ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸೋಂಕಿನಿಂದ ಗುಣಮುಖರಾದವರು ಈ ಪರೀಕ್ಷೆಗಳನ್ನು ಮಾಡಿಸಲೇಬೇಕು

|
Google Oneindia Kannada News

ನವದೆಹಲಿ, ಮೇ 03: ದೇಶದಲ್ಲಿ ಕೊರೊನಾ ಸೋಂಕು ತೀವ್ರಗತಿಯಲ್ಲಿ ಹೆಚ್ಚುತ್ತಿದೆ. ಕೊರೊನಾ ಸೋಂಕಿನಿಂದ ಕಾಪಾಡಿಕೊಳ್ಳುವುದು ಹೇಗೆ, ಕೊರೊನಾ ಸೋಂಕು ಬಂದ ಮೇಲೆ ಏನು ಮಾಡಬೇಕು, ಗೃಹ ಬಂಧನದಲ್ಲಿದ್ದಾಗ ಅನುಸರಿಸಬೇಕಾದ ಕ್ರಮಗಳೇನು, ಕೊರೊನಾ ಸೋಂಕು ಬಂದಾಗ ಏನೇನು ಪರೀಕ್ಷೆ ಮಾಡಿಸಬೇಕು ಎಂಬುದರ ಬಗ್ಗೆ ಈಗಾಗಲೇ ತಜ್ಞರು ಹಲವು ಸಲಹೆಗಳನ್ನು ನೀಡಿದ್ದಾರೆ.

ಹಾಗೆಯೇ ಕೊರೊನಾ ಸೋಂಕಿನಿಂದ ಗುಣಮುಖರಾದ ಬಳಿಕ ಮಾಡಿಸಬೇಕಾದ ಪರೀಕ್ಷೆಗಳ ಕುರಿತು ಮಾಹಿತಿ ಇಲ್ಲಿ ನೀಡಲಾಗಿದೆ.

ಕೊರೊನಾ ಸೋಂಕಿತರು ಗೃಹ ಬಂಧನದಲ್ಲಿದ್ದು ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?: ಕೇಂದ್ರದ ಸಲಹೆಕೊರೊನಾ ಸೋಂಕಿತರು ಗೃಹ ಬಂಧನದಲ್ಲಿದ್ದು ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?: ಕೇಂದ್ರದ ಸಲಹೆ

ಕೊರೊನಾ ಸೋಂಕು ತೀವ್ರ ತೊಂದರೆಗಳನ್ನು ಉಂಟು ಮಾಡುತ್ತಿದೆ, ಇಂತಹ ಸಮಯದಲ್ಲಿ ಕೊರೊನಾ ಸೋಂಕಿತರು ತಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಲೇಬೇಕು, ಕೇವಲ ನೆಗೆಟಿವ್ ಬಂತು ಎಂದು ಸುಮ್ಮನಾಗಬೇಡಿ, ಕೊರೊನಾ ಸೋಂಕಿನಿಂದ ಗುಣಮುಖರಾದವರಿಗೂ ಕೆಲವು ಪರೀಕ್ಷೆಗಳು ಬೇಕೇಬೇಕು.

ಕೊರೊನಾ ನಂತರ ಪರೀಕ್ಷೆ ಏಕೆ ಮಾಡಿಸಬೇಕು?

ಕೊರೊನಾ ನಂತರ ಪರೀಕ್ಷೆ ಏಕೆ ಮಾಡಿಸಬೇಕು?

ನಮ್ಮ ದೇಹದಲ್ಲಿರುವ ರೋಗ ನಿರೋಧಕ ಶಕ್ತಿ ಕೊರೊನಾ ಸೋಂಕಿನ ವಿರುದ್ಧ ಹೋರಾಡುತ್ತಿದೆ ಎನ್ನುವುದು ಸತ್ಯ ಆದರೆ ಕೊರೊನಾ ಸೋಂಕಿನಿಂದ ಗುಣಮುಖರಾದವರು ದೀರ್ಘಕಾಲೀನ ತೊಂದರೆಗಳಿಗೆ ಒಳಗಾಗುತ್ತಿದ್ದಾರೆ. ಸೋಂಕು ದೇಹದ ಪ್ರಮುಖ ಅಂಗಗಳಿಗೆ ತೊಂದರೆ ಉಂಟು ಮಾಡಬಹುದು ಹಾಗಾಗಿ ಕೊರೊನಾ ನೆಗೆಟಿವ್ ಬಂದ ಬಳಿಕವೂ ಆಸ್ಪತ್ರೆಗೆ ಹೋಗಿ ಕೆಲವು ಪರೀಕ್ಷೆಗಳನ್ನು ಮಾಡಿಸುವುದು ಒಳಿತು.

igG ಆಂಟಿಬಾಡಿ ಪರೀಕ್ಷೆ

igG ಆಂಟಿಬಾಡಿ ಪರೀಕ್ಷೆ

ಕೊರೊನಾ ಸೋಂಕಿನ ವಿರುದ್ಧ ಹೋರಾಡಿದ ಬಳಿಕ ದೇಹವು ಸಹಾಯಕವಾದ ಪ್ರತಿಕಾಯಗಳನ್ನು ಉತ್ಪಾದಿಸುತ್ತದೆ. ಅದು ಭವಿಷ್ಯದ ಸೋಂಕನ್ನು ತಡೆಯುತ್ತದೆ. ಈ ಪರೀಕ್ಷೆ ನೀವು ಪ್ಲಾಸ್ಮಾ ದಾನಕ್ಕೆ ಅರ್ಹರಾಗಿದ್ದೀರಾ ಎಂಬುದನ್ನು ನಿರ್ಧರಿಸುತ್ತದೆ. ಜತೆಗೆ ನೀವು ಎಷ್ಟು ರೋಗ ನರೋಧಕ ಶಕ್ತಿಯನ್ನು ಹೊಂದಿದ್ದೀರಿ, ನಿಮ್ಮ ದೇಹ ಎಷ್ಟು ಸುರಕ್ಷಿವಾಗಿದೆ ಎಂಬುದನ್ನು ಅರಿತುಕೊಳ್ಳಬಹುದು.

ಸೌಮ್ಯ ಲಕ್ಷಣ, ಲಕ್ಷಣ ರಹಿತ ಕೊರೊನಾ ಸೋಂಕಿತರು ಆಯುಷ್ 64 ಬಳಸಬಹುದುಸೌಮ್ಯ ಲಕ್ಷಣ, ಲಕ್ಷಣ ರಹಿತ ಕೊರೊನಾ ಸೋಂಕಿತರು ಆಯುಷ್ 64 ಬಳಸಬಹುದು

ಪ್ರತಿಕಾಯಗಳನ್ನು ಅಭಿವೃದ್ಧಿಪಡಿಸಲು ದೇಹ ಒಂದು ವಾರವನ್ನು ತೆಗೆದುಕೊಳ್ಳುತ್ತದೆ, ಆದ್ದರಿಂದ ನೀವು ಕೊರೊನಾ ಸೋಂಕಿನಿಂದ ಚೇತರಿಸಿಕೊಳ್ಳುವವರೆಗೆ ಕಾಯಿರಿ. ಒಂದು ವೇಳೆ ನೀವು ಪ್ಲಾಸ್ಮಾ ದಾನ ಮಾಡುವುದಾದರೆ ಚೇತರಿಸಿಕೊಂಡು ಒಂದು ತಿಂಗಳೊಳಗೆ ಪರೀಕ್ಷೆಯನ್ನು ಮಾಡಿಸಿ, ಆಗ ದಾನ ಸೂಕ್ತ ಸಮಯವೂ ಆಗುತ್ತದೆ.

ಬ್ಲಡ್ ಕೌಂಟ್ ಪರೀಕ್ಷೆ ಮಾಡಿಸಿ

ಬ್ಲಡ್ ಕೌಂಟ್ ಪರೀಕ್ಷೆ ಮಾಡಿಸಿ

ಸಿಬಿಸಿ ಪರೀಕ್ಷೆ ಒಂದು ಮೂಲಭೂತ ಪರೀಕ್ಷೆಯಾಗಿದ್ದು ಇದು ವಿವಿಧ ರೀತಿಯ ರಕ್ತ ಕಣಗಳು( ಆರ್‌ಬಿಸಿ, ಡಬ್ಲ್ಯೂಬಿಸಿ)ಗಳನ್ನು ಅಳೆಯುತ್ತದೆ. ನಿಮ್ಮ ದೇಹದಲ್ಲಿ ಎಷ್ಟು ಪ್ರಮಾಣದಲ್ಲಿ ಸೋಂಕು ಆವರಿಸಿಕೊಂಡಿತ್ತು ಎಂಬುದು ತಿಳಿದುಬರುತ್ತದೆ. ಹಾಗೆಯೇ ಚೇತರಿಕೆ ಬಳಿಕ ನೀವು ತೆಗೆದುಕೊಳ್ಳಬೇಕಾದ ಹೆಚ್ಚುವರಿ ಕ್ರಮಗಳಿಗೆ ನಿಮಗೆ ಮಾರ್ಗದರ್ಶನ ನೀಡುತ್ತದೆ.

ಗ್ಲೂಕೋಸ್, ಕೊಲೆಸ್ಟ್ರಾಲ್ ಪರೀಕ್ಷೆ ಮಾಡಿಸಿ

ಗ್ಲೂಕೋಸ್, ಕೊಲೆಸ್ಟ್ರಾಲ್ ಪರೀಕ್ಷೆ ಮಾಡಿಸಿ

ವೈರಸ್‌ನಿಂದ ಉರುಯೂತ ಹಾಗೂ ರಕ್ತ ಹೆಪ್ಪುಗಟ್ಟುವಿಕೆಯ ಕಾರಣದಿಂದ ಕೆಲವು ಜನರ ರಕ್ತದಲ್ಲಿ ಗ್ಲೂಕೋಸ್ ಮಟ್ಟ ಹೆಚ್ಚುಕಡಿಮೆಯಾಗುತ್ತದೆ. ಗ್ಲೂಕೋಸ್‌ ಮಟ್ಟ ಹಾಗೂ ರಕ್ತದೊತ್ತಡವನ್ನು ಪರೀಕ್ಷೆ ಮಾಡಿಸಿಕೊಳ್ಳಲೇಬೇಕು, ಇದು ಬೇರೆ ಬೇರೆ ರೋಗಗಳಿಗೆ ಕಾರಣವಾಗಬಹುದು.

ನಿಮ್ಮ ಧ್ವನಿ ಬದಲಾವಣೆಯೂ ಕೊರೊನಾ ಸೋಂಕಿನ ಒಂದು ಲಕ್ಷಣನಿಮ್ಮ ಧ್ವನಿ ಬದಲಾವಣೆಯೂ ಕೊರೊನಾ ಸೋಂಕಿನ ಒಂದು ಲಕ್ಷಣ

ಒಂದೊಮ್ಮೆ ಟೈಪ್ 1, ಟೈಪ್‌ 2 ನಂತಹ ಡಯಾಬಿಟಿಸ್ ಅಥವಾ ಬೊಜ್ಜುತನವನ್ನು ನೀವು ಮೊದಲೇ ಹೊಂದಿದ್ದರೆ, ಹೃದಯದ ತೊಂದರೆ ಉಂಟಾಗಬಹುದು ಇಂತಹವರು ಕೊರೊನಾ ಸೋಂಕಿನಿಂದ ಚೇತರಿಸಿಕೊಂಡ ಬಳಿಕ ವೈದ್ಯರ ಸಲಹೆ ಪಡೆಯಲೇಬೇಕಾಗಿದೆ.

ಹೃದಯ ಪರೀಕ್ಷೆ ಮಾಡಿಸಿ

ಹೃದಯ ಪರೀಕ್ಷೆ ಮಾಡಿಸಿ

ಕೊರೊನಾ ಸೋಂಕು ಇಡೀ ದೇಹವೆಲ್ಲಾ ಆವರಿಸಿಕೊಂಡ ಬಳಿಕ ಹೃದಯಕ್ಕೂ ತೊಂದರೆ ಮಾಡುತ್ತವೆ, ಎದೆನೋವು, ಆಯಾಸ ರೀತಿಯ ತೊಂದರೆ ಕಾಣಿಸಿಕೊಳ್ಳಬಹುದು.

ರೋಗದ ತೀವ್ರತೆಯನ್ನು ಕಂಡುಹಿಡಿಯುವಲ್ಲಿ ಎಚ್‌ಆರ್‌ಸಿಟಿ ಸ್ಕ್ಯಾನ್ ಸಲಹೆ ನೀಡಲಾಗುತ್ತದೆ. ಕೊರೊನಾ ಸೋಂಕಿನಿಂದ ಉಂಟಾಗಿರುವ ಶ್ವಾಸಕೋಶದ ತೊಂದರೆಗಳ ಬಗ್ಗೆ ಮಾಹಿತಿ ನೀಡುತ್ತದೆ.

ಕೊರೊನಾ ಸೋಂಕಿನ ಬಳಿಕ ಹೆಚ್ಚಿನ ಮಂದಿಯ ಶ್ವಾಸಕೋಶಗಳು ಬಹುಬೇಗ ಚೇತರಿಸಿಕೊಳ್ಳುತ್ತದೆ, ಇನ್ನು ಕೆಲವರಿಗೆ ಉಸಿರಾಟದ ತೊಂದರೆ ಮುಂದುವರೆಯುತ್ತದೆ. ಕೊರೊನಾ ಸೋಂಕು ನೆಗೆಟಿವ್ ಬಂದರೂ ಅದರಿಂದಾಗುವ ತೊಂದರೆಗಳು ಇನ್ನೂ ಕಡಿಮೆಯಾಗಿರುವುದಿಲ್ಲ. ಹೀಗಾಗಿ ಈ ಪರೀಕ್ಷೆಗಳೆಲ್ಲವನ್ನು ಮಾಡಿಸಲೇಬೇಕು. ಸೋಂಕಿನಿಂದ ಗುಣಮುಖರಾದ ಬಳಿಕ ಕನಿಷ್ಠ 3-6 ತಿಂಗಳು ತುಂಬಾ ಜಾಗ್ರತಾಗಿರಬೇಕು.

ವಿಟಮಿನ್ ಡಿ ಪರೀಕ್ಷೆ ಮಾಡಿಬೇಕು

ವಿಟಮಿನ್ ಡಿ ಪರೀಕ್ಷೆ ಮಾಡಿಬೇಕು

ವಿಟಮಿನ್ ಡಿ ಅಂಶವು ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಗೆ ನೆರವಾಗಬಲ್ಲದು, ಕೊರೊನಾ ಸೋಂಕಿನಿಂದ ಗುಣಮುಖರಾಗದ ವ್ಯಕ್ತಿಗಳಿಗೆ ವಿಟಮಿನ್ ಡಿ ಮಾತ್ರಗಳನ್ನು ನೀಡಲಾಗುತ್ತದೆ. ಹೀಗಾಗಿ ವಿಟಮಿನ್ ಡಿ ಪರೀಕ್ಷೆಯನ್ನು ಮಾಡಿಸಿ.

Recommended Video

#Covid19Updates, Bengaluru: 21,199 ಮಂದಿಗೆ ಕೊರೋನಾ ಸೋಂಕು.. 64 ಮಂದಿ ಸಾವು | Oneindia Kannada
ನರ ದೌರ್ಬಲ್ಯವಿದ್ದರೆ ತಿಳಿಯುತ್ತದೆ

ನರ ದೌರ್ಬಲ್ಯವಿದ್ದರೆ ತಿಳಿಯುತ್ತದೆ

ಸಾಕಷ್ಟು ಮಂದಿ ಕೊರೊನಾ ಸೋಂಕಿತರು ನರ ದೌರ್ಬಲ್ಯ ಅಥವಾ ಮಾನಸಿಕ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಕೊರೊನಾ ಸೋಂಕಿನಿಂದ ಗುಣಮುಖರಾದ ಒಂದು ತಿಂಗಳ ಬಳಿಕವೂ ಸೋಂಕಿತರಲ್ಲಿ ಕೆಲವು ಲಕ್ಷಣಗಳು ಹಾಗೆಯೇ ಇರುತ್ತದೆ.ಹೀಗಾಗಿ ಕೊರೊನಾ ಸೋಂಕಿನಿಂದ ಗುಣಮುಖರಾದ ಬಳಿಕ ಮೆದುಳು, ನರ ಪರೀಕ್ಷೆ ಮಾಡಿಸಿ. ಆತಂಕ, ಮರೆವು, ತಲೆ ತಿರುಗುವಿಕೆ, ಆಯಾಸ ಇವೆಲ್ಲಾ ಲಕ್ಷಣಗಳಿದ್ದರೆ ತಪ್ಪದೇ ಪರೀಕ್ಷೆ ಮಾಡಿಸಿ.

English summary
If you have recently recovered from coronavirus, here are the list of tests and scans might be worth taking. Take a look.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X