• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲಿವ್-ಇನ್ ಸಂಬಂಧ ನಿಷೇಧಿಸಿಲ್ಲ: ಪಂಜಾಬ್-ಹರ್ಯಾಣ ಹೈಕೋರ್ಟ್

|
Google Oneindia Kannada News

ಲಿವ್-ಇನ್ ಸಂಬಂಧವನ್ನು ನಿಷೇಧಿಸಿಲ್ಲ, ಕಾನೂನಿನ ರಕ್ಷಣೆಗೆ ಅರ್ಹ ಎಂದು ಪಂಜಾ ಮತ್ತು ಹರ್ಯಾಣ ಹೈಕೋರ್ಟ್ ತಿಳಿಸಿದೆ.

ಲಿವ್‌-ಇನ್‌ ಸಂಬಂಧಗಳ ಬಗ್ಗೆ ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ನ ಎರಡು ಪೀಠಗಳು ಒಂದು ವಾರದ ಹಿಂದಷ್ಟೇ ಕೆಂಗಣ್ಣು ಬೀರಿದ್ದ ಬೆನ್ನಲ್ಲೇ ಅದೇ ನ್ಯಾಯಾಲಯದ ಮತ್ತೊಂದು ಪೀಠ ಲಿವ್‌-ಇನ್‌ ಜೋಡಿಗೆ ರಕ್ಷಣೆಯನ್ನು ನೀಡಿ ಸಾಂಗತ್ಯದ ಹಕ್ಕನ್ನು ಎತ್ತಿ ಹಿಡಿದಿದೆ.

ಲಿವ್ ಇನ್ ಸಂಬಂಧ ಅಪರಾಧವಲ್ಲ, ಸಹಮತ ಬಾಳ್ವೆಗೆ ಕೋರ್ಟ್ ಓಕೆ ಲಿವ್ ಇನ್ ಸಂಬಂಧ ಅಪರಾಧವಲ್ಲ, ಸಹಮತ ಬಾಳ್ವೆಗೆ ಕೋರ್ಟ್ ಓಕೆ

ವ್ಯಕ್ತಿಗಳಿಗೆ ಸಂಗಾತಿಯೊಂದಿಗಿನ ತಮ್ಮ ಸಂಬಂಧವನ್ನು ವಿವಾಹದ ಮೂಲಕ ಔಪಚಾರಿಕಗೊಳಿಸುವ ಅಥವಾ ಲಿವ್‌-ಇನ್‌ ಸಂಬಂಧದ ಮೂಲಕ ಅನೌಪಚಾರಿಕವಾಗಿರಿಸುವ ಹಕ್ಕುಇದೆ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿತು. ಅರ್ಜಿದಾರರು ತಮಗೆ ರಕ್ಷಣೆ ನೀಡುವಂತೆ ಕೋರಿದ್ದ ಮನವಿಗೆ ಪೊಲೀಸರಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಈ ಕುರಿತು ಆದೇಶ ನೀಡಿರುವ ನ್ಯಾ. ಸುಧೀರ್ ಮಿತ್ತಲ್‌ ಅವರ ಏಕಸದಸ್ಯ ಪೀಠವು, ಸಂವಿಧಾನದ ಅಡಿಯಲ್ಲಿ ಬರುವ ಜೀವಿಸುವ ಹಾಗೂ ಸ್ವಾತಂತ್ರ್ಯದ ಹಕ್ಕಿನಡಿ ವ್ಯಕ್ತಿಯೊಬ್ಬರು ಸಂಗಾತಿಯ ಆಯ್ಕೆಯೂ ಸೇರಿಸಿದಂತೆ ತಾವು ಮಾಡಿಕೊಳ್ಳುವ ಆಯ್ಕೆಗಳ ಮೂಲಕ ತಮ್ಮೊಳಗಿನ ಸಾಮರ್ಥ್ಯದ ಪೂರ್ಣ ಬೆಳವಣಿಗೆಗೆ ಅನುವು ಮಾಡಿಕೊಡುವ ಹಕ್ಕೂ ಒಳಪಡುತ್ತದೆ ಎಂದು ಅಭಿಪ್ರಾಯಪಟ್ಟಿತು.

ನ್ಯಾಯಾಲಯವು ತನ್ನ ಆದೇಶದಲ್ಲಿ, ಲಿವ್‌-ಇನ್‌ ಸಂಬಂಧಗಳನ್ನು ಒಪ್ಪುವುದು ಹೆಚ್ಚುತ್ತಿದ್ದು, ಈ ಪರಿಕಲ್ಪನೆಯು ಸಣ್ಣ ನಗರ ಮತ್ತು ಹಳ್ಳಿಗಳಿಗೂ ಹರಡಿದೆ ಎಂದಿತು.

ಅಂತಹ ಸಂಬಂಧಗಳನ್ನು ಕಾನೂನಿನ ಅಡಿಯಲ್ಲಿ ನಿಷೇಧಕ್ಕೆ ಒಳಪಟ್ಟಿಲ್ಲ, ಹಾಗಾಗಿ ಅಂತಹ ಸಂಬಂಧಗಳಿಗೆ ಒಳಪಡುವ ವ್ಯಕ್ತಿಗಳು ಕಾನೂನಿನಡಿ ಸಮಾನ ರಕ್ಷಣೆಗೆ ಅರ್ಹರು ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿತು. ಆ ಮೂಲಕ ಜೋಡಿಗೆ ರಕ್ಷಣೆ ಒದಗಿಸಲು ಸೂಚಿಸಲಾಯಿತು.

ನ್ಯಾಯಾಲಯದ ಮುಂದೆ ಅರ್ಜಿದಾರರು, ತಾವಿಬ್ಬರೂ ವಯಸ್ಕರಾಗಿದ್ದು ತಾವು ಒಬ್ಬರು ಮತ್ತೊಬ್ಬರೆಡೆಗೆ ಹೊಂದಿರುವ ಭಾವನೆಗಳನ್ನು ಖಾತರಿಪಡಿಸಿಕೊಂಡು ಈ ಸಂಬಂಧವನ್ನು ಪ್ರವೇಶಿಸಿರುವುದಾಗಿ ತಿಳಿಸಿದ್ದರು.

ಜೋಡಿಯಲ್ಲಿನ ಒಬ್ಬರ ಪೋಷಕರು ಈ ಸಂಬಂಧದ ವಿರುದ್ಧವಾಗಿದ್ದು ಜೋಡಿಯ ಮೇಲೆ ದೈಹಿಕ ಹಲ್ಲೆಗೈಯುವ ಬೆದರಿಕೆಗಳನ್ನು ಒಡ್ಡಿದ್ದರಿಂದ ನ್ಯಾಯಾಲಯದ ರಕ್ಷಣೆಗೆ ಮೊರೆ ಹೋಗಲಾಗಿತ್ತು. (ಮಾಹಿತಿ ಕೃಪೆ: ಬಾರ್ ಅಂಡ್ ಬೆಂಚ್)

English summary
The Punjab and Haryana high court has granted protection to a live-in couple – after last week, two other benches of the same high court frowned upon the concept.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X