ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಕ್ಷಿಣ ಭಾರತದ ರಾಜ್ಯಗಳಲ್ಲಿ ಹೇಗಿದೆ ಕೊರೊನಾ ಲಸಿಕೆ ಸಂಗ್ರಹ ವ್ಯವಸ್ಥೆ?

|
Google Oneindia Kannada News

ನವದೆಹಲಿ, ಜನವರಿ.15: ಕೊರೊನಾವೈರಸ್ ಲಸಿಕೆ ವಿತರಣೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶನಿವಾರ ಬೆಳಗ್ಗೆ 10.30ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ. ಭಾರತದ ಎರಡು ಕಂಪನಿಯ ಲಸಿಕೆಗಳು ದೇಶದ್ಯಂತ ತಲುಪಿವೆ.

ಭಾರತದಲ್ಲಿ ಕೊವಿಡ್ ಲಸಿಕೆ ವಿತರಿಸಲು 41 ಕೇಂದ್ರಗಳನ್ನು ಅಂತಿಮಗೊಳಿಸಲಾಗಿದೆ. ದೇಶದ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 28,932 ಕೋಲ್ಡ್ ಚೈನ್ ಕೇಂದ್ರಗಳಿವೆ. ಒಟ್ಟು 310 ವಾಕ್-ಇನ್ ಕೂಲರ್‌ಗಳು ಮತ್ತು ಫ್ರೀಜರ್‌ಗಳು ಲಭ್ಯವಿವೆ. 44,226 ಐಸ್-ಲೇನ್ಡ್ ರೆಫ್ರಿಜರೇಟರ್‌ಗಳು, 40,792 ಡೀಪ್ ಫ್ರೀಜರ್‌ಗಳು ಮತ್ತು 294 ಸೋಲಾರ್ ಘಟಕಗಳು ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಭ್ಯವಿದೆ.

ಕೊರೊನಾ ಲಸಿಕೆ ಪಡೆದವರಲ್ಲಿ ಕಾಣಿಸಿಕೊಳ್ಳುತ್ತಾ ಅಡ್ಡಪರಿಣಾಮ? ಕೊರೊನಾ ಲಸಿಕೆ ಪಡೆದವರಲ್ಲಿ ಕಾಣಿಸಿಕೊಳ್ಳುತ್ತಾ ಅಡ್ಡಪರಿಣಾಮ?

ಪೂರ್ವ ಪ್ರದೇಶದಲ್ಲಿ ಕೋಲ್ಕತಾ ಉಪ ಕೇಂದ್ರವಾಗಲಿದ್ದು, ಈಶಾನ್ಯಕ್ಕೆ ನೋಡಲ್ ಪಾಯಿಂಟ್ ಆಗಿರುತ್ತದೆ. ಆದರೆ, ಪುಣೆ ಪ್ರಮುಖ ಕೇಂದ್ರವಾಗಿದ್ದು, ಚೆನ್ನೈ ಮತ್ತು ಹೈದರಾಬಾದ್ ದಕ್ಷಿಣ ಭಾರತದ ಉಪ ಕೇಂದ್ರವಾಗಿರಲಿದೆ. ದಕ್ಷಿಣ ಭಾರತದಲ್ಲಿ ಕೊರೊನಾ ಲಸಿಕೆ ಸಂಗ್ರಹಕ್ಕೆ ಕೇಂದ್ರಗಳನ್ನು ಯಾವ ರೀತಿಯಲ್ಲಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎನ್ನುವುದರ ಕುರಿತು ಒಂದು ವರದಿ ಇಲ್ಲಿದೆ.

ಕರ್ನಾಟಕದಲ್ಲಿ ಎರಡು ವಿಭಾಗಳಿಂದ ಲಸಿಕೆ ವಿಂಗಡಣೆ

ಕರ್ನಾಟಕದಲ್ಲಿ ಎರಡು ವಿಭಾಗಳಿಂದ ಲಸಿಕೆ ವಿಂಗಡಣೆ

ಕರ್ನಾಟಕದಲ್ಲಿ ಬೆಂಗಳೂರು ಮತ್ತು ಬೆಳಗಾವಿಯಲ್ಲಿ ಎರಡು ಪ್ರಮುಖ ಲಸಿಕೆ ಸಂಗ್ರಹ ಕೇಂದ್ರಗಳಿವೆ. ರಾಜ್ಯದ ಉತ್ತರದ ಜಿಲ್ಲೆಗಳಿಗೆ ಬೆಳಗಾವಿ ಕೇಂದ್ರದಿಂದ ರಸ್ತೆ ಮಾರ್ಗವಾಗಿ ಜಿಲ್ಲೆಯಲ್ಲಿರುವ ಲಸಿಕೆ ಸಂಗ್ರಹ ಕೇಂದ್ರಕ್ಕೆ ಲಸಿಕೆಯನ್ನು ರವಾನೆ ಮಾಡಲಾಗುತ್ತದೆ. ಇನ್ನು, ದಕ್ಷಿಣದ ಜಿಲ್ಲೆಗಳಿಗೆ ಬೆಂಗಳೂರು ಕೇಂದ್ರದಿಂದ ಲಸಿಕೆಯನ್ನು ರವಾನಿಸುವುದಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

ಮಹಾರಾಷ್ಟ್ರದಲ್ಲಿ ಕೊರೊನಾ ಲಸಿಕೆ ಸಂಗ್ರಹಣಾ ವ್ಯವಸ್ಥೆ ಹೇಗಿದೆ?

ಮಹಾರಾಷ್ಟ್ರದಲ್ಲಿ ಕೊರೊನಾ ಲಸಿಕೆ ಸಂಗ್ರಹಣಾ ವ್ಯವಸ್ಥೆ ಹೇಗಿದೆ?

ಮುಂಬೈಯಲ್ಲಿ, ಪೋಲಿಯೊ ಲಸಿಕೆಗಳ ಪ್ರಮುಖ ಶೇಖರಣಾ ಕೇಂದ್ರವೆಂದರೆ ಪ್ಯಾರೆಲ್ ಕಚೇರಿ, ಅಲ್ಲಿ ಕಾರ್ಯನಿರ್ವಾಹಕ ಆರೋಗ್ಯ ಕಚೇರಿ ಪ್ರಧಾನ ಕಚೇರಿಯನ್ನು ಹೊಂದಿದೆ. ಕಾಂಜುರ್ಮಾರ್ಗ್ ಸೌಲಭ್ಯವು ಕೊವಿಡ್ -19 ಲಸಿಕೆಗಳಿಗೆ ವಿಶೇಷ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ಪುಣೆ ವಿಭಾಗಕ್ಕೆ ಪುಣೆ ಕೇಂದ್ರಬಿಂದುವಾಗಲಿದ್ದು, ಇದರಲ್ಲಿ ಸೋಲಾಪುರ, ಸತಾರಾ, ಕೊಲ್ಹಾಪುರ ಮತ್ತು ಅಹ್ಮದ್‌ನಗರ ಜಿಲ್ಲೆಗಳಿವೆ.

ತಮಿಳುನಾಡಲ್ಲಿ ಕೊರೊನಾ ಲಸಿಕೆ ವಿಂಗಡಣೆ ವ್ಯವಸ್ಥೆ

ತಮಿಳುನಾಡಲ್ಲಿ ಕೊರೊನಾ ಲಸಿಕೆ ವಿಂಗಡಣೆ ವ್ಯವಸ್ಥೆ

ಪುಣೆಯಿಂದ ವಿಮಾನಗಳಲ್ಲಿ ಲಸಿಕೆಯನ್ನು ತರಲಾಗುತ್ತದೆ. ನಂತರ, ಲಸಿಕೆಯನ್ನು ಅಧಿಕೃತ ಕೇಂದ್ರದಲ್ಲಿ ಇರಿಸಲಾಗುತ್ತದೆ. ಅಲ್ಲಿಂದ ಹವಾನಿಯಂತ್ರಿತ ಸೌಲಭ್ಯವುಳ್ಳ ವಿಶೇಷ ವಾಹನಗಳಲ್ಲಿ ರಾಜ್ಯಾದ ಪ್ರಾದೇಶಿಕ ಗೋದಾಮುಗಳಿಗೆ ಕಳುಹಿಸಲಾಗುತ್ತದೆ. ಲಸಿಕೆಗಳ ಸಾಗಾಟಕ್ಕೆ ಈಗಾಗಲೇ ಸುಮಾರು 51 ಮೊಬೈಲ್ 'ವಾಕಿಂಗ್ ಕೂಲರ್'ಗಳ ವ್ಯವಸ್ಥೆ ಕಲ್ಪಿಸಲಾಗಿದೆ.

ಆಂಧ್ರ, ತೆಲಂಗಾಣದಲ್ಲಿ ಕೊರೊನಾ ಲಸಿಕೆ ಸಂಗ್ರಹ ಕೇಂದ್ರಗಳು

ಆಂಧ್ರ, ತೆಲಂಗಾಣದಲ್ಲಿ ಕೊರೊನಾ ಲಸಿಕೆ ಸಂಗ್ರಹ ಕೇಂದ್ರಗಳು

ಗನ್ನಾವರಂ ಪ್ರದೇಶವನ್ನು ರಾಜ್ಯದ ಪ್ರಮುಖ ಕೊರೊನಾ ಲಸಿಕೆ ಕೇಂದ್ರವನ್ನಾಗಿ ಗುರುತಿಸಲಾಗಿದೆ. ಈ ಪ್ರಮುಖ ಕೇಂದ್ರದಿಂದಲೇ ಪ್ರಾದೇಶಿಕ ಲಸಿಕಾ ಸಂಗ್ರಹ ಕೇಂದ್ರಗಳಿಗೆ ಲಸಿಕೆಯನ್ನು ರವಾನಿಸಲಾಗಿತ್ತದೆ. ರಾಜ್ಯದಲ್ಲಿ ಒಟ್ಟು ನಾಲ್ಕು ಪ್ರಾದೇಶಿಕ ಲಸಿಕೆ ಸಂಗ್ರಹ ಕೇಂದ್ರಗಳಿವೆ. ಕರ್ನೂಲ್, ಕಡಪ, ಗುಂಟೂರ್, ವಿಜಾಗ್ ಪ್ರದೇಶದಿಂದ ರಾಜ್ಯದ 13 ಜಿಲ್ಲೆಗಳಿಗೆ ಕೊವಿಡ್-19 ಲಸಿಕೆಯನ್ನು ರವಾನಿಸಲಾಗಿತ್ತದೆ.

ಗೋವಾದಲ್ಲಿರುವ ಕೊರೊನಾ ಲಸಿಕೆ ಕೇಂದ್ರದ ವ್ಯವಸ್ಥೆ

ಗೋವಾದಲ್ಲಿರುವ ಕೊರೊನಾ ಲಸಿಕೆ ಕೇಂದ್ರದ ವ್ಯವಸ್ಥೆ

ರಾಜ್ಯ ಸರ್ಕಾರವು ಐದು ಸರ್ಕಾರಿ ಆಸ್ಪತ್ರೆಗಳನ್ನು ಮತ್ತು ಮೂರು ಖಾಸಗಿ ಆಸ್ಪತ್ರೆಗಳಲ್ಲಿನ ಸೌಲಭ್ಯವನ್ನು ಗುರುತಿಸಿದೆ, ಅಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಕೊವಿಡ್-19 ಲಸಿಕೆ ನೀಡಲಾಗುತ್ತದೆ.

ಪಟ್ಟಿ ಮಾಡಲಾದ ಸರ್ಕಾರಿ ಆಸ್ಪತ್ರೆಗಳು - "ಗೋವಾ ವೈದ್ಯಕೀಯ ಕಾಲೇಜು (ಪಣಜಿ ಬಳಿ), ಹಾಸ್ಪಿಸಿಯೋ ಆಸ್ಪತ್ರೆ (ಮಾರ್ಗೊವಾ), ಅಸಿಲೊ ಆಸ್ಪತ್ರೆ (ಮಾಪುಸಾ), ಚಿಕಾಲಿಮ್ ಆರೋಗ್ಯ ಕೇಂದ್ರ (ವಾಸ್ಕೋ), ಉಪ ಜಿಲ್ಲಾ ಆಸ್ಪತ್ರೆ (ಪಾಂಡಾ). ಈ ಕಾರ್ಯಕ್ಕಾಗಿ ಗುರುತಿಸಲಾದ ಖಾಸಗಿ ಆಸ್ಪತ್ರೆಗಳ ಪಟ್ಟಿ ಹೀಗಿದೆ. ಮಣಿಪಾಲ್ ಆಸ್ಪತ್ರೆ (ಪಣಜಿ ಬಳಿ), ಹೆಲ್ತ್‌ವೇ ಆಸ್ಪತ್ರೆ (ಹಳೆಯ ಗೋವಾ) ಮತ್ತು ವಿಕ್ಟರ್ ಆಸ್ಪತ್ರೆ (ಮಾರ್ಗೊ).

English summary
List of Major Covid-19 Vaccine Centers in South Indian States Including Details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X