ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಯಾವತಿ-ಅಖಿಲೇಶ್ ಮುಂದಿನ ಟಾರ್ಗೆಟ್ 'ಕೈರಾನ', ಬಿಜೆಪಿಗೆ ನಡುಕ

By Sachhidananda Acharya
|
Google Oneindia Kannada News

ಲಕ್ನೋ, ಮಾರ್ಚ್ 16: ಗೋರಖಪುರ್ ಮತ್ತು ಫುಲ್ಪುರ್ ಲೋಕಸಭೆ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಭದ್ರಕೋಟೆಯನ್ನು ಪುಡಿಗಟ್ಟಿರುವ ಆನೆ ಮತ್ತು ಸೈಕಲ್ ದೋಸ್ತಿ ಮುಂದುವರಿಯಲಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಸದ್ಯದಲ್ಲೇ ಉತ್ತರ ಪ್ರದೇಶದ ಕೈರಾನ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದ್ದು ಇಲ್ಲಿಯೂ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ (ಎಸ್.ಪಿ) ಮತ್ತು ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷ (ಬಿ.ಎಸ್.ಪಿ) ಹೊಂದಾಣಿಕೆ ಮುಂದುವರಿಯುವ ಸಾಧ್ಯತೆ ಇದೆ.

ಮಾಯಾವತಿ- ಅಖಿಲೇಶ್ ಮುಂದಿನ ಪರೀಕ್ಷೆ ಕೈರಾನ ಉಪಚುನಾವಣೆಮಾಯಾವತಿ- ಅಖಿಲೇಶ್ ಮುಂದಿನ ಪರೀಕ್ಷೆ ಕೈರಾನ ಉಪಚುನಾವಣೆ

ಇದಲ್ಲದೆ 2019ರ ಲೋಕಸಭೆ ಚುನಾವಣೆಯಲ್ಲೂ ಎರಡೂ ಪಕ್ಷಗಳು ಸೀಟು ಹಂಚಿಕೆ ಮಾಡಿಕೊಳ್ಳಲು ನಿರ್ಧರಿಸಿವೆ ಎಂದು ಮೂಲಗಳು ಹೇಳಿದ್ದಾಗಿ ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ.

Lok Sabha bypoll in Kairana is the next target of Akhilesh Yadav, Mayawati

ಬುಧವಾರ ಅಖಿಲೇಶ್ ಯಾದವ್ ಮತ್ತು ಮಾಯಾವತಿ ನಡುವೆ ನಡೆದ ಭೇಟಿಯಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ. 40 ನಿಮಿಷಗಳ ಸಭೆಯಲ್ಲಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಎರಡೂ ಪಕ್ಷಗಳು ಸಮಾನ ಸೀಟುಗಳನ್ನು ಹಂಚಿಕೊಳ್ಳಲು ನಿರ್ಧಾರಕ್ಕೆ ಬಂದಿವೆ ಎನ್ನಲಾಗಿದೆ.

ನಮ್ಮ ಗೆಲುವು ಬಡವರಿಗೆ, ಅಲ್ಪಸಂಖ್ಯಾತರಿಗೆ ಅರ್ಪಣೆ: ಅಖಿಲೇಶ್ನಮ್ಮ ಗೆಲುವು ಬಡವರಿಗೆ, ಅಲ್ಪಸಂಖ್ಯಾತರಿಗೆ ಅರ್ಪಣೆ: ಅಖಿಲೇಶ್

ಗುರುವಾರ ಚಂಡೀಗಢದಲ್ಲಿ ಮಾತನಾಡಿರುವ ಮಾಯಾವತಿ, ಉಪಚುನಾವಣೆ ಫಲಿತಾಂಶ ಬಿಜೆಪಿಯನ್ನು ನಿದ್ದೆಯಿಂದ ಎಬ್ಬಿಸುವಂತೆ ಮಾಡಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲೂ ಇದಕ್ಕೂ ಹೆಚ್ಚಿನ ಬೆಳವಣಿಗೆಗಳು ನಡೆಯುವ ಸಾಧ್ಯತೆ ಇದೆ ಎಂಬ ಸೂಚನೆ ನೀಡಿದ್ದಾರೆ.

ಎರಡೂ ಪಕ್ಷಗಳಿಗೆ ಕೈರಾನಾ ಉಪಚುನಾವಣೆ ಸವಾಲಾಗಿದೆ. ಬಿಜೆಪಿ ಸಂಸದ ಹುಕುಮ್ ಸಿಂಗ್ ನಿಧನದಿಂದ ಈ ಕ್ಷೇತ್ರ ಖಾಲಿಯಾಗಿದ್ದು ಇನ್ನು ಕೆಲವೇ ದಿನದಲ್ಲಿ ಇಲ್ಲಿ ಚುನಾವಣೆ ನಡೆಯಲಿದೆ. ಗೋರಖಪುರ್ ಮತ್ತು ಫುಲ್ಪುರ್ ನಲ್ಲಿ ನಡೆಸಿದ ಹೊಂದಾಣಿಕೆಯನ್ನು ಇಲ್ಲೂ ಮುಂದುವರಿಸಿ ಬಿಜೆಪಿಗೆ ಸೋಲುಣಿಸುವ ಗುರಿಯನ್ನು ಎರಡೂ ಪಕ್ಷಗಳು ಹಾಕಿಕೊಂಡಿವೆ.

ಈ ಚುನಾವಣೆಯಲ್ಲಿ ಬಿಎಸ್ಪಿ ಅಭ್ಯರ್ಥಿ ಕಣಕ್ಕಿಳಿಯುವ ಸಾಧ್ಯತೆ ಇದ್ದು ಎಸ್ಪಿ ತನ್ನ ಻ಅಭ್ಯರ್ಥಿ ಕಣಕ್ಕಿಳಿಸದೆ ಆನೆಯನ್ನು ಬೆಂಬಲಿಸುವ ಸಾಧ್ಯತೆ ಇದೆ.

English summary
The next target for Bahujan Samajwadi Party and Samajwadi Party is the bypoll in Kairana in western Uttar Pradesh, a seat that fell vacant after the death of its BJP MP, Hukum Singh, in February.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X