ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್ ಡೌನ್; 1,100 ಉದ್ಯೋಗ ಕಡಿತದ ಘೋಷಣೆ ಮಾಡಿದ ಸ್ವಿಗ್ಗಿ

|
Google Oneindia Kannada News

ನವದೆಹಲಿ, ಮೇ 18 : ಲಾಕ್ ಡೌನ್ ಘೋಷಣೆ ಎಲ್ಲಾ ವಲಯಗಳಲ್ಲಿ ನಷ್ಟಕ್ಕೆ ಕಾರಣವಾಗಿದೆ. ಇದರಿಂದಾಗಿ ಉದ್ಯೋಗ ಕಡಿತಕ್ಕೆ ಹಲವು ಕಂಪನಿಗಳು ಮುಂದಾಗಿವೆ. ಝೊಮ್ಯಾಟೋ ಬಳಿಕ ಈಗ ಸ್ವಿಗ್ಗಿ 1,100 ಜನರನ್ನು ಕೆಲಸದಿಂದ ತೆಗೆಯುವುದಾಗಿ ಘೋಷಣೆ ಮಾಡಿದೆ.

Recommended Video

ಗೌಡರ ಹೆಸರಲ್ಲಿ ರಕ್ತದಾನ ಮಾಡಿದ ಶರವಣ | TA Sharavana | JDS

ಭಾರತದಲ್ಲಿ ಸೋಮವಾರದಿಂದ 4ನೇ ಹಂತದ ಲಾಕ್ ಡೌನ್ ಜಾರಿಗೆ ಬಂದಿದೆ. ಮುಂದಿನ ಕೆಲವೇ ದಿನಗಳಲ್ಲಿ 1,100 ಉದ್ಯೋಗವನ್ನು ಕಡಿತ ಮಾಡುತ್ತೇವೆ ಎಂದು ಸ್ವಿಗ್ಗಿ ಸೋಮವಾರ ಪ್ರಕಟಣೆಯಲ್ಲಿ ತಿಳಿಸಿದೆ. ಲಾಕ್ ಡೌನ್ ಪರಿಣಾಮ ಸ್ವಿಗ್ಗಿಗೂ ಅಪಾರ ನಷ್ಟವಾಗಿದೆ.

ಉದ್ಯೋಗ, ವೇತನ ಕಡಿತದ ಘೋಷಣೆ ಮಾಡಿದ ಝೊಮ್ಯಾಟೋಉದ್ಯೋಗ, ವೇತನ ಕಡಿತದ ಘೋಷಣೆ ಮಾಡಿದ ಝೊಮ್ಯಾಟೋ

ಸೋಮವಾರ ಸ್ವಿಗ್ಗಿ ಸಹ ಸಂಸ್ಥಾಪಕ ಹಾಗೂ ಸಿಇಓ ಶ್ರೀಹರ್ಷ ಮೆಜೆಟಿ ಉದ್ಯೋಗಿಗಳಿಗೆ ಇ-ಮೇಲ್ ಒಂದನ್ನು ಕಳಿಸಿದ್ದಾರೆ. ಇಂದು ಸ್ವಿಗ್ಗಿಗೆ ದುಖಃಕರವಾದ ದಿನವಾಗಿದೆ. ನಾವು ಹಲವು ಅಡುಗೆ ಮನೆಗಳನ್ನು ತಾತ್ಕಾಲಿಕವಾಗಿ ಮತ್ತು ಶಾಶ್ವತವಾಗಿ ಮುಚ್ಚುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಕೆಲಸದಿಂದ ಕಿತ್ತು ಹಾಕಿದ್ದು, ವೇತನ ಕಡಿತ; 2 ಸಾವಿರ ದೂರು ಕೆಲಸದಿಂದ ಕಿತ್ತು ಹಾಕಿದ್ದು, ವೇತನ ಕಡಿತ; 2 ಸಾವಿರ ದೂರು

 Lockdown Swiggy Announces 1100 Layoffs

ಮುಂದಿನ ಕೆಲವು ದಿನಗಳಲ್ಲಿ ವಿವಿಧ ನಗರದಲ್ಲಿ ಕೆಲಸ ಮಾಡುತ್ತಿರುವ ವಿವಿಧ ಹುದ್ದೆಯಲ್ಲಿರುವ 1,100 ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲಾಗುತ್ತಿದೆ ಎಂದು ಶ್ರೀಹರ್ಷ ಹೇಳಿದ್ದಾರೆ. ಕಂಪನಿಯ ಎಚ್‌ಆರ್‌ಗಳು ಉದ್ಯೋಗಿಗಳನ್ನು ನೇರವಾಗಿ ಸಂಪರ್ಕಿಸಲಿದ್ದಾರೆ ಎಂದು ತಿಳಿಸಿದ್ದಾರೆ.

Fake News: ಕೇಂದ್ರ ಸರ್ಕಾರಿ ನೌಕರರ ವೇತನ ಶೇ30 ಕಟ್? Fake News: ಕೇಂದ್ರ ಸರ್ಕಾರಿ ನೌಕರರ ವೇತನ ಶೇ30 ಕಟ್?

ಕೆಲಸದಿಂದ ತೆಗೆಯುವ ಉದ್ಯೋಗಿಗಳಿಗೆ ಮೂರು ತಿಂಗಳ ಸಂಬಳವನ್ನು ನೀಡಲಾಗುತ್ತದೆ. ಉದ್ಯೋಗಿಗಳು ಮತ್ತು ಅವರ ಕುಟುಂಬ ಸದಸ್ಯರಿಗೆ ನೀಡಲಾಗಿರುವ ವೈದ್ಯಕೀಯ ವಿಮೆ ಸೌಲಭ್ಯವನ್ನು ಡಿಸೆಂಬರ್ 31, 2020ರ ತನಕ ಮುಂದುವರೆಸಲಾಗುತ್ತಿದೆ.

ಫುಡ್ ಡೆಲಿವರಿ ಅಪ್ಲಿಕೇಶನ್ ಝೊಮ್ಯಾಟೋ ಕಳೆದ ವಾರ ಉದ್ಯೋಗ ಮತ್ತು ವೇತನ ಕಡಿತದ ತೀರ್ಮಾನವನ್ನು ಪ್ರಕಟಿಸಿತ್ತು. ಶೇ 13ರಷ್ಟು ಸಿಬ್ಬಂದಿ ಕಡಿತ ಮಾಡುತ್ತೇವೆ. ಜೂನ್‌ನಿಂದ ಮುಂದಿನ ಆರು ತಿಂಗಳ ಕಾಲ ಹಿರಿಯ ಉದ್ಯೋಗಿಗಳಿಗೆ ಶೇ 50ರಷ್ಟು ವೇತನ ಕಡಿತ ಮಾಡಲಾಗುತ್ತದೆ ಎಂದು ಝೊಮ್ಯಾಟೋ ಘೋಷಣೆ ಮಾಡಿತ್ತು.

English summary
Swiggy co-founder and CEO Sriharsha Majety in a email to the company's employees said that it will lay off 1,100 employees over the next few days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X