ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈರಲ್ ವೀಡಿಯೊ: ಸೇತುವೆ ಮೇಲೆ ಏರ್‌ಲೀಕ್ ಸಮಸ್ಯೆ ಸರಿಪಡಿಸಿದ ಲೋಕೋಪೈಟ್

|
Google Oneindia Kannada News

ನವದೆಹಲಿ ಜೂ.20: ಸೇತುವೆ ಮೇಲೆ ನಿಲ್ಲಿಸಿದ್ದ ರೈಲಿನ ಕೆಳಗೆ ಲೊಕೋ ಪೈಲಟ್ ಅಧಿಕಾರಿ ತೆವಳುತ್ತಾ ಸಾಗಿ ರೈಲಿನ ಏರ್ ಲೀಕ್ ಸಮಸ್ಯೆಯನ್ನು ಸರಿಪಡಿಸಿದ ಸಾಹಸದ ವಿಡಿಯೋ ಕೇಂದ್ರ ರೈಲ್ವೆ ಸಚಿವಾಲಯವು ಕೂ ಮೂಲಕ ಹಂಚಿಕೊಂಡಿದೆ.

ಗಾಳಿ ಸೋರುವಿಕೆ ಸಮಸ್ಯೆಯಿಂದ ರೈಲೊಂದು ಸೇತುವೆಯ ಮೇಲೆ ನಿಂತಿದೆ. ಈ ವೇಳೆ ಲೊಕೋ ಪೈಲಟ್ ಆಗಿರುವ ಗಣೇಶ್ ಘೋಷ್ ಎಂಬುವವರು ಈ ಸಾಹಸ ಮಾಡಿರುವುದಾಗಿ ಗೊತ್ತಾಗಿದೆ. ಗಣೇಶ ಅವರು ರೈಲಿನ ಕೆಳಗೆ ಸಮಸ್ಯೆ ಉಂಟಾದ ಭಾಗದ ವರೆಗೂ ಧೈರ್ಯದಿಂದ ತೆವಳುತ್ತಾ ಸಾಗಿದ್ದಾರೆ. ರೈಲ್ವೆ ಸಚಿವಾಲಯ ಹಂಚಿಕೊಂಡ ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.

ರೈಲು ಕೆಟ್ಟು ನಿಂತಾಗ ಗಣೇಶ ಘೋಷ್ ಹಾಗೂ ಸಿಬ್ಬಂದಿ ತೋರಿದ ಧೈರ್ಯ ಇರರಿಗೂ ಮಾದರಿಯಾಗಿದೆ. ರೈಲು ಪುನಾರಂಭಕ್ಕಾಗಿ ಗಣೇಶ್ ಘೋಷ್ ಸಾಹಸ ಮೆರೆದಿದ್ದಾರೆ. ಇದು ಪ್ರಯಾಣಿಕರ ಸೇವೆಗಾಗಿ ರೈಲ್ವೆ ಸಿಬ್ಬಂದಿ ವಾರದ 24ಗಂಟೆಯು ಸೇವೆ ನೀಡಲು ಬದ್ಧರಾಗಿದ್ದಾರೆ ಎಂಬುದನ್ನು ತೋರಿಸುತ್ತದೆ ಎಂದು ಸಚಿವಾಲಯ ಟ್ವಿಟ್ ಮೂಲಕ ತಿಳಿಸಿದೆ.

loco pilot ganesh ghosh video viral, who corrects train air problem

ವಿವಿಧ ಸಾಹಸದ ವಿಡಿಯೋ ಹಂಚಿಕೊಂಡ ಸಚಿವಾಲಯ

ಇತ್ತೀಚೆಗೆ ಚಲಿಸುತ್ತಿದ್ದ ರೈಲಿಗೆ ಸಿಲುಕಿದ್ದ ವೃದ್ಧೆಯೊಬ್ಬರನ್ನು ಸಮೀಪದಲ್ಲೇ ಇದ್ದ ರೈಲ್ವೆ ಪೊಲೀಸ್ ಅಧಿಕಾರಿಯೊಬ್ಬರು ರಕ್ಷಿಸಿದ್ದರು. ಸದಾ ಕಾರ್ಯ ಪರಿಪಾಲನೆಯಲ್ಲಿ ಹೇಗೆ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂಬುದಕ್ಕೆ ಅವರು ಉದಾಹರಣೆಯಾಗಿದ್ದರು. ಅಲ್ಲದೇ ಉತ್ತರ ಪ್ರದೇಶದಲ್ಲಿ ವಿಶೇಷ ಚೇತನ ಯುವಕನನ್ನು ಅಲ್ಲಿನ ಅಧಿಕಾರಿಯೊಬ್ಬರು ರಕ್ಷಿಸಿದ್ದು, ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದೀಗ ಅಂತಹದ್ದೆ ಘಟನೆ ನಡೆದಿದೆ ಎಂದು ಲೊಕೋ ಪೈಲಟ್ ಗಣೇಶ ಘೋಷ್ ಕಾರ್ಯಕ್ಕೆ ಇಲಾಖೆ ಅಧಿಕಾರಿಗಳು ಶ್ಲಾಘಿಸಿದ್ದಾರೆ.

English summary
a video of the adventure, which is the loco pilot officer crawled under the train that was helted on a bridge., he corrected train air leak proble, shared video on monday by railway ministery.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X