ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಸಭೆಯಲ್ಲಿ ಲೋಕಪಾಲ್ ವಿಧೇಯಕ ಪಾಸ್

By Mahesh
|
Google Oneindia Kannada News

ನವದೆಹಲಿ, ಡಿ.17: ಭ್ರಷ್ಟಾಚಾರ ವಿರೋಧಿ ಅಸ್ತ್ರ ಎನಿಸಿರುವ ಲೋಕಪಾಲ ವಿಧೇಯಕಕ್ಕೆ ರಾಜ್ಯಸಭೆಯಲ್ಲಿ ಮಂಗಳವಾರ ಸರ್ವಾನುಮತದ ಅಂಗಿಕಾರ ಲಭಿಸಿದೆ. ಈ ಮೂಲಕ ಐದು ದಶಕಗಳ ಬೇಡಿಕೆಯಾಗಿದ್ದ ಲೋಕಪಾಲ ಮಸೂದೆಗೆ ಮುಕ್ತಿ ಸಿಕ್ಕಿದೆ. ಲೋಕಸಭೆಯಲ್ಲಿ ನಾಳೆ ಈ ಮಸೂದೆ ಮಂಡನೆಯಾಗಿ ಚರ್ಚೆಗೆ ಬರಲಿದೆ.

ರಾಜ್ಯಸಭೆಯಲ್ಲಿ ಸೋಮವಾರವೇ ಲೋಕಪಾಲ ಮಸೂದೆಯ ಬಗ್ಗೆ ಚರ್ಚೆ ನಡೆಯಬೇಕಾಗಿತ್ತು. ಆದರೆ, ಕೇಂದ್ರ ಸಚಿವ ಸೀಸ್ ರಾಂ ಓಲಾ ಅವರ ನಿಧನದಿಂದಾಗಿ ಉಭಯ ಸದನಗಳ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಗಿತ್ತು. ಮಂಗಳವಾರ ಲೋಕಪಾಲ ವಿಧೇಯಕದ ಬಗ್ಗೆ ಚರ್ಚೆ ನಡೆದು ಸಂಜೆ 5.25ಕ್ಕೆ ಮತದಾನ ಆರಂಭಿಸಲಾಯಿತು. ರಾಜ್ಯಸಭಾ ಅಧ್ಯಕ್ಷ ಹಮೀದ್ ಅನ್ಸಾರಿ ವಿಧೇಯಕ ಮಂಡಿಸಿದ್ದು, ಎಲ್ಲ ರಾಜಕೀಯ ಪಕ್ಷಗಳು ಮತದಾನದಲ್ಲಿ ಪಾಲ್ಗೊಂಡು ವಿಧೇಯಕ ಅಂಗೀಕಾರಕ್ಕೆ ಸಮ್ಮತಿ ಸೂಚಿಸಿವೆ. ರಾಜ್ಯಸಭೆಯಲ್ಲಿ ಲೋಕಪಾಲ ವಿಧೇಯಕ ಅಂಗೀಕಾರಗೊಂಡಿದ್ದು, ಬುಧವಾರ ಲೋಕಸಭೆಯಲ್ಲಿ ಮಂಡನೆಯಾಗಲಿದೆ.

ಅಣ್ಣಾ ಹಜಾರೆ ಹೇಳಿಕೆ: ಈ ನಡುವೆ ರಾಳೆಗಾವ್ ಸಿದ್ಧಿ ಗ್ರಾಮದಲ್ಲಿ ಉಪವಾಸ ನಿರತರಾಗಿರುವ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ರಾಜ್ಯಸಭೆಯಲ್ಲಿ ಲೋಕಪಾಲ ವಿಧೇಯಕಕ್ಕೆ ಅಂಗೀಕಾರ ಸಿಕ್ಕಿರುವುದಕ್ಕೆ ಸಂತಸ ವ್ಯಕ್ತ ಪಡಿಸಿದ್ದಾರೆ. ಆದರೆ, ಬುಧವಾರ ಲೋಕಸಭೆಯಲ್ಲಿ ವಿಧೇಯಕಕ್ಕೆ ಅಂಗೀಕಾರ ಲಭಿಸಿದರೆ ಮಾತ್ರ ನಿರಶನ ಕೈ ಬಿಡುವುದಾಗಿ ಹೇಳಿದ್ದಾರೆ. ಅದೇ ವೇಳೆ ಲೋಕಪಾಲ ವಿಧೇಯಕ ಅಂಗೀಕಾರಕ್ಕಾಗಿ ಮತದಾನ ಮಾಡಿದ ಎಲ್ಲ ರಾಜಕೀಯ ಪಕ್ಷಗಳಿಗೆ ಅಣ್ಣಾ ಧನ್ಯವಾದ ಸಲ್ಲಿಸಿದ್ದಾರೆ. ರಾಹುಲ್ ಗಾಂಧಿ, ಬಿಜೆಪಿಯ ಅರುಣ್ ಜೇಟ್ಲಿ ಅವರಿಗೆ ಪತ್ರ ಬರೆದು ಧನ್ಯವಾದ ಅರ್ಪಿಸಿದ್ದಾರೆ.

Rajya Sabha: Lok Pal Bill gets green signal, to be taken up in LS

ಮಿತ್ರಪಕ್ಷ ವಿರೋಧ: ರಾಜ್ಯಸಭೆಯಲ್ಲಿ ಇಂದು ಲೋಕಪಾಲ ಮಸೂದೆ ಹಾಗೂ ಕೋಮು ಗಲಭೆ ತಡೆ ವಿಧೇಯಕ ಚರ್ಚೆಯಾಗಿದೆ. ಯುಪಿಎ ಮಿತ್ರ ಪಕ್ಷವಾಗಿ ಗುರುತಿಸಿಕೊಂಡಿರುವ ಉತ್ತರಪ್ರದೇಶದಲ್ಲಿ ಅಧಿಕಾರ ಹೊಂದಿರುವ ಸಮಾಜವಾದಿ ಪಕ್ಷ ಲೋಕಪಾಲ ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಹಾಗೂ ರಾಮ್ ಗೋಪಾಲ್ ಯಾದವ್ ಅವರು ಇದು ಜನ ವಿರೋಧಿ ಮಸೂದೆಯಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಮುಂದಾಳತ್ವದಲ್ಲಿ ಈ ಮಸೂದೆ ಪರ ಸಂಸದೀಯ ವ್ಯವಹಾರಗಳ ಸಚಿವ ಕಮಲನಾಥ್, ಕಾನೂನು ಸಚಿವ ಕಪಿಲ್ ಸಿಬಲ್ ಅವರು ಪ್ರತಿಕ್ರಿಯಿಸುತ್ತಿದ್ದು, ಇದೊಂದು ಐತಿಹಾಸಿಕ ಕ್ಷಣ ಎಂದು ಬಣ್ಣಿಸಿದ್ದಾರೆ.

ಬಿಜೆಪಿ ಮನವಿಗೆ ಬೆಲೆ: ಭ್ರಷ್ಟಚಾರಿ ಅಧಿಕಾರಿಗೆ ಯಾವುದೇ ನೋಟಿಸ್ ನೀಡದೆ ಸಿಬಿಐ ಅಥವಾ ಪೊಲೀಸರು ಹಠಾತ್ ದಾಳಿ ನಡೆಸುವ ಅಧಿಕಾರ ಒದಗಿಸುವಂತೆ ಬಿಜೆಪಿ ಮಾಡಿಕೊಂಡ ಮನವಿಯನ್ನು ಯುಪಿಎ ಪುರಸ್ಕರಿಸಿ, ವಿಧೇಯಕದಲ್ಲಿ ಸೇರ್ಪಡೆಗೊಳಿಸಿದೆ.

2011ರ ಡಿಸೆಂಬರ್ ನಲ್ಲಿ ಇದೇ ವಿಧೇಯಕ ಲೋಕಸಭೆಯಲ್ಲಿ ಪಾಸ್ ಆಗಿದ್ದರೂ ರಾಜ್ಯ ಸಭೆಯಲ್ಲಿ ನಪಾಸಾಗಿತ್ತು. ನಂತರ ಸಂಸದೀಯ ಸಮಿತಿಯ ಪರಾಮರ್ಶನೆಗೆ ಕಳಿಸಲಾಗಿತ್ತು. ಕೆಲವು ತಿದ್ದುಪಡಿಗಳೊಂದಿಗೆ ಮತ್ತೊಮ್ಮೆ ರಾಜ್ಯ ಸಭೆಯಲ್ಲಿ ಮಸೂದೆ ಮಂಡನೆಯಾಗಿದೆ. ಆದರೆ, ಲೋಕಸಭೆಯಲ್ಲಿ ಪುನಃ ವಿಧೇಯಕಕ್ಕೆ ಸಮ್ಮಿತಿ ಸಿಗಬೇಕಿದೆ.

English summary
The anti-corruption Lokpal Bill moved a step closer to enactment after it was passed in the Rajya Sabha today(Dec.17). The Bill will be taken up in the Lok Sabha tomorrow, the government announced soon after its ally Samajwadi Party backed down on its threat to block the bill at any cost.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X