ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಕ್ರಂನ ಪತ್ತೆಗೆ ಹೊರಟ ನಾಸಾದ 'ಪೊಲೀಸ್'

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 17: ಚಂದ್ರನ ಅಂಗಳಕ್ಕೆ ಹೋಗಿ ಹತ್ತು ದಿನ ಕಳೆದರೂ ತನ್ನ ಬಗ್ಗೆ ಯಾವ ಮಾಹಿತಿಯನ್ನೂ ನೀಡದ ವಿಕ್ರಂ ಲ್ಯಾಂಡರ್ ಅನ್ನು ಹುಡುಕುವ ಕಾರ್ಯಕ್ಕೆ ನಾಸಾ ಕೈಜೋಡಿಸಿದೆ. ನಾಸಾದ ನಾಸಾದ ಲೂನಾರ್ ರಿಕನೈಸಾನ್ಸ್ ಆರ್ಬಿಟರ್ (ಎಲ್‌ಆರ್‌ಓ) ವಿಕ್ರಂ ಲ್ಯಾಂಡರ್ ಇಳಿದ ಜಾಗದ ಸುತ್ತಲೂ ಓಡಾಟ ನಡೆಸಿ ಅದರ ಚಿತ್ರಗಳನ್ನು ತೆರೆಯುವ ಪ್ರಯತ್ನ ನಡೆಸಲಿದೆ.

Live Updates In Kannada Chandrayaan 2 Nasas Lunar Orbiter Vikram Lander

ಸೆ. 7ರಂದು ಚಂದ್ರನ ಮೇಲೆ ಸುಗಮವಾಗಿ ಇಳಿಯಲು ಇನ್ನೇನು 2.1 ಕಿ.ಮೀ. ದೂರ ಇದೆ ಎನ್ನುವಾದ ಇಸ್ರೋದ ಸಂಪರ್ಕ ಕಡಿದುಕೊಂಡು ನಿರಾಶೆ ಮೂಡಿಸಿರುವ ವಿಕ್ರಂ ಲ್ಯಾಂಡರ್‌ನ ಸ್ಥಿತಿಗತಿ ಹೇಗಿದೆ ಎನ್ನುವುದನ್ನು ನಾಸಾದ ಆರ್ಬಿಟರ್ ತನ್ನ ಕ್ಯಾಮೆರಾಗಳಲ್ಲಿ ಸೆರೆಹಿಡಿಯಲು ಮುಂದಾಗಿದೆ. ಇದರಿಂದ ತನ್ನ ಗುರುವಿನ ಹಿಡಿತದಿಂದ ತಪ್ಪಿಸಿಕೊಂಡ ಶಿಷ್ಯನಂತಿರುವ ವಿಕ್ರಮದ ಬಗ್ಗೆ ಮಹತ್ವದ ಸುಳಿವು ಸಿಗಬಹುದು ಎಂದು ನಿರೀಕ್ಷಿಸಲಾಗಿದೆ.

Newest FirstOldest First
7:02 PM, 17 Sep

'ನಮ್ಮೊಂದಿಗೆ ನಿಂತಿದ್ದಕ್ಕೆ ಧನ್ಯವಾದಗಳು. ಜಗತ್ತಿನೆಲ್ಲೆಡೆ ಇರುವ ಭಾರತೀಯರ ಭರವಸೆ ಮತ್ತು ಕನಸುಗಳಿಂದ ಉತ್ತೇಜಿತರಾಗಿ ಮುನ್ನಡೆಯುವುದನ್ನು ನಾವು ಮುಂದುವರಿಸುತ್ತೇವೆ' ಎಂದು ಇಸ್ರೋ ಟ್ವೀಟ್ ಮಾಡಿದೆ.
5:51 PM, 17 Sep

ಚಂದ್ರನ ಮೇಲೆ ವಿಕ್ರಂ ಇಳಿದಿರುವುದನ್ನು ಚಂದ್ರಯಾನದ ಆರ್ಬಿಟರ್ ಚಿತ್ರದ ಮೂಲಕ ತಿಳಿಸಿದೆ. ಲ್ಯಾಂಡರ್‌ನ ಒಂದು ಕಾಲು ಬಾಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಇಸ್ರೋ ತಿಳಿಸಿತ್ತು. ಆದರೆ ಇದುವರೆಗೂ ಅದು ಈ ಚಿತ್ರವನ್ನು ಬಹಿರಂಗಪಡಿಸಿಲ್ಲ.
4:27 PM, 17 Sep

ವಿಕ್ರಂ ಲ್ಯಾಂಡರ್ ಬಗ್ಗೆ ಮಾಹಿತಿ ನೀಡಲು ಮುಂದಾಗಿರುವ ನಾಸಾದ ಆರ್ಬಿಟರ್ ಅನ್ನು 2009ರಲ್ಲಿ ಉಡಾವಣೆ ಮಾಡಲಾಗಿತ್ತು.
3:30 PM, 17 Sep

ಆದರೆ ಯಾವ ಸಮಯದಲ್ಲಿ ನಾಸಾದ ಆರ್ಬಿಟರ್ ಲ್ಯಾಂಡರ್ ಮೇಲ್ಭಾಗದಲ್ಲಿ ಹಾದುಹೋಗಲಿದೆ ಎಂಬ ಮಾಹಿತಿಯನ್ನು ನೀಡಿಲ್ಲ.
2:14 PM, 17 Sep

ವಿಕ್ರಂ ಲ್ಯಾಂಡರ್ ಜತೆ ಸಂಪರ್ಕ ಸಾಧಿಸಲು ಸೆ. 21ರವರೆಗೆ ಮಾತ್ರ ಇಸ್ರೋಗೆ ಅವಕಾಶವಿದೆ. ಒಂದು ವೇಳೆ ಅಷ್ಟರೊಳಗೆ ಸಂಪರ್ಕ ಸಾಧ್ಯವಾಗದೆ ಹೋದರೆ ಅದನ್ನು ಮತ್ತೆ ಸಂಪರ್ಕಿಸಲು ಯಾವ ಅವಕಾಶಗಳೂ ಸಿಗುವುದಿಲ್ಲ.
1:32 PM, 17 Sep

ಆದರೆ ಈ ಭಾಗದಲ್ಲಿ ಸೂರ್ಯನ ಬೆಳಕು ಕ್ಷೀಣಿಸುತ್ತಿರುವ ಕಾರಣದಿಂದ ವಿಕ್ರಂನ ಇರುವಿಕೆಯ ಚಿತ್ರಗಳು ಸ್ಪಷ್ಟವಾಗಿ ಬಾರದೆ ಮಂದವಾಗುವ ಸಾಧ್ಯತೆಯೂ ಇದೆ. ಹೀಗಾದರೆ ಆರ್ಬಿಟರ್ ತೆಗೆದ ಚಿತ್ರಗಳು ಅಷ್ಟಾಗಿ ಪ್ರಯೋಜನಕ್ಕೆ ಬರುವುದಿಲ್ಲ.
1:21 PM, 17 Sep

ವಿಕ್ರಂ ಲ್ಯಾಂಡರ್ ಇಳಿಯುವಿಕೆಯ ವೇಳೆಯಲ್ಲಿ ರಾಕೆಟ್‌ನಿಂದ ಹೊರಬಂದ ಅನಿಲವು ಚಂದ್ರನ ವಾತಾವರಣದ ಮೇಲೆ ಪರಿಣಾಮ ಬೀರಿ ಅದು ಬದಲಾಗಿದ್ದನ್ನು ಎಲ್‌ಆರ್‌ಓ ಅಧ್ಯಯನ ಮಾಡಿದೆ ಎಂದು ನಾಸಾ ತಿಳಿಸಿದೆ.
Advertisement
1:18 PM, 17 Sep

ಸೆ.7ರ ನಸುಕಿನಲ್ಲಿ ಚಂದ್ರಯಾನ 2ರ ಲ್ಯಾಂಡರ್ ಇಳಿಯುವ ಸಂದರ್ಭದ ಡೇಟಾಗಳನ್ನು ಎಲ್‌ಆರ್‌ಓ ಸಂಗ್ರಹಿಸಿತ್ತು. ಹೀಗಾಗಿ ಲ್ಯಾಂಡರ್‌ನ ಮಹತ್ವದ ಚಿತ್ರಗಳನ್ನು ಕೂಡ ಅದು ತೆಗೆಯಬಲ್ಲದು ಎಂದು ನಿರೀಕ್ಷಿಸಲಾಗಿದೆ.
1:12 PM, 17 Sep

ನಾಸಾವು ಈ ಚಿತ್ರಗಳನ್ನು ಇಸ್ರೋದೊಂದಿಗೆ ಹಂಚಿಕೊಳ್ಳಲಿದ್ದು, ವಿಕ್ರಂನ ಲ್ಯಾಂಡಿಂಗ್ ವೇಳೆ ಎಲ್ಲಿ ತಪ್ಪಾಗಿದೆ ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಾಗಲಿದೆ.
1:12 PM, 17 Sep

ನಾಸಾದ ಚಂದ್ರನ ಕಕ್ಷೆಯಲ್ಲಿ ಸುತ್ತಾಡುವ ರಿಕನೈಸಾನ್ಸ್ ಆರ್ಬಿಟರ್ ವಿಕ್ರಂ ಇರುವ ಸ್ಥಳದಲ್ಲಿ ಓಡಾಡಿ ಅದರ ಚಿತ್ರ ತೆಗೆಯಲಿದೆ.

English summary
Live Updates In Kannada: Nasa's Lunar Reconnaissance Orbiter (LRO) probe will take photos of Vikram lander on the lunar surface. Nasa will share the images with ISRO to help analyse what went wrong with Chandrayaan 2.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X