ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರುಣ್ ಜೇಟ್ಲಿ ಅಸ್ತಂಗತ: ಭಾನುವಾರ ಮಧ್ಯಾಹ್ನ ಅಂತ್ಯಕ್ರಿಯೆ

|
Google Oneindia Kannada News

ನವದೆಹಲಿ, ಆಗಸ್ಟ್ 24: ಮಾಜಿ ಹಣಕಾಸು ಸಚಿವ, ಬಿಜೆಪಿ ಪ್ರಮುಖ ಮುಖಂಡ ಅರುಣ್ ಜೇಟ್ಲಿ ಶನಿವಾರ ಮಧ್ಯಾಹ್ನ 12:30 ರ ಸುಮಾರಿಗೆ ನಿಧನ ಹೊಂದಿದ್ದಾರೆ.

ಅರುಣ್ ಜೇಟ್ಲಿ ಅವರು ಕಳೆದ ಹಲವು ದಿನಗಳಿಂದ ದೆಹಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ತೀವ್ರ ನಿಗಾ ಘಟಕದಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಅವರಿಗೆ ಇಂದು ಚಿಕಿತ್ಸೆಗೆ ಸ್ಪಂದಿಸದೆ ಕೊನೆ ಉಸಿರೆಳೆದಿದ್ದಾರೆ.

ಅರುಣ್ ಜೇಟ್ಲಿ ಬದುಕಿನ ಅಪರೂಪದ ಚಿತ್ರಗಳು

ಅರುಣ್ ಜೇಟ್ಲಿ ಅವರು ಕಳೆದ ಅವಧಿಯ ಮೋದಿ ಸರ್ಕಾರದಲ್ಲಿ ವಿತ್ತ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಡಿಸೆಂಬರ್ 28 ರ 1952 ರಂದು ಹುಟ್ಟಿದ್ದ ಅವರು 66 ವರ್ಷ ವಯಸ್ಸಾಗಿತ್ತು.

LIVE updates: Arun Jaitley passes away

ಬಿಜೆಪಿಯ ಪ್ರಮುಖ ಮುಖಂಡರಾಗಿದ್ದ ಜೇಟ್ಲಿ ಅವರಿಗೆ ಕೆಲವು ವರ್ಷಗಳಿಂದ ಅನಾರೋಗ್ಯ ಕಾಡುತ್ತಿತ್ತು. ಅವರು ವಿದೇಶದಲ್ಲಿ ಚಿಕಿತ್ಸೆ ಪಡೆದು ವಾಪಸ್ಸಾಗಿದ್ದರು. ಈ ವರ್ಷ ಅನಾರೋಗ್ಯದ ಸಮಸ್ಯೆಯಿಂದಾಗಿಯೇ ಅವರು ಚುನಾವಣೆಗೆ ಸ್ಪರ್ಧಿಸಿರಲಿಲ್ಲ ಮತ್ತು ಸಂಪುಟವನ್ನೂ ಸೇರಿರಲಿಲ್ಲ.

Newest FirstOldest First
6:25 PM, 24 Aug

ಭಾನುವಾರ ಮಧ್ಯಾಹ್ನ ಅರುಣ್ ಜೇಟ್ಲಿ ಅಂತ್ಯಕ್ರಿಯೆ: ಬಿಜೆಪಿ ಕಚೇರಿಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ

ದೀರ್ಘಕಾಲದ ಅನಾರೋಗ್ಯದ ಬಳಿಕ ಶನಿವಾರ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾದ ಕೇಂದ್ರದ ಮಾಜಿ ಸಚಿವ ಅರುಣ್ ಜೇಟ್ಲಿ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಭಾನುವಾರ ಮಧ್ಯಾಹ್ನದ ಬಳಿಕ ನಡೆಯಲಿದೆ.
6:23 PM, 24 Aug

ಶನಿವಾರ ಅವರ ಮೃತದೇಹವನ್ನು ಅವರ ನಿವಾಸದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗುತ್ತದೆ. ಬಳಿಕ ಭಾನುವಾರ ಬೆಳಿಗ್ಗೆ ಬೆಳಿಗ್ಗೆ 10 ಗಂಟೆ ಸುಮಾರಿಗೆ ಅವರ ಮೃತದೇಹವನ್ನು ಬಿಜೆಪಿ ಕೇಂದ್ರ ಕಚೇರಿಗೆ ತರಲಾಗುತ್ತದೆ. ಅರುಣ್ ಜೇಟ್ಲಿ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಭಾನುವಾರ ಮಧ್ಯಾಹ್ನದ ಬಳಿಕ ನಡೆಯಲಿದೆ.
5:20 PM, 24 Aug

ರಾಷ್ಟ್ರಪತಿ ರಮಾನಾಥ ಕೋವಿಂದ್ ಅವರು ಅರುಣ್ ಜೇಟ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.
4:25 PM, 24 Aug

ಬಿಜೆಪಿ ಕಾರ್ಯಾಧ್ಯಕ್ಷ ಜೆಪಿ ನಡ್ಡಾ, ಗೃಹ ಮಂತ್ರಿ ಅಮಿತ್ ಶಾ ಅವರು ಅರುಣ್ ಜೇಟ್ಲಿ ಅಂತ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಅಮಿತ್ ಶಾ ಅವರು ಹೈದಬಾರಾದ್‌ನಲ್ಲಿ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ದೆಹಲಿಗೆ ಬಂದಿದ್ದಾರೆ.
4:23 PM, 24 Aug

ಅರುಣ್ ಜೇಟ್ಲಿ ಪಾರ್ಥಿವ ಶರೀರವನ್ನು ಅವರ ನಿವಾಸಕ್ಕೆ ತರಲಾಗಿದ್ದು, ಗಣ್ಯರಿಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದೆ.
2:31 PM, 24 Aug

ಪ್ರಧಾನಿ ಹುದ್ದೆಗೆ ಮೋದಿ ಹೆಸರು ಸೂಚಿಸಿದ್ದ ಜೇಟ್ಲಿ ಎಂಬ ಟ್ರಬಲ್ ಶೂಟರ್

ಮೇ 29, 2019. ಆಗಷ್ಟೇ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಭಾರೀ ಬಹುಮತದಿಂದ ಗೆದ್ದು, ಸರ್ಕಾರ ರಚಿಸುವ ಹುಮ್ಮಸ್ಸಿನಲ್ಲಿತ್ತು.
2:02 PM, 24 Aug

ಅಪನಗರದೀಕರಣ ಮತ್ತು ಜಿಎಸ್‌ಟಿ ಪದ್ಧತಿ ಜಾರಿ ಇವೆರಡೂ ಜೇಟ್ಲಿ ಹಣಕಾಸು ಸಚಿವರಾಗಿದ್ದ ಕೈಗೊಂಡ ಅತ್ಯಂತ ಪ್ರಮುಖ ನಿರ್ಧಾರಗಳು.
Advertisement
2:00 PM, 24 Aug

ಅರುಣ್ ಜೇಟ್ಲಿ ದೇಶದ ಆಸ್ತಿಯಾಗಿದ್ದರು. ಅವರು ಪಕ್ಷ ಹಾಗೂ ಸರ್ಕಾರಕ್ಕೂ ಆಸ್ತಿ ಆಗಿದ್ದರು. ಈಗಲೇ ಎಲ್ಲ ಕಾರ್ಯಕ್ರಮ ರದ್ದುಗೊಳಿಸಿ ದೆಹಲಿಗೆ ತೆರಳುತ್ತೇನೆ ಎಂದು ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಹೇಳಿದರು.
1:56 PM, 24 Aug

ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಅವರು ಅರುಣ್ ಜೇಟ್ಲಿ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ದೆಹಲಿ ವಿವಿಯಲ್ಲಿ ನನ್ನ ಸೀನಿಯರ್ ಆಗಿದ್ದರು. ರಾಜಕೀಯ ಭಿನ್ನ ಸಿದ್ಧಾಂತಗಳಿದ್ದರೂ ನಾವೂ ಉತ್ತಮ ಗೆಳೆತನ ಕಾಯ್ದುಕೊಂಡಿದ್ದೆವು. ಅವರ ಬಜೆಟ್ ಬಗ್ಗೆ ನಡೆಸಿದ ಚರ್ಚೆ ಸ್ಮರಣೀಯ ಎಂದು ಶಶಿ ತರೂರ್ ಹೇಳಿದ್ದಾರೆ.
1:41 PM, 24 Aug

ಬಿಜೆಪಿ ಮತ್ತು ಅರುಣ್ ಜೇಟ್ಲಿ ಅವರದ್ದು ಮುರಿಯದ ಬಾಂದವ್ಯ. ವಿದ್ಯಾರ್ಥಿ ಸಮಯದಿಂದಲೂ ಅವರು ಪಕ್ಷದ ಜೊತೆಗೆ ಇದ್ದರು. ತುರ್ತುಪರಿಸ್ಥಿತಿಯ ಸಮಯದಲ್ಲಿ ಅವರು ಹೋರಾಟ ನಡೆಸಿದ್ದರು. ಪಕ್ಷದ ಪ್ರಮುಖ ಮುಖಂಡರಾಗಿದ್ದ ಅವರು ಪಕ್ಷದ ಆದರ್ಶಗಳನ್ನು ಸಮಾಜಕ್ಕೆ ತೆಗೆದುಕೊಂಡು ಹೋಗಲು ಅವರ ಶ್ರಮ ಪ್ರಮುಖವಾದುದು ಎಂದು ಮೋದಿ ಹೇಳಿದ್ದಾರೆ.
1:39 PM, 24 Aug

ಅರುಣ್ ಜೇಟ್ಲಿ ಅವರು ರಾಜಕೀಯ ಜೀವನದಲ್ಲಿ ಹಲವು ಪ್ರಮುಖ ಹುದ್ದೆಗಳನ್ನು ನಿಭಾಯಿಸಿರುವ ಅರುಣ್ ಜೇಟ್ಲಿ ಭಾರತದ ಅಭಿವೃದ್ಧಿಗೆ ಹಲವು ಕೊಡಗುಗೆಗಳನ್ನು ನೀಡಿದ್ದಾರೆ. ಭಾರತದ ಆರ್ಥಿಕ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಅಪಾರ ಜೊತೆಗೆ ಭಾರತ ರಕ್ಷಣಾ ಇಲಾಖೆಗೆ ಅತ್ಯುತ್ತಮ ಕೊಡುಗೆ ನೀಡಿದ್ದಾರೆ. ಜನರಿಗೆ ಅನುಕೂಲಕರವಾದ ಕಾನೂನುಗಳನ್ನು ಅವರು ತಂದಿದ್ದರು ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
1:35 PM, 24 Aug

ಜೀವನ ಪ್ರೀತಿ ಹೊಂದಿದ್ದ, ತಮಾಷೆಯ ವ್ಯಕ್ತಿತ್ವದ ಅರುಣ್ ಜೇಟ್ಲಿ ಅವರು, ಬಹುಮುಖ ವ್ಯಕ್ತಿತ್ವದ ಅವರಿಗೆ ಭಾರತ ಸಂವಿಧಾನದ ವಿಚಾರವಾಗಿ ಪೂರ್ಣ ಜ್ಞಾನ ಇತ್ತು, ಇತಿಹಾಸ, ಆಡಳಿತದ ಬಗ್ಗೆಯೂ ಅವರಿಗೆ ಪೂರ್ಣ ಜ್ಞಾನವಿತ್ತು ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
Advertisement
1:32 PM, 24 Aug

ಚೆನ್ನೈನಲ್ಲಿದ್ದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ತಮ್ಮ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ದೆಹಲಿಗೆ ವಾಪಸ್‌ ಆಗುತ್ತಿದ್ದಾರೆ.
1:28 PM, 24 Aug

ಅರುಣ್ ಜೇಟ್ಲಿ ಅವರ ನಿಧನಕ್ಕೆ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಡಿಸಿದ್ದಾರೆ. ಅರುಣ್ ಜೇಟ್ಲಿ ರಾಜಕೀಯ ದೈತ್ಯ, ಉನ್ನತ ಬೌದ್ಧಿಕತೆ ಹೊಂದಿದ್ದ ಅವರು ಕಾನೂನು ವಿಷಯಗಳ ಬಗ್ಗೆ ಬಹಳ ಜ್ಞಾನ ಹೊಂದಿದ್ದರು. ಅವರು ಭಾರತಕ್ಕೆ ಶಾಶ್ವತ ಕೊಡುಗೆ ನೀಡಿದ ಸ್ಪಷ್ಟ ನಾಯಕರು. ಅವರ ನಿಧನ ಬಹಳ ದುಃಖ ತಂದಿದೆ. ಅವರ ಪತ್ನಿ ಸಂಗೀತ ಜೀ ಮತ್ತು ಮಗ ರೋಹನ್ ಅವರೊಂದಿಗೆ ಮಾತನಾಡಿ ಸಂತಾಪ ವ್ಯಕ್ತಪಡಿಸಿದ್ದೇನೆ ಎಂದು ಮೋದಿ ಹೇಳಿದ್ದಾರೆ.
1:10 PM, 24 Aug

ಅರುಣ್ ಜೇಟ್ಲಿ ನಿಧನದ ಬಗ್ಗೆ ಏಮ್ಸ್ ಆಸ್ಪತ್ರೆ ಪ್ರಕಟಣೆ ಹೊರಡಿಸಿದ್ದು, ಅಮಿತ್ ಶಾ ಅವರು ಇಂದು ಮಧ್ಯಾಹ್ನ 12:07 ಕ್ಕೆ ನಿಧನ ಹೊಂದಿದ್ದಾರೆ ಎಂದು ಹೇಳಿದ್ದಾರೆ.
1:09 PM, 24 Aug

ಅರುಣ್ ಜೇಟ್ಲಿ ನಿಧನದ ಬಗ್ಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಮತ್ತು ಗೃಹ ಮಂತ್ರಿ ಅಮಿತ್ ಶಾ ಸಂತಾಪ ವ್ಯಕ್ತಪಡಿಸಿದ್ದು. ಜೇಟ್ಲಿ ಅವರ ನಿಧನ ನನಗೆ ವೈಯಕ್ತಿಕ ನಷ್ಟ ಅವರೊಬ್ಬ ಪರಿವಾರದ ಸದಸ್ಯರಾಗಿದ್ದರು. ಅವರು ನನಗೆ ಮಾರ್ಗದರ್ಶಕರಾಗಿದ್ದರು ಎಂದು ಶಾ ಹೇಳಿದ್ದಾರೆ. ಅಮಿತ್ ಶಾ ಅವರು ಹೈದರಾಬಾದ್‌ನಲ್ಲಿದ್ದು ಶೀಘ್ರವಾಗಿ ದೆಹಲಿಗೆ ಬರಲಿದ್ದಾರೆ.
1:04 PM, 24 Aug

ಪ್ರಧಾನಿ ನರೇಂದ್ರ ಮೋದಿ ಅವರು ಅಬುದಬಿಯಲ್ಲಿ ಎನ್‌ಆರ್‌ಐ ಬ್ಯುಸಿನೆಸ್‌ಮನ್‌ ಗಳ ಸಮಿತಿಯೊಂದಿಗೆ ಸಭೆಯಲ್ಲಿ ನಿರತರಾಗಿದ್ದಾರೆ. ಮೋದಿ ಅವರು ತಮ್ಮ ಕಾರ್ಯಕ್ರಮ ರದ್ದು ಮಾಡಿ ವಾಪಸ್ಸಾಗುವ ಸಾಧ್ಯತೆ ಇದೆ.
1:02 PM, 24 Aug

ಅರುಣ್ ಜೇಟ್ಲಿ ನಿಧನದ ಬಗ್ಗೆ ಮಧ್ಯಪ್ರದೇಶ ಮಾಜಿ ಸಿಎಂ ತೀವ್ರ ದುಖಃ ವ್ಯಕ್ತಪಡಿಸಿದ್ದರು. ಜೇಟ್ಲಿ ಅವರು ಬಿಜೆಪಿಗೆ ನೀಡಿರುವ ಸೇವೆಯನ್ನು ಯಾರೂ ಮರೆಯಲಾಗದು. ಅವರು ಹಣಕಾಸು ಸಚಿವರಾಗಿ ದೇಶಕ್ಕೆ ನೀಡಿದ ಕೊಡುಗೆಯನ್ನು ದೇಶದ ಜನ ನೆನಪಿಟ್ಟುಕೊಳ್ಳಲಿದ್ದಾರೆ. ಅವರು ಯಾವುದೇ ವಿಷಯದ ಬಗ್ಗೆಯಾದರೂ ಅಧಿಕಾರಯುತವಾಗಿ ಮಾತನಾಡಬಲ್ಲವರಾಗಿದ್ದರು ಎಂದು ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
1:00 PM, 24 Aug

ಏಮ್ಸ್‌ ಆಸ್ಪತ್ರೆಯೆಡೆ ಬಿಜೆಪಿ ಗಣ್ಯರು ದೌಡಾಯಿಸುತ್ತಿದ್ದಾರೆ. ಬಿಜೆಪಿಯ ಪ್ರಮುಖ ಸಚಿವರು, ಪಾರ್ಟಿ ಮುಖ್ಯಸ್ಥರು ಹಲವು ಏಮ್ಸ್ ಆಸ್ಪತ್ರೆಯೆಡೆ ಬರುತ್ತಿದ್ದಾರೆ.

English summary
Former Finance minister Arun Jaitley passes away today in AIIMS hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X