• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಲಬುರ್ಗಿ ಹತ್ಯೆ ಖಂಡಿಸಿ ಅಕಾಡೆಮಿ ಪ್ರಶಸ್ತಿ ಹಿಂದಿರುಗಿಸಿದವರ ಪಟ್ಟಿ

|

ನವದೆಹಲಿ, ಅಕ್ಟೋಬರ್, 12: ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಾಪಾಡಲು ಸರ್ಕಾರಗಳು ವಿಫಲವಾಗಿವೆ ಎಂದು ಆರೋಪಿಸಿ 14ಕ್ಕೂ ಹೆಚ್ಚು ಸಾಹಿತಿಗಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಹಿಂದಿರುಗಿಸಿದ್ದಾರೆ. ಈ ಸಂಖ್ಯೆ ಇನ್ನು ಹೆಚ್ಚಳವಾಗುವ ಸಾಧ್ಯತೆ ಇದೆ.

ಹಿಂದಿಯ ಸಾಹಿತಿ ಉದಯ್ ಪ್ರಕಾಶ್ ಪ್ರಶಸ್ತಿಯನ್ನು ಮೊದಲ ಬಾರಿಗೆ ಹಿಂದಕ್ಕೆ ನೀಡುವ ನಿರ್ಧಾರ ಮಾಡಿದರು. ಅಲ್ಲಿಂದ ಆರಂಭವಾದ ಪ್ರಶಸ್ತಿ ವಾಪಸ್ ಪರ್ವ ಮುಂದುವರಿದೇ ಇದೆ. ಕೆಲವರು ಸಾಹಿತ್ಯ ಅಕಾಡೆಮಿಯಲ್ಲಿ ಹೊಂದಿದ್ದ ಸ್ಥಾನಕ್ಕೆ ರಾಜೀನಾಮೆಯನ್ನು ನೀಡುತ್ತಿದ್ದಾರೆ. ಕನ್ನಡದ ಸಾಹಿತಿ ಅರವಿಂದ್ ಮಾಲಗತ್ತಿ ಸಹ ಅಕಾಡೆಮಿ ಸ್ಥಾನದಿಂದ ಹೊರಕ್ಕೆ ಬಂದಿದ್ದಾರೆ.[ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಿಂತಿರುಗಿಸಲು ಕುಂವೀ ನಿರ್ಧಾರ]

ಸಂಶೋಧಕ ಎಂ ಎಂ ಕಲಬುರ್ಗಿ ಹತ್ಯೆ ನಂತರ ಉದಯ್ ಪ್ರಕಾಶ್ ಪ್ರಶಸ್ತಿ ಹಿಂದಕ್ಕೆ ನೀಡಿದರು. ಉತ್ತರ ಪ್ರದೇಶದಲ್ಲಿ ನಡೆದ ಹತ್ಯೆ, ದಲಿತರ ದೇವಾಲಯ ಪ್ರವೇಶ ಪ್ರಕರಣ ಮತ್ತು ಕಲಬುರ್ಗಿ ಹತ್ಯೆ ಖಂಡಿಸಿ ಸಾಹಿತಿಗಳು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ವಾಪಸ್ ಮಾಡುತ್ತಿದ್ದಾರೆ. ಕನ್ನಡದ ಖ್ಯಾತ ಸಾಹಿತಿ ಕುಂ ವೀರಭದ್ರಪ್ಪ ಸಹ ಅಕ್ಟೋಬರ್ 15 ರಂದು ಪ್ರಶಸ್ತಿ ಹಿಂದಕ್ಕೆ ನೀಡುತ್ತೇನೆ ಎಂದು ತಿಳಿಸಿದ್ದಾರೆ.[ಕಲಬುರ್ಗಿ ಹತ್ಯೆಗೆ ಖಂಡನೆ, ಸಾಹಿತಿಗಳಿಂದ ಪ್ರಶಸ್ತಿ ವಾಪಸ್]

ಕಲಬುರ್ಗಿ ಹತ್ಯೆ ಖಂಡಿಸಿ ಪ್ರಶಸ್ತಿ ಹಿಂದಕ್ಕೆ ನೀಡಿದವರ ಪಟ್ಟಿ

1 ಉದಯ ಪ್ರಕಾಶ್-ಹಿಂದಿ-ಮೋಹನ್ ದಾಸ್ (ಸಣ್ಣ ಕತೆಗಳು) 2010

2 ಮಂಗಳೇಶ್ ದರ್ಬಲ್-ಹಿಂದಿ-ಹಮ್ ಜೋ ದೇಖತೆ ಹೈನ್(ಕವನ ಸಂಕಲನ) 2000

3 ರಾಜೇಶ್ ಜೋಷಿ-ಹಿಂದಿ-ದೋ ಪಂಕ್ತಿಯೋಖೇ ಬೀಚ್- (ಕವನ ಸಂಕಲನ) 2002

4. ಗಣೇಶ್ ದೇವ್ಯಾ- ಸಾಹಿತ್ಯ ವಿಮರ್ಶಕ

5 ಎನ್ ಶಿವದಾಸ್ -ಕೊಂಕಣಿ ಸಾಹಿತಿ[ಕಲಬುರ್ಗಿ ಹತ್ಯೆ ಸುಳಿವು ಕೊಟ್ಟವರಿಗೆ 5 ಲಕ್ಷ ಬಹುಮಾನ]

6 ಕುಂ ವೀರಭದ್ರಪ್ಪ-ಕನ್ನಡ-ಅರಮನೆ(ಕಾದಂಬರಿ)-2007

7 ಗುರ್ಬಚನ್ ಸಿಂಗ್ ಭುಲ್ಲಾರ್

8 ವರಯಮ್ ಸಿಂಗ್ ಸಂಧು-ಪಂಜಾಬಿ-(ಸಣ್ಣ ಕತೆಗಳು)2000

9 ಅಜ್ಮೀರ್ ಸಿಂಗ್ ಅವುಲಾಖ್-ಪಂಜಾಬಿ(ನಾಟಕ)-2006

10 ಅತಮ್ ಜೀತ್ ಸಿಂಗ್

11 ನಯನತಾರಾ ಸೆಹಗಲ್-ಇಂಗ್ಲಿಷ್-ರಿಚ್ ಲೈಕ್ ಅಸ್-1985

12 ಸಾರಾ ಜೋಸೆಫ್-ಮಲಯಾಳಂ-ಅಲಾಹಾಯುಧೆ ಪೆನ್ ಮಕ್ಕಲ್(ಕಾದಂಬರಿ)-2003

13 ಅಶೋಕ್ ವಾಜಪೇಯಿ-ಹಿಂದಿ-ಕಹೀನ್ ನಹೀನ್ ವಹೀನ್(ಕವನ ಸಂಕಲನ)-1994

14 ಅಮನ್ ಸೆಥಿ-ಇಂಗ್ಲಿಷ್-ಆಫ್ಟರ್ ಅಮ್ನೇಶಿಯಾ-1992

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Nine more writers returned their Sahitya Akademi awards on Sunday, citing stifling of freedom of speech under the present government. Now the tally of those who have lodged their protest at the Akademi is 15, not including Kannada author Aravind Malagatti, who resigned from the Akademi's general council. Here is the list ofaward return writers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more