ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂನ್ 1ರಿಂದ 30ರ ತನಕ 5ನೇ ಹಂತದ ಲಾಕ್ ಡೌನ್; ಮಾರ್ಗಸೂಚಿ ವಿವರಗಳು

|
Google Oneindia Kannada News

ನವದೆಹಲಿ, ಮೇ 30 : ಕೊರೊನಾ ವೈರಸ್ ಸೋಂಕು ಹರಡದಂತೆ ದೇಶದಲ್ಲಿ ಜಾರಿಯಲ್ಲಿರುವ ಲಾಕ್ ಡೌನ್ ಅನ್ನು ಒಂದು ತಿಂಗಳ ಕಾಲ ವಿಸ್ತರಣೆ ಮಾಡಲಾಗಿದೆ. ಜೂನ್ 30ರ ತನಕ ಭಾರತದಲ್ಲಿ 5ನೇ ಹಂತದ ಲಾಕ್ ಡೌನ್ ಜಾರಿಯಲ್ಲಿರಲಿದೆ.

Recommended Video

ಕೊರೊನ ಶಂಕಿತರ ರಕ್ತದ ಸ್ಯಾಂಪಲ್ ಕದ್ದೊಯ್ದ ಕೋತಿಗಳು | Oneindia Kannada

ಶುಕ್ರವಾರ ಸಂಜೆ ಕೇಂದ್ರ ಗೃಹ ಸಚಿವಾಲಯ ಈ ಕುರಿತು ಆದೇಶವನ್ನು ಹೊರಡಿಸಿದೆ. 5ನೇ ಹಂತದ ಲಾಕ್ ಡೌನ್‌ನ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ. ಜೂನ್ 1ರಿಂದ 30ರ ತನಕ ಐದನೇ ಹಂತದ ಲಾಕ್ ಡೌನ್ ಇರುತ್ತದೆ.

ಲಾಕ್ ಡೌನ್ ವಿಸ್ತರಣೆ; ಸಿಎಂಗಳ ಅಭಿಪ್ರಾಯ ಕೇಳಿದ ಅಮಿತ್ ಶಾ ಲಾಕ್ ಡೌನ್ ವಿಸ್ತರಣೆ; ಸಿಎಂಗಳ ಅಭಿಪ್ರಾಯ ಕೇಳಿದ ಅಮಿತ್ ಶಾ

ಪ್ರಸ್ತುತ ದೇಶದಲ್ಲಿ ಜಾರಿಯಲ್ಲಿರುವ 4ನೇ ಹಂತದ ಲಾಕ್ ಡೌನ್ ಅವಧಿ ಮೇ 31ಕ್ಕೆ ಮುಕ್ತಾಯವಾಗುತ್ತಿತ್ತು. ಆದ್ದರಿಂದ, ಇಂದು ಲಾಕ್ ಡೌನ್ ವಿಸ್ತರಣೆ ಮಾಡುವ ತೀರ್ಮಾನವನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದ್ದು, ಮಾರ್ಗಸೂಚಿ ಹೊರಡಿಸಿದೆ.

ಹಿಮಾಚಲ ಪ್ರದೇಶದಲ್ಲಿ ಜೂನ್ 30ರ ತನಕ ಲಾಕ್ ಡೌನ್ ವಿಸ್ತರಣೆ ಹಿಮಾಚಲ ಪ್ರದೇಶದಲ್ಲಿ ಜೂನ್ 30ರ ತನಕ ಲಾಕ್ ಡೌನ್ ವಿಸ್ತರಣೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳನ್ನು ಸಂಪರ್ಕಿಸಿ ಲಾಕ್ ಡೌನ್ ವಿಸ್ತರಣೆ ಮಾಡುವ ಕುರಿತು ಅಭಿಪ್ರಾಯ ಸಂಗ್ರಹಣೆ ಮಾಡಿದ್ದರು. ಗುರುವಾರ ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿದ್ದರು.

ಲಾಕ್ ಡೌನ್; ಬೆಂಗಳೂರು ನಗರಕ್ಕೆ ಬರುವವರ ಗಮನಕ್ಕೆ ಲಾಕ್ ಡೌನ್; ಬೆಂಗಳೂರು ನಗರಕ್ಕೆ ಬರುವವರ ಗಮನಕ್ಕೆ

ಜೂನ್ 8ರಿಂದ ಪ್ರಾರ್ಥನಾ ಮಂದಿರ ಓಪನ್

ಜೂನ್ 8ರಿಂದ ಪ್ರಾರ್ಥನಾ ಮಂದಿರ ಓಪನ್

ಕೇಂದ್ರ ಗೃಹ ಸಚಿವಾಲಯದ ಮಾರ್ಗಸೂಚಿ ಅನ್ವಯ ಜೂನ್ 8ರಿಂದ ದೇವಾಲಯ, ಚರ್ಚ್, ಮಸೀದಿ ಸೇರಿದಂತೆ ಪ್ರಾರ್ಥನಾ ಮಂದಿರಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಇಲ್ಲಿ ಪಾಲನೆ ಮಾಡಬೇಕಾದ ಮಾರ್ಗಸೂಚಿಗಳನ್ನು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳು ಹೊರಡಿಸಲಿವೆ.

ಹೋಟೆಲ್, ರೆಸ್ಟೋರೆಂಟ್

ಹೋಟೆಲ್, ರೆಸ್ಟೋರೆಂಟ್

ಜೂನ್ 8ರಿಂದ ಹೋಟೆಲ್, ರೆಸ್ಟೋರೆಂಟ್‌ಗಳ ಬಾಗಿಲು ತೆರೆಯಲು ಒಪ್ಪಿಗೆ ನೀಡಲಾಗಿದೆ. 4 ಹಂತದ ಲಾಕ್ ಡೌನ್‌ನಲ್ಲಿ ಪಾರ್ಸೆಲ್ ತೆಗೆದುಕೊಂಡು ಹೋಗಲು ಮಾತ್ರ ಅನುಮತಿಯನ್ನು ನೀಡಲಾಗಿತ್ತು. ಈಗ ಅಲ್ಲಿಯೇ ಆಹಾರ ಸೇವಿಸಲು ಅವಕಾಶ ಸಿಗಲಿದೆ.

ಶಾಪಿಂಗ್ ಮಾಲ್ ಬಾಗಿಲು ತೆರೆಯಲಿದೆ

ಶಾಪಿಂಗ್ ಮಾಲ್ ಬಾಗಿಲು ತೆರೆಯಲಿದೆ

ಕೇಂದ್ರ ಗೃಹ ಇಲಾಖೆ ಜೂನ್ 8ರಿಂದ ಶಾಪಿಂಗ್ ಮಾಲ್‌ಗಳ ಬಾಗಿಲು ತೆರೆಯಲು ಅನುಮತಿ ನೀಡಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಿದೆ ಎಂದು ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ.

ಶಾಲಾ-ಕಾಲೇಜು ತೆರೆಯುವುದೇ?

ಶಾಲಾ-ಕಾಲೇಜು ತೆರೆಯುವುದೇ?

ಶಾಲೆ, ಕಾಲೇಜು, ಶಿಕ್ಷಣ ಸಂಸ್ಥೆಗಳು, ಕೋಚಿಂಗ್ ಸೆಂಟರ್‌ಗಳನ್ನು ತೆರೆಯುವ ಬಗ್ಗೆ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಜೊತೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ. ಶಿಕ್ಷಣ ಸಂಸ್ಥೆಗಳು ಪೋಷಕರ ಜೊತೆ ಸಭೆ ನಡೆಸಬೇಕು ಎಂದು ಸೂಚನೆ ನೀಡಲಾಗಿದೆ. ಎಲ್ಲಾ ಅಭಿಪ್ರಾಯ ಸಂಗ್ರಹಣೆ ಮಾಡಿ ಜುಲೈನಲ್ಲಿ ಬಾಗಿಲು ತೆರೆಯುವ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ.

ರೈಲು, ವಿಮಾನ, ಮೆಟ್ರೋ

ರೈಲು, ವಿಮಾನ, ಮೆಟ್ರೋ

ಪರಿಸ್ಥಿತಿಯನ್ನು ನೋಡಿಕೊಂಡು ಅಂತರಾಷ್ಟ್ರೀಯ ವಿಮಾನ ಸೇವೆ, ನಮ್ಮ ಮೆಟ್ರೋ ಸೇವೆಯನ್ನು ಆರಂಭಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ. ಜೂನ್ 1ರಿಂದ ಕೆಲವು ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗಲಿದೆ. ದೇಶಿಯ ವಿಮಾನಗಳು ಈಗಾಗಲೇ ಹಾರಾಟ ನಡೆಸುತ್ತಿವೆ.

ಜಿಮ್, ಸ್ವಿಮ್ಮಿಂಗ್ ಪೂಲ್

ಜಿಮ್, ಸ್ವಿಮ್ಮಿಂಗ್ ಪೂಲ್

ಚಿತ್ರಮಂದಿರ, ಜಿಮ್, ಸ್ವಿಮ್ಮಿಂಗ್ ಪೂಲ್ ಬಾರ್, ಅಮ್ಯೂಸ್‌ಮೆಂಟ್ ಪಾರ್ಕ್ ಮುಂತಾದವುಗಳನ್ನು ಪರಿಸ್ಥಿತಿ ನೋಡಿಕೊಂಡು ತೆರೆಯುವ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ.

ಸಮಾವೇಶ/ರಾಜಕೀಯ ಕಾರ್ಯಕ್ರಮ/ಕ್ರೀಡೆ/ಸಾಂಸ್ಕೃತಿಕ/ಧಾರ್ಮಿಕ ಮುಂತಾದ ಹೆಚ್ಚು ಜನರು ಸೇರುವ ಕಾರ್ಯಕ್ರಮಗಳಿಗೆ ಅವಕಾಶ ನೀಡುವ ಕುರಿತು ಸದ್ಯ ಯಾವುದೇ ತೀರ್ಮಾನ ಕೈಗೊಂಡಿಲ್ಲ.

English summary
Union government extended lock down till June 30, 2020. Ministry of Home Affairs released the order and new guidelines.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X