• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಂದ್ರಯಾನ-2: ಯಶಸ್ವಿಯಾಗಿ ನಭಕ್ಕೆ ಹಾರಿದ ಬಾಹುಬಲಿ

|

ಶ್ರೀಹರಿಕೋಟಾ, ಜುಲೈ 22: ಇಸ್ರೋದ ಚಂದ್ರಯಾನ-2 ಯಶಸ್ವಿ ಉಡಾವಣೆಗೆ ಶ್ರೀಹರಿಕೋಟದಲ್ಲಿ ಸಾವಿರಾರು ಮಂದಿ ಸಾಕ್ಷಿಯಾದರು.ಬಾಹುಬಲಿ ಚಂದ್ರನೆಡೆಗೆ ಯಶಸ್ವಿಯಾಗಿ ಜಿಗಿದಿದೆ.

ನ್ನು 48 ದಿನಗಳಲ್ಲಿ ಚಂದ್ರನ ಮೇಲೆ ರಾಕೆಟ್ ಕಾಲಿಡಲಿದೆ. ಸೆಪ್ಸೆಂಬರ್ 6-7ರ ಸುಮಾರಿಗೆ ರಾಕೆಟ್ ಚಂದ್ರನ ದಕ್ಷಿಣ ಭಾಗವನ್ನು ಪ್ರವೇಶಿಸಲಿದೆ.

ಭಾರತದ ಮಹತ್ವಾಕಾಂಕ್ಷೆಯ 'ಚಂದ್ರಯಾನ-2' ಯೋಜನೆ ಇಂದು ಸಾಕಾರಗೊಳ್ಳುತ್ತಿದೆ. ಸೋಮವಾರಮಧ್ಯಾಹ್ನ 2.43ರ ವೇಳೆಗೆ ಚಂದ್ರಯಾನ-2ದ ಉಡಾವಣಯಾಗಿದೆ.

ಭೂಮಿ ಹಾಗೂ ಚಂದ್ರನ ನಡುವೆ 3,84,000 ಕಿ.ಮೀ ಅಂತರವಿದೆ. ಈ ಮಿಷನ್ ಆರಂಭವಾದಾಗಿನಿಂದ 48 ದಿನದ ಬಳಿಕ ವಿಕ್ರಮ್ ಚಂದ್ರನ ಮೇಲೆ ಲ್ಯಾಂಡ್ ಆಗಲಿದೆ. ರಾಕೆಟ್ ಇಂದು ಉಡಾವಣೆಯಾಗಲಿದೆ. ನಿಮಿಷಕ್ಕೆ 451.91 ಕಿ.ಮೀ ವೇಗದಲ್ಲಿ ಬಾಹುಬಲಿ ಸಂಚರಿಸುತ್ತಿದೆ.

ಚಂದ್ರಯಾನ-2 ಯೋಜನೆಯ ಉಡಾವಣೆ ಜುಲೈ 15ರಂದೇ ನಡೆಯಬೇಕಿತ್ತು. ಅಂದು ಮಧ್ಯರಾತ್ರಿ 2.51 ನಿಮಿಷಕ್ಕೆ ಸರಿಯಾಗಿ ಉಡಾವಣೆಗೊಳ್ಳಬೇಕಿತ್ತು.

ಆದರೆ, ಅದಕ್ಕೂ 56 ನಿಮಿಷ 24 ಸೆಕೆಂಡ್ ಮುನ್ನವಷ್ಟೇ ತಾಂತ್ರಿಕ ಕಾರಣಗಳಿಂದ ಚಂದ್ರಯಾನದ ಉಡಾವಣೆ ಮುಂದೂಡಲಾಗಿದೆ ಎಂದು ಇಸ್ರೋ ಘೋಷಿಸಿತ್ತು.

Live Updates in Kannada launching Chandrayaan 2 mission

ಬಹುನಿರೀಕ್ಷಿತ ಚಂದ್ರಯಾನ ನೌಕೆ ಉಡಾವಣೆಗೆ ಹಿನ್ನಡೆಯಾದರೂ ಕಂಗೆಡದ ವಿಜ್ಞಾನಿಗಳ ತಂಡ ತಕ್ಷಣವೇ ಕಾರ್ಯಪ್ರವೃತ್ತಗೊಂಡು ಅದರಲ್ಲಿನ ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸಿದ್ದಾರೆ. ಭಾನುವಾರ ಯೋಜನೆಯ ಯಶಸ್ವಿ ಪ್ರಯೋಗವನ್ನೂ ನಡೆಸಲಾಗಿದೆ. ಭಾನುವಾರ ಸಂಜೆ 6.43ರಿಂದ ಅದರ ಕೊನೆಯ 20 ಗಂಟೆಯ ಕ್ಷಣಗಣನೆ ಆರಂಭವಾಗಿತ್ತು.

ಚಂದ್ರಯಾನ-2 ಯಶಸ್ವಿಗೊಳಿಸಲು, ಇಸ್ರೋದ ಎಂಜಿನಿಯರ್‌ಗಳು, ವಿಜ್ಞಾನಿಗಳು ಕಳೆದ ಒಂದೂವರೆ ವರ್ಷದಿಂದ ಬಿಡುವಿಲ್ಲದೆ ನಿರಂತರವಾಗಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಅವರ ಕೆಲಸ ಶ್ಲಾಘನೀಯ ಎಂದು ಶಿವನ್ ಹೇಳಿದರು.

ಈ ಐತಿಹಾಸಿಕ ದಾಖಲೆಗೆ ಸಂತೋಷವಾಗುತ್ತಿದೆ. ಜಿಎಸ್‌ಎಲ್‌ವಿ ಮಾಕ್ ಯಶಸ್ವಿಯಾಗಿ ಉಡಾವಣೆಯಾಗಿದೆ. ಐತಿಹಾಸಿಕ ದಾಖಲೆಯ ಮೊದಲ ಘಟ್ಟ ಇದು. ತಾಂತ್ರಿಕ ದೋಷದಿಂದಾಗಿ ಉಡಾವಣೆಯನ್ನು ನಿಲ್ಲಿಸಲಾಗಿತ್ತು. ಅದೆಲ್ಲವನ್ನೂ ಹಿಮ್ಮೆಟ್ಟಿ ಯಶಸ್ವಿ ದಾಖಲೆಯತ್ತ ನಡೆದಿದ್ದೇವೆ , ಇಸ್ರೋ ಟೀಮ್‌ಗೆ ಅಭಿನಂದನೆ ಸಲ್ಲಿಸುತ್ತಿದ್ದೇನೆ ಇಸ್ರೋ ಅಧ್ಯಕ್ಷ ಕೆ ಶಿವನ್ ತಿಳಿಸಿದ್ದಾರೆ.

Newest First Oldest First
4:31 PM, 22 Jul
ಜಿಎಸ್‌ಎಲ್‌ವಿ ಬಾಹುಬಲಿ ಇದೀಗ 170 ಕಿ.ಮೀ ತಲುಪಿದೆ
3:09 PM, 22 Jul
ಚಂದ್ರಯಾನ-2 ಯಶಸ್ವಿಗೊಳಿಸಲು, ಇಸ್ರೋದ ಎಂಜಿನಿಯರ್‌ಗಳು, ವಿಜ್ಞಾನಿಗಳು ಕಳೆದ ಒಂದೂವರೆ ವರ್ಷದಿಂದ ಬಿಡುವಿಲ್ಲದೆ ನಿರಂತರವಾಗಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಅವರ ಕೆಲಸ ಶ್ಲಾಘನೀಯ ಎಂದು ಶಿವನ್ ಹೇಳಿದರು.
3:07 PM, 22 Jul
ಈ ಐತಿಹಾಸಿಕ ದಾಖಲೆಗೆ ಸಂತೋಷವಾಗುತ್ತಿದೆ. ಜಿಎಸ್‌ಎಲ್‌ವಿ ಮಾಕ್ ಯಶಸ್ವಿಯಾಗಿ ಉಡಾವಣೆಯಾಗಿದೆ. ಐತಿಹಾಸಿಕ ದಾಖಲೆಯ ಮೊದಲ ಘಟ್ಟ ಇದು. ತಾಂತ್ರಿಕ ದೋಷದಿಂದಾಗಿ ಉಡಾವಣೆಯನ್ನು ನಿಲ್ಲಿಸಲಾಗಿತ್ತು. ಅದೆಲ್ಲವನ್ನೂ ಹಿಮ್ಮೆಟ್ಟಿ ಯಶಸ್ವಿ ದಾಖಲೆಯತ್ತ ನಡೆದಿದ್ದೇವೆ , ಇಸ್ರೋ ಟೀಮ್‌ಗೆ ಅಭಿನಂದನೆ ಸಲ್ಲಿಸುತ್ತಿದ್ದೇನೆ ಇಸ್ರೋ ಅಧ್ಯಕ್ಷ ಕೆ ಶಿವನ್ ತಿಳಿಸಿದ್ದಾರೆ.
2:56 PM, 22 Jul
ನಿಮಿಷಕ್ಕೆ 451.91 ಕಿ.ಮೀ ವೇಗದಲ್ಲಿ ಬಾಹುಬಲಿ ಸಂಚರಿಸುತ್ತಿದೆ.
2:39 PM, 22 Jul
ಚಂದ್ರಯಾನ-2 ಸುಮಾರು 978 ಕೋಟಿ ವೆಚ್ಚದ ಯೋಜನೆಯಾಗಿದೆ. ಇದನ್ನು ಹೊತ್ತೊಯ್ಯಲು ಸಿದ್ಧವಾಗಿರುವ ಜಿಎಸ್​ಎಲ್​ವಿ ಎಂಕೆ111 ಭಾರತದ ಅತ್ಯಂತ ಶಕ್ತಿಶಾಲಿ ರಾಕೆಟ್ ಎನಿಸಿದೆ. 43.43 ಮೀಟರ್ ಎತ್ತರದ ಈ ರಾಕೆಟನ್ನು ಬಾಹುಬಲಿ ಎಂದೇ ಕರೆಯಲಾಗುತ್ತಿದೆ. ಇನ್ನು ಚಂದ್ರಯಾನ-2 ಉಪಗ್ರಹವು 3,850 ಕಿಲೋ ತೂಕವಿದ್ದು, ಇದರಲ್ಲಿ ಆರ್ಬಿಟರ್, ಲ್ಯಾಂಡರ್ ಮತ್ತು ರೋವರ್​ಗಳನ್ನು ಸೇರಿಸಲಾಗಿದೆ.
2:38 PM, 22 Jul
ವಿಶ್ವವೇ ಕಾತುರದಿಂದ ಕಾಯುತ್ತಿರುವ ಚಂದ್ರಯಾನ ನಭಕ್ಕೆ ನೆಗೆಯಲು ಕ್ಷಣಗಣನೆ , ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಚಂದ್ರಯಾನ 2 ರಾಕೆಟ್ ಅನ್ನು ಹೊತ್ತೊಯ್ಯಲಿರುವ ಜಿಎಸ್‌ಎಲ್‌ವಿ ಮಾಕ್ 3.
2:35 PM, 22 Jul
ಕೊನೆಯ ಹಂತದ ಪರೀಕ್ಷೆಗಳು ನಡೆಯುತ್ತಿದೆ, ಕೆಲವೇ ಕ್ಷಣಗಳಲ್ಲಿ ಐತಿಹಾಸಿಕ ದಾಖಲೆಯತ್ತ ಇಸ್ರೋ ತೆರಳಲಿದೆ.
2:28 PM, 22 Jul
ಚಂದ್ರನ ದಕ್ಷಿಣ ಭಾಗಕ್ಕೆ ಹೋಗುತ್ತಿರುವ ಮೊದಲ ರಾಷ್ಟ್ರ ಭಾರತ
2:25 PM, 22 Jul
ಇಡೀ ದೇಶವೇ ಕಾತುರದಿಂದ ಕಾಯುತ್ತಿರುವ ಚಂದ್ರಯಾನ 2 ಉಡಾವಣೆಗೆ 20 ನಿಮಿಷಗಳು ಮಾತ್ರ ಬಾಕಿ ಉಳಿದಿದೆ.
2:20 PM, 22 Jul
ಒನ್ ಟನ್‌ ತೂಕದ ರಾಕೆಟ್ ತಯಾರಾಗಿದೆ. ಒಂದು ಕಿಲೋಮೀಟರ್ ದೂರ ಲಾಂಜ್ ಬಳಿ ತೆಗೆದುಕೊಂಡು ಹೋಗಲಾಗುತ್ತಿದೆ ಇದಕ್ಕೆ 2 ಗಂಟೆಗಳು ತಗುಲುತ್ತದೆ.
2:10 PM, 22 Jul
ಚಂದ್ರಯಾನ 2ಕ್ಕೆ ಕ್ಷಣಗಣನೆ ಆರಂಭವಾಗಿದೆ. ಬಾಹುಬಲಿ ಸರಿಯಾಗಿ 2.43ಕ್ಕೆ ಉಡಾವಣೆಯಾಗಲಿದೆ ಎಂದು ಇಸ್ರೋ ತಿಳಿಸಿದೆ.
1:42 PM, 22 Jul
ಚಂದ್ರಯಾನ-2 ಜಿಎಸ್‌ಎಲ್‌ವಿ ಮಾಕ್ 3-ಎಂ1ಗೆ ಲಿಕ್ವಿಡ್ ಹೈಡ್ರೋಜನ್ ತುಂಬುವ ಕಾರ್ಯ ಪೂರ್ಣಗೊಂಡಿದೆ.
1:38 PM, 22 Jul
ಚಂದ್ರಯಾನ-2 ನ ಕಾರ್ಯಕ್ಷಮತೆ ಸಹಜವಾಗಿದ್ದು ಎಲ್ಲವೂ ಅಂದುಕೊಂಡಂತೆ ಇಂದು ಉಡಾವಣೆಯಾಗಲಿದೆ ಎಂದು ಇಸ್ರೊ ಅಧ್ಯಕ್ಷ ಕೆ ಶಿವನ್ ತಿಳಿಸಿದ್ದಾರೆ. ಭಾರತದ ಎರಡನೇ ಚಂದ್ರ ಪರಿಶೋಧನೆ ಯೋಜನೆಯಾಗಿರುವ ಚಂದ್ರಯಾನ-2 ಯಶಸ್ವಿಯಾಗಲಿದ್ದು ಇದರಿಂದ ಚಂದ್ರನ ಮೇಲ್ಮೈ ಮೇಲಿನ ಹಲವು ವಿಷಯಗಳನ್ನು ತಿಳಿದುಕೊಳ್ಳಬಹುದಾಗಿದೆ.
1:19 PM, 22 Jul
ಭೂಮಿ ಹಾಗೂ ಚಂದ್ರನ ನಡುವೆ 3,84,000 ಕಿ.ಮೀ ಅಂತರವಿದೆ. ಈ ಮಿಷನ್ ಆರಂಭವಾದಾಗಿನಿಂದ 48 ದಿನದ ಬಳಿಕ ವಿಕ್ರಮ್ ಚಂದ್ರನ ಮೇಲೆ ಲ್ಯಾಂಡ್ ಆಗಲಿದೆ. ರಾಕೆಟ್ ಇಂದು ಉಡಾವಣೆಯಾಗಲಿದೆ.
12:44 PM, 22 Jul
ಚಂದ್ರಯಾನ 2ಕ್ಕೆ ಕೇವಲ ಎರಡೇ ತಾಸುಗಳು ಬಾಕಿ ಇದೆ. ಜಿಎಸ್‌ಎಲ್‌ವಿ ಮ್ಯಾಕ್ 3 ಎಂ 1ಗೆ ಲಿಕ್ವಿಡ್ ಆಕ್ಸಿಜನ್ ತುಂಬುವ ಕೆಲಸ ಪೂರ್ಣಗೊಂಡಿದ್ದು, ಲಿಕ್ವಿಡ್ ಹೈಡ್ರೋಜನ್ ತುಂಬುವ ಕೆಲಸ ಪ್ರಗತಿಯಲ್ಲಿದೆ.
12:32 PM, 22 Jul
ಬಾಹ್ಯಾಕಾಶ ಸಂಸ್ಥೆ ಇಸ್ರೋದ ಸಾಮಾಜಿಕ ಜಾಲ ತಾಣ ಟ್ವಿಟ್ಟರ್, ಫೇಸ್ ಬುಕ್ ನಲ್ಲಿ ಲೈವ್ ನೋಡಬಹುದು
12:14 PM, 22 Jul
ಜಿಎಸ್‌ಎಲ್‌ವಿ ಮ್ಯಾಕ್‌3 ಎಂ-1ಗೆ ಲಿಕ್ವಿಡ್ ಹೈಡ್ರೋಜನ್ ತುಂಬುವ ಕೆಲಸ ಆರಂಭವಾಗಿದೆ.
12:12 PM, 22 Jul
ಇಸ್ರೋದ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್​ನ ವಿಜ್ಞಾನಿಗಳು ಎಫ್​ಡಿಆರ್​ನಲ್ಲಿ ಲ್ಯಾಂಡರ್ ಮತ್ತು ಆರ್ಬಿಟರ್ ನಡುವಿನ ಲಿಂಕ್, ಸಿಗ್ನಲ್ ಮತ್ತು ಸಂವಹನ ಲಿಂಕ್​ಗಳನ್ನು ಪರೀಕ್ಷಿಸಲಾಗಿದೆ. ರಾಕೆಟ್ ಜಿಎಸ್​ಎಲ್​ವಿ - ಎಂಕೆ3ಯ ವ್ಯವಸ್ಥೆಯನ್ನೂ ಪರೀಕ್ಷೆಗೆ ಒಳಪಡಿಸಲಾಗಿದೆ.
12:06 PM, 22 Jul
2008ರ ಅಕ್ಟೋಬರ್‌ನಲ್ಲಿ ಇಸ್ರೋ ತನ್ನ ಮೊದಲ ಯೋಜನೆ ಚಂದ್ರಯಾನ-1ಅನ್ನು ಪಿಎಸ್‌ಎಲ್‌ವಿ ಮೂಲಕ ಉಡಾವಣೆ ಮಾಡಿತ್ತು. ಅದರಲ್ಲಿ 11 ಅಧ್ಯಯನ ಉಪಕರಣಗಳಿದ್ದವು. ಅಮೆರಿಕದ ಒಂದು ಅಧ್ಯಯನ ಉಪಕರಣವನ್ನೂ ಇದು ಒಳಗೊಂಡಿತ್ತು. ಈ ನೌಕೆಯು ಚಂದ್ರನಲ್ಲಿ ಹಿಮದ ನೀರು ಇರುವುದನ್ನು ಖಚಿತಪಡಿಸಿತ್ತು.
11:47 AM, 22 Jul
ಭಾರತದ ಅತಿ ಭಾರದ ರಾಕೆಟ್ 'ಬಾಹುಬಲಿ' ಎಂದು ಹೆಸರಿಸಲಾದ ಜಿಎಸ್​ಎಲ್​ವಿ ಎಂಕೆ-3, ಒಟ್ಟು 14 ವೈಜ್ಞಾನಿಕ ಉಪಕರಣಗಳನ್ನು ಹೊತ್ತೊಯ್ಯಲಿದೆ. ಉಡಾವಣೆ ಯಶಸ್ವಿಯಾದರೆ, ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಸಿದ ಪ್ರಥಮ ದೇಶ ಎಂಬ ಕೀರ್ತಿ ಭಾರತಕ್ಕೆ ಸಲ್ಲಲಿದೆ.
11:18 AM, 22 Jul
ಚಂದ್ರಯಾನ 2 ಉಡಾವಣೆಗೆ ಕೇವಲ ಮೂರು ಗಂಟೆಗಳು ಮಾತ್ರ ಬಾಕಿ ಉಳಿದಿದೆ. ಕ್ರಿಯಾಜನಿಕ್ ಸ್ಟೇಜ್ ಜಿಎಸ್‌ಎಲ್‌ವಿ ಮೆಕ್ 3 -ಎಂ1ಗೆ ಲಿಕ್ವಿಡ್ ಆಕ್ಸಿಜನ್ ತುಂಬುವ ಕೆಲಸ ಆರಂಭವಾಗಿದೆ.
11:15 AM, 22 Jul
ಭಾರತದ ಅತಿ ಭಾರದ ರಾಕೆಟ್ ಎಂದು ಹೆಸರಿಸಲಾದ ಜಿಎಸ್‌ಎಲ್‌ವಿ ಎಂಕೆ -3 ಒಟ್ಟು 14 ವೈಜ್ಞಾನಿಕ ಉಪಕರಣಗಳನ್ನು ಹೊತ್ತು ಉಡಾವಣೆಗೆ ಸಿದ್ಧವಾಗಿದೆ. ಇಸ್ರೋ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಿದ್ದು, ಅದು ಯಶಸ್ವಿಯಾಗಿದೆ.
11:02 AM, 22 Jul
'ದೋಷಗಳನ್ನು ಸರಿಪಡಿಸಲಾಗಿದೆ. ದೋಷ ಪತ್ತೆಯಾದ ಬಳಿಕ ನಮ್ಮ ವಿಜ್ಞಾನಿಗಳು ಸತತ ಶ್ರಮವಹಿಸಿ ಅದನ್ನು ಸರಿಪಡಿಸಿದ್ದಾರೆ. ಈ ಬಾರಿ ಉಡ್ಡಯನ ಯಶಸ್ವಿಯಾಗುತ್ತದೆ' ಎಂದು ಶಿವನ್ ತಿಳಿಸಿದ್ದಾರೆ.
11:01 AM, 22 Jul
ಕ್ರಯೋಜೆನಿಕ್ ಎಂಜಿನ್‌ನಲ್ಲಿ ಹೀಲಿಯಂ ಇಂಧನ ಸೋರಿಕೆ ಕಾರಣದಿಂದ ಜುಲೈ 15ರ ಉಡ್ಡಯನವನ್ನು ಮುಂದೂಡಲಾಗಿತ್ತು. ಇದೀಗ ತಾಂತ್ರಿಕ ದೋಷ ಸರಿಪಡಿಸಲಾಗಿದ್ದು ಸೋರಿಕೆ ಸ್ಥಗಿತಗೊಂಡಿದೆ. ಹೀಗಾಗಿ ಚಂದ್ರಯಾನ-2 ಉಡ್ಡಯನಕ್ಕೆ ಇಸ್ರೋ ಸಜ್ಜಾಗಿದೆ.
10:47 AM, 22 Jul
ವಿಕ್ರಂ ಸಾರಾಬಾಯಿ ಅವರ ನೆನಪಿಗಾಗಿ ಚಂದ್ರಯಾನ, ಈವರೆಗೆ 7,500 ಮಂದಿ ರಾಕೆಟ್ ಉಡಾವಣೆ ವೀಕ್ಷಿಸಲು ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಚಂದ್ರಯಾನ -2 ಬಾಹುಬಲಿ ಇಂದು ಮಧ್ಯಾಹ್ನ 2.43ಕ್ಕೆ ಉಡಾವಣೆಯಾಗಲಿದೆ.
10:42 AM, 22 Jul
ಚಂದ್ರಯಾನ-2ರ ಕನಸನ್ನು ನನಸಾಗಿಸಲು ವಿಜ್ಞಾನಿಗಳು ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ಕಾರ್ಯದಲ್ಲಿ ತೊಡಗಿದ್ದರು.
10:23 AM, 22 Jul
ಕರಿಧಾಲ್ ಮತ್ತು ಎಂ.ವನಿತಾ ಎಂಬ ಮಹಿಳಾ ವಿಜ್ಞಾನಿಗಳು ಚಂದ್ರಯಾನ-2 ಯೋಜನೆ ಸಿದ್ಧಪಡಿಸಿದ್ದಾರೆ. ಮಂಗಳಯಾನದಲ್ಲೂ ಅವರ ಪಾತ್ರ ಮಹತ್ವದ್ದಾಗಿತ್ತು.
10:23 AM, 22 Jul
ಐದು ಕಾಲುಗಳುಳ್ಳ ಗ್ರಹನೌಕೆ 'ವಿಕ್ರಂ' ಅಧ್ಯಯನ ನೌಕೆ ಚಂದಿರನ ಅಂಗಳದಲ್ಲಿ ಸೆಪ್ಟೆಂಬರ್ 6ರ ಸುಮಾರಿಗೆ ಇಳಿಯಲಿದೆ.
9:59 AM, 22 Jul
ಜಿಎಸ್‌ಎಲ್‌ವಿ ಎಂಕೆ 3-ಎಂ1ಗೆ ಎನ್‌204ಗ ತುಂಬುವ ಕೆಲಸ ಪೂರ್ಣಗೊಂಡಿದೆ.
9:55 AM, 22 Jul
ಕಾನ್ಪುರ ಐಐಟಿ ವಿಜ್ಞಾನಿಗಳ ತಂತ್ರಾಂಶ ಚಂದ್ರಯಾನದಲ್ಲಿ ರೋವರ್ ಚಲನೆಗೆ ನೆರವಾಗಲು ಕಾನ್ಪುರ ಐಐಟಿ ವಿಜ್ಞಾನಿಗಳು ವಿಶೇಷ ತಂತ್ರಾಂಶ ರೂಪಿಸಿದ್ದಾರೆ.
READ MORE

English summary
Chandrayaan- 2 Live Updates in Kannada: The countdown for the Chandrayaan-2 mission launch has began. The first attempt to launch the mission on July 15 was aborted due to some technical issues. ISRO decided to launch the mission on July 22 at 2.43 PM. Here is the Live Updates of launching.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more