ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಮೂರು ರಾಜ್ಯಗಳಿಗೆ ವಲಸೆ ಕಾರ್ಮಿಕರು ವಾಪಸ್ ಆಗಿದ್ದು ಹೆಚ್ಚು!

|
Google Oneindia Kannada News

ನವದೆಹಲಿ, ಜೂನ್ 07 : ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಲಾಯಿತು. ವಿವಿಧ ರಾಜ್ಯಗಳಲ್ಲಿ ಇದ್ದ ವಲಸೆ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದರು. ತವರು ರಾಜ್ಯಕ್ಕೆ ಹೋಗಲಾರದೆ, ಇರುವಲ್ಲಿ ಕೆಲಸ ಸಿಗದೆ ಆತಂತಗೊಂಡರು.

ಲಾಕ್ ಡೌನ್ ಘೋಷಣೆಯಾದ ಬಳಿಕ ಜೂನ್ 6ರ ಶನಿವಾರದ ತನಕ 67.5 ಲಕ್ಷ ವಲಸೆ ಕಾರ್ಮಿಕರು ತಮ್ಮ ರಾಜ್ಯಗಳಿಗೆ ವಾಪಸ್ ಆಗಿದ್ದಾರೆ. ಉತ್ತರ ಪ್ರದೇಶ, ಬಿಹಾರ ಮತ್ತು ಜಾರ್ಖಂಡ್‌ ರಾಜ್ಯಕ್ಕೆ ವಾಪಸ್ ಆದ ವಲಸೆ ಕಾರ್ಮಿಕರು ಹೆಚ್ಚು ಎಂಬ ಅಂಕಿ ಅಂಶ ಬಿಡುಗಡೆಯಾಗಿದೆ.

15 ದಿನದಲ್ಲಿ ವಲಸೆ ಕಾರ್ಮಿಕರನ್ನು ಊರುಗಳಿಗೆ ಕಳುಹಿಸಬೇಕು- ಸುಪ್ರೀಂಕೋರ್ಟ್15 ದಿನದಲ್ಲಿ ವಲಸೆ ಕಾರ್ಮಿಕರನ್ನು ಊರುಗಳಿಗೆ ಕಳುಹಿಸಬೇಕು- ಸುಪ್ರೀಂಕೋರ್ಟ್

ಈ ಮೂರು ರಾಜ್ಯಗಳಲ್ಲಿ ಇದ್ದ ವಲಸೆ ಕಾರ್ಮಿಕರಲ್ಲಿ ಅತಿ ಹೆಚ್ಚು ಜನರು ಕಟ್ಟಡ ನಿರ್ಮಾಣ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರು. ವಲಸೆ ಕಾರ್ಮಿಕರು ತವರಿಗೆ ಮರಳಿದ್ದರಿಂದ ವಿವಿಧ ರಾಜ್ಯಗಳಲ್ಲಿ ಕಾರ್ಮಿಕರ ಸಮಸ್ಯೆ ಎದುರಾಗಬಹುದು ಎಂದು ಅಂದಾಜಿಸಲಾಗಿದೆ.

ಲಾಕ್‌ಡೌನ್‌ ವೇಳೆ 198 ವಲಸೆ ಕಾರ್ಮಿಕರ ಅಪಘಾತದಲ್ಲಿ ಸಾವುಲಾಕ್‌ಡೌನ್‌ ವೇಳೆ 198 ವಲಸೆ ಕಾರ್ಮಿಕರ ಅಪಘಾತದಲ್ಲಿ ಸಾವು

ಮೇ ತಿಂಗಳಿನ ತನಕ ವಲಸೆ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದರು. ಬಳಿಕ ಕೇಂದ್ರ ಸರ್ಕಾರ ಶ್ರಮಿಕ್ ವಿಶೇಷ ರೈಲುಗಳ ಮೂಲಕ ಕಾರ್ಮಿಕರು ತಮ್ಮ ತವರು ರಾಜ್ಯಕ್ಕೆ ವಾಪಸ್ ಆಗಲು ಅವಕಾಶವನ್ನು ನೀಡಿತು. ವಿವಿಧ ರಾಜ್ಯಗಳಿಂದ ರೈಲುಗಳು ಸಂಚಾರ ನಡೆಸಿದವು.

ವಲಸೆ ಕಾರ್ಮಿಕರಿಗೆ ಮಹತ್ವದ ಸೂಚನೆ ಕೊಟ್ಟ ಬಿಬಿಎಂಪಿ ವಲಸೆ ಕಾರ್ಮಿಕರಿಗೆ ಮಹತ್ವದ ಸೂಚನೆ ಕೊಟ್ಟ ಬಿಬಿಎಂಪಿ

ಯಾವ ರಾಜ್ಯಕ್ಕೆ ಎಷ್ಟು ಕಾರ್ಮಿಕರು

ಯಾವ ರಾಜ್ಯಕ್ಕೆ ಎಷ್ಟು ಕಾರ್ಮಿಕರು

ಲಾಕ್ ಡೌನ್ ಘೋಷಣೆ ಬಳಿಕ ಉತ್ತ ಪ್ರದೇಶಕ್ಕೆ ಶೇ 16.4ರಷ್ಟು, ಬಿಹಾರಕ್ಕೆ ಶೇ 36.1ರಷ್ಟು ಮತ್ತು ಜಾರ್ಖಂಡ್ ರಾಜ್ಯಕ್ಕೆ ಶೇ 20.7ರಷ್ಟು ವಲಸೆ ಕಾರ್ಮಿಕರು ವಾಪಸ್ ಆಗಿದ್ದಾರೆ. ಇವರಲ್ಲಿ ಹೆಚ್ಚಿನ ಜನರು ನಿರ್ಮಾಣ ಕ್ಷೇತ್ರದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದವರು. ಶನಿವಾರದ ತನಕ ರಾಜ್ಯಗಳಿಗೆ ವಾಪಸ್ ಆದ ಕಾರ್ಮಿಕರ ಸಂಖ್ಯೆ 67.5 ಲಕ್ಷ.

ಕುಶಲ ಕರ್ಮಿಗಳು

ಕುಶಲ ಕರ್ಮಿಗಳು

ಜೂನ್ 5ರ ತನಕ ಉತ್ತರ ಪ್ರದೇಶಕ್ಕೆ ಮರಳಿದ 28.13 ಲಕ್ಷ, ಬಿಹಾರಕ್ಕೆ ಮರಳಿದ 32 ಲಕ್ಷ ಮತ್ತು ಜಾರ್ಖಂಡ್‌ಗೆ ಮರಳಿದ 2.50 ಲಕ್ಷ ಕಾರ್ಮಿಕರು ತಮ್ಮ ಉದ್ಯೋದಲ್ಲಿ ಕೌಶಲ್ಯ ಹೊಂದಿದವರು. ಇವರಲ್ಲಿ ಡ್ರೈವರ್, ಟೈಲರ್, ಎಲೆಕ್ಟ್ರಿಷಿಯನ್, ಅಡುಗೆಯವರು, ಮೆಕಾನಿಕ್‌ಗಳು ಸೇರಿದ್ದಾರೆ. ಆದರೆ, ಹೆಚ್ಚಿನವರು ಕಟ್ಟಡ ನಿರ್ಮಾಣ ಕ್ಷೇತ್ರಕ್ಕೆ ಸೇರಿದವರಾಗಿದ್ದಾರೆ.

ಬಿಹಾರದ ಮೇಲೆ ಒತ್ತಡ

ಬಿಹಾರದ ಮೇಲೆ ಒತ್ತಡ

ವಲಸೆ ಕಾರ್ಮಿಕರು ವಾಪಸ್ ಆಗಿದ್ದು ಬಿಹಾರ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೆಚ್ಚು ತಂದಿದೆ. ಕಾರಣ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದೆ. 90 ವಿಭಾಗದಲ್ಲಿ ಸರ್ಕಾರ ವಲಸೆ ಕಾರ್ಮಿಕರನ್ನು ವಿಂಗಡನೆ ಮಾಡುತ್ತಿದೆ. ಇವುಗಳಲ್ಲಿ 7.98 ಲಕ್ಷ ಜನರು ನಿರ್ಮಾಣ ಕ್ಷೇತ್ರದಲ್ಲಿ ದುಡಿಯುತ್ತಿದ್ದವರು ಆಗಿದ್ದಾರೆ.

ಕಾಡಲಿದೆ ಕಾರ್ಮಿಕರ ಕೊರತೆ

ಕಾಡಲಿದೆ ಕಾರ್ಮಿಕರ ಕೊರತೆ

ತಮ್ಮ ತವರು ರಾಜ್ಯಕ್ಕೆ ವಾಪಸ್ ಹೋದ ಕಾರ್ಮಿಕರು ಅಲ್ಲಯೇ ಉದ್ಯೋಗ ಹುಡುಕುತ್ತಿದ್ದಾರೆ. ಇದರಿಂದಾಗಿ ವಿವಿಧ ರಾಜ್ಯಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕಾರ್ಮಿಕರ ಕೊರತೆ ಎದುರಾಗಬಹುದು ಎಂದು ಅಂದಾಜಿಸಲಾಗಿದೆ. ಕಾರ್ಮಿಕರು ಪುನಃ ಕೆಲಸ ಹುಡುಕಿಕೊಂಡು ಬೇರೆ ರಾಜ್ಯಕ್ಕೆ ವಾಪಸ್ ಆಗುವ ಸಂಖ್ಯೆ ಕಡಿಮೆ ಎನ್ನುತ್ತಾರೆ ತಜ್ಞರು.

English summary
After announcement of lock down high number of migrant workers returned to Uttar Pradesh, Bihar and Jharkhand state. These workers engaged in construction activity in various states.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X