ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೆ 1ರಿಂದ ಮೋದಿ ಚಹಾ ಸಂವಾದ; ಉದ್ಯಮ ಫುಲ್ ಖುಷ್

By Srinath
|
Google Oneindia Kannada News

ನವದೆಹಲಿ, ಜ.31- ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಯುವಕರಾಗಿದ್ದಾಗ ಹೊಟ್ಟೆಪಾಡಿಗೆಂದು ಚಹಾ ಮಾರಾಟ ಮಾಡುತ್ತಿದ್ದುದ್ದೇ ಈಗ ಅವರ ಕೈಹಿಡಿದಿದೆ. ಆದರೆ ಇದು ಕಾಂಗ್ರೆಸ್ 'ಕೈ'ಕಚ್ಚಿದೆ.

ಸ್ವಯಂಕೃತಾಪರಾಧವೆಂಬಂತೆ ವಿರೋಧ ಪಕ್ಷಗಳು ಮೋದಿ ಚಹಾ ಮಾರಾಟ ಮಾಡುತ್ತಿದ್ದನ್ನು ಲೇವಡಿ ಮಾಡಿಕೊಂಡಿದ್ದು ಬಿಜೆಪಿ ಪಕ್ಷಕ್ಕೆ ವರವಾಗಿ ಪರಿಣಮಿಸಿದೆ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮೋದಿ ಚಹಾವನ್ನೇ ಬಂಡವಾಳ ಮಾಡಿಕೊಳ್ಳಲು ಸಿದ್ಧತೆ ನಡೆಸಿದೆ.

ಚಹಾ ಉದ್ಯಮಕ್ಕೆ ಕುದುರಿತು ಲಕ್ಕು!

Lok Sabha polls BJP Prime Minister candidate Narendra Modi interact tea vendors Feb 1- Tea industry elited

ರಾಜಕೀಯ ಪಕ್ಷಗಳ ಪರಸ್ಪರ ನಿಂದನೆ/ ಆರೋಪಗಳಿಂದ ಚಹಾ ಉದ್ಯಮಕ್ಕೆ ಲಕ್ಕು ಖುಲಾಯಿಸಿದೆ! ನೆಲಕಚ್ಚಿದ್ದ ಚಹಾ ಉದ್ಯಮ ದಿಢೀರ್ ಬೆಳವಣಿಗೆಯಿಂದ ಸಂತಸಗೊಂಡಿದೆ. 2013ನೇ ಸಾಲಿನಲ್ಲಿ ತುಸು ಹೆಚ್ಚೇ ಅನ್ನಿಸುವಷ್ಟು 1,180 ಲಕ್ಷ ಕೆಜಿ ಚಹಾ ಉತ್ಪಾದನೆಯಾಗಿದೆ. ಚುನಾವಣೆ ಮುಗಿಯುವವರೆಗೂ ವಾರಕ್ಕೊಮ್ಮೆ ಇಂತಹ ಮೋದಿ ಚಹಾ ಸಂವಾದಗಳು ನಡೆಯಲಿದ್ದು, ಚಹಾ ಮಾರಾಟ ಮತ್ತಷ್ಟು ಸುಧಾರಿಸಲಿದೆ ಎಂದು ಉದ್ಯಮ ಸಂತಸದಲ್ಲಿದೆ.

ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್, ರಾಜ್ಯಸಭೆ ಪ್ರತಿಪಕ್ಷದ ನಾಯಕ ಅರುಣ್ ಜೇಟ್ಲಿ, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಮತ್ತು ಚತ್ತೀಸ್ ಗಢದ ಮುಖ್ಯಮಂತ್ರಿ ರಮಣ್ ಸಿಂಗ್ ಅವರು ಮೋದಿ ಚಹಾ ಸಂವಾದದಲ್ಲಿ ಮೋದಿಗೆ ಸಾಥ್ ನೀಡಲಿದ್ದಾರೆ.

ಮೋದಿ ಚಹಾ ಸಂವಾದ
ನಾಳೆ ಫೆ. 1ರಂದು ಗಾಂಧಿನಗರದಲ್ಲಿ 'ಮೋದಿ ಚಹಾ ಚರ್ಚೆ' ಹವಾ ಎಬ್ಬಿಸುವ ಮೋದಿ, 300 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 1,000 ಚಹಾ ಅಂಗಡಿಗಳ ಬಳಿ ಜಮಾಯಿಸುವ ಜನರ ಜತೆ ನೇರವಾಗಿ ಮಾತನಾಡಲಿದ್ದಾರೆ. ಇದಕ್ಕಾಗಿ ಇಂಟರ್ನೆಟ್ ಮತ್ತು ಡಿಟಿಎಚ್ ತಂತ್ರಜ್ಞಾನ ಬಳಕೆಯಾಗಲಿದೆ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿಯ ಪ್ರಚಾರ ಸಮಿತಿಯ ಸದಸ್ಯರೊಬ್ಬರು ತಿಳಿಸಿದ್ದಾರೆ. ಮೋದಿ ಅವರು 5 ಚಾಯ್ (nukkad) ಅಡ್ಡಾಗಳಲ್ಲಿ Chai pe charcha with NaMo ಅಂದರೆ 'ಚಹಾ ಮಾರಾಟಗಾರರ ಜತೆ ಸಂವಾದವನ್ನು ನಡೆಸಲಿದ್ದಾರೆ.

ಬೆಂಗಳೂರಿನಲ್ಲೂ NaMo tea stall ಕಾರ್ಯಾರಂಭಿಸಲಿವೆ. ಬಿಜೆಪಿ ಕಾರ್ಯಕರ್ತರು ಬೆಂಗಳೂರಿನಲ್ಲಿ 200 Narendra Modi Chai Pointಗಳನ್ನು ತೆರೆದು 1 ರೂಪಾಯಿಗೆ ಒಂದು ಕಪ್ ಚಹಾ ಮಾರಲಿದ್ದಾರೆ. ಇದು ಇತರೆ ಜಿಲ್ಲಾ ಕೇಂದ್ರಗಳಲ್ಲೂ ನಡೆಯಲಿದೆ.

ಅಂದಹಾಗೆ, ಕಾಂಗ್ರೆಸ್ಸಿನ ರಾಜ್ಯಸಭೆ ಸದಸ್ಯ ಮಣಿಶಂಕರ್ ಅಯ್ಯರ್ AICC ಸಮಾವೇಶದಲ್ಲಿ 'ಮೋದಿ ಕಾಂಗ್ರೆಸ್ ಕಚೇರಿಯಲ್ಲಿ ಚಹಾ ಮಾರೋಕ್ಕೆ ಲಾಯಕ್ಕು' ಎಂದು ಜರಿದಿದ್ದೇ ಬಿಜೆಪಿ ಪಕ್ಷದ ಈ ವಿನೂತನ ಪ್ರಚಾರಕ್ಕೆ ಹೇತುವಾಗಿದೆ!

English summary
Lok Sabha polls BJP Prime Minister candidate Narendra Modi will interact with tea vendors begining Feb 1 regularly. The Gujarat Chief Minister will hold 'nukkad' meetings. Tea industry 'elated' with Modi's tea campaign Amid Modi's "tea-election campaigns". Also it is expected that it will give an instant boost to the humble tea that otherwise faces a stiff competition with royal coffee.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X