ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರಿ ಸಿಬ್ಬಂದಿಗೆ ಶುಭಸುದ್ದಿ: ಕಚೇರಿ ಹಾಜರಾಗುವ ಬಗ್ಗೆ ಇಲ್ಲಿದೆ ಮಾಹಿತಿ

|
Google Oneindia Kannada News

ನವದೆಹಲಿ, ಮೇ.21: ನೊವೆಲ್ ಕೊರೊನಾ ವೈರಸ್ ಭೀತಿ ನಡುವೆ ಕಚೇರಿಗಳು ಕಾರ್ಯಾರಂಭ ಮಾಡಿವೆ. ಸಿಬ್ಬಂದಿಯು ಕಚೇರಿಗಳಿಗೆ ಹಾಜರಾಗುವಂತೆ ಆದೇಶಿಸಿದ ನೌಕರರು ಹಾಗೂ ತರಬೇತಿ ಇಲಾಖೆಯು ಗರ್ಭಿಣಿಯರಿಗೆ ವಿನಾಯಿತಿ ನೀಡಿದೆ.

Recommended Video

ಏನ್ ಮಾತಾಡ್ತಳೆ ಗುರೂ ಇವ್ಳು..ಪುಟ್ಟ ಬಾಲಕಿಗಿರೋ ಬುದ್ದಿ ದೊಡ್ಡವರಿಗಿಲ್ಲ ಅನ್ನೋದೆ ಬೇಜಾರು | Oneindia Kannada

ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್ ಪ್ರತಿಕ್ರಿಯೆ ನೀಡಿದ್ದು, ವೆಟರ್ನರಿ ರಜೆಯಲ್ಲಿ ಇರುವ ಮಹಿಳೆಯರು ಕರ್ತವ್ಯಕ್ಕೆ ಹಾಜರಾಗುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. ಈ ಸಂಬಂಧ ದೇಶದ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇರುವ ಸಚಿವಾಲಯ ಮತ್ತು ಇಲಾಖೆಗಳಿಗೆ ಸರ್ಕ್ಯುಲರ್ ಹೊರಡಿಸಲಾಗಿದೆ.

ಹಿರಿಯ ನಾಗರಿಕರಿಗೆ ಶುಭ ಸುದ್ದಿ ನೀಡಿದ ಮೋದಿ ಸರ್ಕಾರಹಿರಿಯ ನಾಗರಿಕರಿಗೆ ಶುಭ ಸುದ್ದಿ ನೀಡಿದ ಮೋದಿ ಸರ್ಕಾರ

ಗರ್ಭಿಣಿ ಹಾಗೂ ವಿಕಲಾಂಗ ಚೇತನ ಸಿಬ್ಬಂದಿ ಕೂಡಾ ಕಚೇರಿಗಳಿಗೆ ಹಾಜರಾಗುವುದರಿಂದ ವಿನಾಯಿತಿ ನೀಡಲಾಗಿದೆ. ಕೊರೊನಾ ವೈರಸ್ ಭೀತಿ ನಡುವೆ ಅನಾರೋಗ್ಯಕ್ಕೆ ತುತ್ತಾದ ಸಿಬ್ಬಂದಿ ಹಾಗೂ ಅಸ್ವಸ್ಥಗೊಂಡ ನೌಕರರು ಕಚೇರಿಗಳಿಗೆ ಹಾಜರಾಗಲು ಅವಕಾಶವಿಲ್ಲ.

ಅನಾರೋಗ್ಯಪೀಡಿತ ಮತ್ತು ಅಸ್ವಸ್ಥ ಸಿಬ್ಬಂದಿಗೂ ವಿನಾಯತಿ

ಅನಾರೋಗ್ಯಪೀಡಿತ ಮತ್ತು ಅಸ್ವಸ್ಥ ಸಿಬ್ಬಂದಿಗೂ ವಿನಾಯತಿ

ನೊವೆಲ್ ಕೊರೊನಾ ವೈರಸ್ ಭೀತಿ ನಡುವೆ ಅಸ್ವಸ್ಥಗೊಂಡ ಮತ್ತು ಅನಾರೋಗ್ಯದಿಂದ ಚಿಕಿತ್ಸೆಗೆ ಒಳಗಾದ ಸಿಬ್ಬಂದಿಗೂ ವಿನಾಯಿತಿ ನೀಡಲಾಗಿದೆ. ಸಿಜಿಹೆಚ್ಎಸ್/ಸಿಎ (ಎಂಹೆಚ್) ಕಾಯ್ದೆ ಅನ್ವಯ ವೈದ್ಯರು ಸಲಹೆ ನಂತರ ಸಿಬ್ಬಂದಿಯು ಕಚೇರಿಗೆ ಹಾಜರಾಗಲು ಅವಕಾಶ ನೀಡಲಾಗಿದೆ.

ಕಚೇರಿಗಳನ್ನು ತೆರೆಯುವ ವೇಳಾಪಟ್ಟಿ ನಡುವೆ ಅಂತರ

ಕಚೇರಿಗಳನ್ನು ತೆರೆಯುವ ವೇಳಾಪಟ್ಟಿ ನಡುವೆ ಅಂತರ

ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿ ಲಭ್ಯತೆ ಆಧಾರದ ಮೇಲೆ ಹೆಚ್ಚಿನ ಜನದಟ್ಟಣೆ ಆಗದಂತೆ ಮುನ್ನೆಚ್ಚರಿಕೆ ವಹಿಸಿ ಕಚೇರಿ ಸಮಯವನ್ನು ನಿಗದಿಪಡಿಸಬೇಕಾಗಿದೆ. ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರವೇಶ ಮತ್ತು ನಿರ್ಗಮನದ ಸಮಯದಲ್ಲಿ ಅಂತರ ಕಾಯ್ದುಕೊಳ್ಳಬೇಕಿದೆ.

ಮೂರು ಶಿಫ್ಟ್ ಗಳಲ್ಲಿ ಸರ್ಕಾರಿ ಕಚೇರಿಗಳ ಕಾರ್ಯ

ಮೂರು ಶಿಫ್ಟ್ ಗಳಲ್ಲಿ ಸರ್ಕಾರಿ ಕಚೇರಿಗಳ ಕಾರ್ಯ

ಸರ್ಕಾರಿ ಕಚೇರಿಗಳಲ್ಲೂ ಕೂಡಾ ಶಿಫ್ಟ್ ಗಳ ಆಧಾರದಲ್ಲಿ ಕೆಲಸ ನಿರ್ವಹಿಸಲು ಸರ್ಕ್ಯುಲರ್ ನಲ್ಲಿ ಸೂಚನೆ ನೀಡಲಾಗಿದೆ. ಬೆಳಗ್ಗೆ 9 ರಿಂದ ಸಂಜೆ 5ವರೆಗೂ ಮೊದಲ ಶಿಫ್ಟ್. ಬೆಳಗ್ಗೆ 9.30 ರಿಂದ ಸಂಜೆ 6ವರೆಗೂ ಎರಡನೇ ಶಿಫ್ಟ್. ಹಾಗೂ ಬೆಳಗ್ಗೆ 10 ರಿಂದ ಸಂಜೆ 6.30ರ ಮೂರು ಅವಧಿಯಲ್ಲಿ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸಲು ಎಲ್ಲ ಇಲಾಖೆಗಳಿಗೂ ಸಲಹೆ ನೀಡಲಾಗಿದೆ.

ಎಲ್ಲ ದಿನಗಳಲ್ಲೂ ಹಿರಿಯ ಅಧಿಕಾರಿಗಳ ಕಡ್ಡಾಯ ಹಾಜರಿ

ಎಲ್ಲ ದಿನಗಳಲ್ಲೂ ಹಿರಿಯ ಅಧಿಕಾರಿಗಳ ಕಡ್ಡಾಯ ಹಾಜರಿ

ಡೆಪ್ಯುಟಿ ಸೆಕ್ರಟರಿ ಹಂತ ಹಾಗೂ ಅದಕ್ಕಿಂತ ಮೇಲ್ಪಟ್ಟ ಅಧಿಕಾರಿಗಳು ಎಲ್ಲ ಕೆಲಸದ ದಿನಗಳಲ್ಲೂ ಕಚೇರಿಗಳಿಗೆ ಕಡ್ಡಾಯವಾಗಿ ಹಾಜರಾಗಬೇಕು. ಡೆಪ್ಯುಟಿ ಸೆಕ್ರಟರಿ ಹಂತದಿಂದ ಕೆಳಗಿರುವ ಸಿಬ್ಬಂದಿಯು ಶೇ.50ರಷ್ಟು ಮಾತ್ರ ಕಚೇರಿಗೆ ಹಾಜರಾಗಬೇಕು. ಕಚೇರಿಗೆ ಹಾಜರಾಗಲು ಸಾಧ್ಯವಾಗದಿದ್ದಲ್ಲಿ ಫೋನ್ ಮತ್ತು ವಿದ್ಯುತ್ ವ್ಯವಸ್ಥೆಗಳಿದ್ದಲ್ಲಿ ಮನೆಯಲ್ಲಿದ್ದುಕೊಂಡೇ ಕರ್ತವ್ಯ ನಿರ್ವಹಿಸಲು ಅನುಮತಿ ನೀಡಲಾಗಿದೆ.

English summary
India Lockdown 4.0: How Government Offices Work, Any Exception For Staff. A Circular by Department of Personnel and Training for All Departments.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X