ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾವು ನಿಲ್ಲುವುದಿಲ್ಲ, ಬಾಗುವುದಿಲ್ಲ, ದಣಿಯುವುದಿಲ್ಲ: ಪ್ರಧಾನಿ ನರೇಂದ್ರ ಮೋದಿ

|
Google Oneindia Kannada News

ದೇಶದ 72ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ಐತಿಹಾಸಿಕ ಕೆಂಪುಕೋಟೆಯಿಂದ ಮಾಡುವ ಭಾಷಣದ ಮುಖ್ಯಾಂಶಗಳ ಮಾಹಿತಿ ಇಲ್ಲಿ ಸಿಗಲಿದೆ. ಪ್ರಧಾನಿಯಾದ ನಂತರ ಇದು ಅವರು ಮಾಡುತ್ತಿರುವ ಐದನೇ ಸ್ವಾತಂತ್ರ್ಯ ದಿನದ ಭಾಷಣ. ಬಡತನ ನಿರ್ಮೂಲನೆಯಂಥ ವಿಚಾರದ ಬಗ್ಗೆ ತಮ್ಮ ಭಾಷಣದಲ್ಲಿ ಹೆಚ್ಚು ಒತ್ತು ನೀಡುವ ನಿರೀಕ್ಷೆಗಳಿವೆ.

ಇನ್ನು ಮುಂದಿನ ಲೋಕಸಭೆ ಚುನಾವಣೆಗೆ ಒಂದು ವರ್ಷಕ್ಕಿಂತ ಕಡಿಮೆ ಅವಧಿಯಿದ್ದು, ಈ ಬಾರಿಯ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಕೆಲವು ಮುಖ್ಯ ಘೋಷಣೆಗಳನ್ನು ಮಾಡಬಹುದು ಎಂಬುದು ದೇಶದ ಜನರ ನಿರೀಕ್ಷೆಯಾಗಿದೆ. ಭಾರತವು ಸ್ವಾತಂತ್ರ್ಯ ಪಡೆದ ದಿನದಿಂದ ಈ ವರೆಗೆ ಪ್ರಧಾನಿ ಆದವರು ದೆಹಲಿಯ ಕೆಂಪುಕೋಟೆಯಿಂದ ಮಾಡುವ ಭಾಷಣಕ್ಕೆ ಅದರದೇ ಮಹತ್ವ ಇದೆ.

ಕೆಂಪುಕೋಟೆಯ ಮೋದಿ ಭಾಷಣ ಗೂಗಲ್ ಹೋಂಪೇಜ್ ನಲ್ಲಿ ಲೈವ್!ಕೆಂಪುಕೋಟೆಯ ಮೋದಿ ಭಾಷಣ ಗೂಗಲ್ ಹೋಂಪೇಜ್ ನಲ್ಲಿ ಲೈವ್!

Narendra Modi

72ನೇ ಸ್ವಾತಂತ್ರ್ಯ ದಿನಾಚರಣೆ 2018

ಐದು ಬಾರಿ ಕೆಂಪುಕೋಟೆಯಿಂದ ಸ್ವಾತಂತ್ರ್ಯ ದಿನದ ಭಾಷಣ ಮಾಡಿದ ಪ್ರಧಾನಿಗಳ ಪಟ್ಟಿಯಲ್ಲಿ ನರೇಂದ್ರ ಮೋದಿ ಅವರ ಹೆಸರು ಕೂಡ ಸೇರ್ಪಡೆ ಆಗಲಿದ್ದು, ಈ ದಿನದ ಅವರ ಭಾಷಣದ ನೇರ ಪ್ರಸಾರವನ್ನು ಗೂಗಲ್ ಮತ್ತು ಯೂಟ್ಯೂಬ್ ನಲ್ಲಿ ಕೂಡ ವೀಕ್ಷಣೆ ಮಾಡಬಹುದು.

Newest FirstOldest First
9:10 AM, 15 Aug

ನಾವು ನಿಲ್ಲುವುದಿಲ್ಲ, ಬಾಗುವುದಿಲ್ಲ, ದಣಿಯುವುದಿಲ್ಲ. ನಮ್ಮ ಗಮ್ಯವನ್ನು ನಾವೇ ಬರೆಯುತ್ತೇವೆ. ಇದು ನವ ಭಾರತ. ನಾವು ಆಗಸವನ್ನು ಮುಟ್ಟಲು ಮತ್ತು ಹೊಸ ಭಾರತವನ್ನು ಸೃಷ್ಟಿಸಲು ಬಯಸುತ್ತೇವೆ. ಜೈ ಹಿಂದ್: ಪ್ರಧಾನಿ ನರೇಂದ್ರ ಮೋದಿ
9:09 AM, 15 Aug

ತ್ರಿಪುರಾ, ಮೇಘಾಲಯ ಹಾಗೂ ಅರುಣಾಚಲ ಪ್ರದೇಶದ ಹಲವು ಜಿಲ್ಲೆಗಳಲ್ಲಿ ಜಾರಿಯಲ್ಲಿರುವ ವಿಶೇಷ ಕಾಯ್ದೆಯನ್ನು (ಎ ಎಫ್ ಎಸ್ ಪಿಎ) ತೆಗೆದಿದ್ದೇವೆ. ಮಾವೋವಾದಿಗಳು ರಕ್ತ ಹರಿಸಿ, ಆ ನಂತರ ಓಡಿಹೋಗಿ ಕಾಡಿನಲ್ಲಿ ಅಡಗಿಕೊಳ್ಳುತ್ತಾರೆ. ಎಡಪಂಥೀಯ ಉಗ್ರವಾದದಿಂದ ನೂರಾ ಇಪ್ಪತ್ತಾರು ಜಿಲ್ಲೆಗಳು ಬಾಧೆಗೊಳಗಾಗಿದ್ದವು. ಅದೀಗ ತೊಂಬತ್ತಕ್ಕೆ ಇಳಿಕೆಯಾಗಿದೆ.
9:09 AM, 15 Aug

ನಮಗೆ ಕಾಶ್ಮೀರದಲ್ಲಿ ಶಾಂತಿ ಬೇಕೆ ಹೊರತು ಬಂದೂಕಿನ ಗುಂಡಲ್ಲ
8:58 AM, 15 Aug

ತ್ರಿವಳಿ ತಲಾಖ್ ಒಂದು ಸಾಮಾಜಿಕ ಪಿಡುಗು. ಇದನ್ನು ಹೋಗಲಾಡಿಸಲು ಕಾನೂನು ತಂದಿದ್ದೇವೆ. ಆದರೆ ಕೆಲವರು ವಿರೋಧಿಸಿದ್ದಾರೆ. ಆದರೆ ಈ ಕಾನೂನು ಅಂಗೀಕಾರ ಆಗುವಂತೆ ಮಾಡುತ್ತೇವೆ ಎಂದು ಮುಸ್ಲಿಂ ಸಹೋದರಿಯರಿಗೆ ಭರವಸೆ ನೀಡುತ್ತೇವೆ: ಮೋದಿ
8:58 AM, 15 Aug

ಕಾನೂನು ಸುವ್ಯವಸ್ಥೆ ಪ್ರಬಲವಾಗಿದೆ. ತ್ವರಿತ ಗತಿಯಲ್ಲಿ ಕೋರ್ಟ್ ಕಲಾಪಗಳು ನಡೆಯುತ್ತಿವೆ. ಮಧ್ಯಪ್ರದೇಶದಲ್ಲಿ ನಡೆದ ಪ್ರಕರಣದ ವಿಚಾರಣೆ ಅದಕ್ಕೆ ಒಂದು ನಿದರ್ಶನ.
8:58 AM, 15 Aug

ಅತ್ಯಾಚಾರ ಪ್ರಕರಣಗಳು ನೋವಿನ ಸಂಗತಿ. ಈ ಅಪಾಯದಿಂದ ದೇಶವನ್ನು ಮುಕ್ತಗೊಳಿಸಬೇಕಿದೆ. ಇಂಥ ಪೈಶಾಚಿಕ ಕೃತ್ಯ ಎಸಗುವವರನ್ನು ನಾವು ಕಠಿಣ ಶಿಕ್ಷೆಗೆ ಗುರಿಪಡಿಸುತ್ತೇವೆ.
8:58 AM, 15 Aug

ಮಹಿಳೆಯರು ದೇಶದ ಎಲ್ಲ ಕ್ಷೇತ್ರದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದ್ದಾರೆ. ಪಾರ್ಲಿಮೆಂಟ್ ನಿಂದ ಪಂಚಾಯತ್ ತನಕ ಎಲ್ಲೆಡೆ ಮಹಿಳೆಯರಿದ್ದಾರೆ.
Advertisement
8:58 AM, 15 Aug

ಆರೋಗ್ಯ ಸುರಕ್ಷೆ ಯೋಜನೆಯು ಐವತ್ತು ಕೋಟಿ ಭಾರತೀಯರಲ್ಲಿ ಸಕಾರಾತ್ಮಕ ಪ್ರಭಾವ ಬೀರಲಿದೆ. ಬಡತನದ ಕಾರಣಕ್ಕೆ ಆರೋಗ್ಯ ಸುರಕ್ಷೆ ಪಡೆಯಲಾಗದ ಬಡವರಿಗೆ ಇದರಿಂದ ಅನುಕೂಲ ಆಗಲಿದೆ.
8:57 AM, 15 Aug

ಪ್ರಾಮಾಣಿಕ ಜನರೇ, ದೇಶದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಿ. ಭಷ್ಟರನ್ನು ನಾನು ಸುಮ್ಮನೆ ಬಿಡುವುದಿಲ್ಲ. ದೆಹಲಿ ಬೀದಿಗಳಿಂದ ರಾಜಕೀಯ ದಲ್ಲಾಳಿಗಳು ನಾಪತ್ತೆಯಾಗಿದ್ದಾರೆ.
8:44 AM, 15 Aug

ಪ್ರಾಮಾಣಿಕ ತೆರಿಗೆದಾರರ ಹಣವನ್ನು ಜನ ಕಲ್ಯಾಣ ಯೋಜನೆಗೆ ಬಳಸುತ್ತಿದ್ದೇವೆ. ಒಬ್ಬ ತೆರಿಗೆದಾರ ಊಟ ಮಾಡುವಾಗ ಮನಸ್ಸಲ್ಲಿ ಅಂದುಕೊಳ್ಳಬಹುದು: ತಾನು ಪ್ರಾಮಾಣಿಕವಾಗಿ ತೆರಿಗೆ ಪಾವತಿಸುತ್ತಿರುವುದರಿಂದ ಮೂರು ಬಡ ಕುಟುಂಬಗಳು ಊಟ ಮಾಡುತ್ತಿವೆ
8:38 AM, 15 Aug

ಈ ಹಿಂದೆ ಹಲವು ಯೋಜನೆಗಳು ಆರಂಭವಾಗಿವೆ. ಆದರೆ ಅವು ಜನರನ್ನು ತಲುಪಿಲ್ಲ. ಅಲ್ಲಿ ಮಧ್ಯವರ್ತಿಗಳು ಬಡವರ ಪಾಲಿನ ಅನುಕೂಲವನ್ನು ಪಡೆದುಕೊಂಡಿದ್ದಾರೆ. ಸರಕಾರದ ಯೋಜನೆಗಳು ಬಡವರನ್ನು ತಲುಪುವುದರಲ್ಲಿ ಅಡೆತಡೆಗಳಿದ್ದವು. ನಾವು ಅದನ್ನು ನಿವಾರಿಸಿದ್ದೇವೆ: ಮೋದಿ
8:33 AM, 15 Aug

ಆಯುಷ್ಮಾನ್ ಭಾರತ ಆರೋಗ್ಯ ಸುರಕ್ಷೆ ಯೋಜನೆ ಘೋಷಿಸಿದ ಪ್ರಧಾನಿ.
Advertisement
8:31 AM, 15 Aug

ಮಹಾತ್ಮ ಗಾಂಧಿ ಸ್ವಚ್ಛತೆ ಬಗ್ಗೆ ಒತ್ತು ನೀಡಿ ಹೇಳಿದ್ದರು. ದೇಶ ಸ್ವಚ್ಛ ಇರುವುದನ್ನು ಖಾತ್ರಿ ಪಡಿಸಬೇಕಿದೆ. ಬಾಪೂ ನೂರೈವತ್ತನೇ ಜನ್ಮ ವರ್ಷಾಚರಣೆಗೆ ನಾವು ನೀಡುವ ಕೊಡುಗೆ ಅದು.
8:31 AM, 15 Aug

ಮೊದಲ ಬಾರಿಗೆ ಸ್ವಚ್ಛ ಭಾರತದ ಬಗ್ಗೆ ಮಾತನಾಡಿದಾಗ ನನ್ನ ಬಗ್ಗೆ ತಮಾಷೆ ಮಾಡಿದ್ದರು. ಈಗ ವಿಶ್ವ ಆರೋಗ್ಯ ಸಂಸ್ಥೆಯೇ ಹೇಳಿದೆ: ಇದರಿಂದಾಗಿ ಪರಿಸ್ಥಿತಿಯಲ್ಲಿ ಬದಲಾವಣೆಯಾಗಿದೆ. ಮೂರು ಲಕ್ಷದಷ್ಟು ಮಕ್ಕಳ ಜೀವ ಉಳಿದಿದೆ: ಮೋದಿ
8:29 AM, 15 Aug

ಸೌರಶಕ್ತಿ ಬಳಸಿಕೊಂಡು ಕೃಷಿ ಮಾಡುವ ಬಗ್ಗೆ ರೈತರು ಆಲೋಚನೆ ಮಾಡುತ್ತಿದ್ದಾರೆ.
8:29 AM, 15 Aug

ಬಾಪೂ ಖಾದಿಗೆ ಒತ್ತು ನೀಡಿದ್ದರು. ಈ ಹಿಂದೆಂದಿಗಿಂತ ಖಾದಿ ರಫ್ತು ಹೆಚ್ಚಾಗಿದೆ.
8:29 AM, 15 Aug

ಕೃಷಿ ವಲಯದಲ್ಲಿ ಯೋಜನಾಬದ್ಧವಾಗಿ ಪ್ರಗತಿ ಸಾಧಿಸುತ್ತಿದ್ದೇವೆ. ನಾವು ನೀತಿಗಳನ್ನು ರೂಪಿಸಿದ್ದು, ಇದರಿಂದ ನಿಜವಾಗಿಯೂ ರೈತರಿಗೆ ಅನುಕೂಲವಾಗಿದೆ.
8:23 AM, 15 Aug

2022ರಲ್ಲಿ ಮಾನವಸಹಿತ ಮಂಗಳಯಾನದ ಘೋಷಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿ
8:23 AM, 15 Aug

ಇಂದು ನಾನು ಘೋಷಣೆ ಮಾಡುತ್ತಿದ್ದೇನೆ: 2022ಕ್ಕೂ ಮುನ್ನ ಭಾರತೀಯರು ಬಾಹ್ಯಾಕಾಶದಲ್ಲಿ ಇರುತ್ತಾರೆ. ನಮ್ಮಲ್ಲಿ ಒಬ್ಬರು ತ್ರಿವರ್ಣ ಧ್ವಜವನ್ನು ತೆಗೆದುಕೊಂಡು ಹೋಗುತ್ತಾರೆ. ಅದು ನಮ್ಮದೇ ಯೋಜನೆಯಾಗಿರುತ್ತದೆ.
8:13 AM, 15 Aug

ಈಶಾನ್ಯ ಭಾರತದ ಜನರು ದೆಹಲಿಯು ಬಹಳ ದೂರ ಇದೆ ಎಂಬ ಭಾವದಲ್ಲಿದ್ದರು. ನಾವು ದೆಹಲಿಯನ್ನು ಅವರ ಬಳಿಗೆ ತೆಗೆದುಕೊಂಡು ಹೋಗಿದ್ದೇವೆ: ಮೋದಿ
8:09 AM, 15 Aug

ನಾವು ಸಾಧಿಸಿದ್ದರ ಬಗ್ಗೆ ಹೆಮ್ಮೆ ಇದೆ. ಇದೇ ವೇಳೆ ನಾವು ಎಲ್ಲಿಂದ ಬಂದಿದ್ದೇವೆ ಅನ್ನೋದನ್ನು ನೋಡಬೇಕು. ಒಂದು ಕಾಲವಿತ್ತು, ಭಾರತದ ಆರ್ಥಿಕತೆ ಬಹಳ ಅಪಾಯಕಾರಿ ಎಂದು ನೋಡುತ್ತಿದ್ದರು. ಈಗ ಅದೇ ಜನರು ಸಕಾರಾತ್ಮಕವಾಗಿ ಕಾಣುತ್ತಿದ್ದಾರೆ. ಉದ್ಯಮಿಸ್ನೇಹಿ ವಾತಾವರಣ ನಿರ್ಮಾಣದ ಶ್ರೇಯಾಂಕದಲ್ಲಿ ಮೇಲಕ್ಕೆ ಏರಿದ್ದೇವೆ.
8:06 AM, 15 Aug

ಕಪ್ಪು ಹಣದ ನಿರ್ನಾಮ ಮಾಡಲು ನಾವು ಬದ್ಧರಾಗಿದ್ದೇವೆ. ಅದಕ್ಕಾಗಿ ನಾವು ಕಾನೂನು ತಂದಿದ್ದೇವೆ. ಆರ್ಥಿಕ ಅಪರಾಧಗಳ ಕಾಯ್ದೆ ತಂದಿದ್ದೇವೆ. ನಾವು ಬೇನಾಮಿ ಆಸ್ತಿಗಳ ವಿರುದ್ಧ ಕ್ರಮ ತೆಗೆದುಕೊಂಡಿದ್ದೇವೆ: ನರೇಂದ್ರ ಮೋದಿ
8:03 AM, 15 Aug

2013ನೇ ಇಸವಿವರೆಗೂ ಮಾಡಿದಂತೆ ಆಪ್ಟಿಕಲ್ ಕೇಬಲ್ ಅಳವಡಿಸುವ ಕೆಲಸ ಆಗಿದ್ದರೆ ಅದು ಪೂರ್ಣಗೊಳ್ಳುವುದಕ್ಕೆ ಹಲವು ದಶಕಗಳೇ ಬೇಕಾಗುತ್ತಿತ್ತು.
8:03 AM, 15 Aug

2014ರ ನಂತರ ದೇಶವು ತೀವ್ರ ವೇಗದಲ್ಲಿ ಅಭಿವೃದ್ಧಿ ಆಗಿದೆ. ಶೌಚಾಲಯ ನಿರ್ಮಾಣ, ಗ್ರಾಮೀಣ ಭಾಗಕ್ಕೆ ವಿದ್ಯುತ್ ಸಂಪರ್ಕ, ಅಡುಗೆ ಅನಿಲ ಸಂಪರ್ಕ...ಇವೆಲ್ಲದರಲ್ಲೂ ಅಭಿವೃದ್ಧಿ ಕಂಡಿದೆ.
7:59 AM, 15 Aug

ನೂರಾ ಇಪ್ಪತ್ತೈದು ಕೋಟಿ ಜನ ನಿರ್ಧಾರ ಮಾಡಿದರೆ ಎಲ್ಲವೂ ಸಾಧ್ಯವಿದೆ. 2014ರಲ್ಲಿ ಜನರು ಸರಕಾರ ರಚಿಸಲು ತೀರ್ಮಾನಿಸಲಿಲ್ಲ. ಅವರು ದೇಶ ನಿರ್ಮಾಣದ ನಿರ್ಧಾರ ಮಾಡಿದರು.
7:59 AM, 15 Aug

ಸುಬ್ರಮಣಿಯನ್ ಭಾರತಿ ಅವರ ಮಾತು ನೆನಪಿಸಿಕೊಂಡ ಪ್ರಧಾನಿ
7:58 AM, 15 Aug

ದೇಶದಾದ್ಯಂತ ಮಳೆ ಆಗುತ್ತಿದೆ. ಇದು ರೈತರಿಗೆ ಒಳ್ಳೆಯದು. ಆದರೆ ಪ್ರವಾಹ ಸ್ಥಿತಿ ಎದುರಾಗಿದೆ. ಪ್ರವಾಹದಿಂದ ಜೀವ ನಷ್ಟವಾಗಿರುವುದಕ್ಕೆ ನನ್ನ ಸಂತಾಪ ಸೂಚಿಸುತ್ತೇನೆ.
7:57 AM, 15 Aug

ಎತ್ತರಕ್ಕೆ ನಮ್ಮ ತ್ರಿವರ್ಣ ಧ್ವಜ ಹಾರಾಡಲು ಸೈನಿಕರು ಕಾರಣ. ದೇಶವನ್ನು ಸುರಕ್ಷವಾಗಿಡಲು ಕಾರಣರಾದ ಅವರಿಗೆ ತಲೆ ಬಾಗುತ್ತೇನೆ
7:50 AM, 15 Aug

ದೇಶದ ಆರ್ಥಿಕತೆ ಬಗ್ಗೆ ಒಂದು ಭರವಸೆ ಇರುವ ಸನ್ನಿವೇಶದಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದ್ದೇವೆ. ಈಗ ಭಾರತವು ವಿಶ್ವದ ಆರನೇ ಅತಿ ದೊಡ್ಡ ಆರ್ಥಿಕ ಶಕ್ತಿ: ಪ್ರಧಾನಿ ಮೋದಿ
7:50 AM, 15 Aug

ಸಂಸತ್ ನಲ್ಲಿ ಅಂಗೀಕಾರವಾದ ಮಸೂದೆಗಳಿಂದ ಹಿಂದುಳಿದವರಿಗೆ ಬಲ ಬಂದತಾಗುತ್ತದೆ. ಇತರ ಮಹತ್ವದ ಮಸೂದೆಗಳು ಕೂಡ ಅಂಗೀಕೃತವಾಗಿವೆ: ನರೇಂದ್ರ ಮೋದಿ
READ MORE

English summary
LIVE updates of PM Narendra Modi's Red fort speech on the occasion of India's 72nd Independence day by Oneindia Kannada,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X