ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಪಥದಲ್ಲಿ 68ನೇ ಗಣರಾಜ್ಯೋತ್ಸವ ಸಮಾರಂಭ

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ದೆಹಲಿಯ ರಾಜಪಥದಲ್ಲಿ ನಡೆಯುತ್ತಿರುವ ಸಮಾರಂಭದಲ್ಲಿ ಧ್ವಜಾರೋಹಣ ಮಾಡುವ ಮೂಲಕ 68ನೇ ಗಣರಾಜ್ಯೋತ್ಸವ ಪರೇಡ್ ಗೆ ಚಾಲನೆ ನೀಡಿದರು.

By Mahesh
|
Google Oneindia Kannada News

ನವದೆಹಲಿ, ಜನವರಿ 26: ರಾಷ್ಟ್ರಪತಿ ಪ್ರಣಬ್ ಮುಖರ್ಜಿ ದೆಹಲಿಯ ರಾಜಪಥದಲ್ಲಿ ನಡೆಯುತ್ತಿರುವ ಸಮಾರಂಭದಲ್ಲಿ ಧ್ವಜಾರೋಹಣ ಮಾಡುವ ಮೂಲಕ 68ನೇ ಗಣರಾಜ್ಯೋತ್ಸವ ಪರೇಡ್​ಗೆ ಚಾಲನೆ ನೀಡಿದರು.

ಗಣರಾಜ್ಯೋತ್ಸವದ ಮುಖ್ಯ ಅತಿಥಿ ಅಬುಧಾಬಿಯ ಯುವರಾಜ ಶೇಖ್ ಮೊಹಮ್ಮದ್, ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದಾರೆ.[ಗಣರಾಜ್ಯೋತ್ಸವದಂದು ಅಸ್ಸಾಂ, ಮಣಿಪುರಗಳಲ್ಲಿ ಬಾಂಬ್ ಸ್ಫೋಟ]

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ದೇಶದ ವೀರಯೋಧರಿಗೆ, ಹುತಾತ್ಮ ಸೇನಾನಿಗಳ ಕುಟುಂಬ ಸದಸ್ಯರಿಗೆ ಪ್ರಶಸ್ತಿ ಪ್ರದಾನ, ಅಶೋಕ ಚಕ್ರ ಪ್ರದಾನ ಮಾಡಲಾಯಿತು.

Live Updates: Republic Day parade from Rajpath

ಸೇನಾಶಕ್ತಿ: 68ನೇ ಗಣರಾಜ್ಯೋತ್ಸವದ ಅಂಗವಾಗಿ ರಾಜ್‍ಪಥ್‍ನಲ್ಲಿ ನಡೆಯಲಿರುವ ಪೆರೇಡ್‍ನಲ್ಲಿ ಭಾರತೀಯ ಸೇನಾ ಶಕ್ತಿ ಅನಾವರಣವಾಗಲಿದೆ. ಮೊದಲಿಗೆ ರಾಷ್ಟ್ರಪತಿಗೆ ಲೆಫ್ಟಿನೆಂಟ್ ಜನರಲ್ ಮನೋಜ್ ಮುಕುಂದ್ ನರಾವನೆ ಗೌರವ ವಂದನೆ ಸಲ್ಲಿಸಿ ಪರೇಡ್‍ಗೆ ಚಾಲನೆ ನೀಡಿದ್ದಾರೆ.

61ನೇ ಅಶ್ವಪಡೆಗಳು, ಮಷಿನೈಸ್ಡ್ ಇನ್‍ಫ್ಯಾಂಟ್ರಿ ರೆಜಿಮೆಂಟ್, ಬಿಹಾರ್ ರೆಜಿಮೆಂಟ್, 39ನೇ ಗೋರ್ಖಾ ಟ್ರೈನಿಂಗ್ ಸೆಂಟರ್, 58ನೇ ಗೋರ್ಖಾ ಟ್ರೈನಿಂಗ್ ಸೆಂಟರ್, ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್, 103ನೇ ಇನ್‍ಫ್ಯಾಂಟ್ರಿ ಬೆಟಾಲಿಯನ್. ಲೆಫ್ಟಿನೆಂಟ್ ಅಪರ್ಣಾ ನಾಯರ್ ನೇತೃತ್ವದ ಯುವ ನಾವಿಕರ ಪಡೆ, ಸ್ಕ್ವಾಡ್ರನ್ ಲೀಡರ್ ಅಟ್ಟಲ್ ಸಿಂಗ್ ಶೆಖೋನ್ ನೇತೃತ್ವದ ವಾಯು ಪಡೆ, ಪ್ಯಾರಾ ಮಿಲಿಟರಿ, ಬಿಎಸ್‍ಎಫ್‍ನ ಒಂಟೆ ಪಡೆ, ಭಾರತೀಯ ಕರಾವಳಿ ಪಡೆ, ಸಿಆರ್‍ಪಿಎಫ್, ಸಿಐಎಸ್‍ಎಫ್, ದೆಹಲಿ ಪೊಲೀಸ್, ಎನ್‍ಸಿಸಿ, ಎನ್‍ಎಸ್‍ಎಸ್ ಪಥಸಂಚಲನದಲ್ಲಿ ಭಾಗವಹಿಸಲಿವೆ.

ಜನಪದ ನೃತ್ಯ ಪ್ರಕಾರಗಳ ಸ್ತಬ್ಧಚಿತ್ರ ಕರ್ನಾಟಕವನ್ನು ಪ್ರತಿನಿಧಿಸಿದೆ. ವೀರಗಾಸೆ, ಕಂಸಾಳೆ, ಪೂಜಾ ಕುಣಿತ, ಪಟ್ಟದ ಕುಣಿತ, ಗೊರವರ ಕುಣಿತ, ಡೊಳ್ಳು ಕುಣಿತ, ಸೋಮನ ಕುಣಿತ, ಜಗ್ಗಲಗೆ, ದಾಸರಪದ, ನಂದಿಧ್ವಜದಂತಹ ಜನಪದ ಪ್ರಕಾರಗಳು ಈ ಸ್ತಬ್ಧಚಿತ್ರದಲ್ಲಿವೆ.ದೆಹಲಿಯ ರಾಜಪಥದಲ್ಲಿ ನಡೆಯುತ್ತಿರುವ 68ನೇ ಗಣರಾಜ್ಯೋತ್ಸವ ಸಮಾರಂಭದ ನೇರಪ್ರಸಾರ ವೀಕ್ಷಿಸಿ...

English summary
On Thursday, India is celebrating its 68th Republic Day to honour the Constitution of the country as it came into force on January 26, 1950. Crown Prince of Abu Dhabi Sheikh Mohamed bin Zayed Al Nahyan has been invited as the chief guest to attend the Republic Day celebrations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X