ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Chandrayaan 2 - Landing on Moon Live Updates: ಚಂದಮಾಮನ ನೋಡಲು ಇನ್ನೊಂದೇ ದಿನ ಬಾಕಿ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 5: ಚಂದ್ರನಲ್ಲಿ ನೀರಿನ ಅಸ್ತಿತ್ವದ ಬಗ್ಗೆ ಅಧ್ಯಯನ ಮಾಡಲು ತೆರಳಿರುವ ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-2 ನೌಕೆಯು ಚಂದ್ರಲೋಕಕ್ಕೆ ಕಾಲಿಡುವ ಕ್ಷಣಗಣನೆ ಆರಂಭವಾಗಿದೆ.

ಭಾರತ ಮಾತ್ರವಲ್ಲದೆ, ಇಡೀ ಜಗತ್ತು ಇಸ್ರೋದ ಈ ಮಹಾನ್ ಸಾಧನೆಗೆ ಸಾಕ್ಷಿಯಾಗಲು ಕಾತರದಿಂದ ಕಾದಿದೆ. ಚಂದ್ರಯಾನ ನೌಕೆಯು ಚಂದ್ರನ ಮೇಲೆ ನಿರೀಕ್ಷೆಯಂತೆ ಯಶಸ್ವಿಯಾಗಿ ಇಳಿಯಲಿ ಎಂದು ವಿಜ್ಞಾನ ಸಮೂಹ ಪ್ರಾರ್ಥಿಸುತ್ತಿದೆ. ಈ ಯೋಜನೆ ಯಶಸ್ವಿಯಾದರೆ ಚಂದ್ರ ಉಪಗ್ರಹದಲ್ಲಿನ ನೀರಿನ ಅಸ್ತಿತ್ವ, ಜೀವಿಗಳ ಅಸ್ತಿತ್ವದ ಕುರಿತಾದ ಅಧ್ಯಯನಗಳಿಗೆ ಮಹತ್ವದ ಮಾಹಿತಿಗಳು ಲಭ್ಯವಾಗಲಿವೆ. ಇದು ಬಾಹ್ಯಾಕಾಶ ಸಂಶೋಧನೆಗೆ ಬಹುದೊಡ್ಡ ಕೊಡುಗೆ ನೀಡಲಿದೆ.

Live Updates In Kannada Landing Of Chandrayaan-2 On Moon

ಉಡಾವಣೆಯಾದ ದಿನದಿಂದ ನೌಕೆಯು ಅಂದುಕೊಂಡಂತೆಯೇ ಎಲ್ಲ ವಿವಿಧ ಘಟ್ಟಗಳನ್ನು ಯಶಸ್ವಿಯಾಗಿ ಕ್ರಮಿಸಿ ಚಂದ್ರನ ಸಮೀಪ ಸಾಗಿದೆ. ಆದರೆ, ಅದನ್ನು ಚಂದ್ರನ ಮೇಲೆ ಇಳಿಸುವುದು ಸುಲಭದ ಮಾತಲ್ಲ. ವಿಕ್ರಂ ಲ್ಯಾಂಡರ್‌ಅನ್ನು ಚಂದ್ರನ ಮೇಲೆ ಸ್ಪರ್ಶಿಸಲು ಎಚ್ಚರಿಕೆಯಿಂದ ಮತ್ತು ನಿಧಾನವಾಗಿ ಕಾರ್ಯಾಚರಣೆ ನಡೆಸಬೇಕಾಗುತ್ತದೆ.

Newest FirstOldest First
2:24 PM, 5 Sep

ಜುಲೈ 22ರಂದು ಮಧ್ಯಾಹ್ನ ಜಿಎಸ್‌ಎಲ್‌ವಿ ಎಂಕೆIII ಎಂ1 ಉಪಗ್ರಹ ಉಡ್ಡಯನ ವಾಹನವು 3,840 ಕೆಜಿ ತೂಕದ ಚಂದ್ರಯಾನ-2 ನೌಕೆಯನ್ನು ಯಶಸ್ವಿಯಾಗಿ ಹೊತ್ತೊಯ್ದಿತ್ತು.
10:53 AM, 5 Sep

ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸುತ್ತಿದ್ದು, ಚಂದ್ರನ ಮೇಲೆ ನೌಕೆ ಇಳಿಯುವ ಕಾರ್ಯಾಚರಣೆಯ ನೇರ ಪ್ರಸಾರವನ್ನು ಇಸ್ರೋ ಕಚೇರಿಯಲ್ಲಿ ವೀಕ್ಷಿಸಲಿದ್ದಾರೆ.
10:45 AM, 5 Sep

ಚಂದ್ರಯಾನ-2 ನೌಕೆಯು ಚಂದ್ರನ ಮೇಲೆ ಸೆ. 7ರ ರಾತ್ರಿ 1.30 ರಿಂದ 2.30ರ ಅವಧಿಯಲ್ಲಿ ಇಳಿಯಲಿದೆ. ನೌಕೆ ಇಳಿದ ಮೂರು ನಾಲ್ಕು ಗಂಟೆ ಬಳಿಕ ಪ್ರಜ್ಞಾನ್ ರೋವರ್ ಅಧ್ಯಯನ ನೌಕೆ ತನ್ನ ಕಾರ್ಯಾಚರಣೆ ಆರಂಭಿಸಲಿದೆ.
10:21 AM, 5 Sep

ಚಂದ್ರನ ದಕ್ಷಿಣ ಧ್ರುವದ ಮೇಲೆ ಅಧ್ಯಯನ ನೌಕೆ ಇಳಿಸುತ್ತಿರುವ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ.
10:21 AM, 5 Sep

ಚಂದ್ರನ ಮೇಲೆ ನೌಕೆಯನ್ನು ಇಳಿಸುವ ಕೊನೆಯ 15 ನಿಮಿಷಗಳು ಅತ್ಯಂತ ರೋಚಕವಾಗಿರಲಿದೆ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ಹೇಳಿದ್ದಾರೆ.

English summary
Chandrayaan-2 mission will be landed on Lunar's south pole on September 7. Here is the live updates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X