ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್ ಡೌನ್ ವೇಳೆ ರಸ್ತೆ ಅಪಘಾತ; 196 ವಲಸೆ ಕಾರ್ಮಿಕರು ಸಾವು

|
Google Oneindia Kannada News

ನವದೆಹಲಿ, ಮೇ 26 : ಭಾರತದ ವಿವಿಧ ರಾಜ್ಯಗಳಲ್ಲಿ ಲಾಕ್ ಡೌನ್ ಅವಧಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ 196 ವಲಸೆ ಕಾರ್ಮಿಕರು ಮೃತಪಟ್ಟಿದ್ದಾರೆ. ಅಗತ್ಯ ವಸ್ತುಗಳನ್ನು ಸರಬರಾಜು ಮಾಡುವ ವಾಹನಗಳು ಮಾತ್ರ ಸಂಚಾರ ನಡೆಸುತ್ತಿದ್ದವು.

ಸೇವ್ ಲೈಫ್ ಫೌಂಡೇಷನ್ ಮಾರ್ಚ್ 25ರಿಂದ ದೇಶದಲ್ಲಿ ನಡೆದ ರಸ್ತೆ ಅಪಘಾತಗಳ ಸಮೀಕ್ಷೆಯನ್ನು ನಡೆಸಿದೆ. 1346 ಅಪಘಾತಗಳು ನಡೆದಿದ್ದು, 601 ಜನರು ಮೃತಪಟ್ಟಿದ್ದಾರೆ. 1161 ಜನರು ಗಾಯಗೊಂಡಿದ್ದಾರೆ ಎಂದು ಸಮೀಕ್ಷೆ ಹೇಳಿದೆ.

ವಲಸೆ ಕಾರ್ಮಿಕರನ್ನು ಊರಿಗೆ ತಲುಪಿಸಿದ ಉಡುಪಿಯ ದಿಟ್ಟ ಯುವತಿವಲಸೆ ಕಾರ್ಮಿಕರನ್ನು ಊರಿಗೆ ತಲುಪಿಸಿದ ಉಡುಪಿಯ ದಿಟ್ಟ ಯುವತಿ

ಒಟ್ಟು 196 ವಲಸೆ ಕಾರ್ಮಿಕರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರೆ. 866 ವಲಸೆ ಕಾರ್ಮಿಕರು ಗಾಯಗೊಂಡಿದ್ದಾರೆ. ಲಾಕ್ ಡೌನ್ ಪರಿಣಾಮ ವಾಹನಗಳ ಸಂಚಾರ ಕಡಿಮೆ ಇತ್ತು. ಅಗತ್ಯ ವಸ್ತು ಸರಬರಾಜು ಮಾಡುವ ವಾಹನ ಮಾತ್ರ ಸಂಚಾರ ನಡೆಸುತ್ತಿತ್ತು.

ಬ್ರೇಕಿಂಗ್ : ಗೂಡ್ಸ್ ರೈಲು ಡಿಕ್ಕಿ; 14 ವಲಸೆ ಕಾರ್ಮಿಕರು ಸಾವು ಬ್ರೇಕಿಂಗ್ : ಗೂಡ್ಸ್ ರೈಲು ಡಿಕ್ಕಿ; 14 ವಲಸೆ ಕಾರ್ಮಿಕರು ಸಾವು

Lock Down 196 Migrant Workers Killed In Road Accident

ವಲಸೆ ಕಾರ್ಮಿಕರು ಒಂದು ಕಡೆಯಾದರೆ 35 ಕೊರೊನಾ ವಾರಿಯರ್ಸ್ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. 31 ಜನರು ಗಾಯಗೊಂಡಿದ್ದಾರೆ. ಭಾರತದ ರಸ್ತೆಗಳು ಎಷ್ಟು ಅಪಾಯಕಾರಿ ಎಂದು ಸಮೀಕ್ಷೆ ವಿವರಿಸಿದೆ.

ಮಗನ ಸಾವು, ಆಸ್ಪತ್ರೆಯಲ್ಲಿ ಕಾರ್ಮಿಕ ರಂಪುಕರ್ ಕಣ್ಣೀರು ಮಗನ ಸಾವು, ಆಸ್ಪತ್ರೆಯಲ್ಲಿ ಕಾರ್ಮಿಕ ರಂಪುಕರ್ ಕಣ್ಣೀರು

ಲಾಕ್ ಡೌನ್ ಅವಧಿಯಲ್ಲಿ ರಸ್ತೆಗಳನ್ನು ರಿಪೇರಿ ಮಾಡಲು ಅವಕಾಶವಿತ್ತು. ರಸ್ತೆ ಸುರಕ್ಷತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಪಟ್ಟಿ ಮಾಡಿ ಸಮೀಕ್ಷೆಯ ಜೊತೆ ನೀಡಲಾಗಿದ್ದು, ಕೇಂದ್ರ ಭೂ ಸಾರಿಗೆ ನಿರ್ದೇಶನಾಲಯಕ್ಕೂ ಸಲ್ಲಿಕೆ ಮಾಡಲಾಗಿದೆ.

38 ಕಾರ್ಮಿಕರಿಗೆ ಗಾಯ: ಮಂಗಳವಾರ ಸಂಜೆ ಜಾರ್ಖಂಡ್‌ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ 38 ವಲಸೆ ಕಾರ್ಮಿಕರು ಗಾಯಗೊಂಡಿದ್ದಾರೆ. ಕೋಲ್ಕತ್ತಾದಿಂದ ಕಾರ್ಮಿಕರು ಬರುತ್ತಿದ್ದ ಬಸ್ ನಿಯಂತ್ರಣ ತಪ್ಪಿ ಉರುಳಿ ಬಿದ್ದು ಅಪಘಾತ ಸಂಭವಿಸಿದೆ.

English summary
196 migrant workers killed in road accident during the lock down time and 866 injured said survey by the save life foundation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X