ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್ ಡೌನ್; ಹೆದ್ದಾರಿಯಲ್ಲಿ ನಿಂತಿವೆ 3.5 ಲಕ್ಷ ಲಾರಿಗಳು

|
Google Oneindia Kannada News

ನವದೆಹಲಿ, ಏಪ್ರಿಲ್ 13 : ಕೊರೊನಾ ಹರಡದಂತೆ ತಡೆಯಲು ಪ್ರಧಾನಿ ನರೇಂದ್ರ ಮೋದಿ 21 ದಿನಗಳ ಲಾಕ್ ಡೌನ್ ಘೋಷಣೆ ಮಾಡಿದರು. ಈ ಘೋಷಣೆಯಾದ ಕೆಲವೇ ಗಂಟೆಗಳಲ್ಲಿ ಎಲ್ಲಾ ರಾಜ್ಯಗಳ ಗಡಿಗಳನ್ನು ಮುಚ್ಚಲಾಯಿತು. ಹೆದ್ದಾರಿಯಲ್ಲಿದ್ದ ಲಾರಿಗಳು ಅಲ್ಲಿಯೇ ಉಳಿಯುವಂತಾಯಿತು.

ಲಾಕ್ ಡೌನ್ ಅವಧಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದು ಸರಕು ಸಾಗಣೆ ಮಾಡುವ ಲಾರಿಗಳ ಚಾಲಕರು, ಕ್ಲೀನರ್. ಯಾವುದೇ ಸೂಚನೆ ಇಲ್ಲದ ಅವರು ಲಾರಿಯನ್ನು ನಿಲ್ಲಿಸಬೇಕಾಗಿ ಬಂತು. ಎಲ್ಲಿದ್ದಾರೋ ಅಲ್ಲಿಯೇ ಸಿಲುಕುವುದು ಅನಿವಾರ್ಯವಾಯಿತು.

 ಲಾರಿ ಚಾಲಕನಿಂದ ಸಚಿವನಾಗಿ ಹೆಬ್ಬಾರ್ ನಡೆದು ಬಂದ ದಾರಿ... ಲಾರಿ ಚಾಲಕನಿಂದ ಸಚಿವನಾಗಿ ಹೆಬ್ಬಾರ್ ನಡೆದು ಬಂದ ದಾರಿ...

ವರದಿಯೊಂದರ ಪ್ರಕಾರ ಸರಕುಗಳನ್ನು ಸಾಗಣೆ ಮಾಡುವ 3.5 ಲಕ್ಷ ಲಾರಿಗಳು ಹೆದ್ದಾರಿಯಲ್ಲಿ ಇವೆ. ಕಾರು, ಬೈಕ್, ಎಲೆಕ್ಟ್ರಾನಿಕ್ ವಸ್ತುಗಳು ಸೇರಿದಂತೆ ವಿವಿಧ ಸರಕುಗಳನ್ನು ಸಾಗಣೆ ಮಾಡುವ ಲಾರಿಗಳು ರಸ್ತೆಯಲ್ಲಿವೆ ಇವೆ. ಚಾಲಕರು ಅಲ್ಲಿಯೇ ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡಿಕೊಂಡಿದ್ದಾರೆ.

 ಓಲ್ಡ್ ಈಸ್ ಗೋಲ್ಡ್ : ಖರ್ದುಂಗಾ ಲಾ ಏರಿದ ಲ್ಯಾಂಬಿ ಸ್ಕೂಟರ್ ಓಲ್ಡ್ ಈಸ್ ಗೋಲ್ಡ್ : ಖರ್ದುಂಗಾ ಲಾ ಏರಿದ ಲ್ಯಾಂಬಿ ಸ್ಕೂಟರ್

Lockdown Trucks Carrying Rs 35 Crore Worth Of Goods Stranded On Highway

ಒಂದು ಅಂದಾಜಿನ ಪ್ರಕಾರ 35,000 ಕೋಟಿ ರೂ. ಮೌಲ್ಯದ ಉತ್ಪನ್ನಗಳು ಲಾರಿಗಳಲ್ಲಿ ಇವೆ. ಲಾರಿ ಚಾಲಕರು, ಕ್ಲೀನರ್‌ಗಳಿಗೆ ತಮ್ಮ ಸುರಕ್ಷತೆ ನೋಡಿಕೊಳ್ಳುವ ಜೊತೆಗೆ ಲಾರಿಯಲ್ಲಿರುವ ವಸ್ತುಗಳ ಜವಾಬ್ದಾರಿಯೂ ಇದೆ. ಲಾಕ್ ಡೌನ್ ತೆರವಾಗಿ ಸಂಚಾರ ಆರಂಭವಾಗುವ ತನಕ ಅವುಗಳನ್ನು ಕಾಯುವುದು ಅನಿವಾರ್ಯ.

2ನೇ ಹಂತದ ಲಾಕ್ ಡೌನ್; ಕೆಎಸ್ಆರ್‌ಟಿಸಿ ಬುಕ್ಕಿಂಗ್ ರದ್ದು2ನೇ ಹಂತದ ಲಾಕ್ ಡೌನ್; ಕೆಎಸ್ಆರ್‌ಟಿಸಿ ಬುಕ್ಕಿಂಗ್ ರದ್ದು

ಲಾರಿ ಚಾಲಕರ ನೆರವಿಗೆ ಸರ್ಕಾರ ಧಾವಿಸಬೇಕು. ರಸ್ತೆಯಲ್ಲಿರುವ ಸರಕುಗಳ ಸಾಗಣೆಗೆ ಅನುಮತಿ ನೀಡಬೇಕು ಎಂದು ಅಖಿಲ ಭಾರತ ಲಾರಿ ಚಾಲಕರ ಒಕ್ಕೂಟ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. ಕೆಲವು ಲಾರಿಗಳಲ್ಲಿ ಔಷಧಿ ಸೇರಿದಂತೆ ಅಗತ್ಯ ವಸ್ತುಗಳು ಇದ್ದು, ಇವುಗಳನ್ನು ಸಾಗಣೆ ಮಾಡಬೇಕಿದೆ.

ಏಪ್ರಿಲ್ 14ರ ಮಂಗಳವಾರದಿಂದ ಲಾಕ್ ಡೌನ್ ಇನ್ನೂ 15 ದಿನ ವಿಸ್ತರಣೆಯಾಗುವ ನಿರೀಕ್ಷೆ ಇದೆ. ಒಂದು ವೇಳೆ ಲಾಕ್ ಡೌನ್ ವಿಸ್ತರಣೆಯಾದರೆ ಲಾರಿ ಚಾಲಕರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ.

English summary
Due to lockdown around 3.5 lakh goods-carrying inter-state trucks left stranded in the road. All goods which amount to over Rs 35,000 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X