• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಾಜಪೇಯಿ ಚಿತೆಗೆ ಅಗ್ನಿಸ್ಪರ್ಶ ಮಾಡಿದ ದತ್ತುಪುತ್ರಿ ನಮಿತಾ

|

ನವದೆಹಲಿ, ಆಗಸ್ಟ್ 17: ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ(25, ಡಿಸೆಂಬರ್ 1924- 16, ಆಗಸ್ಟ್ 2018) ಅವರ ಅಂತ್ಯ ಸಂಸ್ಕಾರಕ್ಕೆ ಸಕಲ ಸಿದ್ಧತೆಗಳು ನಡೆದಿವೆ. ಆಗಸ್ಟ್ 16 ರಂದು ಸಂಜೆ 5.05 ಕ್ಕೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಅಜಾತ ಶತ್ರು ಅಟಲ್ ಜೀ ಅವರ ಅಗಲಿಕೆಗೆ ಇಡೀ ದೇಶವೂ ಮರುಗಿದೆ.

LIVE Updates: Atal Bihari Vajpayee Last rites

ದೇಶಕಂಡ ಧೀಮಂತ ನಾಯಕರಲ್ಲೊಬ್ಬರಾದ ಅಟಲ್ ಜೀ ಅವರ ನಿಧನದ ಹಿನ್ನೆಲೆಯಲ್ಲಿ ದೇಶದ ಹಲವು ರಾಜ್ಯಗಳಲ್ಲಿ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಭಾರತ ಸರ್ಕಾರ 7 ದಿನಗಳ ಕಾಲ ಶೋಕಾಚರಣೆ ಮಾಡಲಿದೆ.

ಇತಿಹಾಸದಲ್ಲಿ ಎಂದೂ ನಡೆಯದ್ದನ್ನು ಅಂದು ಅಟಲ್ ಮಾಡಿದ್ದರು!

ಇಂದು ಸಂಜೆ ಸುಮಾರು 5 ಗಂಟೆಯ ಹೊತ್ತಿಗೆ ವಾಜಪೇಯಿ ಅವರ ಅಂತ್ಯ ಸಂಸ್ಕಾರ ನಡೆಯುತ್ತಿದ್ದು,, ಈಗಾಗಲೇ ದೇಶದ ಹಲವು ಗಣ್ಯರು ಅವರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. ವಾಜಪೇಯಿ ಅವರ ಅಂತಿಮ ಯಾತ್ರೆಯ ಕ್ಷಣ ಕ್ಷಣದ ಮಾಹಿತಿಯನ್ನು ಒನ್ ಇಂಡಿಯಾ ನೀಡಲಿದೆ.

Newest First Oldest First
5:05 PM, 17 Aug
ಪ್ರೀತಿಯ ತಾತನ ನೆನೆದು ಕಣ್ಣೀರು ಹಾಕಿದ ಮೊಮ್ಮಗಳು ನಿಹಾರಿಕಾ
5:00 PM, 17 Aug
ತಂದೆ ಅಟಲ್ ಬಿಹಾರಿ ವಾಜಪೇಯಿ ಅವರ ಚಿತೆಗೆ ಅಗ್ನಿಸ್ಪರ್ಶ ಮಾಡಿದ ದತ್ತುಪುತ್ರಿ ನಮಿತಾ
4:51 PM, 17 Aug
ಅಂತ್ಯಸಂಸ್ಕಾರಕ್ಕೆ ಸಕಲ ಸಿದ್ಧತೆ. ಪುರೋಹಿತರು, ಬಂಧುಗಳಿಂದ ಸಿದ್ಧತೆ
4:46 PM, 17 Aug
ಬ್ರಾಹ್ಮಣ ಸಂಪ್ರದಾಯದಂತೆ ನಡೆಯುತ್ತಿರುವ ಅಂತ್ಯಸಂಸ್ಕಾರ.
4:44 PM, 17 Aug
ಕೆಲವೇ ಕ್ಷಣಗಳಲ್ಲಿ ಪಂಚಭೂತಗಳಲ್ಲಿ ಲೀನವಾಗಲಿರುವ ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ
4:31 PM, 17 Aug
ಪಾರ್ಥಿವ ಶರೀರಕ್ಕೆ ಹೊದೆಸಿದ್ದ ನ ತ್ರಿವರ್ಣ ಧ್ವಜವನ್ನು ಪಡೆದ ವಾಜಪೇಯಿ ಅವರ ಪ್ರೀತಿಯ ಮೊಮ್ಮಗಳು ನಿಹಾರಿಕಾ.
4:27 PM, 17 Aug
ಮಾಜಿ ಪ್ರಧಾನಿ, ಕಾಂಗ್ರೆಸ್ ಮುಖಂಡ ಮನಮೋಹನ್ ಸಿಂಗ್ ಅವರಿಂದ ಅಂತಿಮ ನಮನ
4:27 PM, 17 Aug
ಮಾಜಿ ಪ್ರಧಾನಿ, ಕಾಂಗ್ರೆಸ್ ಮುಖಂಡ ಮನಮೋಹನ್ ಸಿಂಗ್ ಅವರಿಂದ ಅಂತಿಮ ನಮನ
4:26 PM, 17 Aug
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಂದ ಅಂತಿಮ ನಮನ
4:25 PM, 17 Aug
ನೆಚ್ಚಿನ ಗೆಳೆಯನಿಗೆ ಎಲ್ ಕೆ ಅಡ್ವಾಣಿ ಅವರಿಂದ ಅಂತಿಮ ನಮನ
4:23 PM, 17 Aug
ಅಟಲ್ ಬಿಹಾರಿ ವಾಜಪೇಯಿ ಅವರ ಅಂತಿಮ ನಮನಕ್ಕೆಂದು ಬಂದ ವಿದೇಶಿ ಗಣ್ಯರಿಂದ ಅಂತಿಮ ನಮನ ಸಲ್ಲಿಕೆ
4:19 PM, 17 Aug
ಶವಪೆಟ್ಟಿಗೆಯಿಂದ ಧ್ವಜವನ್ನು ಬೇರ್ಪಡಿಸುತ್ತಿರುವ ಸೇನಾ ಸಿಬ್ಬಂದಿ.
4:16 PM, 17 Aug
ಸಕಲ ಸರ್ಕಾರಿ ಗೌರವದೊಂದಿಗೆ ಅಂತಿಮ ನಮನ ಸಲ್ಲಿಸುತ್ತಿರುವ ಸೇನೆ.
4:12 PM, 17 Aug
ಸ್ಮೃತಿ ಸ್ಥಳಕ್ಕೆ ಆಗಮಿಸಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ . ಕೋವಿಂದ್ ಅವರಿಂದ ಅಂತಿಮ ನಮನ.
4:08 PM, 17 Aug
ಅಂತ್ಯ ಸಂಸ್ಕಾರಕ್ಕಾಗಿ ಆಗಮಿಸಿದ ವಿದೇಶಿ ನಾಯಕರನ್ನು ಕರೆತಂದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್
4:05 PM, 17 Aug
ತಲೆಬಾಗಿ ನಮಸ್ಕರಿಸಿ ಶ್ರದ್ಧಾಂಜಲಿ ಅರ್ಪಿಸಿದ ಪ್ರಧಾನಿ ನರೇಂದ್ರ ಮೋದಿ
4:03 PM, 17 Aug
ವಾಜಪೇಯಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್
4:02 PM, 17 Aug
ಶ್ರದ್ಧಾಂಜಲಿ ಅರ್ಪಿಸಿದ ಭಾರತೀಯ ರಕ್ಷಣಾ ಮಂತ್ರಿ ನಿರ್ಮಲಾ ಸೀತಾರಾಮನ್
4:00 PM, 17 Aug
ವಾಯು, ನೌಕಾ, ಭೂಸೇನೆ ಮುಖ್ಯಸ್ಥರಿಂದ ಮಾಜಿ ಪ್ರಧಾನಿಗಳಿಗೆ ಗೌರವ
3:56 PM, 17 Aug
ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಲಿರುವ ಅಂತ್ಯಸಂಸ್ಕಾರ.
3:49 PM, 17 Aug
ಸ್ಮೃತಿ ಸ್ಥಳದಲ್ಲಿ ಮೊಳಗುತ್ತಿರುವ ಮಂತ್ರಘೋಷ
3:45 PM, 17 Aug
ದೆಹಲಿಯ ರಾಜ್ ಘಾಟ್ ನಲ್ಲಿರುವ ಸ್ಮೃತಿ ಸ್ಥಳದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಅಟಲ್ ಜೀ ಅಂತ್ಯಸಂಸ್ಕಾರ
3:44 PM, 17 Aug
ರಾಷ್ಟ್ರೀಯ ಸ್ಮೃತಿ ಸ್ಥಳ ತಲುಪಿದ ವಾಜಪೇಯಿ ಪಾರ್ಥಿವ ಶರೀರ
3:41 PM, 17 Aug
ಸ್ಮೃತಿ ಸ್ಥಳಕ್ಕೆ ಆಗಮಿಸಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ
3:40 PM, 17 Aug
ಸ್ಮೃತಿ ಸ್ಥಳದಲ್ಲಿ ಸಂಜೆ 5 ಗಂಟೆಗೆ ನಡೆಯಲಿರುವ ಅಂತ್ಯಕ್ರಿಯೆ
3:13 PM, 17 Aug
ಪ್ರಧಾನಿ ಮೋದಿಯವರು ನಡೆದೇ ಹೋಗುತ್ತಿರುವುದರಿಂದ ಸುತ್ತಲೂ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದೆ.
3:12 PM, 17 Aug
ವಾಜಪೇಯಿ ಅವರ ಅಂತಿಮ ದರ್ಶನಕ್ಕೆ ಆಗಮಿಸಿದ ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಹಮಿದ್ ಕರ್ಜಾಯ್
3:05 PM, 17 Aug
ಎಲ್ಲೆಲ್ಲೂ ಮೊಳಗುತ್ತಿರುವ ಅಟಲ್ ಜೀ ಅಮರ್ ರಹೇ, ಭಾರತ್ ಮಾತಾ ಕೀ ಜೈ, ವಂದೇ ಮಾತರಂ ಘೋಷಣೆ
3:02 PM, 17 Aug
ಮಾಜಿಪ್ರಧಾನಿಗಳ ಅಂತಿಮಯಾತ್ರೆಗೆ ಕಾಲ್ನಡಿಗೆಯಲ್ಲಿ ಚಲಿಸಿ ಅಭಿಮಾನ ಮೆರೆದ ಹಾಲಿ ಪ್ರಧಾನಿ ನರೇಂದ್ರ ಮೋದಿ
3:00 PM, 17 Aug
ನೆಚ್ಚಿನ ನಾಯಕನ ಅಗಲಿಕೆಗೆ ಲಕ್ಷಾಂತರ ಜನರ ಕಂಬನಿ. ಸ್ಮೃತಿ ಸ್ಥಳಕ್ಕೆ ತೆರಳುವ ರಸ್ತೆಯಲ್ಲಿ ಜನಸಾಗರ
READ MORE

English summary
One of India's tallest leaders, Bharat Ratna Atal Bihari Vajpayee passed away on Thursday, August 16 at 5.05 pm. As the entire nation plunged into sorrow over the passing away of the former prime minister, the government announced a 7 day mourning from August 16 to 22. Here are LIVE updates
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more