ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್ ಡೌನ್; 1,400 ಉದ್ಯೋಗ ಕಡಿತ ಓಲಾ ಘೋಷಣೆ

|
Google Oneindia Kannada News

ಬೆಂಗಳೂರು, ಮೇ 20 : ಕೊರೊನಾ ಹರಡದಂತೆ ತಡೆಯಲು ಘೋಷಣೆ ಮಾಡಿರುವ ಲಾಕ್ ಡೌನ್ ಎಲ್ಲಾ ಕ್ಷೇತ್ರದ ಮೇಲೆಯೂ ಪರಿಣಾಮ ಬೀರಿದೆ. ಆರ್ಥಿಕ ನಷ್ಟದಿಂದ ಪಾರಾಗಲು ಉದ್ಯೋಗ ಕಡಿತ ಮಾಡಲಾಗುತ್ತದೆ ಎಂದು ಓಲಾ ಘೋಷಣೆ ಮಾಡಿದೆ.

ಬುಧವಾರ ಓಲಾ ಸಿಇಓ ಭವಿಶ್‌ ಅಗರವಾಲ್ ಉದ್ಯೋಗ ಕಡಿತದ ಘೋಷಣೆಯನ್ನು ಮಾಡಿದರು. ಉದ್ಯೋಗಿಗಳಿಗೆ ಬರೆದಿರುವ ಪತ್ರದಲ್ಲಿ 1,400 ಉದ್ಯೋಗ ಕಡಿತ ಮಾಡಲಿದ್ದೇವೆ. ಲಾಕ್ ಡೌನ್ ಪರಿಣಾಮ ಈ ಕ್ರಮ ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ.

ಮತ್ತೆ ಉದ್ಯೋಗ ಕಡಿತದ ಘೋಷಣೆ ಮಾಡಿದ ಊಬರ್ ಮತ್ತೆ ಉದ್ಯೋಗ ಕಡಿತದ ಘೋಷಣೆ ಮಾಡಿದ ಊಬರ್

Lock Down Ola Announces 1400 Lay Off

ಭಾರತದಲ್ಲಿ ಈಗಾಗಲೇ ಕೊರೊನಾ ಹರಡದಂತೆ ತಡೆಯಲು 4ನೇ ಹಂತದ ಲಾಕ್ ಡೌನ್ ಜಾರಿಯಲ್ಲಿದೆ. ಟ್ಯಾಕ್ಸಿ ಸೇವೆ ನೀಡುವ ಮತ್ತೊಂದು ಪ್ರಮುಖ ಕಂಪನಿ ಊಬರ್ ಈಗಾಗಲೇ ಮೊದಲ ಹಂತದಲ್ಲಿ 3,700, ಎರಡನೇ ಹಂತದಲ್ಲಿ 3000 ಉದ್ಯೋಗ ಕಡಿತ ಮಾಡುವುದಾಗಿ ಘೋಷಿಸಿದೆ.

ಲಾಕ್ ಡೌನ್; 1,100 ಉದ್ಯೋಗ ಕಡಿತದ ಘೋಷಣೆ ಮಾಡಿದ ಸ್ವಿಗ್ಗಿ ಲಾಕ್ ಡೌನ್; 1,100 ಉದ್ಯೋಗ ಕಡಿತದ ಘೋಷಣೆ ಮಾಡಿದ ಸ್ವಿಗ್ಗಿ

"ಲಾಕ್ ಡೌನ್ ಪರಿಣಾಮ ಎಲ್ಲಾ ಕ್ಷೇತ್ರದ ಮೇಲೆಯೂ ಆಗಿದೆ. ಕಳೆದ 2 ತಿಂಗಳಿನಿಂದ ನಮ್ಮ ಆದಾಯ ಶೇ 95ರಷ್ಟು ಕಡಿಮೆಯಾಗಿದೆ. ಸಾವಿರಾರು ಚಾಲಕರು ಮತ್ತು ಅವರ ಕುಟುಂಬ ಈಗ ಸಂಕಷ್ಟದಲ್ಲಿದೆ" ಎಂದು ಭವಿಶ್ ಅಗರವಾಲ್ ಹೇಳಿದ್ದಾರೆ.

ಉದ್ಯೋಗ, ವೇತನ ಕಡಿತದ ಘೋಷಣೆ ಮಾಡಿದ ಝೊಮ್ಯಾಟೋ ಉದ್ಯೋಗ, ವೇತನ ಕಡಿತದ ಘೋಷಣೆ ಮಾಡಿದ ಝೊಮ್ಯಾಟೋ

ಕೆಲಸದಿಂದ ತೆಗೆದು ಹಾಕುವ ನೌಕರರಿಗೆ ಮೂರು ತಿಂಗಳ ಕಾಲ ನಿಗದಿತ ವೇತನ ನೀಡಲಾಗುತ್ತದೆ ಎಂದು ಓಲಾ ಹೇಳಿದೆ. 2019ರ ನವೆಂಬರ್‌ನಲ್ಲಿ ಓಲಾ 200 ಉದ್ಯೋಗಿಗಳನ್ನು ಕೆಲಸದಿಂದ ಕಿತ್ತು ಹಾಕಿತ್ತು.

ಲಾಕ್ ಡೌನ್ ಪರಿಣಾಮ ಎಲ್ಲಾ ವಾಹನಗಳ ಸಂಚಾರವನ್ನು ಮಾರ್ಚ್‌ನಲ್ಲಿ ರದ್ದುಗೊಳಿಸಲಾಗಿತ್ತು. ಕೆಲವು ನಗರದಲ್ಲಿ ಓಲಾ ಸೇವೆಗಳು ಆರಂಭವಾಗಿದೆ. ಆದರೆ, ಇನ್ನೂ ಹಲವು ನಗರದಲ್ಲಿ ಟ್ಯಾಕ್ಸಿಗಳ ಸಂಚಾರಕ್ಕೆ ಇನ್ನೂ ಅನುಮತಿ ಸಿಕ್ಕಿಲ್ಲ.

English summary
Bhavish Aggarwal CEO of Taxi aggregator Ola said announced lay off 1,400 of its staff. In a note he said that Coronavirus pandemic hit the revenues.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X