• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉತ್ತರ ಭಾರತದ ರಾಜ್ಯಗಳಲ್ಲಿ ಕೊವಿಡ್-19 ಲಸಿಕೆ ಕೇಂದ್ರಗಳ ಮಾಹಿತಿ

|

ನವದೆಹಲಿ, ಜನವರಿ.15: ಇಡೀ ದೇಶವೇ ಕೊವಿಡ್-19 ಲಸಿಕೆ ವಿತರಣೆ ಕ್ಷಣವನ್ನು ಎದುರು ನೋಡುತ್ತಿದೆ. ಜನವರಿ.16ರ ಶನಿವಾರ ಬೆಳಗ್ಗೆ 10.30 ಗಂಟೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿಡಿಯೋ ಕಾನ್ಫರೆನ್ಸ್ ಮೂಲಕ ಲಸಿಕೆ ವಿತರಣೆಗೆ ಚಾಲನೆ ನೀಡಲಿದ್ದಾರೆ.

ದೇಶದ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 28,932 ಕೋಲ್ಡ್ ಚೈನ್ ಕೇಂದ್ರಗಳಿವೆ. ಒಟ್ಟು 310 ವಾಕ್-ಇನ್ ಕೂಲರ್‌ಗಳು ಮತ್ತು ಫ್ರೀಜರ್‌ಗಳು ಲಭ್ಯವಿವೆ. 44,226 ಐಸ್-ಲೇನ್ಡ್ ರೆಫ್ರಿಜರೇಟರ್‌ಗಳು, 40,792 ಡೀಪ್ ಫ್ರೀಜರ್‌ಗಳು ಮತ್ತು 294 ಸೋಲಾರ್ ಘಟಕಗಳು ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಭ್ಯವಿದೆ.

ಕೊರೊನಾ ಲಸಿಕೆ ಪಡೆದವರಲ್ಲಿ ಕಾಣಿಸಿಕೊಳ್ಳುತ್ತಾ ಅಡ್ಡಪರಿಣಾಮ?

ಭಾರತದಲ್ಲಿ ಕೊರೊನಾವೈರಸ್ ಲಸಿಕೆ ವಿತರಿಸಲು 41 ಕೇಂದ್ರಗಳನ್ನು ಈಗಾಗಲೇ ಅಂತಿಮಗೊಳಿಸಲಾಗಿದೆ. ದೆಹಲಿ ಮತ್ತು ಕರ್ನಾಲ್ ಅನ್ನು ಉತ್ತರ ಭಾರತದಲ್ಲಿ ಕೊರೊನಾವೈರಸ್ ಲಸಿಕೆಗಳನ್ನು ತಲುಪಿಸಲು ಉಪ ಕೇಂದ್ರವನ್ನಾಗಿ ಮಾಡಲಾಗಿದೆ. ಉತ್ತರದ ಪ್ರಮುಖ ರಾಜ್ಯಗಳಲ್ಲಿ ಕೊರೊನಾ ಲಸಿಕೆ ಸಂಗ್ರಹಕ್ಕೆ ಕೇಂದ್ರಗಳನ್ನು ಯಾವ ರೀತಿಯಲ್ಲಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎನ್ನುವುದರ ಕುರಿತು ಒಂದು ವರದಿ ಇಲ್ಲಿದೆ.

ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾ ಲಸಿಕೆ ವಿಂಗಣೆ

ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾ ಲಸಿಕೆ ವಿಂಗಣೆ

ಪೂರ್ವ ದೆಹಲಿಯ ದಿಲ್ಶಾದ್ ಗಾರ್ಡನ್ ಪ್ರದೇಶದಲ್ಲಿರುವ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ (ಆರ್ಜಿಎಸ್ಎಸ್ಹೆಚ್)ಯಲ್ಲಿ ಲಸಿಕೆ ಇರಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. 650 ಹಾಸಿಗೆಗಳ ಸಾಮರ್ಥ್ಯ ಹೊಂದಿರುವ ನಗರದ ಅತಿದೊಡ್ಡ ಆಸ್ಪತ್ರೆಗಳಲ್ಲಿ ಇದೂ ಒಂದಾಗಿದೆ. ದೆಹಲಿಯಲ್ಲಿ ಗುರುತಿಸಿರುವ 81 ಕೊವಿಡ್-19 ಲಸಿಕೆ ಕೇಂದ್ರಗಳಲ್ಲಿ ಪ್ರತಿನಿತ್ಯ ಕನಿಷ್ಠ 100 ಮಂದಿಗೆ ಲಸಿಕೆಯನ್ನು ನೀಡಲಾಗುತ್ತದೆ. ಒಂದು ವಾರದಲ್ಲಿ ನಾಲ್ಕು ದಿನ ಅಂದರೆ ಸೋಮವಾರ, ಮಂಗಳವಾರ, ಗುರುವಾರ ಮತ್ತು ಶನಿವಾರ ಲಸಿಕೆಯನ್ನು ನೀಡಲಾಗುತ್ತದೆ.

ಉತ್ತರ ಪ್ರದೇಶದಲ್ಲಿ ಕೊರೊನಾ ಲಸಿಕೆ ಸಂಗ್ರಹ ಕೇಂದ್ರ

ಉತ್ತರ ಪ್ರದೇಶದಲ್ಲಿ ಕೊರೊನಾ ಲಸಿಕೆ ಸಂಗ್ರಹ ಕೇಂದ್ರ

ಕೊವಿಡ್-19 ಲಸಿಕೆಗಳನ್ನು ಸಂಗ್ರಹಿಸಲು ಲಕ್ನೋದಲ್ಲಿ 2 ಲಸಿಕೆ ಡಿಪೋವನ್ನು ಹೊಂದಿಸಲಾಗಿದೆ. ಪ್ರಯಾಗರಾಜ್‌ನಲ್ಲಿ, ಜಿಲ್ಲೆಯ ಪ್ರಮುಖ ಲಸಿಕೆ ಸಂಗ್ರಹ ಕೇಂದ್ರವಾಗಿ ತೇಜ್ ಬಹದ್ದೂರ್ ಸಪ್ರು (ಬೇಲಿ) ಆಸ್ಪತ್ರೆಯ ಸಭೆ ಸಭಾಂಗಣವನ್ನು ನಿಗದಿಗೊಳಿಸಲಾಗಿದೆ. ಮೀರತ್, ಗಾಜಿಯಾಬಾದ್, ನೋಯ್ಡಾ, ಹಾಪುರ್, ಬುಲಂದ್‌ಶಹರ್ ಮತ್ತು ಬಾಗ್‌ಪತ್‌ನ ಆರು ಜಿಲ್ಲೆಗಳನ್ನು ಒಳಗೊಂಡಿರುವ ಮೀರತ್ ವಿಭಾಗದಲ್ಲಿ ಮತ್ತೊಂದು ಲಸಿಕೆ ಕೇಂದ್ರವನ್ನು ತೆರೆಯಲಾಗಿದೆ. ಮೀರತ್ ನಲ್ಲಿರುವ ಲಾಲಾ ಲಜಪತ್ ರಾಯ್ ಸ್ಮಾರಕ ವೈದ್ಯಕೀಯ ಕಾಲೇಜಿನ ಶೇಖರಣಾ ಕೇಂದ್ರದಲ್ಲಿ ಕೋವಿಡ್ -19 ಲಸಿಕೆ ಸಂಗ್ರಹಿಸಲು ಆರೋಗ್ಯ ಅಧಿಕಾರಿಗಳು ವ್ಯವಸ್ಥೆ ಮಾಡಿದ್ದಾರೆ.

ಬಿಹಾರದಲ್ಲಿ ಕೊವಿಡ್-19 ಲಸಿಕೆ ಸಂಗ್ರಹಕ್ಕೆ ವ್ಯವಸ್ಥೆ

ಬಿಹಾರದಲ್ಲಿ ಕೊವಿಡ್-19 ಲಸಿಕೆ ಸಂಗ್ರಹಕ್ಕೆ ವ್ಯವಸ್ಥೆ

ಕೊವಿಡ್ ಲಸಿಕೆಗಳು ವಿಮಾನದ ಮೂಲಕ ಮೊದಲು ಪಾಟ್ನಾವನ್ನು ತಲುಪಲಿದೆ. ನಂತರ ಅದನ್ನು ಫ್ರೀಜರ್ ವ್ಯಾನ್‌ಗಳಲ್ಲಿ ಪಾಟ್ನಾದ ನಳಂದಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿರುವ ರಾಜ್ಯದ ಲಸಿಕೆ ಕೇಂದ್ರಗಳಿಗೆ ಕಳುಹಿಸಿ ಕೊಡಲಾಗುತ್ತದೆ. ರಾಜ್ಯ ಲಸಿಕೆ ಕೇಂದ್ರದಿಂದ ಅದನ್ನು ವಿವಿಧ ಜಿಲ್ಲೆಗಳಿಗೆ ಕಳುಹಿಸಲಾಗುತ್ತದೆ. ಲಸಿಕೆಗಳನ್ನು 9 ಸರ್ಕಾರಿ ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳು, 5 ಖಾಸಗಿ ಕಾಲೇಜುಗಳು, 21 ನಾಗರಿಕ ಆಸ್ಪತ್ರೆಗಳು, 17 ಉಪ ವಿಭಾಗೀಯ ಆಸ್ಪತ್ರೆಗಳು, 208 ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳು, 1 ನರ್ಸಿಂಗ್ ಶಾಲೆ, 3 ಉಲ್ಲೇಖಿತ ಆಸ್ಪತ್ರೆಗಳು ಮತ್ತು ಉಳಿದ 36 ಖಾಸಗಿ ಸಂಸ್ಥೆಗಳಲ್ಲಿ ಸಂಗ್ರಹಿಸಲಾಗುವುದು.

ತ್ರಿಪುರಾ, ಅಸ್ಸಾಂ, ಪಶ್ಚಿಮ ಬಂಗಾಳದಲ್ಲಿ ಲಸಿಕೆ ಕೇಂದ್ರ

ತ್ರಿಪುರಾ, ಅಸ್ಸಾಂ, ಪಶ್ಚಿಮ ಬಂಗಾಳದಲ್ಲಿ ಲಸಿಕೆ ಕೇಂದ್ರ

ಪಶ್ಚಿಮ ಬಂಗಾಳದಾದ್ಯಂತ ಒಟ್ಟು 958 ಕೋಲ್ಡ್ ಚೈನ್ ಸೌಲಭ್ಯಗಳಿವೆ. ಕೊಲ್ಕತ್ತಾ ವಿಮಾನ ನಿಲ್ದಾಣಕ್ಕೆ ಬಂದಿಳಿದ ನಂತರ ಲಸಿಕೆಗಳನ್ನು ಆರಂಭದಲ್ಲಿ ಬಾಗ್‌ಬಜಾರ್ ವೈದ್ಯಕೀಯ ಕೇಂದ್ರದಲ್ಲಿ ಸಂಗ್ರಹಿಸಲಾಗುತ್ತದೆ. ತ್ರಿಪುರಾದಲ್ಲಿ ಕೊವಿಡ್-19 ಲಸಿಕೆ ಸಂಗ್ರಹ ಕೇಂದ್ರವನ್ನು ಅಗರ್ತಲಾದಲ್ಲಿ ಗುರುತಿಸಲಾಗಿದೆ. ಜಿಲ್ಲಾ ಕೇಂದ್ರಗಳ ಮುಖ್ಯ ಕಚೇರಿಗಳಲ್ಲಿ ಎಂಟು ಲಸಿಕೆ ಸಂಗ್ರಹ ಕೇಂದ್ರಗಳಿದ್ದು, ಆರೋಗ್ಯ ಸೌಲಭ್ಯ ಹಂತದಲ್ಲಿ 145 ಕೋಲ್ಡ್ ಚೈನ್ ಪಾಯಿಂಟ್‌ಗಳನ್ನು ಸಿದ್ಧಪಡಿಸಲಾಗಿದೆ. ಇಲ್ಲಿ ಲಸಿಕೆ ಸಂಗ್ರಹಣೆಗೆ ಎಲ್ಲಾ ಕೋಲ್ಡ್ ಚೈನ್ ಉಪಕರಣಗಳಿವೆ. ಅಸ್ಸಾಂನ ಗುವಾಹಟಿಯಲ್ಲಿರುವ ಪ್ರಮುಖ ಪ್ರಾಥಮಿಕ ಲಸಿಕೆ ಸಂಗ್ರಹ ಕೇಂದ್ರದ ಜೊತೆ 5 ಪ್ರಾದೇಶಿಕ ಲಸಿಕೆ ಸಂಗ್ರಹ ಕೇಂದ್ರಗಳಿವೆ. ಈ ಕೇಂದ್ರಗಳಿಂದ ಜಿಲ್ಲೆಗಳಿಗೆ ಲಸಿಕೆಯನ್ನು ರವಾನೆ ಮಾಡಲಾಗುತ್ತದೆ.

ಛತ್ತೀಸ್ ಗಢ, ಪಂಜಾಬ್ ನಲ್ಲಿ ಲಸಿಕೆ ಕೇಂದ್ರಗಳ ವ್ಯವಸ್ಥೆ

ಛತ್ತೀಸ್ ಗಢ, ಪಂಜಾಬ್ ನಲ್ಲಿ ಲಸಿಕೆ ಕೇಂದ್ರಗಳ ವ್ಯವಸ್ಥೆ

ಛತ್ತೀಸ್ ಗಢ ರಾಜಧಾನಿ, ಬಲೋಡ್‌ನ ಜಿಲ್ಲಾ ಲಸಿಕೆ ಕೇಂದ್ರವು(ಡಿವಿಎಸ್) ಮಾದರಿ ಲಸಿಕೆ ಕೇಂದ್ರವಾಗಿ ಹೊರಹೊಮ್ಮಿದೆ. ಜಿಲ್ಲಾ ಮಟ್ಟದಲ್ಲಿ ನೆಲೆಗೊಂಡಿರುವ ಜಿಲ್ಲಾ ಲಸಿಕೆ ಕೇಂದ್ರವೊಂದು ಪ್ರಾದೇಶಿಕ ಮತ್ತು ರಾಜ್ಯದ ಲಸಿಕೆ ಕೇಂದ್ರಗಳಿಂದ ಈ ಲಸಿಕೆ ಪಡೆಯಲಾಗುತ್ತದೆ. ನಂತರ ಪ್ರತಿ ತಿಂಗಳು ತನ್ನ ವ್ಯಾಪ್ತಿಯಲ್ಲಿರುವ ಎಲ್ಲಾ ಕೋಲ್ಡ್ ಚೈನ್ ಪಾಯಿಂಟ್‌ಗಳಿಗೆ ಲಸಿಕೆ ಮತ್ತು ಸಿರಿಂಜಿನಂತಹ ಒಣ ದಾಸ್ತಾನುಗಳನ್ನು ರವಾನಿಸಲಾಗುತ್ತದೆ.

ಒಂದು ರಾಜ್ಯಮಟ್ಟದ ಲಸಿಕೆ ಕೇಂದ್ರವಲ್ಲದೇ, 22 ಜಿಲ್ಲಾ ಲಸಿಕೆ ಕೇಂದ್ರಗಳು ಮತ್ತು 127 ಬ್ಲಾಕ್ ಮಟ್ಟದ ಲಸಿಕೆ ಕೇಂದ್ರಗಳನ್ನು ಸಿದ್ಧಪಡಿಸಲಾಗುತ್ತಿದೆ. ಇದು 570 ಕೋಲ್ಡ್ ಚೈನ್ ಪಾಯಿಂಟ್‌ಗಳನ್ನು ಸಹ ಹೊಂದಿರುತ್ತದೆ. ಫಿರೋಜ್‌ಪುರದಲ್ಲಿ ಒಂದು ವಾಕ್-ಇನ್ ಫ್ರೀಜರ್ ಜೊತೆಗೆ, ಚಂಡೀಘರ್ ನಲ್ಲಿ ಇನ್ನೂ ಒಂದು ವ್ಯವಸ್ಥೆ ಒದಗಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

English summary
List of Major Covid-19 Vaccine Centers in North Indian States Including Details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X