ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download
LIVE

ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ ಬಂಧನ

|
Google Oneindia Kannada News

ನವದೆಹಲಿ, ಆಗಸ್ಟ್ 21: ಐಎನ್‌ಎಕ್ಸ್ ಮೀಡಿಯಾ ಹಗರಣಕ್ಕೆ ಸಂಬಂಧಿಸಿದಂತೆ ಸಂಕಷ್ಟಕ್ಕೆ ಸಿಲುಕಿರುವ ಕೇಂದ್ರ ಸಚಿವ ಪಿ. ಚಿದಂಬರಂ ಅವರು ನಾಪತ್ತೆಯಾಗಿದ್ದಾರೆ.

ಐಎನ್ಎಕ್ಸ್ ಮೀಡಿಯಾ ಕೇಸ್: ಪಿ ಚಿದಂಬರಂ ಭ್ರಷ್ಟಾಚಾರದ ಹೆಜ್ಜೆಗಳು ಐಎನ್ಎಕ್ಸ್ ಮೀಡಿಯಾ ಕೇಸ್: ಪಿ ಚಿದಂಬರಂ ಭ್ರಷ್ಟಾಚಾರದ ಹೆಜ್ಜೆಗಳು

ಸಿಬಿಐ ಮತ್ತು ಇಡಿ ಅಧಿಕಾರಿಗಳು ಚಿದಂಬರಂ ಅವರಿಗೆ ಹುಡುಕಾಟ ನಡೆಸಿದ್ದಾರೆ. ಅಕ್ರಮ ಹಣ ವರ್ಗಾವಣೆ ಮತ್ತು ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿರುವ ಪಿ ಚಿದಂಬರಂ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದ ಬೆನ್ನಲ್ಲೇ ಅವರ ಬಂಧನಕ್ಕೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಹುಡುಕಾಟ ಆರಂಭಿಸಿವೆ.

Live Updates In Kannada P Chidambaram INX Media Scam

ಕಾನೂನಿಗೆ ತಲೆಬಾಗುತ್ತೇನೆ, ಜೀವಕ್ಕಿಂತಲೂ ಸ್ವಾತಂತ್ರ್ಯವೇ ಮುಖ್ಯ: ಪಿ ಚಿದಂಬರಂಕಾನೂನಿಗೆ ತಲೆಬಾಗುತ್ತೇನೆ, ಜೀವಕ್ಕಿಂತಲೂ ಸ್ವಾತಂತ್ರ್ಯವೇ ಮುಖ್ಯ: ಪಿ ಚಿದಂಬರಂ

ತನಿಖಾ ಸಂಸ್ಥೆಗಳ ಕಣ್ಣಿಗೆ ಬೀಳದಂತೆ ತಪ್ಪಿಸಿಕೊಂಡಿರುವ ಚಿದಂಬರಂ ಅವರ ಪರ ವಕೀಲ, ಸುಪ್ರೀಂಕೋರ್ಟ್‌ಗೆ ಜಾಮೀನು ಅರ್ಜಿ ಕುರಿತು ಮೇಲ್ಮನವಿ ಸಲ್ಲಿಸಿದ್ದಾರೆ. ಈ ಅರ್ಜಿ ವಿಚಾರಣೆ ಬುಧವಾರ ನಡೆಯಲಿದೆ. ಒಂದು ವೇಳೆ ಚಿದಂಬರಂ ಅವರಿಗೆ ಜಾಮೀನು ದೊರೆತರೆ ಬಂಧನ ಭೀತಿಯಿಂದ ತಪ್ಪಿಸಿಕೊಂಡು ನಿರಾಳರಾಗಲಿದ್ದಾರೆ. ಒಂದು ವೇಳೆ ಅರ್ಜಿ ತಿರಸ್ಕೃತವಾದರೆ ಅವರು ಸಂಕಷ್ಟಕ್ಕೆ ಒಳಗಾಗಲಿದ್ದಾರೆ.

Newest FirstOldest First
11:45 PM, 21 Aug

ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರ ಬಂಧನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಚಿದಂಬರಂ ಅವರ ವಕೀಲ ಅಭಿಶೇಕ್ ಸಿಂಘ್ವಿ ಇದೊಂದು ರಾಜಕೀಯ ಪ್ರೇರಿತ ಪ್ರಕರಣ ಎಂದಿದ್ದಾರೆ.
11:44 PM, 21 Aug

ಪಿ.ಚಿದಂಬರಂ ಅವರ ಬಂಧನದ ಬಗ್ಗೆ ಪ್ರತಿಕ್ರಿಯಿಸಿದ ಮಗ ಕಾರ್ತಿ ಚಿದಂಬರಂ ಇದೊಂದು ರಾಜಕೀಯ ಭೇಟಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
10:03 PM, 21 Aug

ಬಂದಿನಕ್ಕೊಳಗಾಗಿರುವ ಪಿ.ಚಿದಂಬರಂ ಅವರನ್ನು ರಾಮ್‌ಮನೋಹರ್ ಲೋಹಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಅಲ್ಲಿ ಪರೀಕ್ಷೆ ಮಾಡಿಸಿದ ಬಳಿಕ ಅವರನ್ನು ಸಿಬಿಐ ಕೇಂದ್ರ ಕಚೇರಿಗೆ ಕರೆದುಕೊಂಡು ಹೋಗಲಾಗುತ್ತದೆ.
9:54 PM, 21 Aug

ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರನ್ನು ಸಿಬಿಐ ಬಂಧಿಸಿದೆ. ಜೊತೆಗೆ ಇಡಿ ತಂಡ ಸಹ ಇತ್ತು. ದೆಹಲಿಯ ಜೋರ್ ಬಾಗ್ ನಿವಾಸದಲ್ಲಿ ಅವರನ್ನು ಬಂಧಿಸಲಾಯಿತು. ಅಲ್ಲಿಂದ ಅವರನ್ನು ಸಿಬಿಐ ಮುಖ್ಯ ಕಚೇರಿಗೆ ಕರೆದುಕೊಂಡು ಹೋಗಲಾಯಿತು.
9:40 PM, 21 Aug

ಸಿಬಿಐ ಮತ್ತು ಇಡಿ ಅಧಿಕಾರಿಗಳು ಪಿ.ಚಿದಂಬರಂ ಅವರ ನಿವಾಸ ತಲುಪಿದ್ದು, ಕೆಲವೇ ಕ್ಷಣಗಳಲ್ಲಿ ಪಿ.ಚಿದಂಬರಂ ಅವರನ್ನು ಬಂಧಿಸುವ ಸಾಧ್ಯತೆ ಇದೆ.
9:22 PM, 21 Aug

ಸಿಬಿಐ ಅಧಿಕಾರಿಗಳು ಕಾರೊಂದನ್ನು ಪಿ.ಚಿದಂಬರಂ ಅವರ ನಿವಾಸದ ಗೇಟ್‌ನ ಒಳಕ್ಕೆ ತೆಗೆದುಕೊಂಡು ಹೋಗಿದ್ದು, ಪಿ.ಚಿದಂಬರಂ ಅವರನ್ನು ವಶಪಡಿಸಿಕೊಂಡು ಅದರಲ್ಲಿಯೇ ಕರೆದುಕೊಂಡು ಹೋಗಲಿದ್ದಾರೆ.
9:10 PM, 21 Aug

ಪಿ.ಚಿದಂಬರಂ ನಿವಾಸದ ಬಳಿ ಭಾರಿ ಡ್ರಾಮಾ ನಡೆಯುತ್ತಿದ್ದು. ಇಡಿ ಅಧಿಕಾರಿಗಳನ್ನು ಒಳಗೆ ಬಿಡಲಾಗುತ್ತಿಲ್ಲ. ಇಡಿ ಅಧಿಕಾರಿಗಳು ಈಗಾಗಲೇ ಒಳಗೆ ಇರುವ ಸಿಬಿಐ ಅಧಿಕಾರಿಗಳನ್ನು ಸಂಪರ್ಕ ಮಾಡಲು ಪ್ರಯತ್ನಿಸಲಾಗುತ್ತಿದೆ.
Advertisement
9:06 PM, 21 Aug

ಇಡಿ ಅಧಿಕಾರಿಗಳು ಸಹ ಈಗಷ್ಟೆ ಪಿ.ಚಿದಂಬರಂ ಅವರ ನಿವಾಸ ತಲುಪಿದ್ದಾರೆ.
9:02 PM, 21 Aug

ಪಿ.ಚಿದಂಬರಂ ಅವರ ನಿವಾಸದ ಗೋಡೆಯನ್ನು ಹಾರಿ ಸಿಬಿಐ ಅಧಿಕಾರಿಗಳು ಒಳಕ್ಕೆ ಹೋಗಿದ್ದಾರೆ.
8:59 PM, 21 Aug

ಸಿಬಿಐ ಅಧಿಕಾರಿಗಳು ಪಿ.ಚಿದಂಬರಂ ಅವರ ಜೋರ್ ಭಾಗ್ ನಿವಾಸಕ್ಕೆ ತೆರಳಿದ್ದು, ಕೆಲವೇ ಕ್ಷಣಗಳಲ್ಲಿ ಚಿದಂಬರಂ ಅವರನ್ನು ವಶಕ್ಕೆ ಪಡೆಯಲಿದ್ದಾರೆ.
8:59 PM, 21 Aug

ಸುದ್ದಿಗೋಷ್ಟಿ ಮುಗಿಸಿ ಪಿ.ಚಿದಂಬರಂ ಅವರು ದೆಹಲಿಯಲ್ಲಿನ ಜೋರ್ ಭಾಗ್ ರಸ್ತೆಯ ನಿವಾಸಕ್ಕೆ ತೆರಳಿದರು. ಅಲ್ಲಿ ಸಿಬಿಐ, ಇಡಿ ಅಧಿಕಾರಿಗಳಿಗೆ ಕಾಯುವುದಾಗಿ ಚಿದಂಬರಂ ಹೇಳಿದ್ದಾರೆ.
8:55 PM, 21 Aug

ನಾನು ಕಾನೂನಿನಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದೇನೆ ಎಂಬ ಆರೋಪ ಕೇಳಿ ಗಾಬರಿಗೊಂಡಿದ್ದೇನೆ. ನಾನು ಕಾನೂನಿನ ರಕ್ಷಣೆಗೆ ಯತ್ನಿಸುತ್ತಿದ್ದೆ. ನಾನು ಬೆಳಿಗ್ಗಿನಿಂದ ನನ್ನ ವಕೀಲರೊಂದಿಗೆ ಕಾನೂನು ರಕ್ಷಣೆಗೆ ಯತ್ನಿಸುತ್ತಿದ್ದೆ. ನನ್ನ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಶುಕ್ರವಾರ ತೆಗೆದುಕೊಳ್ಳುವುದಾಗಿ ಸುಪ್ರೀಂಕೋರ್ಟ್ ಹೇಳಿದೆ. ನಾನು ಕಾನೂನಿಗೆ ತಲೆಬಾಗುತ್ತೇನೆ. ಕಾನೂನು ಅನ್ವಯಿಸುವ ಕಾರ್ಯವನ್ನು ದುಷ್ಟರ ಕೈಯಲ್ಲಿರುವ ಸಿಬಿಐ ನಂತಹಾ ಸಂಸ್ಥೆ ಮಾಡುತ್ತಿದ್ದರೂ ಸಹ ಕಾನೂನನ್ನು ಗೌರವಿಸುತ್ತೇನೆ ಎಂದು ಪಿ.ಚಿದಂಬರಂ ಹೇಳಿದರು.
Advertisement
8:50 PM, 21 Aug

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಿ.ಚಿದಂಬರಂ, ಸ್ವಾತಂತ್ರ್ಯ ಮತ್ತು ಜೀವ ಎರಡರಲ್ಲಿ ಯಾವುದು ಬೇಕೆಂದು ನನಗೆ ಕೇಳಿದರೆ, ಸ್ವಾತಂತ್ರ್ಯವನ್ನು ಆಯ್ಕೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು.
8:47 PM, 21 Aug

ಚಿದಂಬರಂ ಅವರು ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ಆರಂಭಿಸುತ್ತಿದ್ದಂತೆಯೇ ಸಿಬಿಐ ಕಚೇರಿಯಿಂದ ಎರಡು ತಂಡಗಳು ಕಾಂಗ್ರೆಸ್ ಕಚೇರಿಯತ್ತ ತೆರಳಿವೆ. ಪಿ.ಚಿದಂಬರಂ ಅವರನ್ನು ಸಿಬಿಐ ವಶಕ್ಕೆ ಪಡೆಯುವ ಸಾಧ್ಯತೆ ದಟ್ಟವಾಗಿದೆ.
8:45 PM, 21 Aug

ನನ್ನ ಮೇಲೆ ಹೊರಿಸಲಾಗಿರುವ ಪ್ರಕರಣದಲ್ಲಿ ನಾನು ಮತ್ತು ನನ್ನ ಮಗ ಆರೋಪಿಯಲ್ಲ ಎಂದು ಹೇಳಿದ ಚಿದಂಬರಂ ಅವರು ತನಿಖಾ ಸಂಸ್ಥೆಗಳು ದುರುದ್ದೇಶ ಹೊಂದಿರುವವರ ಪರ ಇದ್ದರೂ ನನಗೆ ಅವುಗಳ ಸ್ವಾಯತ್ತೆತಯ ಮೇಲೆ ನಂಬಿಕೆ ಇದೆ ಎಂದು ಹೇಳಿದ್ದಾರೆ.
8:42 PM, 21 Aug

ನನ್ನ ಹಾಗೂ ನನ್ನ ಮಗನ ಮೇಲೆ ಹೊರಿಸಿರುವ ಆರೋಪಗಳು ಸುಳ್ಳು ಎಂದ ಪಿ.ಚಿದಂಬರಂ, ಕಾನೂನು ರೀತ್ಯಾ ನಡೆದುಕೊಂಡು ಕಾನೂನಿನ ಮೂಲಕವೇ ನ್ಯಾಯ ದೊರಕಿಸಿಕೊಳ್ಳುವುದಾಗಿ ಹೇಳಿದ್ದಾರೆ.
8:41 PM, 21 Aug

ಕಾನೂನಿನಿಂದ ನಾನು ತಪ್ಪಿಸಿಕೊಂಡಿರಲಿಲ್ಲ, ನಾನು ಕಾನೂನಿನ ಮೂಲಕ ನ್ಯಾಯದೊರಕಿಸಿಕೊಳ್ಳಬಹುದಾದ ದಾರಿಗಳ ಹುಡುಕಾಟದಲ್ಲಿ ಬೆಳಿಗ್ಗಿನಿಂದ ತೊಡಗಿದ್ದೆ ಎಂದು ಪಿ.ಚಿದಂಬರಂ ಹೇಳಿದ್ದಾರೆ.
8:37 PM, 21 Aug

ನಿರೀಕ್ಷಣಾ ಜಾಮೀನು ರದ್ದಾದ ಬಳಿಕ ಬಂಧನ ಭೀತಿ ಎದುರಿಸುತ್ತಿದ್ದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರು ಹಠಾತ್ತನೆ ಕಾಂಗ್ರೆಸ್ ಕಚೇರಿಯಲ್ಲಿ ಪ್ರತ್ಯಕ್ಷವಾಗಿ ಸುದ್ದಿಗೋಷ್ಠಿ ನಡೆಸಿದ್ದಾರೆ.
2:29 PM, 21 Aug

ಚಿದಂಬರಂ ಅವರ ಅರ್ಜಿ ಸ್ವಾಭಾವಿಕವಾಗಿ ಪಟ್ಟಿಗೆ ಬಾರದ ಹೊರತು ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದ ಸುಪ್ರೀಂಕೋರ್ಟ್. ಇದರಿಂದ ಮತ್ತೆ ಸಂಕಷ್ಟಕ್ಕೆ ಸಿಲುಕಿದ ಚಿದಂಬರಂ
2:26 PM, 21 Aug

ಸಾಮಾನ್ಯವಾಗಿ ಸಿಜೆಐ ಅವರ ಮುಂದೆ ಸಂಜೆ ವೇಳೆ ಬೇರೆ ಪ್ರಕರಣಗಳನ್ನು ಇರಿಸಲಾಗುತ್ತದೆ. ಈ ಪ್ರಕರಣದಲ್ಲಿ ಕೂಡಲೇ ಇರಿಸಲಾಗಿತ್ತು. ಅದರಿಂದಾಚೆ ನಾವೇನೂ ಮಾಡಲು ಸಾಧ್ಯವಿಲ್ಲ ಎಂದ ನ್ಯಾಯಮೂರ್ತಿ ರಮಣ.
2:25 PM, 21 Aug

ಅರ್ಜಿಯಲ್ಲಿ ಇನ್ನೂ ಲೋಪವಿದೆ ಎಂದ ನ್ಯಾಯಮೂರ್ತಿ. 'ಡಿಫೆಕ್ಟ್ ಲಿಸ್ಟ್' ಅಡಿ ಅರ್ಜಿಯನ್ನು ಸೇರಿಸಿದ ಸುಪ್ರೀಂಕೋರ್ಟ್ ರಿಜಿಸ್ಟ್ರಿ
2:24 PM, 21 Aug

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ಈ ಅರ್ಜಿಯನ್ನು ಪರಿಶೀಲಿಸದೆ ಇದರ ವಿಚಾರಣೆ ಸಾಧ್ಯವಿಲ್ಲ. ಆದರೆ ಅವರು ಅಯೋಧ್ಯಾ ಪ್ರಕರಣದ ವಿಚಾರಣೆಯಲ್ಲಿ ಬಿಜಿಯಾಗಿದ್ದಾರೆ ಎಂದ ನ್ಯಾಯಮೂರ್ತಿ ರಮಣ
2:22 PM, 21 Aug

ಚಿದಂಬರಂ ಅವರ ಅರ್ಜಿಯಲ್ಲಿದ್ದ ಲೋಪಗಳನ್ನು ಸರಿಪಡಿಸಲಾಗಿದೆ ಎಂದು ಸುಪ್ರೀಂಕೋರ್ಟ್ ರಿಜಿಸ್ಟ್ರಾರ್ ನ್ಯಾಯಾಲಯಕ್ಕೆ ತಿಳಿಸಿದರು.
2:21 PM, 21 Aug

ತಮ್ಮ ಕಕ್ಷಿದಾರರು ಎಲ್ಲಿಯೂ ತಲೆಮರೆಸಿಕೊಳ್ಳುವುದಿಲ್ಲ. ಆದರೂ ಅವರ ವಿರುದ್ಧ ಲುಕ್‌ಔಟ್ ನೋಟಿಸ್ ಹೊರಡಿಸಲಾಗಿದೆ. ಇಡಿ ಚಿದಂಬರಂ ವಿರುದ್ಧ ಎಫ್‌ಐಆರ್ ದಾಖಲು ಮಾಡಿಲ್ಲ ಎಂದು ಕಪಿಲ್ ಸಿಬಲ್ ವಾದಿಸಿದರು.
2:11 PM, 21 Aug

ನ್ಯಾಯಮೂರ್ತಿ ಎನ್‌ಟಿ ರಮಣ ಅವರ ನೇತೃತ್ವದ ನ್ಯಾಯಪೀಠವೇ ಚಿದಂಬರಂ ಅವರ ಅರ್ಜಿ ವಿಚಾರಣೆ ನಡೆಸಲಿ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ಅರ್ಜಿಯನ್ನು ಮರಳಿ ಕಳುಹಿಸಿದ್ದಾರೆ ಎಂದು ವರದಿಯಾಗಿದೆ.
1:14 PM, 21 Aug

ಚಿದಂಬರಂ ಪರ ವಕೀಲರು ಸಲ್ಲಿಸಿದ್ದ ಅರ್ಜಿ ಲೋಪದೋಷಗಳು ಇದ್ದಿದ್ದರಿಂದ ಮರು ಅರ್ಜಿ ಸಲ್ಲಿಕೆ ಮಾಡುವಂತೆ ಸುಪ್ರೀಂಕೋರ್ಟ್ ರಿಜಿಸ್ಟ್ರಾರ್ ಸೂಚನೆ ನೀಡಿದ್ದಾರೆ.
1:07 PM, 21 Aug

ಚಿದಂಬರಂ ಅವರ ಚಾರಿತ್ರ್ಯಹರಣ ಮಾಡಲು ಮೋದಿ ಸರ್ಕಾರವು ಇ.ಡಿ, ಸಿಬಿಐ ಮತ್ತು ಬೆನ್ನೆಲುಬು ಇಲ್ಲದ ಮಾಧ್ಯಮದ ವರ್ಗವನ್ನು ಬಳಸಿಕೊಳ್ಳುತ್ತಿದೆ. ಈ ರೀತಿಯ ಅಧಿಕಾರದ ದುರ್ಬಳಕೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
12:44 PM, 21 Aug

ಪಿ ಚಿದಂಬರಂಗೆ ಎಲ್ಲಾ ಬಾಗಿಲು ಬಂದ್, ಸುಪ್ರೀಂನಿಂದ ರಿಲೀಫ್ ಇಲ್ಲ

ಕೇಂದ್ರದ ಮಾಜಿ ವಿತ್ತ ಸಚಿವ, ಕಾಂಗ್ರೆಸ್ ನಾಯಕ ಪಿ ಚಿದಂಬರಂಗೆ ಐಎನ್ಎಕ್ಸ್ ಮೀಡಿಯಾ ಹಗರಣದಲ್ಲಿ ಈಗ ಬಂಧನ ಭೀತಿ ಶುರುವಾಗಿದೆ. ಏರ್ ಸೆಲ್ ಮ್ಯಾಕ್ಸಿಸ್ ಪ್ರಕರಣ, ವಿಮಾನ ಖರೀದಿ ಅವ್ಯವಹಾರದಲ್ಲಿಕೂಡಾ ಸಿಲುಕಿದ್ದಾರೆ. ದೆಹಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಬಾಗಿಲು ತಟ್ಟಿದ್ದ ಚಿದಂಬರಂಗೆ ಹಿನ್ನಡೆಯಾಗಿದೆ.
12:40 PM, 21 Aug

ಚಿದಂಬರಂ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಆದೇಶ ಪ್ರಕಟಿಸುವ ಮುನ್ನ ಸಿಬಿಐಗೆ ಮಾಹಿತಿ ನೀಡುವಂತೆ ಕೇವಿಯಟ್‌ನಲ್ಲಿ ಹೇಳಲಾಗಿದೆ.
12:24 PM, 21 Aug

ಬಂಧನದಿಂದ ರಕ್ಷಣೆ ಕೋರಿ ಪಿ ಚಿದಂಬರಂ ಸಲ್ಲಿಸಿರುವ ಅರ್ಜಿಗೆ ಪ್ರತಿಯಾಗಿ ಸಿಬಿಐ ನ್ಯಾಯಾಲಯಕ್ಕೆ ಕೇವಿಯಟ್ ಸಲ್ಲಿಸಿದೆ. ಇದರಂತೆ ಅರ್ಜಿ ಸಲ್ಲಿಸಿರುವವರ ವಾದ ಆಲಿಸದೆ ಕೋರ್ಟ್ ಆದೇಶ ಪ್ರಕಟಿಸುವಂತಿಲ್ಲ.
READ MORE

English summary
Former Union Minister P Chidambaram goes missing after Delhi High Court refuses to give anticipatory bail on INX Media scam case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X