ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶಾದ್ಯಂತ ಮೇ 3ರವರೆಗೆ ಕೊರೊನಾ ಲಾಕ್‌ಡೌನ್ ವಿಸ್ತರಣೆ: ಮೋದಿ

|
Google Oneindia Kannada News

ನವದೆಹಲಿ, ಏಪ್ರಿಲ್ 14: ದೇಶಾದ್ಯಂತ ಮೇ 3ರವರೆಗೆ ಕೊರೊನಾ ಲಾಕ್‌ಡೌನ್ ವಿಸ್ತರಣೆ ಮಾಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ಮುಂದಿನ 19ದಿನಗಳ ಕಾಲ ಲಾಕ್‌ಡೌನ್ ಮುಂದುವರೆಸಲಾಗಿದೆ.

ಹಾಟ್ ಸ್ಪಾಟ್ ಪ್ರದೇಶದಲ್ಲಿ ಇನ್ನಷ್ಟು ಕಠಿಣ ಕ್ರಮ, ಏಪ್ರಿಲ್ 20ರತನಕ ಪರಿಶೀಲನೆ, ಪರಿಸ್ಥಿತಿ ಬದಲಾಗದಿದ್ದರೆ ಹಾಟ್ ಸ್ಪಾಟ್ ಗಳಲ್ಲಿ ಪರಿಸ್ಥಿತಿ ಕೈಮೀರಲಿದೆ.

ಕೊರೊನಾ ಮಹಾಮಾರಿ ವಿರುದ್ಧ ಭಾರತದ ಹೋರಾಟ ಸಾಗುತ್ತಿದೆ. ನಿಮ್ಮ ತ್ಯಾಗದಿಂದ ಭಾರತದಲ್ಲಿ ಇಲ್ಲಿಯವರೆಗೆ ಕೊರೊನಾದಿಂದ ಆಗುವ ಅನಾಹುತವನ್ನು ಕಡಿಮೆ ಮಾಡಲು ಸಾಧ್ಯವಾಗಿದೆ.

ಭಾರತದಲ್ಲಿ 10,000ದ ಗಡಿ ದಾಟಿತು ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಭಾರತದಲ್ಲಿ 10,000ದ ಗಡಿ ದಾಟಿತು ಕೊರೊನಾ ವೈರಸ್ ಸೋಂಕಿತರ ಸಂಖ್ಯೆ

ನೀವು ಕಷ್ಟಪಟ್ಟು ದೇಶವನ್ನು ಕಾಪಾಡಿದ್ದೀರಿ, ನನಗೆ ಗೊತ್ತಿದೆ ನಿಮಗೆ ಎಷ್ಟು ತೊಂದರೆಯಾಗತ್ತಿದೆ, ಕೆಲವರಿಗೆ ಊಟ ಸಿಗುತ್ತಿಲ್ಲ, ಕೆಲವರಿಗೆ ಓಡಾಡಲು ತೊಂದರೆಯಾಗುತ್ತಿದೆ, ಕೆಲವು ಮಂದಿ ಮನೆ, ಕುಟುಂಬದಿಂದ ದೂರವಿದ್ದಾರೆ, ಆದರೆ ದೇಶಕ್ಕಾಗಿ ಸಿಪಾಯಿಗಳ ರೀತಿ ನಿಮ್ಮ ಕರ್ತವ್ಯ ನಿಭಾಯಿಸುತ್ತಿದ್ದೀರಿ ನಿಮಗೆ ಅಭಿನಂದನೆಗಳು ಎಂದು ಮೋದಿ ಹೇಳಿದ್ದಾರೆ.

ಅಂಬೇಡ್ಕರ್‌ಗೆ ನಿಜವಾದ ಶ್ರದ್ಧಾಂಜಲಿ

ಅಂಬೇಡ್ಕರ್‌ಗೆ ನಿಜವಾದ ಶ್ರದ್ಧಾಂಜಲಿ

ಸಂವಿಧಾನದಲ್ಲಿ ತಿಳಿಸಿರುವಂತೆ ನಿಜವಾದ ಸಂಕಲ್ಪದೊಂದಿಗೆ ಸಾಮೂಹಿಕ ಶಕ್ತಿ ಪ್ರದರ್ಶನ ನಡೆದಿದೆ. ದೇಶದ ಪ್ರಜೆಗಳ ಒಗ್ಗಟ್ಟು, ಯಾವುದೇ ಕಷ್ಟದ ಸಮಯದಲ್ಲಿ ಹೋರಾಡಲುವ ಪ್ರೇರಣೆಯನ್ನು ನೀಡುತ್ತದೆ ಇದೇ ನಾವು ಬಿಆರ್ ಅಂಬೇಡ್ಕರ್‌ಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ ಎಂದರು.

ಹೊಸ ಹಬ್ಬಗಳು ನಿಮಗೆ ಆರೋಗ್ಯವನ್ನು ಕರುಣಿಸಲಿ

ಹೊಸ ಹಬ್ಬಗಳು ನಿಮಗೆ ಆರೋಗ್ಯವನ್ನು ಕರುಣಿಸಲಿ

ದೇಶದ ವಿವಿಧ ಭಾಗಗಳಲ್ಲಿ ಹೊಸ ವರ್ಷವನ್ನು ಬರಮಾಡಿಕೊಳ್ಳುವ ಅನೇಕ ಹಬ್ಬಗಳನ್ನು ಆಚರಣೆ ಮಾಡಲಾಗುತ್ತಿದೆ. ಈ ಹೊಸ ವರ್ಷ ನಿಮಗೆ ಸಂತೋಷದ ಜೊತೆಗೆ ಆರೋಗ್ಯವನ್ನೂ ಕರುಣಿಸಲಿ ಎಂದು ಪ್ರಧಾನಿ ಶುಭ ಹಾರೈಸಿದ್ದಾರೆ.

ಬೇರೆ ದೇಶಗಳ ಸ್ಥಿತಿ ನೋಡಿ

ಬೇರೆ ದೇಶಗಳ ಸ್ಥಿತಿ ನೋಡಿ

ಕೊರೊನಾ ಮಹಾಮಾರಿ ವಿಶ್ವದಾದ್ಯಂತ ಹರಡಿದೆ. ಎಲ್ಲರಿಗೂ ತಿಳಿದಿರುವ ವಿಚಾರವೇ. ಈ ಸಂದರ್ಭದಲ್ಲಿ ಬೇರೆ ದೇಶಗಳ ಸ್ಥಿತಿ ಉಲ್ಲೇಖ ಮಾಡುವುದು ಸರಿಯಲ್ಲ. ಆದರೂ ಹೇಳುವುದು ನನ್ನ ಕರ್ತವ್ಯವಾಗಿದೆ.

ನಮ್ಮ ದೇಶದಲ್ಲಿ ಮೊದಲ ಕೊರೊನಾ ಪ್ರಕರಣ ದಾಖಲಾಗುವುದಕ್ಕೂ ಮುನ್ನವೇ ವಿದೇಶದಿಂದ ದೇಶಕ್ಕೆ ಬರುವವರ ಸ್ಕ್ರೀನಿಂಗ್ ವ್ಯವಸ್ಥೆ ಆರಂಭಿಸಿದ್ದೆವು. ಸೋಂಕಿತರ ಸಂಖ್ಯೆ 100ಕ್ಕೆ ತಲುಪುವಷ್ಟರಲ್ಲಿ ವಿದೇಶದಿಂದ ಬಂದವರಿಗೆ 14ದಿನಗಳ ಕಾಲ ಕ್ವಾರಂಟೈನ್‌ನಲ್ಲಿರಲು ಸೂಚಿಸಿದ್ದೆವು. ಮಾಲ್, ಥಿಯೇಟರ್, ಹೋಟೆಲ್‌ಗಳನ್ನು ಮುಚ್ಚಿಸಿದ್ದೆವು. ಇದರಿಂದ ಕೊರೊನಾ ಹರಡುವ ಸಂಖ್ಯೆ ಕಡಿಮೆಯಾಯಿತು.

ಭಾರತದಲ್ಲಿ ಸಮಸ್ಯೆ ಹೆಚ್ಚಿಸುವ ಕೆಲಸ ಮಾಡಿಲ್ಲ

ಭಾರತದಲ್ಲಿ ಸಮಸ್ಯೆ ಹೆಚ್ಚಿಸುವ ಕೆಲಸ ಮಾಡಿಲ್ಲ

ದೇಶದಲ್ಲಿ ಕೊರೊನಾ ಸಮಸ್ಯೆ ಕಾಣುತ್ತಿದ್ದಂತೆಯೇ ಅದನ್ನು ಹೆಚ್ಚಿಸುವ ಕೆಲಸ ಮಾಡಿಲ್ಲ, ಅದನ್ನು ಕಡಿಮೆ ಮಾಡುವ ಕೆಲಸ ಮಾಡಿ ತಕ್ಷಣವೇ ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ. ಬೇರೆ ದೇಶದ ಜೊತೆ ಹೋಲಿಕೆ ಒಳ್ಳೆಯದಲ್ಲ ಆದರೆ ಸತ್ಯವನ್ನು ಮುಚ್ಚಿಡಲು ಸಾಧ್ಯವಿಲ್ಲ.

ಭಾರತಕ್ಕಿಂತ ಬೇರೆ ರಾಷ್ಟ್ರಗಳಲ್ಲಿ ಕೊರೊನಾ ಪ್ರಕರಣ ಶೇ.25-30ರಷ್ಟು ಹೆಚ್ಚು

ಭಾರತಕ್ಕಿಂತ ಬೇರೆ ರಾಷ್ಟ್ರಗಳಲ್ಲಿ ಕೊರೊನಾ ಪ್ರಕರಣ ಶೇ.25-30ರಷ್ಟು ಹೆಚ್ಚು

ಭಾರತ ಹಾಗೂ ಇತರೆ ಕೆಲವು ರಾಷ್ಟ್ರಗಳಲ್ಲಿ ಒಂದೇ ಬಾರಿಗೆ ಕೊರೊನಾ ಪ್ರಕರಣಗಳು ಕಾಣಿಸಿಕೊಳ್ಳಲು ಶುರು ಮಾಡಿದವು. ಆದರೆ ಭಾರತದಲ್ಲಿ ಲಾಕ್‌ಡೌನ್ ನಿಯಮ ಜಾರಿಗೆ ತಂದು, ತಕ್ಷಣವೇ ನಿಯಂತ್ರಣಕ್ಕೆ ತರಲಾಯಿತು. ಆದರೆ ಬೇರೆ ರಾಷ್ಟ್ರಗಳಲ್ಲಿ ಕೊರೊನಾ ಪ್ರಕರಣ ಶೇ.25-30ರಷ್ಟು ಹೆಚ್ಚಿದೆ. ದೇಶ ಆ ಪರಿಸ್ಥಿತಿಯಲ್ಲಿ ತೆಗೆದುಕೊಂಡ ನಿರ್ಧಾರ ಸರಿಯಾಗಿಯೇ ಇದೆ.

ಆರ್ಥಿಕತೆಗಿಂತ ಜೀವ ಮುಖ್ಯ

ಆರ್ಥಿಕತೆಗಿಂತ ಜೀವ ಮುಖ್ಯ

ಹೌದು ದೇಶದ ಆರ್ಥಿಕತೆ ಮೇಲೆ ಲಾಕ್‌ಡೌನ್ ಭಾರಿ ಹೊಡೆದ ನೀಡಿದೆ. ಆದರೆ ಆರ್ಥಿಕತೆಯನ್ನು ಕ್ರಮೇಣವಾಗಿ ಸರಿಪಡಿಸಿಕೊಳ್ಳಬಹುದು, ಅದಕ್ಕಿಂತ ಜನರ ಪ್ರಾಣ ಮುಖ್ಯವಾದದ್ದು. ಜನರ ಪ್ರಾಣವನ್ನು ಉಳಿಸಲು ಲಾಕ್‌ಡೌನ್ ವಿಸ್ತರಣೆ ಅನಿವಾರ್ಯವಾಗಿದೆ.

ಮೋದಿ ಹೇಳಿದ 7 ವಿಷಯಗಳು

ಮೋದಿ ಹೇಳಿದ 7 ವಿಷಯಗಳು

-ಮೊದಲಿನಿಂದಲೇ ಆರೋಗ್ಯ ಸಮಸ್ಯೆ ಇದ್ದವರು ಹೆಚ್ಚು ಎಚ್ಚರಿಕೆಯಿಂದಿರಿ
-ಸಾಮಾಜಿಕ ಅಂತರ ಕಾಯ್ದುಕೊಳ್ಳಿ
-ಮನೆಯಲ್ಲಿಯೇ ತಯಾರಿಸಿದ ಮಾಸ್ಕ್‌ಗಳನ್ನು ಬಳಸಿ
-ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲಿ ಆಯುಷ್ ಮಂತ್ರಾಲಯದ ನಿರ್ದೇಶನ ಪಾಲನೆ ಮಾಡಿ
-ಆರೋಗ್ಯ ಸೇತು ಅಪ್ಲಿಕೇಷನ್ ಬಳಕೆ ಮಾಡಿ
-ನಿಮ್ಮ ಕೈಲಾದಷ್ಟು ಮಂದಿ ಬಡವರಿಗೆ ಸಹಾಯ ಮಾಡಿ
-ಯಾರನ್ನೂ ಕೆಲಸದಿಂದ ತೆಗೆದು ಹಾಕಬೇಡಿ
-ಕೊರೊನಾ ವಿರುದ್ಧ ಹೋರಾಡುತ್ತಿರುವವರನ್ನು ಗೌರವಿಸಿ

English summary
Prime Minister Narendra Modi Announced India Lockdown Extended Till May 3.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X