ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

400 ಜಿಲ್ಲೆಗಳಲ್ಲಿ ಬ್ಯಾಂಕ್‌ಗಳಿಂದ ಸಾಲ ಮೇಳ: ನಿರ್ಮಲಾ ಸೀತಾರಾಮನ್

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 19: ಕುಸಿದಿರುವ ಆರ್ಥಿಕತೆಗೆ ಶಕ್ತಿ ತುಂಬಲು ವಿತ್ತ ಸಚಿವೆ ಹಲವು ಕ್ರಮಗಳನ್ನು ಈಗಾಗಲೇ ಘೋಷಿಸಿದ್ದು, ಬ್ಯಾಂಕ್ ಸಾಲ ಮೇಳದ ಘೋಷಣೆಯನ್ನು ಇಂದು ಮಾಡಿದ್ದಾರೆ.

ದೇಶದ 400 ಜಿಲ್ಲೆಗಳಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಗ್ರಾಹಕರಿಗಾಗಿ ಸುಲಭ ಸಾಲದ ಮೇಳಗಳನ್ನು ಆಯೋಜಿಸಲಿವೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಹೇಳಿದರು.

ಗೃಹ ನಿರ್ಮಾಣ ನೆರವಿಗೆ 10,000 ಕೋಟಿ: ನಿರ್ಮಲಾ ಸೀತಾರಾಮನ್ಗೃಹ ನಿರ್ಮಾಣ ನೆರವಿಗೆ 10,000 ಕೋಟಿ: ನಿರ್ಮಲಾ ಸೀತಾರಾಮನ್

ಆರ್ಥಿಕತೆಯಲ್ಲಿ ಹಣಕಾಸು ಹರಿವು ಹೆಚ್ಚಳವಾಗಲು ಈ ನಿರ್ಣಯ ಮಾಡಲಾಗಿದ್ದು, ಸಾಲಗಳು ಜನರಿಗೆ ಸರಳವಾಗಿ ಮತ್ತು ಕಡಿಮೆ ಬಡ್ಡಿ ದರದಲ್ಲಿ ಸಿಗುವಂತೆ ಮಾಡಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.

Loan Melas In 400 Districts Of India: Nirmala Sitharaman

ಎಲ್ಲಾ ವರ್ಗದ ಜನರನ್ನು ಗಮನದಲ್ಲಿಟ್ಟುಕೊಂಡು, ಎಲ್ಲ ವರ್ಗದ ಜನರಿಗೆ ಸಾಲ ಸೌಲಭ್ಯ ನೀಡುವ ದೃಷ್ಟಿಯಿಂದ ಈ ಸಾಲಮೇಳ ಆಯೋಜಿಸಲಾಗುತ್ತಿದ್ದು, ಮನೆ ನಿರ್ಮಿಸುವವರು, ರೈತರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆದಾರರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಸಣ್ಣ ಮಟ್ಟದ ತೆರಿಗೆ ಅಪರಾಧಕ್ಕೆ ಕಾನೂನು ಕ್ರಮ ಇಲ್ಲ: ನಿರ್ಮಲಾ ಸೀತಾರಾಮನ್ಸಣ್ಣ ಮಟ್ಟದ ತೆರಿಗೆ ಅಪರಾಧಕ್ಕೆ ಕಾನೂನು ಕ್ರಮ ಇಲ್ಲ: ನಿರ್ಮಲಾ ಸೀತಾರಾಮನ್

ಬ್ಯಾಂಕೇತರ ಹಣಕಾಸು ಸಂಸ್ಥೆಗಳೊಂದಿಗೆ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಒಟ್ಟು ಗೂಡಿ ಸಾಲ ಸೌಲಭ್ಯವನ್ನು ನೀಡುತ್ತಿದ್ದು, ಹಣಕಾಸು ಹರಿವಿಗಾಗಿ ಈ ನಿರ್ಧಾರಗಳನ್ನು ಮಾಡಲಾಗಿದೆ ಎಂದಿದ್ದಾರೆ.

English summary
Finance minister Nirmala Sitharaman said Banks will open easy loan melas in 400 districts of nation from October 03.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X