• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಾಜಿ ಸಿಎಂ ಪುತ್ರರು ಹಾಲಿ ಸಿಎಂ ಆಗಿರುವ ದೇಶದ ಐದು ರಾಜ್ಯಗಳು

|
Google Oneindia Kannada News

ನಮ್ಮ ದೇಶದಲ್ಲಿ ಕುಟುಂಬ ರಾಜಕಾರಣದಿಂದ ದೂರವಾಗಿರುವ ಯಾವ ಪಕ್ಷಗಳೂ ಇಲ್ಲ. ಹಾಗಾಗಿ, ಈ ವಿಚಾರಕ್ಕೆ ಬಂದಾಗ, ಒಬ್ಬರು ಇನ್ನೊಬ್ಬರನ್ನು ದೂರುವ ಉದಾಹರಣೆಗಳು ಕಮ್ಮಿ.

ಒಂದು ಕಾಲದಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ್ರ ಕುಟುಂಬಕ್ಕೆ ಕುಟುಂಬ ರಾಜಕಾರಣ ಎನ್ನುವ ಪದದ ಕಳಂಕ ಪದೇ ಪದೇ ಬರುತ್ತಿತ್ತು. ಅದು ಇತ್ತೀಚಿನ ದಿನಗಳಲ್ಲಿ ಕಮ್ಮಿಯಾಗಲು ಕಾರಣ, ಇತರ ಪಕ್ಷಗಳಲ್ಲಿಯೂ ಇದು ಹೊರತಾಗದೇ ಇರುವುದು.

ಸಂಪುಟ ವಿಸ್ತರಣೆ ಎನ್ನುವ ಜೇನುಗೂಡು: ಈಶ್ವರಪ್ಪ ಸಿಡಿಸಲಿದ್ದಾರಾ ಬಾಂಬ್?ಸಂಪುಟ ವಿಸ್ತರಣೆ ಎನ್ನುವ ಜೇನುಗೂಡು: ಈಶ್ವರಪ್ಪ ಸಿಡಿಸಲಿದ್ದಾರಾ ಬಾಂಬ್?

ನಮ್ಮ ರಾಜ್ಯದಲ್ಲೂ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಪ್ರಮುಖರು ಮತ್ತವರ ಕುಟುಂಬದವರು ಸಕ್ರಿಯ ರಾಜಕಾರಣದಲ್ಲಿದ್ದಾರೆ. ತಂದೆ, ತಂದೆಯ ನಂತರ ಮಗ, ಮೊಮ್ಮಗ, ಸಹೋದರರು ರಾಜಕಾರಣದಲ್ಲಿದ್ದಾರೆ.

 ರಾಜ್ಯ ರಾಜಕೀಯದ ಬಗ್ಗೆ ನೊಣವಿನಕೆರೆ ಶ್ರೀಗಳು ನುಡಿದಿದ್ದ ಕರಾರುವಾಕ್ ಭವಿಷ್ಯ ರಾಜ್ಯ ರಾಜಕೀಯದ ಬಗ್ಗೆ ನೊಣವಿನಕೆರೆ ಶ್ರೀಗಳು ನುಡಿದಿದ್ದ ಕರಾರುವಾಕ್ ಭವಿಷ್ಯ

ನಮ್ಮ ದೇಶದ ಐದು ರಾಜ್ಯಗಳಲ್ಲಿ ಹಿಂದೆ ಮುಖ್ಯಮಂತ್ರಿಯಾಗಿದ್ದವರ ಮಗ ಈಗ ಆ ರಾಜ್ಯದ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆ ಐದು ರಾಜ್ಯಗಳು ಯಾವುವು? ಸ್ಲೈಡಿನಲ್ಲಿ ಮುಂದುವರಿಸಲಾಗಿದೆ:

 ಮಾಜಿ ಸಿಎಂ ಪುತ್ರರು ಹಾಲಿ ಸಿಎಂ ಆಗಿರುವ ದೇಶದ ಐದು ರಾಜ್ಯಗಳು - 1

ಮಾಜಿ ಸಿಎಂ ಪುತ್ರರು ಹಾಲಿ ಸಿಎಂ ಆಗಿರುವ ದೇಶದ ಐದು ರಾಜ್ಯಗಳು - 1

ಜಾರ್ಖಂಡ್ ರಾಜ್ಯದ ಮುಖ್ಯಮಂತ್ರಿಯಾಗಿ ಹೇಮಂತ್ ಸೊರೇನ್ ಡಿಸೆಂಬರ್ 29, 2019ರಿಂದ ಅಧಿಕಾರದಲ್ಲಿದ್ದಾರೆ. ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷದಿಂದ ಅಧಿಕಾರಕ್ಕೇರಿರುವ ಇವರ ತಂದೆ ಶಿಬು ಸೊರೇನ್. ಇವರು ಮೂರು ಬಾರಿ ಅಲ್ಲಿನ ಮುಖ್ಯಮಂತ್ರಿಯಾಗಿದ್ದಾರೆ. ಒಮ್ಮೆ ಹತ್ತು ದಿನ, ಇನ್ನೊಮ್ಮೆ 145 ದಿನ, ಮತ್ತೊಮ್ಮೆ153 ದಿನ ಸಿಎಂ ಆಗಿದ್ದವರು.

 ಮಾಜಿ ಸಿಎಂ ಪುತ್ರರು ಹಾಲಿ ಸಿಎಂ ಆಗಿರುವ ದೇಶದ ಐದು ರಾಜ್ಯಗಳು - 2

ಮಾಜಿ ಸಿಎಂ ಪುತ್ರರು ಹಾಲಿ ಸಿಎಂ ಆಗಿರುವ ದೇಶದ ಐದು ರಾಜ್ಯಗಳು - 2

ಇನ್ನು ಪಕ್ಕದ ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿ ವೈ.ಎಸ್. ಜಗನ್ಮೋಹನ್ ರೆಡ್ಡಿ ಮೇ 30, 1019ರಿಂದ ಅಧಿಕಾರದಲ್ಲಿದ್ದಾರೆ. ಇವರು ಪ್ರತಿನಿಧಿಸುವ ಪಾರ್ಟಿ ವೈ.ಎಸ್.ಆರ್ ಕಾಂಗ್ರೆಸ್. ಇವರ ತಂದೆ ವೈ.ಎಸ್. ರಾಜಶೇಖರ ರೆಡ್ಡಿ ಅವಿಭಜಿತ ಆಂಧ್ರದ ಸಿಎಂ ಆಗಿದ್ದವರು. ಕಾಂಗ್ರೆಸ್ ಮುಖಂಡರಾಗಿದ್ದ ಇವರು ಐದು ವರ್ಷ, 111 ದಿನ ಸಿಎಂ ಆಗಿ ಕಾರ್ಯನಿರ್ವಹಿಸಿದ್ದರು.

 ಮಾಜಿ ಸಿಎಂ ಪುತ್ರರು ಹಾಲಿ ಸಿಎಂ ಆಗಿರುವ ದೇಶದ ಐದು ರಾಜ್ಯಗಳು - 3

ಮಾಜಿ ಸಿಎಂ ಪುತ್ರರು ಹಾಲಿ ಸಿಎಂ ಆಗಿರುವ ದೇಶದ ಐದು ರಾಜ್ಯಗಳು - 3

ಇನ್ನು ಪಕ್ಕದ ಇನ್ನೊಂದು ರಾಜ್ಯ ತಮಿಳುನಾಡು. ಅಲ್ಲಿನ ಸಿಎಂ ಎಂ.ಕೆ.ಸ್ಟಾಲಿನ್ ಮೇ 7, 2021ರಿಂದ ಕಾರ್ವನಿರ್ವಹಿಸುತ್ತಿದ್ದಾರೆ. ಡಿಎಂಕೆ ಪಕ್ಷವನ್ನು ಪ್ರತಿನಿಧಿಸುವ ಇವರ ತಂದೆ ಎಂ. ಕರುಣಾನಿಧಿ. ಇವರು ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದವರು.

 ಮಾಜಿ ಸಿಎಂ ಪುತ್ರರು ಹಾಲಿ ಸಿಎಂ ಆಗಿರುವ ದೇಶದ ಐದು ರಾಜ್ಯಗಳು - 4

ಮಾಜಿ ಸಿಎಂ ಪುತ್ರರು ಹಾಲಿ ಸಿಎಂ ಆಗಿರುವ ದೇಶದ ಐದು ರಾಜ್ಯಗಳು - 4

ಈ ರೀತಿಯ ಇನ್ನೊಂದು ರಾಜ್ಯವೆಂದರೆ ಒಡಿಶಾ. ಅಲ್ಲಿನ ಹಾಲೀ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು 21 ವರ್ಷ, 145 ದಿನದಿಂದ ಅಧಿಕಾರದಲ್ಲಿದ್ದಾರೆ. ಬಿಜು ಜನತಾದಳವನ್ನು ಪ್ರತಿನಿಧಿಸುವ ಇವರ ತಂದೆ ಬಿಜು ಪಟ್ನಾಯಕ್ ಐದು ವರ್ಷ ಅಲ್ಲಿನ ಸಿಎಂ ಆಗಿದ್ದವರು.

 ಮಾಜಿ ಸಿಎಂ ಪುತ್ರರು ಹಾಲಿ ಸಿಎಂ ಆಗಿರುವ ದೇಶದ ಐದು ರಾಜ್ಯಗಳು - 5

ಮಾಜಿ ಸಿಎಂ ಪುತ್ರರು ಹಾಲಿ ಸಿಎಂ ಆಗಿರುವ ದೇಶದ ಐದು ರಾಜ್ಯಗಳು - 5

ಇನ್ನು, ಎರಡು ದಿನಗಳ ಹಿಂದೆ ಕರ್ನಾಟಕಕ್ಕೆ ಹೊಸ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಬಸವರಾಜ ಬೊಮ್ಮಾಯಿಯವರು ಬಿಜೆಪಿ ಪಕ್ಷವನ್ನು ಪ್ರತಿನಿಧಿಸುತ್ತಾರೆ. ಇವರ ತಂದೆ ಎಸ್.ಆರ್.ಬೊಮ್ಮಾಯಿ ಕೂಡಾ ಈ ರಾಜ್ಯದ ಸಿಎಂ ಆಗಿದ್ದವರು. 281 ದಿನ ಅವರು ಸಿಎಂ ಆಗಿ ಸೇವೆ ಸಲ್ಲಿಸಿದ್ದರು.

English summary
Did you know there are politicians where both father and son served as Chief Ministers in India?Here are some such pairings who became CMs of their respective states. Take a look.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X