಾದವ್ ಹಾಗೂ ಮಾಯಾವತಿ ಇಬ್ಬರು ಹಾಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ನಡೆಸಿರುವ ಮೊದಲ ಯುದ್ಧ ಇದಾಗಿದೆ. ಮಾರ್ಚ್ 14ರಂದು ಎರಡು ಕ್ಷೇತ್ರಗಳ ಫಲಿತಾಂಶ ಹೊರ ಬರಲಿದೆ.

ಗೋರಖಪುರ್ ನಲ್ಲಿ ಬಿಜೆಪಿಯಿಂದ ಉಪೇಂದ್ರ ಶುಕ್ಲಾ, ಕಾಂಗ್ರೆಸ್ಸಿನಿಂದ ಸುರ್ಹಿತಾ ಚಟರ್ಜಿ ವಿರುದ್ಧ ನಿಷಾದ್ ಪಾರ್ಟಿಯ ಸ್ಥಾಪಕ ಸಂಜಯ್ ನಿಷಾದ್ ಅವರ ಮಗ ಪ್ರವೀಣ್ ಕುಮಾರ್ ನಿಷಾದ್ ಅವರು ಸ್ಪರ್ಧಿಸುತ್ತಿದ್ದಾರೆ. ನಿಷಾದ್ ಗೆ ಸಮಾಜವಾದಿ ಪಕ್ಷ ಬೆಂಬಲ ಸಿಗಲಿದೆ.

ಫುಲ್ ಫುರ್ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದಿಂದ ಒಬಿಸಿ ಮುಖಂಡ ನಾಗೇಂದ್ರ ಸಿಂಗ ಪಟೇಲ್ ಕಣಕ್ಕಿಳಿಯಲಿದ್ದು, ಬಿಜೆಪಿ ನಾಯಕ, ವಾರಣಾಸಿಯ ಮಾಜಿ ಮೇಯರ್, ಒಬಿಸಿ ನಾಯಕ ಕೌಶಲೇಂದ್ರ ಸಿಂಗ್ ಪಟೇಲ್ ಸ್ಪರ್ಧಿಸಿದ್ದರೆ, ಕಾಂಗೆಸ್ಸಿನಿಂದ ಮನೀಶ್ ಮಿಶ್ರಾ ಕಣದಲ್ಲಿದ್ದಾರೆ.

UP Bihar bypolls 2018 LIVE: BJP will win both seats in Gorakhpur, Phulpur, says Yogi

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bypoll for two Gorakhpur and Phulpur Lok Sabha seats and Araria Lok Sabha seat will be held in Uttar Pradesh and Bihar respectively. Also, two assembly seats Jehanabad and Bhabhua will go for by election.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ