• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಈಶಾನ್ಯ ರಾಜ್ಯ ಮೇಘಾಲಯ, ನಾಗಾಲ್ಯಾಂಡ್ ನಲ್ಲಿ ಮತದಾನ ಆರಂಭ

|

ಕೋಹಿಮಾ/ಶಿಲ್ಲಾಂಗ್, ಫೆಬ್ರವರಿ 27: ನಾಗಾಲ್ಯಾಂಡ್ ಮತ್ತು ಮೇಘಾಲಯ ವಿಧಾನಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯಲಿದ್ದು, ಈಶಾನ್ಯ ಭಾಗದ ಎರಡೂ ರಾಜ್ಯಗಳಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

ತಲಾ 60 ವಿಧಾನಸಭಾ ಕ್ಷೇತ್ರಗಳಲ್ಲಿ ಎರಡೂ ರಾಜ್ಯಗಳಲ್ಲೂ 50 ಕ್ಷೇತ್ರಗಳಿಗೆ ಮಾತ್ರ ಮತದಾನ ನಡೆಯಲಿದೆ. ಮೇಘಾಲಯದ ವಿಲಿಯಂ ನಗರ ಎನ್ ಸಿಪಿ ಅಭ್ಯರ್ಥಿ ಜೊನಾಥನ್ ಎನ್ ಸಂಗ್ಮಾ ನಿಧನದಿಂದಾಗಿ ಈ ಕ್ಷೇತ್ರದಲ್ಲಿ ಚುನಾವಣೆ ಮುಂದೂಡಲಾಗಿದೆ. ನಾಗಾಲ್ಯಾಂಡ್ ಎನ್ ಡಿಪಿಪಿ ಅಭ್ಯರ್ಥಿ ನೆಫಿಯು ರಿಯೋ ಅವರು ಅವಿರೋಧವಾಗಿ ಆಯ್ಕೆಯಾಗಿರುವುದರಿಂದ ಉತ್ತರ ಅಂಗಾಮಿ -2 ಕ್ಷೇತ್ರದಲ್ಲಿ ಚುನಾವಣೆ ನಡೆಯುತ್ತಿಲ್ಲ.

ಈಶಾನ್ಯ ರಾಜ್ಯಗಳಲ್ಲಿ ಚುನಾವಣೆ ಹವಾ: ತಿಳಿಯಬೇಕಾದ 8 ಸಂಗತಿ

ಫೆಬ್ರವರಿ 18 ರಂದು ತ್ರಿಪುರ ವಿಧಾನಸಭೆ ಚುನಾವಣೆ ನಡೆದಿದ್ದು, ಶೇ.74 ರಷ್ಟು ಮತದಾನ ದಾಖಲಾಗಿತ್ತು. ಈ ಮೂರೂ ಕ್ಷೇತ್ರಗಳ ಫಲಿತಾಂಶ ಮಾರ್ಚ್ 3 ರಂದು ಹೊರಬೀಳಲಿದೆ.

LIVE: Voting for Meghalaya, Nagaland assembly elections 2018 today

Newest First Oldest First
1:14 PM, 27 Feb
ಮೇಘಾಲಯದ ರಿ-ಬೊಹಿ ಜಿಲ್ಲೆಯಲ್ಲಿ ಮತಚಲಾಯಿಸಿದ ಖಾಸಿ ಬುಡಕಟ್ಟು ಸಮುದಾಯದ ಮಹಿಳೆಯರು.
1:13 PM, 27 Feb
ಚೆಂಗ್ಕೊಂಪರದಲ್ಲಿ ಮತಚಲಾಯಿಸಿದ ಮೇಘಾಲಯದ ಹಾಲಿ ಮುಖ್ಯಮಂತ್ರಿ ಮುಕುಲ್ ಸಂಗ್ಮಾ
11:38 AM, 27 Feb
ದಕ್ಷಿಣ ತುರಾ ಕ್ಷೇತ್ರದ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಬೆರ್ನಾರ್ಡ್ ಮರಾಕ್ ಮತ ಚಲಾಯಿಸಿದರು. ಬಿಜೆಪಿಯಲ್ಲಿದ್ದ ಇವರು ಗೋಮಾಂಸ ನಿಷೇಧ ವಿವಾದಕ್ಕೆ ಸಂಬಮಧಿಸಿದಂತೆ ಬಿಜೆಪಿ ತೊರೆದು ತೃಣಮೂಲ ಕಾಂಗ್ರೆಸ್ ಗೆ ಸೇರಿದ್ದರು.
10:55 AM, 27 Feb
ನಾಗಾಲ್ಯಾಂಡ್ ಮತ್ತು ಮೇಘಾಲಯದಲ್ಲಿ ಪ್ರಮುಖವಾಗಿ ಯುವಕರು ಹೆಚ್ಚು ಹೆಚ್ಚು ಮತದಾನದಲ್ಲಿ ಪಾಲ್ಗೊಳ್ಳಿ: ಕೇಂದ್ರ ಸಚಿವ ಕಿರಣ್ ರಿಜುಜು ಮನವಿ
10:52 AM, 27 Feb
ಉತ್ತರ ಶಿಲ್ಲಾಂಗ್ ನ ಓಕ್ ಲ್ಯಾಂಡ್ ಎ 4 ಬೂತಿನಲ್ಲಿ ಮತಚಲಾಯಿಸಿದ ಮೇಘಾಲಯ ರಾಜ್ಯಪಾಲ ಗಂಗಾ ಪ್ರಸಾದ್.
8:51 AM, 27 Feb
ಶಿಲ್ಲಾಂಗ್ ನಲ್ಲಿ ತಾಂತ್ರಿಕ ಕಅರಣಗಳಿಂದ ವಿಳಂಬವಾದ ಮತದಾನ. ಇವಿಎಂ ನಲ್ಲಿ ತಾಂತ್ರಿಕ ಸಮಸ್ಯೆ. ಕೆಲವೇ ಕ್ಷಣಗಳಲ್ಲಿ ಮತ್ತೆ ಆರಂಭವಾದ ಮತದಾನ
7:29 AM, 27 Feb
ಮೇಘಾಲಯ-ನಾಗಾಲ್ಯಾಂಡ್ ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ಆರಂಭ. ತ್ರಿಪುರ ರಾಜ್ಯದಲ್ಲಿ ಫೆ.18 ರಂದೇ ಮತದಾನ ನಡೆದಿದ್ದು ಎಲ್ಲಾ ಕ್ಷೇತ್ರಗಳ ಫಲಿತಾಂಶ ಮಾ.3 ರಂದು ಹೊರಬೀಳಲಿದೆ.
7:28 AM, 27 Feb
ಮೇಘಾಲಯ, ನಾಗಾಲ್ಯಾಂಡ್ ಮತ್ತು ತ್ರಿಪುರಗಳ ಪ್ರಸ್ತುತ ವಿಧಾನಸಭೆಯ ಕಾಲಾವಧಿ ಕ್ರಮವಾಗಿ ಮಾರ್ಚ್ 6, 13 ಮತ್ತು 14 ರಂದು ಅಂತ್ಯಗೊಳ್ಳಲಿದೆ. ಪ್ರತಿ ವಿಧಾಸಭೆಯಲ್ಲೂ ತಲಾ 60 ಕ್ಷೇತ್ರಗಳಿವೆ.
7:28 AM, 27 Feb
ಮೇಘಾಲಯದಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ಭೂತ್(ಪಿಂಕ್ ಭೂತ್). ಚುನಾವಣೆಗಾಗಿ ಇವಿಎಂ(Electronic voting machines) ಮತ್ತು ವಿವಿಪಿಎಟಿ(Voter Verifiable Paper Audit Trail) ಬಳಕೆ
7:28 AM, 27 Feb
ಬೆಳಿಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು, ಸಂಜೆ 4 ಗಂಟೆಯವರೆಗೆ ನಡೆಯಲಿದೆ. ಒಟ್ಟು 372 ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದಾರೆ. ಒಟ್ಟು18.4 ಲಕ್ಷ ಮತದಾರರು ಮತದಾನ ಮಾಡಲಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Northeastern state Meghalaya- 'abode of clouds' is going to polls on Tuesday. Voting will be held in 59 constituencies between 7 am and 4 pm. A total of 372 candidates are in the fray polls after three of them withdrew their documents. Total 32 are female candidates while the rest 340 are males. The campaign for the polls in Meghalaya came to an end on Sunday evening.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more