ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

21 ದಿನದ ಲಾಕ್ ಡೌನ್; ವಲಸೆ ಕಾರ್ಮಿಕರು ಸಂಕಷ್ಟದಲ್ಲಿ

|
Google Oneindia Kannada News

ನವದೆಹಲಿ, ಏಪ್ರಿಲ್ 06 : ಕೊರೊನಾ ಹರಡದಂತೆ ತಡೆಯಲು 21 ದಿನಗಳ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಈ ಅವಧಿಯಲ್ಲಿ ಹೆಚ್ಚು ಸಂಕಷ್ಟಕ್ಕೆ ಸಿಲುಕಿರುವುದು ವಲಸೆ ಕಾರ್ಮಿಕರು. ಅವರಿಗೆ ಮುಂದೆ ಕೆಲಸ ಸಿಗುತ್ತದೆಯೇ? ಎಂಬ ಭೀತಿ ಆವರಿಸಿದೆ.

3196 ಕಾರ್ಮಿಕರನ್ನು ಮಾತನಾಡಿಸಿ ಮಾಡಿರುವ ಸಮೀಕ್ಷೆಯ ವರದಿಗಳು ನಿಜಕ್ಕೂ ಗಾಬರಿ ಮೂಡಿಸುತ್ತದೆ. ಈ ಕಾರ್ಮಿಕರಿಗೆ ತುರ್ತಾಗಿ ಬೇಕಾಗಿರುವುದು ಆಹಾರ ಪದಾರ್ಥಗಳು. ಇವರಲ್ಲಿ ಶೇ 83ರಷ್ಟು ಜನರು ಏಪ್ರಿಲ್ 14ರ ಬಳಿಕ ಯಾವ ಕೆಲಸ ಹುಡುಕುವುದು ಎಂದು ಚಿಂತೆಯಲ್ಲಿದ್ದಾರೆ.

ನೂರಾರು ಕಾರ್ಮಿಕರು ಅತಂತ್ರ: ಉಡುಪಿ ಜಿಲ್ಲಾಡಳಿತದಿಂದ ಆಶ್ರಯನೂರಾರು ಕಾರ್ಮಿಕರು ಅತಂತ್ರ: ಉಡುಪಿ ಜಿಲ್ಲಾಡಳಿತದಿಂದ ಆಶ್ರಯ

21 ದಿನಗಳ ಲಾಕ್ ಡೌನ್ ಅವಧಿಯಲ್ಲಿ ಶೇ 92.5ರಷ್ಟು ಜನರು ತಮ್ಮ ಕೆಲಸಗಳನ್ನು ಕಳೆದುಕೊಂಡಿದ್ದಾರೆ. ಜನ ಸಾಹಸ್ ಎಂಬ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆ ಉತ್ತರ ಮತ್ತು ಮಧ್ಯ ಭಾರತದ ಕಾರ್ಮಿಕರನ್ನು ದೂರವಾಣಿ ಮೂಲಕ ಮಾತನಾಡಿಸಿ ಸಮೀಕ್ಷೆ ನಡೆಸಿದೆ.

 ಲಾಕ್ಡೌನ್: ಕಾರ್ಮಿಕ, ವ್ಯಾಪಾರಿಗಳ ಕಷ್ಟಕ್ಕೆ ಏನಿದೆ ಪರಿಹಾರ ಲಾಕ್ಡೌನ್: ಕಾರ್ಮಿಕ, ವ್ಯಾಪಾರಿಗಳ ಕಷ್ಟಕ್ಕೆ ಏನಿದೆ ಪರಿಹಾರ

Lockdown Disrupted Migrant Workers Livelihood Survey Shows

ಶೇ 42 ರಷ್ಟು ಜನರು ಒಂದು ದಿನಕ್ಕೆ ಆಗುವಷ್ಟು ಮಾತ್ರ ಆಹಾರ ಪದಾರ್ಥಗಳು ಉಳಿದಿವೆ. ಮುಂದೇನು ಎಂಬುದು ಗೊತ್ತಿಲ್ಲ ಎಂದು ಹೇಳಿದ್ದಾರೆ. ಲಾಕ್ ಡೌನ್ 21 ದಿನಗಳಾದ ಮೇಲೂ ಮುಂದುವರೆದರೆ ಮನೆಯ ಖರ್ಚನ್ನು ಹೊಂದಿಸಲು ಸಾಧ್ಯವಿಲ್ಲ ಎಂದು ಶೇ 66ರಷ್ಟು ಜನರು ಸಮೀಕ್ಷೆಯಲ್ಲಿ ತಿಳಿಸಿದ್ದಾರೆ.

ಏಪ್ರಿಲ್ 14ಕ್ಕೆ ಲಾಕ್ ಡೌನ್ ಅಂತ್ಯ; ಮುಂದೇನು? ಏಪ್ರಿಲ್ 14ಕ್ಕೆ ಲಾಕ್ ಡೌನ್ ಅಂತ್ಯ; ಮುಂದೇನು?

ಕೆಲವು ಕಾರ್ಮಿಕರು ನಗರದಲ್ಲಿಯ ಕ್ಯಾಂಪ್‌ಗಳಲ್ಲಿ ಸಿಲುಕಿದ್ದಾರೆ. ಲಾಕ್ ಡೌನ್ ಮುಗಿದ ಮೇಲೆ ಮುಂದೇನು? ಎಂಬ ಪ್ರಶ್ನೆಗೆ ಅವರ ಬಳಿ ಉತ್ತರವಿಲ್ಲ. ಇನ್ನೂ ಕೆಲವರು ಹಳ್ಳಿಗಳಿಗೆ ತಲುಪಿದ್ದಾರೆ. ಆದರೆ, ಕೆಲಸವಿಲ್ಲದೇ ಕೈ ಖಾಲಿಯಾಗಿದೆ.

ಹಲವು ಕಾರ್ಮಿಕರು ಖಾಸಗಿ ವ್ಯಕ್ತಿಗಳ ಬಳಿ ಸಾಲವನ್ನು ಮಾಡಿದ್ದಾರೆ. ಆ ಸಾಲವನ್ನು ತೀರಿಸುವುದು ಹೇಗೆ? ಎಂಬುದು ಅವರ ಚಿಂತೆಯಾಗಿದೆ. ಈಗ ಮಾಡಿಕೊಂಡಿದ್ದ ಕೆಲಸವನ್ನು ಲಾಕ್ ಡೌನ್ ಅವಧಿ ಮುಗಿದ ಮೇಲೆ ಮುಂದುವರೆಸಲು ಅವಕಾಶ ಸಿಗಲಿದೆಯೇ? ಎಂಬುದು ಇನ್ನೂ ತಿಳಿದಿಲ್ಲ.

ಶೇ 55 ರಷ್ಟು ಕಾರ್ಮಿಕರು ದಿನಕ್ಕೆ 200 ರಿಂದ 400 ರೂ. ಸಂಪಾದನೆ ಮಾಡುತ್ತಾರೆ. ಅದರಲ್ಲಿ ಅವರು ನಾಲ್ವರು ಇರುವ ಕುಟುಂಬವನ್ನು ಸಾಕುತ್ತಾರೆ. ಶೇ 39ರಷ್ಟು ಕಾರ್ಮಿಕರು 400 ರಿಂದ 600 ರೂ. ಗಳಿಸುತ್ತಾರೆ. ಆದರೆ, ಕನಿಷ್ಠ ಕೂಲಿ ಕಾನೂನಿಗಿಂತಲೂ ಕಡಿಮೆ ಸಂಪಾದನೆ ಮಾಡುತ್ತಾರೆ.

English summary
Migrant construction workers whose livelihood has been disrupted after the announcement of the 21-day lockdown. Jan Sahas conducted telephonic survey of workers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X