ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದುವೆ, ಲಿವಿಂಗ್ ಟುಗೆದರ್ ಬೇರೆ ಬೇರೆಯಲ್ಲ

|
Google Oneindia Kannada News

ನವದೆಹಲಿ, ಏ. 13: ಗಂಡ-ಹೆಂಡತಿ ರೀತಿಯಲ್ಲಿ ಜೋಡಿಯೊಂದು ದೀರ್ಘಕಾಲ ವಾಸಮಾಡುತ್ತಿದ್ದರೆ ಅವರನ್ನು ಕಾನೂನು ಬದ್ಧವಾಗಿ ದಂಪತಿ ಎಂದೇ ಭಾವಿಸಲಾಗುತ್ತದೆ. ಅಲ್ಲದೇ ಪುರುಷ ಸಾವಿಗೀಡಾದರೆ ಆತನ ಆಸ್ತಿಗೆ ಮಹಿಳೆ ಉತ್ತರಾಧಿಕಾರಿಯಾಗಿ ಮಾರ್ಪಡುತ್ತಾಳೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಮಾನ ನೀಡಿದೆ.

ಎಂ. ಎ. ಇಕ್ಬಾಲ್ ಮತ್ತು ಅಮೀತ್ ರಾಯ್ ನೇತೃತ್ವದ ವಿಭಾಗೀಯ ಪೀಠ ನಿರಂತರವಾಗಿ ಒಟ್ಟಿಗೆ ವಾಸಿಸುವುದು ಮದುವೆಗೆ ಸಮನಾಗುತ್ತದೆ ಎಂದು ಹೇಳಿದೆ. ಕಾನೂನು ಮದುವೆಯ ಪರವಾಗಿ, ಅಕ್ರಮ ಸಂಬಂಧದ ವಿರುದ್ಧವಾಗಿ ಸದಾ ಕೆಲಸ ಮಾಡುತ್ತದೆ. ದೀರ್ಘಕಾಲದ ಬಂಧ ಇಟ್ಟುಕೊಂಡಿದ್ದರೆ ಅದನ್ನು ಮದುವೆ ಎಂದೇ ಪರಿಗಣಿಸಬೇಕಾಗುತ್ತದೆ ಎಂದು ಪೀಠ ಸ್ಪಷ್ಟಪಡಿಸಿದೆ.[ಮದುವೆ ಪ್ರಮಾಣ ಪತ್ರ ಪಡೆಯುವುದು ಹೇಗೆ?]

supreme court

2010 ರಿಂದಲೂ ಸುಪ್ರೀಂ ಕೋರ್ಟ್ ಲಿವಿಂಗ್ ಟು ಗೆದರ್ ಪರವಾಗಿಯೇ ಮಾತನಾಡುತ್ತ ಬಂದಿದೆ. ಇಲ್ಲಿಯೂ ಸಹ ಮಹಿಳೆಯರ ಹಕ್ಕನ್ನು ಎತ್ತಿ ಹಿಡಿದಿದ್ದು ಈಗ ಗಂಡ-ಹೆಂಡತಿ ಎಂಬ ಅರ್ಥ ನೀಡಲು ಮುಂದಾಗಿದೆ.

ಕುಟುಂಬವೊಂದು ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ನ್ಯಾಯಪೀಠ ಈ ತೀರ್ಮಾನ ನೀಡಿದೆ. ಅಜ್ಜನ ಜತೆ ಕಳೆದ 20 ವರ್ಷಗಳಿಂದ ವಾಸವಾಗಿದ್ದ ಅಜ್ಜಿ ಹೇಗೆ ಅಜ್ಜನ ಆಸ್ತಿಗೆ ಉತ್ತರಾಧಿಕಾರಿಯಾಗುತ್ತಾಳೇ? ಎಂದು ಪ್ರಶ್ನಿಸಿ ಕುಟುಂಬದವರು ದೂರು ದಾಖಲಿಸಿದ್ದರು.[ಆನ್ ಲೈನ್ ಮೂಲಕ ಮದುವೆ ನೋಂದಣಿ ಹೇಗೆ]

ಇದನ್ನು ವಿಚಾರಣೆ ನಡೆಸಿದ ನ್ಯಾಯಾಲಯ, ನಿಮ್ಮ ಅಜ್ಜ-ಅಜ್ಜಿಯ ಜತೆ ಇರಿಸಿಕೊಂಡಿದ್ದು ದೀರ್ಘಕಾಲದ ಸಂಬಂಧ. ಅಲ್ಲದೇ ಒಂದೇ ಮನೆಯಲ್ಲಿ ವಾಸವಾಗಿದ್ದರು. ಹಾಗಾಗಿ ಆಕೆ ಅಜ್ಜನ ಆಸ್ತಿಗೆ ಉತ್ತರಾಧಿಕಾರಿಯಾಗುತ್ತಾಳೆ ಎಂದು ಹೇಳಿದೆ.

ಅವರು ಕಾನೂನು ಬದ್ಧಚಾಗಿ ಮದುವೆಯಾಗದೇ ಇರಬಹುದು. ಆದರೆ ಒಬ್ಬರನ್ನೊಬ್ಬರು ಅರ್ಥೈಸಿಕೊಂಡು 20 ವರ್ಷ ಕಾಲ ಜೀವನ ನಡೆಸಿದ್ದಾರೆ. ಹೀಗಾಗಿ ಆಸ್ತಿಯಲ್ಲಿ ಹಕ್ಕು ಪಡೆದುಕೊಳ್ಳುತ್ತಾಳೆ ಎಂದು ನ್ಯಾಯಾಲಯ ಆದೇಶ ನೀಡಿದೆ.

English summary
If an unmarried couple is living together as husband and wife, then they would be presumed to be legally married and the woman would be eligible to inherit the property after death of her partner, the Supreme Court has ruled.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X