ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಬಿಎಸ್ಇ ಕ್ಲಾಸ್ 10 ಫಲಿತಾಂಶ: ಅಗ್ರಸ್ಥಾನ ಹಂಚಿಕೊಂಡ 13 ಮಂದಿ

|
Google Oneindia Kannada News

ನವದೆಹಲಿ, ಮೇ 06: ಸಿಬಿಎಸ್‌ಇ 10ನೇ ತರಗತಿ ಫಲಿತಾಂಶವನ್ನು ಸೋಮವಾರ ಮಧ್ಯಾಹ್ನ ಪ್ರಕಟಿಸಲಾಗಿದೆ. ಒಟ್ಟಾರೆ, ಶೇ.91.1ರಷ್ಟು ಫಲಿತಾಂಶ ಹೊರ ಬಂದಿದೆ. ತಿರುವನಂತರಪುರಂ-ಶೇ.99.85, ಚೆನ್ನೈ ಶೇ.99, ಅಜ್ಮರ್ ಶೇ.95.89ರಷ್ಟು ಫಲಿತಾಂಶ ನೀಡುವ ಮೂಲಕ ಮೊದಲ ಮೂರು ಸ್ಥಾನದಲ್ಲಿವೆ.

ಸಿಬಿಎಸ್‌ಇ 10ನೇ ತರಗತಿ: ಶೇ.91.1ರಷ್ಟು ಫಲಿತಾಂಶ ಸಿಬಿಎಸ್‌ಇ 10ನೇ ತರಗತಿ: ಶೇ.91.1ರಷ್ಟು ಫಲಿತಾಂಶ

ಫೆಬ್ರವರಿ 21 ರಿಂದ ಮಾರ್ಚ್ 29 ರವರೆಗೆ ಸಿಬಿಎಸ್ಇ 10ನೇ ತರಗತಿ ಪರೀಕ್ಷೆ ನಡೆಸಲಾಗಿತ್ತು. ಸುಮಾರು 18 ಲಕ್ಷ 27 ಸಾವಿರದ 472 ವಿದ್ಯಾರ್ಥಿಗಳು ಸಿಬಿಎಸ್‌ಇ 10ನೇ ತರಗತಿ 2019 ಪರೀಕ್ಷೆಗೆ ಅರ್ಜಿ ಹಾಕಿದ್ದರು. ಫೆಬ್ರವರಿ 21, 2019 ರಂದು ಆರಂಭವಾಗಿದ್ದ ಪರೀಕ್ಷೆ ಮಾರ್ಚ್ 27, 2019ರವರೆಗೆ ನಡೆದಿತ್ತು. ಸಿಬಿಎಸ್ಇ ಕ್ಲಾಸ್ 10ರ ಫಲಿತಾಂಶವನ್ನು ಸಿಬಿಎಸ್ಇ ವೆಬ್ ಸೈಟಿನಲ್ಲಿ ಸೋಮವಾರ(ಮೇ 06) ಮಧ್ಯಾಹ್ನದ ನಂತರ ವೀಕ್ಷಿಸಬಹುದು.

ಕೇರಳದ ಭಾವನ ಎನ್‌ ಶಿವದಾಸ್ 500ಕ್ಕೆ 499 ಅಂಕಗಳನ್ನು ಪಡೆದು ದೇಶಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಭಾವನಾ ಅಲ್ಲದೆ 13 ಮಂದಿ ಪ್ರಥಮ ಸ್ಥಾನವನ್ನು ಹಂಚಿಕೊಂಡಿದ್ದಾರೆ.

2.25 ಲಕ್ಷ ವಿದ್ಯಾರ್ಥಿಗಳು ಶೇ 90ರಷ್ಟು ಅಂಕ ಗಳಿಸಿದ್ದರೆ, 57,256 ವಿದ್ಯಾರ್ಥಿಗಳು ಶೇ 95ಕ್ಕೂ ಅಧಿಕ ಅಂಕ ಗಳಿಸಿದ್ದಾರೆ. ಅಂಕಪಟ್ಟಿಯಲ್ಲಿ ಕೊನೆ ಎರಡು ಸ್ಥಾನಗಳಲ್ಲಿ ದೆಹಲಿ ಶೇ 80.97ರಷ್ಟು ಹಾಗೂ ಕೊನೆ ಸ್ಥಾನದಲ್ಲಿ ಗುವಾಹತಿ 74.49% ಬಂದಿದೆ.

500ಕ್ಕೆ 499 ಅಂಕ ಗಳಿಸಿ ಅಗ್ರಸ್ಥಾನ 13 ಮಂದಿ

500ಕ್ಕೆ 499 ಅಂಕ ಗಳಿಸಿ ಅಗ್ರಸ್ಥಾನ 13 ಮಂದಿ

500ಕ್ಕೆ 499 ಅಂಕ ಗಳಿಸಿ ಅಗ್ರಸ್ಥಾನ ಹಂಚಿಕೊಂಡ ವಿದ್ಯಾರ್ಥಿಗಳು
1. ಸಿದ್ದಾಂತ್ ಪೆಂಗೊರಿಯಾ(ನೋಯ್ಡಾ)
2. ವಿದ್ಯಾಂಶ್ ವಾಧ್ವಾ(ನೋಯ್ಡಾ)
3. ಯೋಗೇಶ್ ಕುಮಾರ್ ಗುಪ್ತಾ(ಜಾನ್ ಪುರ್)
4. ಅಂಕುರ್ ಮಿಶ್ರಾ(ಗಾಜಿಯಾಬಾದ್)
5. ವತ್ಸಲ್ ವರ್ಷ್ನೆ (ಮೀರತ್)
6. ಮಾನ್ಯಾ (ಭಟಿಂಡಾ)
7. ಆರ್ಯನ್ ಝಾ ( ಜಾಮ್ ನಗರ್)
8. ತರು ಜೈನ್ (ಜೈಪುರ)(ಚಿತ್ರದಲ್ಲಿ)
9. ಭಾವನಾ ಎನ್ ಶಿವದಾಸ್ (ಕೇರಳ)
10. ಇಶ್ ಮದನ್ (ಗಾಜಿಯಾಬಾದ್)
11. ದಿವ್ಜೋತ್ ಕೌರ್ ಜಗ್ಗಿ (ಗಾಜಿಯಾಬಾದ್)
12. ಅಪೂರ್ವ ಜೈನ್ (ಗಾಜಿಯಾಬಾದ್)
13. ಶಿವಾನಿ ಲಾಥ್ (ನೋಯ್ಡಾ)

2ನೇ ಸ್ಥಾನ (498/500) 25 ಮಂದಿ

2ನೇ ಸ್ಥಾನ (498/500) 25 ಮಂದಿ

1. ಕಾಶ್ವಿ ಜೈನ್ (ಅಂಬಾಲಾ)
2. ಅಧೀನಾ ಎಲ್ಸಾ ರಾಯ್ (ಕ್ಯಾಲಿಕಟ್)
3. ಅಯುಷಿ ಪುಷ್ಕರ್ (ಲಕ್ನೋ)
4. ಮಲ್ಲಿಕಾ ಮಂಡಲ್ (ನೋಯ್ಡಾ0
5. ಸಾಕ್ಷಿ ಸಕ್ಸೇನಾ (ಪಲ್ವಾಲ್)
6. ತರುಶ್ ರಾಜಾವತ್ (ಬಿಜ್ನೋರ್)
7. ರೋಹನ್ ಬಾತ್ರಾ (ಅಂಬಾಲಾ)
8. ದೃಷ್ಟಿ ಗುಪ್ತಾ (ಪಂಚಕುಲ)
9. ಪಾಖಿ ವತ್ಸ್ (ಗಾಜಿಯಾಬಾದ್)
10. ನಿಶಿತಾ ಸಿಂಗ್ ( ಗಾಜಿಯಾಬಾದ್)
11. ಪ್ರಥಮ್ ಕುಮಾರ್ ಶ್ರೀವಾತ್ಸವ (ಗಾಜಿಯಾಬಾದ್)
12. ಗೌರವ್ ಸಿಂಗ್ (ಉತ್ತರಪ್ರದೇಶ)
13. ರಾಧಿಕಾ ಗುಪ್ತಾ(ನೋಯ್ಡಾ)
14. ಶಿವಿಕಾ ಡಿ (ದೆಹಲಿ)
15. ಸಲ್ಮಾನ್ (ಕೇರಳ)
16. ಮನನ್ ಗುಪ್ತಾ(ಗಾಜಿಯಾಬಾದ್)
17. ಸ್ತುತಿ ದೀಕ್ಷಿತ್ (ಫರಿದಾಬಾದ್)
18. ಅರಿಂದಮ್ ಶರ್ಮ(ಗುವಹಾತಿ)
19. ಯಶಸ್ ಡಿ (ಚೆನ್ನೈ) (ತುಮಕೂರು ಹುಳಿಯಾರ್ ಶಾಲೆ ವಿದ್ಯಾರ್ಥಿ)
20. ಗಾರ್ಗಿ ಗೋಯೆಲ್ (ನೋಯ್ಡಾ)
21. ಪುಷ್ಪಾ ಚೌಧರಿ(ಗಾಜಿಯಾಬಾದ್)
22. ಜಾನ್ವಿ ಬಿಸ್ತ್ (ಗಾಜಿಯಾಬಾದ್)
23. ಶಿರಿನ್ಶಾ ಕ್ಸೇವಿಯರ್ (ಕೇರಳ)
24. ಇಶಾ ಶ್ರೀವಾತ್ಸವ (ಲಕ್ನೋ)
25. ಪ್ರಿಯಾಕಾ (ಅಂಬಾಲಾ)

3ನೇ ಸ್ಥಾನ ಒಟ್ಟು 59 ಮಂದಿ

3ನೇ ಸ್ಥಾನ ಒಟ್ಟು 59 ಮಂದಿ

3ನೇ ಸ್ಥಾನ ಒಟ್ಟು 59 ಮಂದಿ
497/500 ಅಂಕ ಗಳಿಸಿದವರಲ್ಲಿ ಕರ್ನಾಟಕ ಮೂಲದವರು ಇದ್ದಾರೆ.
* 44 ನೇ ಶ್ರೇಯಾಂಕ ಗಿರಿಜಾ ಎಂ ಹೆಗಡೆ(ಚೆನ್ನೈ) ಧಾರವಾಡದ ಎಸ್ ಡಿಎಂ ಶಾಲೆ
* 50ನೇ ಶ್ರೇಯಾಂಕ ಐಶ್ವರ್ಯಾ ಹರಿಹರನ್ ಅಯ್ಯರ್, ಬೆಂಗಳೂರು
* 51ನೇ ಶ್ರೇಯಾಂಕ ನಲದಲ ದಿಶಾ ಚೌಧರಿ, ಬೆಂಗಳೂರು
* 52 ನೇ ಶ್ರೇಯಾಂಕ ಪೃಥ್ವಿ ಪಿ ಶೆಣೈ, ಬೆಂಗಳೂರು
* 69ನೇ ಶ್ರೇಯಾಂಕ, ಪ್ರಣವ್ ಕೆ.ವಿ, ಬೆಂಗಳೂರು

ದಿವಂಗತ ಸಚಿವ ಸಿಎಸ್ ಶಿವಳ್ಳಿ ಪುತ್ರಿ ರಿಸಲ್ಟ್

ದಿವಂಗತ ಸಚಿವ ಸಿಎಸ್ ಶಿವಳ್ಳಿ ಪುತ್ರಿ ರಿಸಲ್ಟ್

ಕರ್ನಾಟಕ ಸಚಿವರಾಗಿದ್ದ ಸಿ.ಎಸ್.ಶಿವಳ್ಳಿ ಅವರ ಪುತ್ರಿ ರೂಪಾ ಶಿವಳ್ಳಿ ಅವರು ಶೇ 76ರಷ್ಟು ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ. ಸಿ.ಎಸ್.ಶಿವಳ್ಳಿ ಅವರು ನಿಧನರಾದ ಮರು ದಿನ ರೂಪಾ ಪರೀಕ್ಷೆ ಬರೆದಿದ್ದರು. ಸಚಿವರಾಗಿದ್ದ ಸಿ.ಎಸ್.ಶಿವಳ್ಳಿ ಅವರ ಪುತ್ರಿ ರೂಪಾ ಶಿವಳ್ಳಿ ಅವರು ಶೇ 76ರಷ್ಟು ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ. ಸಿ.ಎಸ್.ಶಿವಳ್ಳಿ ಅವರು ನಿಧನರಾದ ಮರು ದಿನ ರೂಪಾ ಪರೀಕ್ಷೆ ಬರೆದಿದ್ದರು. ಕುಂದಗೋಳ ಕ್ಷೇತ್ರದ ಕಾಂಗ್ರೆಸ್ ಶಾಸಕ, ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ ಅವರು ಮಾರ್ಚ್ 22ರಂದು ಹೃದಯಾಘಾತದಿಂದಾಗಿ ನಿಧನಹೊಂದಿದ್ದರು

English summary
CBSE Class 10 results were announced Monday. Here is the list of toppers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X