ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್ ಡೌನ್ ತೆರವು: ಇದ್ದ ಗೊಂದಲ ಮತ್ತಷ್ಟು ಹೆಚ್ಚಿಸಿದ ಕೇಂದ್ರ ಸರಕಾರ

|
Google Oneindia Kannada News

ನವದೆಹಲಿ, ಏಪ್ರಿಲ್ 4: ಬಹುನಿರೀಕ್ಷಿತ ಲಾಕ್ ಡೌನ್ ಅವಧಿ ಮುಗಿಯುವ ದಿನವಾದ ಏಪ್ರಿಲ್ 14ರ ನಂತರ, ರೈಲ್ವೇಸ್ ಮತ್ತು ವಿಮಾನಯಾನ ಸಂಸ್ಥೆಗಳು ಆನ್ಲೈನ್ ಮುಂಗಡ ಬುಕ್ಕಿಂಗ್ ಆರಂಭಿಸುವ ವಿಚಾರದಲ್ಲಿ, ಸಾರ್ವಜನಿಕರಿಗೆ ಭಾರೀ ಗೊಂದಲವನ್ನು ಉಂಟು ಮಾಡುತ್ತಿವೆ.

ಏಪ್ರಿಲ್ 15ರ ನಂತರ ಖಾಸಗಿ ಸಂಸ್ಥೆಗಳ ಬುಕ್ಕಿಂಗ್ ಕಿಟಕಿ ತೆರವುಗೊಂಡಿದ್ದರೆ, ಏರ್ ಇಂಡಿಯಾ ಮಾತ್ರ ಏಪ್ರಿಲ್ 30ರವರೆಗೆ ಯಾವುದೇ ಬುಕ್ಕಿಂಗ್ ಇರುವುದಿಲ್ಲ ಎಂದು ಹೇಳಿದೆ. ದೇಶೀಯ ಮತ್ತು ಅಂತರಾಷ್ಟ್ರೀಯ ಸೇವೆಗಳ ಬುಕ್ಕಿಂಗ್ ಏ.30ರ ವರೆಗೆ ಇರುವುದಿಲ್ಲ ಎಂದು ಸ್ಪಷ್ಟ ಪಡಿಸಿದೆ.

ಲಾಕ್ ಡೌನ್ ತೆರವು ಸನ್ನಿಹಿತ? ಆರಂಭಗೊಂಡ ಟಿಕೆಟ್ ಬುಕ್ಕಿಂಗ್ ಲಾಕ್ ಡೌನ್ ತೆರವು ಸನ್ನಿಹಿತ? ಆರಂಭಗೊಂಡ ಟಿಕೆಟ್ ಬುಕ್ಕಿಂಗ್

"ಆದರೂ, ಏಪ್ರಿಲ್ ಹದಿನಾಲ್ಕರ ನಂತರ ಬುಕ್ಕಿಂಗ್ ಆರಂಭಿಸುವ ವಿಚಾರದಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಖಾತೆಯ ಸಚಿವಾಲಯದ ನಿರ್ದೇಶನಕ್ಕಾಗಿ ಕಾಯುತ್ತಿದ್ದೇವೆ" ಎಂದು ಏರ್ ಇಂಡಿಯಾ ವಕ್ತಾರರು ಹೇಳಿದ್ದಾರೆ.

Lock Down Will Continue Or Not: Indian Railways And Air India Different Stand

ಭಾರತೀಯ ರೈಲ್ವೇಸ್ ಈ ವಿಚಾರದಲ್ಲಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, "ಕೆಲವೊಂದು ಮಾಧ್ಯಮಗಳಲ್ಲಿ ಏಪ್ರಿಲ್ 14ರ ನಂತರ ಟಿಕೆಟ್ ಬುಕ್ಕಿಂಗ್ ಆರಂಭಿಸಲಾಗಿದೆ ಎಂದು ವರದಿಯಾಗಿದೆ. ಆದರೆ, ರೈಲ್ವೇಸ್, ಲಾಕ್ ಡೌನ್ ಅವಧಿ ಮುಗಿದ ನಂತರದ ದಿನಾಂಕಗಳ ಬುಕ್ಕಿಂಗ್ ಅನ್ನು ಹಿಂದಕ್ಕೆ ಪಡೆದುಕೊಂಡೇ ಇರಲಿಲ್ಲ" ಎಂದು ಹೇಳಿದೆ.

ದೀಪ ಹಚ್ತೀರಾ ಅಂದ್ರೆ, ನಿದ್ದೆ ಬಂದ್ರೆ ಮಾಡ್ತೀನಿ, ಇದು ನನ್ನ ವೈಯಕ್ತಿಕ ಅಂದ್ರು ದೀದಿ ದೀಪ ಹಚ್ತೀರಾ ಅಂದ್ರೆ, ನಿದ್ದೆ ಬಂದ್ರೆ ಮಾಡ್ತೀನಿ, ಇದು ನನ್ನ ವೈಯಕ್ತಿಕ ಅಂದ್ರು ದೀದಿ

"120 ದಿನಗಳ ಮುನ್ನ ಮುಂಗಡ ಟಿಕೆಟ್ ತೆಗೆದುಕೊಳ್ಳುವ ಸಿಸ್ಟಂ ಇರುವುದರಿಂದ, ಏಪ್ರಿಲ್ ಹದಿನೈದರಿಂದ ರೈಲ್ವೇ ಟಿಕೆಟ್ ಕಾದಿರಿಸಬಹುದು" ಎಂದು ರೈಲ್ವೇಸ್ ಸ್ಪಷ್ಟನೆಯನ್ನು ನೀಡಿದೆ.

ಆದರೆ, ಸರಕಾರೀ ಒಡೆತನದ ಏರ್ ಇಂಡಿಯಾ, ಏಪ್ರಿಲ್ 30ರ ವರೆಗೆ ಮುಂಗಡ ಬುಕ್ಕಿಂಗ್ ರದ್ದು ಮಾಡಿರುವುದರಿಂದ, ಲಾಕ್ ಡೌನ್, ಏ.14ಕ್ಕೆ ತೆರವುಗೊಳ್ಳಲಿದೆಯೇ ಎನ್ನುವ ಗೊಂದಲ ಹಾಗೇ ಮುಂದುವರಿದಿದೆ ಎನ್ನುವುದಕ್ಕಿಂತ ಇನ್ನೂ ಜಾಸ್ತಿಯಾಗಿದೆ.

English summary
Lock Down Will Continue Or Not: Indian Railways And Air India Different Stand
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X