ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2017ರಲ್ಲಿ ಗೋಚರಿಸುವ ಸೂರ್ಯ ಮತ್ತು ಚಂದ್ರ ಗ್ರಹಣಗಳು

2017ರಲ್ಲಿ ಎರಡು ಸೂರ್ಯಗ್ರಹಣ ಮತ್ತು ಎರಡು ಚಂದ್ರಗ್ರಹಣ ಸಂಭವಿಸಲಿದೆ.

|
Google Oneindia Kannada News

ನವದೆಹಲಿ, ಜ 2: 2017ರ ವರ್ಷದಲ್ಲಿ ನಾಲ್ಕು ಗ್ರಹಣಗಳಿಗೆ ವಿಶ್ವ ಸಾಕ್ಷಿಯಾಗಲಿದೆ. ಇದರಲ್ಲಿ ಎರಡು ಗ್ರಹಣಗಳು ಮಾತ್ರ ಭಾಗಶಃ ಭಾರತದಲ್ಲಿ ಗೋಚರಿಸಲಿವೆ.

ಕಳೆದ ವರ್ಷ ಬರೋಬ್ಬರಿ ಐದು ಗ್ರಹಣಗಳು ಸಂಭವಿಸಿದ್ದುವು, ಅದರಲ್ಲಿ ಭಾರತದಲ್ಲಿ ಗೋಚರಿಸಿದ್ದದ್ದು ಎರಡೇ ಗ್ರಹಣಗಳು.

ಗ್ರಹಣ ಎನ್ನುವುದು ಸೌರಮಂಡಲದಲ್ಲಿ ಭೂಮಿ, ಸೂರ್ಯ ಮತ್ತು ಚಂದ್ರರನ್ನೊಳಗೊಂಡ ಖಗೋಳ ಪ್ರಕ್ರಿಯೆವಾಗಿದ್ದು, ಅಮಾವಾಸ್ಯೆಯ ದಿನ ಸೂರ್ಯ ಗ್ರಹಣ, ಹುಣ್ಣಿಮೆಯ ದಿನದಂದು ಚಂದ್ರಗ್ರಹಣ ಸಂಭವಿಸುತ್ತದೆ.[ಆಗಸದ ರಂಗೇರಿಸಿದ ಸೂರ್ಯಗ್ರಹಣದ ಸುಂದರ ಛಾಯೆಗಳು]

2017ರಲ್ಲಿ ಎರಡು ಸೂರ್ಯ ಮತ್ತು ಎರಡು ಚಂದ್ರಗ್ರಹಣಗಳು ಸಂಭವಿಸಲಿವೆ. ಖಗೋಳ ಶಾಸ್ತ್ರಜ್ಞರಿಗೆ ಹೊಸ ಆವಿಷ್ಕಾರ ನಡೆಸಲು ಇವು ಸೂಕ್ತ ದಿನವಾಗಿದ್ದರೆ, ಜ್ಯೋತಿಷಿಗಳಿಗೆ 'ಜ್ಯೋತಿಷ್ಯ ಪಾಂಡಿತ್ಯ' ಪ್ರದರ್ಶಿಸಲೂ ಈ ದಿನಗಳೂ ತಕ್ಕ ವೇದಿಕೆಯಾಗಲಿದೆ.[ಗ್ರಹಣ ಕಾಲದಲ್ಲಿ ಏನು ಮಾಡಬೇಕು, ಏನು ಮಾಡಬಾರದು]

2017ರಲ್ಲಿ ಗೋಚರಿಸುವ ಸೂರ್ಯ ಮತ್ತು ಚಂದ್ರ ಗ್ರಹಣಗಳ ದಿನಾಂಕ, ಮುಂದೆ ಓದಿ..

ಚಂದ್ರಗ್ರಹಣ

ಚಂದ್ರಗ್ರಹಣ

ಫೆಬ್ರವರಿ 10,11ರಂದು ಆಯಾಯ ಖಂಡಗಳ ಸೂರ್ಯೋದಯದ ಆಧಾರದ ಮೇಲೆ ಚಂದ್ರಗ್ರಹಣ ಸಂಭವಿಸಲಿದೆ. ಫೆ 11ರಂದು ಈ ಗ್ರಹಣ ಭಾರತದಲ್ಲಿ ಭಾಗಶಃ ಗೋಚರಿಸಲಿದೆ. ಯುರೋಪ್, ಆಫ್ರಿಕಾ, ಉತ್ತರ ಅಮೆರಿಕಾ, ಪೆಸಿಫಿಕ್, ಅಂಟ್ಲಾಂಟಿಕ್, ಹಿಂದೂ ಮಹಾ ಸಾಗರ, ಅಂಟಾರ್ಕಟಿಕ್ ಭಾಗದಲ್ಲಿ ಈ ಗ್ರಹಣ ಗೋಚರಿಸಲಿದೆ. 11.02.17 ರಂದು ಗ್ರಹಣದ ಸ್ಪರ್ಶ ಕಾಲ - 04.04, ಮೋಕ್ಷ ಕಾಲ - 08.23.

ಸೂರ್ಯಗ್ರಹಣ

ಸೂರ್ಯಗ್ರಹಣ

ಫೆಬ್ರವರಿ 26ರಂದು ಸೂರ್ಯಗ್ರಹಣ ಸಂಭವಿಸಲಿದೆ. ಇದು ವಲಯಾಕಾರದ ಗ್ರಹಣವಾಗಿದ್ದು, ದಕ್ಷಿಣ ಮತ್ತು ಪಶ್ಚಿಮ ಏಷ್ಯಾ, ದಕ್ಷಿಣ ಅಮೆರಿಕಾ, ಪೆಸಿಫಿಕ್, ಅಂಟ್ಲಾಂಟಿಕ್, ಹಿಂದೂ ಮಹಾ ಸಾಗರದ ಭಾಗದಲ್ಲಿ ಈ ಗ್ರಹಣ ಗೋಚರಿಸಲಿದೆ. ಈ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ.

 ಆಗಸ್ಟ್ 7,8

ಆಗಸ್ಟ್ 7,8

ಆಗಸ್ಟ್ 7,8ರಂದು ಮತ್ತೆ ಚಂದ್ರಗ್ರಹಣ ಸಂಭವಿಸಲಿದೆ. ಈ ಗ್ರಹಣ ಭಾರತದಲ್ಲಿ ಭಾಗಶಃ ಗೋಚರಿಸಲಿದೆ. ಯುರೋಪ್, ಏಷ್ಯಾ, ಆಸ್ಟ್ರೇಲಿಯಾ, ಪೂರ್ವ ಅಮೆರಿಕಾ, ಪೆಸಿಫಿಕ್, ಅಂಟ್ಲಾಂಟಿಕ್, ಹಿಂದೂ ಮಹಾ ಸಾಗರ, ಅಂಟಾರ್ಕಟಿಕ್ ಭಾಗದಲ್ಲಿ ಈ ಗ್ರಹಣ ಗೋಚರಿಸಲಿದೆ. 11.02.17 ರಂದು ಗ್ರಹಣದ ಸ್ಪರ್ಶ ಕಾಲ - 21.20, ಮೋಕ್ಷ ಕಾಲ (08.08.17) - 02.20.

 ಖಗ್ರಾಸ ಸೂರ್ಯಗ್ರಹಣ

ಖಗ್ರಾಸ ಸೂರ್ಯಗ್ರಹಣ

ಆಗಸ್ಟ್ 21ರಂದು ಖಗ್ರಾಸ ಸೂರ್ಯಗ್ರಹಣ ಸಂಭವಿಸಲಿದೆ. ಆದರೆ ಇದರ ಪ್ರಭಾವ ಭಾರತದಲ್ಲಿ ಅಷ್ಟಾಗಿ ಇರುವುದಿಲ್ಲ. ಯುರೋಪ್, ಉತ್ತರ ಏಷ್ಯಾ, ಉತ್ತರ ಮತ್ತು ಪಶ್ಚಿಮ ಆಫ್ರಿಕಾ, ಉತ್ತರ ಅಮೆರಿಕಾ, ದಕ್ಷಿಣ ಅಮೆರಿಕಾದ ಕೆಲವು ಭಾಗಗಳು ಮತ್ತು ಪೆಸಿಫಿಕ್, ಅಂಟ್ಲಾಂಟಿಕ್ ಮಹಾ ಸಾಗರದಲ್ಲಿ ಸೂರ್ಯಗ್ರಹಣ ಸಂಭವಿಸಲಿದೆ. ಈ ಗ್ರಹಣ ಕೂಡಾ ಭಾರತದಲ್ಲಿ ಗೋಚರಿಸುವುದಿಲ್ಲ.

 ಸಮುದ್ರ ಸ್ನಾನ, ಪವಿತ್ರ ಸ್ನಾನ

ಸಮುದ್ರ ಸ್ನಾನ, ಪವಿತ್ರ ಸ್ನಾನ

ಇನ್ನು ಗ್ರಹಣದ ವೇಳೆ ಸಮುದ್ರ ಸ್ನಾನ, ಪವಿತ್ರ ಸ್ನಾನ ಒಂದೆಡೆಯಾದರೆ, ವಾಮಾಚಾರ ಮತ್ತು ಕಂದಾಚಾರವೂ ಈ ಗ್ರಹಣದ ಅವಧಿಯಲ್ಲಿ ನಡೆಯುವುದು ಹೆಚ್ಚು.

English summary
List of Solar and Lunar Eclipses during the year 2017. World will witness four eclipses, and in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X