• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Sushma Swaraj Death LIVE: ಬಿಜೆಪಿ ಕಚೇರಿಯಲ್ಲಿ ಸುಷ್ಮಾಗೆ ಅಂತಿಮ ನಮನ

|

ನವದೆಹಲಿ, ಆಗಸ್ಟ್ 06: ಮಾಜಿ ವಿದೇಶಾಂಗ ಸಚಿವೆ, ಬಿಜೆಪಿ ಪ್ರಮುಖ ನಾಯಕಿ ಸುಷ್ಮಾ ಸ್ವರಾಜ್ ಅವರು ತೀವ್ರ ಹೃದಯಾಘಾತದಿಂದ ಇಂದು ರಾತ್ರಿ ನಿಧನ ಹೊಂದಿದ್ದಾರೆ. ಅವರಿಗೆ 66 ವರ್ಷ ವಯಸ್ಸಾಗಿತ್ತು.

ಕೇವಲ ಮೂರು ಗಂಟೆ ಹಿಂದೆಯಷ್ಟೆ, ಜಮ್ಮು ಕಾಶ್ಮೀರದ ವಿಷಯವಾಗಿ ನರೇಂದ್ರ ಮೋದಿ ಅವರಿಗೆ ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ್ದ ಅವರು, ಕೆಲವೇ ಗಂಟೆಗಳಲ್ಲಿ ನಿಧನರಾಗಿದ್ದಾರೆ.

ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ನಿಧನ

ರಾತ್ರಿ 10 ಗಂಟೆ ಸುಮಾರಿಗೆ ಅವರಿಗೆ ತೀವ್ರ ಹೃದಯಾಘಾತವಾಗಿತ್ತು, ಅವರನ್ನು ದೆಹಲಿಯ ಏಮ್ಸ್‌ ಆಸ್ಪತ್ರೆಗೆ ಸೇರಿಸಲಾಗಿತ್ತು, ಆದರೆ ಅವರ ನಿಧನ ಸುದ್ದಿಯನ್ನು ವೈದ್ಯರು ಖಚಿತಪಡಿಸಿದ್ದು, ಬಿಜೆಪಿ ತನ್ನ ಅತ್ಯಂತ ಪ್ರಮುಖ ನಾಯಕಿಯನ್ನು ಕಳೆದುಕೊಂಡಿದೆ.

ಚಿತ್ರಗಳಲ್ಲಿ ಸುಷ್ಮಾ ಸ್ವರಾಜ್ ಅಂತಿಮ ದರ್ಶನ

LIVE: Former foreign affairs minister Sushma Swaraj passes away

ಸುಷ್ಮಾ ಸ್ವರಾಜ್ ಅವರು ಮೋದಿ ಅವರ 2014ರ ಸರ್ಕಾರದ ಅವಧಿಯಲ್ಲಿ ವಿದೇಶಾಂಗ ಸಚಿವೆಯಾಗಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ್ದರು. ಆರೋಗ್ಯ ಸಮಸ್ಯೆಯಿಂದ ಈ ಬಾರಿ ಚುನಾವಣೆಯಿಂದ ಹಿಂದೆ ಸರಿದು, ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದರು.

Newest First Oldest First
1:58 PM, 7 Aug
ಇಂದು ಕಣ್ಣೀರುಕ್ಕಿಸುತ್ತಿವೆ, ಅಂದು ನಕ್ಕು ನಲಿಸಿದ್ದ ಸುಷ್ಮಾ ಟ್ವೀಟ್
ಸುಷ್ಮಾ ಸ್ವರಾಜ್ ಒಬ್ಬ ರಾಜಕಾರಣಿಯಾಗಿ, ಪ್ರಖರ ಹಿಂದುತ್ವವಾದಿಯಾಗಿ, ದೇಶಭಕ್ತಿಯ ಸಲೆಯಾಗಿ ಮಾತ್ರವಲ್ಲದೆ, ಅವರ ವಿರೋಧಿಗಳಿಗೂ ಹತ್ತಿರವಾಗುತ್ತಿದ್ದಿದ್ದು ತಮ್ಮ ಸಂದರ್ಭೋಚಿತ ಹಾಸ್ಯ ಪ್ರಜ್ಞೆಯಿಂದ! 2019 ರ ಲೋಕಸಭೆ ಚುನಾವಣೆಗೆ ತಾವು ಸ್ಪರ್ಧಿಸುವುದಿಲ್ಲ ಎಂದು ಸುಷ್ಮಾ ಸ್ವರಾಜ್ ಸ್ವತಃ ಘೋಷಿಸಿದಾಗ ಸಂಸತ್ತಿನ ಗೋಡೆಗಳೂ ಬಿಕ್ಕಿರಲಿಕ್ಕೆ ಸಾಕು! ಎಂಥ ಪ್ರಕ್ಷುಬ್ಧ ಸನ್ನಿವೇಶವನ್ನು ತಮ್ಮ ಹಾಸ್ಯಪ್ರಜ್ಞೆಯ ಮೂಲಕ ತಿಳಿಗೊಳಿಸುತ್ತಿದ್ದ ನಾಯಕಿ ಈ ಬಾರಿ ಸಂಸತ್ತಿಗೆ ಪ್ರವೇಶಿಸದಿದ್ದಿದ್ದು ನಿರ್ವಾತ ಸೃಷ್ಟಿಸಿದ್ದು ಸತ್ಯ.
1:55 PM, 7 Aug
Infographics: ಅಪರೂಪದ ರಾಜಕಾರಣಿ ಸುಷ್ಮಾ ಸ್ವರಾಜ್ ಬದುಕಿನ ಹಿನ್ನೋಟ
ಸುಷ್ಮಾ ಸ್ವರಾಜ್ ಭಾರತೀಯ ರಾಜಕಾರಣಿ. ಭಾರತದ ಸರ್ವೋಚ್ಚ ನ್ಯಾಯಾಲಯದ ಮಾಜಿ ವಕೀಲೆ. ಇವರು ಸಂಸದೆಯಾಗಿ ಏಳು ಬಾರಿ ಮತ್ತು ವಿಧಾನ ಸಭಾ ಸದಸ್ಯೆಯಾಗಿ ಮೂರು ಬಾರಿ ಆಯ್ಕೆಯಾಗಿದ್ದಾರೆ. 1977ರಲ್ಲಿ ಉತ್ತರ ಭಾರತದ ಹರಿಯಾಣ ರಾಜ್ಯದ ಸಂಪುಟ ಸಚಿವೆಯಾದರು.
1:54 PM, 7 Aug
ಸುಷ್ಮಾ ಪಾರ್ಥೀವ ಶರೀರ ಮುಂದೆ ಪ್ರಧಾನಿ ಮೋದಿ ಕಣ್ಣೀರಧಾರೆ
ನವದೆಹಲಿ, ಆಗಸ್ಟ್ 07: ಒಂದು ಕಾಲದಲ್ಲಿ ಪ್ರಧಾನಿ ಮೋದಿ ಅವರ ಕೇಂದ್ರ ಸಚಿವ ಸಂಪುಟದ ಶಕ್ತಿಯಾಗಿದ್ದ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ಅವರ ಅಗಲಿಕೆಯ ನೋವಿನಿಂದ ಪ್ರಧಾನಿ ಮೋದಿ ಕಂಬನಿ ಮಿಡಿದಿದ್ದಾರೆ. ನಿನ್ನೆ ರಾತ್ರಿ ನಿಧನವಾರ್ತೆ ಕೇಳಿದ ಕೂಡಲೇ ಪ್ರಧಾನಿ ಸಚಿವಾಲಯದಿಂದ ಭಾವುಕ ಟ್ವೀಟ್ ಗಳು ಸರಣಿಯಾಗಿ ಹೊರ ಬಂದವು. ಮೋದಿ ಸಂಪುಟದ ಪ್ರಮುಖ ಸಚಿವರು ತಕ್ಷಣವೆ ಏಮ್ಸ್ ಗೆ ಧಾವಿಸಿ, ಸಕಲ ವ್ಯವಸ್ಥೆ ನೋಡಿಕೊಂಡರು. ಇಂದು ಸುಷ್ಮಾ ಸ್ವರಾಜ್ ನಿವಾಸಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ, ಸುಷ್ಮಾ ಕುಟುಂಬದವರಿಗೆ ಸಾಂತ್ವನ ಹೇಳಿದರು.
1:32 PM, 7 Aug
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಗೃಹಮಂತ್ರಿ ಅಮಿತ್ ಶಾ ಅವರು ಸುಷ್ಮಾ ಸ್ವರಾಜ್ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.
12:43 PM, 7 Aug
ಸುಷ್ಮಾ ಸ್ವರಾಜ್ ಪಾರ್ಥಿವ ಶರೀರ ಆಂಬುಲೆನ್ಸ್ ಮೂಲಕ ಬಿಜೆಪಿ ಕಚೇರಿಗೆ ಕೊಂಡಿಯುತ್ತಿರುವುದು.
12:35 PM, 7 Aug
ಬಿಜೆಪಿ ಕಚೇರಿಯತ್ತ ಸುಷ್ಮಾ ಪಾರ್ಥಿವ ಶರೀರ ಸಾಗುತ್ತಿದೆ, 3 ಗಂಟೆವರೆಗೆ ಅಂತಿಮ ದರ್ಶನಕ್ಕೆ ಅವಕಾಶವಿದೆ. ಸಂಜೆ 6 ಗಂಟೆಗೆ ಅಂತ್ಯಕ್ರಿಯೆ ನೆರವೇರಲಿದೆ.
11:26 AM, 7 Aug
ಕೊಟ್ಟ ಮಾತು ಮರೆತು ಹೋದೆಯಲ್ಲಾ: ಸ್ಮೃತಿ ಇರಾನಿ ಭಾವುಕ ಟ್ವೀಟ್
ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್(67) ಅಗಲುವಿಕೆಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಭಾವುಕ ಟ್ವೀಟ್ ಮಾಡಿದ್ದಾರೆ.
11:12 AM, 7 Aug
ಮಾಜಿ ಕೇಂದ್ರ ಸುಷ್ಮಾ ಸ್ವರಾಜ್ ನಿಧನ ಹಿನ್ನೆಲೆ ಹರಿಯಾಣದಲ್ಲಿ ಎರಡು ದಿನ ಮೌನಾಚರಣೆಗೆ ನಿರ್ಧಾರ. ಮಧ್ಯಾಹ್ನದವರೆಗೆ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ.
10:53 AM, 7 Aug
ಶ್ರೀರಾಮಲು 'ಫೊಟೋ ಆಲ್ಬಂ': ಸುಷ್ಮಾ ಸ್ವರಾಜ್‌ಗೆ ಹೀಗೊಂದು ಸಂತಾಪ
ಮಾಜಿ ವಿದೇಶಾಂಗ ಸಚಿವೆ, ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ವಿಧಿವಶರಾಗಿದ್ದಾರೆ. ಕರ್ನಾಟಕದೊಂದಿಗೆ ಸುಷ್ಮಾ ಸ್ವರಾಜ್‌ ಉತ್ತಮ ಬಾಂಧವ್ಯ ಹೊಂದಿದ್ದರು. ಮೊಳಕಾಲ್ಮೂರು ಶಾಸಕ ಬಿ. ಶ್ರೀರಾಮುಲು ಸುಷ್ಮಾ ಸ್ವರಾಜ್ ಸಾವಿಗೆ ಕಂಬನಿ ಮಿಡಿದಿದ್ದಾರೆ.
10:15 AM, 7 Aug
ಸುಷ್ಮಾ ಸ್ವರಾಜ್‌ಗೆ ಅಂತಿಮ ನಮನ ಸಲ್ಲಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ಮೇಧಾವಿಯನ್ನು ಕಳೆದುಕೊಂಡು ದೇಶ ಬಡವಾಗಿದೆ, ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ ಎಂದರು.
10:10 AM, 7 Aug
ಬಳ್ಳಾರಿ ವರಮಹಾಲಕ್ಷ್ಮಿ ಹಬ್ಬದ ಮುತ್ತೈದೆ ಸುಷ್ಮಾ ಸ್ವರಾಜ್ ನೆನಪು
1999ರಲ್ಲಿ ಬಳ್ಳಾರಿ ಲೋಕಸಭೆ ಚುನಾವಣೆಯಲ್ಲಿ ಸುಷ್ಮಾ ಸ್ವರಾಜ್ ಸೋಲು ಕಂಡರೂ ಬಿಸಿಲು ನಾಡು ಬಳ್ಳಾರಿ ಜನತೆ ಹೃದಯ ಗೆದ್ದರು. ಶ್ರೀರಾಮುಲು, ಗಾಲಿ ಜನಾರ್ದನ ರೆಡ್ಡಿ ಕುಟುಂಬದೊಡನೆ ಬಾಂಧವ್ಯ ಉಳಿಸಿಕೊಂಡರು. ಬಳ್ಳಾರಿಯ ಮನೆ ಮಗಳು, ಸೊಸೆ, ವರಮಹಾಲಕ್ಷ್ಮಿ ಹಬ್ಬದ ಮುತ್ತೈದೆಯಾಗಿ ಜನ ಮಾನಸದಲ್ಲಿ ಉಳಿದಿದ್ದಾರೆ.
10:10 AM, 7 Aug
ಸುಷ್ಮಾ ಸ್ವರಾಜ್ ನಿವಾಸಕ್ಕೆ ತೆರಳಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಅಂತಿಮ ದರ್ಶನ ಪಡೆದಿದ್ದಾರೆ.
9:54 AM, 7 Aug
ನಿಮಗೆ ಗೊತ್ತಿರದ ಸುಷ್ಮಾ ಸ್ವರಾಜ್ ಹೆಜ್ಜೆ ಗುರುತುಗಳು
ಸುಷ್ಮಾ ಸ್ವರಾಜ್‌ ಅವರ ಮೂಲ ಹೆಸರು ಸುಷ್ಮಾ ಶರ್ಮಾ. ಹರಿಯಾಣ ಜಿಲ್ಲೆಯ ಅಂಬಾಲದಲ್ಲಿ 1952, ಫೆ. 14ರಂದು ಜನನ. ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಸುಷ್ಮಾ ತಂದೆ ಹರ್‌ದೇವ್ ಶರ್ಮಾ ಆರ್‌ಎಸ್‌ಎಸ್‌ನ ಕಟ್ಟಾಳುವಾಗಿದ್ದರು. ಹರಿಯಾಣದಲ್ಲಿ ಕಾಲೇಜು ವಿದ್ಯಾಭ್ಯಾಸ ಮುಗಿಸಿ, ಚಂಡೀಗಢದ 'ಪಂಜಾಬ್ ವಿಶ್ವವಿದ್ಯಾನಿಲಯದಲ್ಲಿ ಕಾನೂನು ಪದವಿ ಪಡೆದುಕೊಂಡರು. 1973ರಲ್ಲಿ ವಕೀಲರಾಗಿ ವೃತ್ತಿ ಆರಂಭಿಸಿದರು.
1:18 AM, 7 Aug
ಸುಷ್ಮಾ ಸ್ವರಾಜ್ ಅವರ ಮೃತ ದೇಹವನ್ನು ಬುಧವಾರ ಮಧ್ಯಾಹ್ನ 12 ಗಂಟೆ ವರೆಗೆ ಅವರ ದೆಹಲಿಯ ನಿವಾಸದಲ್ಲಿಯೇ ಇರಿಸಲಾಗುತ್ತದೆ. 12 ಗಂಟೆ ನಂತರ ಸುಷ್ಮಾ ಸ್ವರಾಜ್ ಅವರ ಮೃತದೇಹವನ್ನು ಮೆರವಣಿಗೆಯಲ್ಲಿ ಬಿಜೆಪಿ ರಾಷ್ಟ್ರೀಯ ಕೇಂದ್ರ ಕಚೇರಿಗೆ ತೆಗೆದುಕೊಂಡು ಬಂದು ಅಲ್ಲಿ ಕಾರ್ಯಕರ್ತರ ದರ್ಶನಕ್ಕೆ ಇಡಲಾಗುತ್ತದೆ. ನಂತರ ಮೂರು ಗಂಟೆ ವೇಳೆಗೆ ಲೋಧಿ ರಸ್ತೆಯ ರುದ್ರ ಭೂಮಿಯಲ್ಲಿ ಅಂತಿ ವಿಧಿವಿಧಾನ ನಡೆಯಲಿದ್ದು, ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತಿಮಕಾರ್ಯ ಮಾಡಲಾಗುತ್ತದೆ.
12:29 AM, 7 Aug
ಸುಷ್ಮಾ ಸ್ವರಾಜ್ ಮೃತ ದೇಹವನ್ನು ಏಮ್ಸ್ ಆಸ್ಪತ್ರೆಯಿಂದ ದೆಹಲಿಯ ಅವರ ನಿವಾಸಕ್ಕೆ ಆಂಬುಲೆನ್ಸ್‌ ಮೂಲಕ ತೆಗೆದುಕೊಂಡು ಹೋಗಲಾಗಿದ್ದು, ಇಂದು ರಾತ್ರಿ ಅಲ್ಲಿಯೇ ದರ್ಶನಕ್ಕೆ ಇಡಲಾಗುತ್ತದೆ.
12:16 AM, 7 Aug
ಸುಷ್ಮಾ ಸ್ವರಾಜ್ ಅವರ ಅಗಲಿಕೆಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಮಾಜಿ ಪ್ರಧಾನಿ ದೇವೇಗೌಡ ಅವರು, ಸುಷ್ಮಾ ಸ್ವರಾಜ್ ಅಗಲಿಕೆ ದೇಶಕ್ಕೆ ಆಗಿರುವ ನಷ್ಟ ಎಂದು ಹೇಳಿದ್ದಾರೆ.
12:14 AM, 7 Aug
ಸುಷ್ಮಾ ಸ್ವರಾಜ್ ಅವರ ಅಗಲಿಕೆ ತೀವ್ರ ದುಖಃ ತಂದಿದೆ, ಅವರಿಗೆ ತಾಯಿಯ ಮನಸ್ಸು ಇತ್ತು. ಮುಂದಿನ ರಾಜಕಾರಣಿಗಳಿಗೆ ಅವರು ಅತ್ಯುತ್ತಮ ಮಾದರಿ ಹಾಕಿಕೊಟ್ಟಿದ್ದಾರೆ. ಅವರಿಗೆ ಪಕ್ಷ ಬೇದ ಇರಲಿಲ್ಲ ಎಂದು ದೇವೇಗೌಡ ಅವರು ಹೇಳಿದ್ದಾರೆ.
12:01 AM, 7 Aug
ತಾಯಿಯನ್ನು ಕಳೆದುಕೊಂಡಷ್ಟು ದುಖಃವಾಗುತ್ತಿದೆ ಎಂದು ಜನಾರ್ದನ ರೆಡ್ಡಿ ಅವರು ಸುಷ್ಮಾ ಸ್ವರಾಜ್ ಅವರ ಅಗಲಿಕೆಗೆ ಪ್ರತಿಕ್ರಿಯಿಸಿದ್ದಾರೆ. ಜನಾರ್ದನ ರೆಡ್ಡಿ ಅವರು ಸುಷ್ಮಾ ಸ್ವರಾಜ್ ಅವರೊಂದಿಗೆ ಆತ್ಮೀಯ ಬೆಸುಗೆ ಹೊಂದಿದ್ದರು.
12:00 AM, 7 Aug
ಸುಷ್ಮಾ ಸ್ವರಾಜ್ ಅವರ ಮೃತದೇಹವನ್ನು ಏಮ್ಸ್‌ ಆಸ್ಪತ್ರೆಯಿಂದ ದೆಹಲಿಯ ಅವರ ನಿವಾಸಕ್ಕೆ ತೆಗೆದುಕೊಂಡು ಹೋಗಿ ಇಂದು ರಾತ್ರಿ ದರ್ಶನಕ್ಕೆ ಇಡಲಾಗುತ್ತದೆ.
11:58 PM, 6 Aug
ಸುಷ್ಮಾ ಸ್ವರಾಜ್‌ ಅವರ ಮೂಲ ಹೆಸರು ಸುಷ್ಮಾ ಶರ್ಮಾ. ಅವರು ಹರಿಯಾಣ ಜಿಲ್ಲೆಯ ಅಂಬಾಲದಲ್ಲಿ 1952, ಫೆ. 14ರಂದು ಜನಿಸಿದ್ದರು.
11:57 PM, 6 Aug
ಕರ್ನಾಟಕ ಹಲವು ಬಿಜೆಪಿ ನಾಯಕರೊಂದಿಗೆ ಸುಷ್ಮಾ ಸ್ವರಾಜ್ ಅವರು ಆತ್ಮೀಯ ನಂಟು ಹೊಂದಿದ್ದರು. ಜನಾರ್ಧನ ರೆಡ್ಡಿ, ಶ್ರೀರಾಮುಲು ಅವರೊಂದಿಗೆ ಹೆಚ್ಚಿನ ಆತ್ಮೀಯತೆ ಸುಷ್ಮಾ ಸ್ವರಾಜ್ ಅವರಿಗೆ ಇತ್ತು. ವರಮಹಾಲಕ್ಷ್ಮಿ ಹಬ್ಬಕ್ಕೆ ಬಳ್ಳಾರಿಗೆ ಬರುವ ಪರಿಪಾಠವನ್ನು ಸುಷ್ಮಾ ಸ್ವರಾಜ್ ಇರಿಸಿಕೊಂಡಿದ್ದರು.
11:54 PM, 6 Aug
ಪ್ರಧಾನಿ ನರೇಂದ್ರ ಮೋದಿ ಅವರು ಸುಷ್ಮಾ ಸ್ವರಾಜ್ ಅವರ ನಿಧನಕ್ಕೆ ತೀವ್ರ ಶೋಕ ವ್ಯಕ್ತಪಡಿಸಿದ್ದು, ಸುಷ್ಮಾ ಜೀ ಅವರ ನಿಧನ ನನಗೆ ವೈಯಕ್ತಿಕ ನಷ್ಟವಾಗಿದೆ. ಭಾರತಕ್ಕಾಗಿ ಅವರ ಮಾಡಿದ ಎಲ್ಲ ಸಾಧನೆಗಳೂ ಸ್ಮರಿಸಲ್ಪಡುತ್ತವೆ. ಅವರ ಆತ್ಮೀಯರು, ಪ್ರೀತಿ ಪಾತ್ರರಿಗೆ ದುಖಃ ಭರಿಸುವ ಶಕ್ತಿ ದೊರೆಯಲಿ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
11:52 PM, 6 Aug
ಸುಷ್ಮಾ ಸ್ವರಾಜ್ ಅವರು ದೆಹಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದು, ಅವರಿಗೆ ತೀವ್ರ ಹೃದಯಾಘಾತವಾಗಿತ್ತು. ಏಮ್ಸ್‌ ಆಸ್ಪತ್ರೆಗೆ ಗಣ್ಯರ ದಂಡು ಆಗಮಿಸುತ್ತಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
BJP's former foreign affairs minister Sushma Swaraj passes away on Tuesday(August 6). Last rites will be carried out Today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more