ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭೆ, ರಾಜ್ಯಸಭೆಗೆ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

|
Google Oneindia Kannada News

ನವದೆಹಲಿ ಮಾರ್ಚ್ 19: ಐದು ರಾಜ್ಯಗಳ ಇತ್ತೀಚಿನ ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ, ಏಪ್ರಿಲ್ 12 ರಂದು ಒಂದು ಲೋಕಸಭೆ ಮತ್ತು ನಾಲ್ಕು ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ. ಚುನಾವಣಾ ಆಯೋಗವು ಇತ್ತೀಚೆಗೆ ಪಶ್ಚಿಮ ಬಂಗಾಳ, ಛತ್ತೀಸ್‌ಗಢ, ಬಿಹಾರ ಮತ್ತು ಮಹಾರಾಷ್ಟ್ರದಲ್ಲಿ ಉಪಚುನಾವಣೆಯ ದಿನಾಂಕವನ್ನು ಪ್ರಕಟಿಸಿತ್ತು. ಇದೀಗ ಬಿಜೆಪಿಯು ಪಶ್ಚಿಮ ಬಂಗಾಳ, ಬಿಹಾರ ಮತ್ತು ಮಹಾರಾಷ್ಟ್ರದ ಮುಂಬರುವ ಲೋಕಸಭೆ ಮತ್ತು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಪಶ್ಚಿಮ ಬಂಗಾಳದ ಅಸನ್ಸೋಲ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಗ್ನಮಿತ್ರ ಪಾಲ್ ಅವರನ್ನು ಕಣಕ್ಕಿಳಿಸಿದ್ದರೆ, ಇವರ ವಿರುದ್ಧ ತೃಣಮೂಲ ಕಾಂಗ್ರೆಸ್ ಚಲನಚಿತ್ರ ನಟ ಶತ್ರುಘ್ನ ಸಿನ್ಹಾ ಅವರನ್ನು ತನ್ನ ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಜೊತೆಗೆ ಬಾಲಿಗುಂಗೆ ವಿಧಾನಸಭೆಯಿಂದ ಕಿಯಾ ಘೋಷ್ ಹೆಸರನ್ನು ಬಿಜೆಪಿ ಘೋಷಿಸಿದೆ. ಇವರ ವಿರುದ್ಧ ಬಿಜೆಪಿ ತೊರೆದಿರುವ ಬಾಬುಲ್ ಸುಪ್ರಿಯೋ ಅವರನ್ನು ಟಿಎಂಸಿ ತನ್ನ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ.

ಇದಲ್ಲದೆ ಬಿಹಾರದ ಬೋಚಹಾನ್ ಮೀಸಲು ಕ್ಷೇತ್ರದಿಂದ ಬೇಬಿ ಕುಮಾರಿ ಅವರನ್ನು ಬಿಜೆಪಿ ನಾಮನಿರ್ದೇಶನ ಮಾಡಿದ್ದರೆ, ಮಹಾರಾಷ್ಟ್ರದ ಕೊಲ್ಹಾಪುರ ಉತ್ತರದಿಂದ ಸತ್ಯಜಿತ್ (ನಾನಾ) ಶಿವಾಜಿರಾವ್ ಅವರನ್ನು ಅಭ್ಯರ್ಥಿಯಾಗಿ ಘೋಷಿಸಲಾಗಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಈ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಎಲ್ಲಾ ಸ್ಥಾನಗಳಿಗೆ ಏಪ್ರಿಲ್ 12 ರಂದು ಮತದಾನ ನಡೆಯಲಿದೆ, ಅದರ ಫಲಿತಾಂಶಗಳು ಏಪ್ರಿಲ್ 16 ರಂದು ಬರಲಿದೆ.

List of BJP candidates for bypolls for Lok Sabha and Rajya Sabha

ರಾಜ್ಯಸಭಾ ದ್ವೈವಾರ್ಷಿಕ ಚುನಾವಣೆಗೆ ಅಭ್ಯರ್ಥಿಗಳ ಘೋಷಣೆ

ಇನ್ನೂ ರಾಜ್ಯಸಭೆಗೆ ದ್ವೈವಾರ್ಷಿಕ ಚುನಾವಣೆಗೆ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಶುಕ್ರವಾರ ಪಟ್ಟಿಯನ್ನು ಬಿಡುಗಡೆ ಮಾಡಿದ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್, ಅಸ್ಸಾಂನಿಂದ ಪಬಿತ್ರಾ ಮಾರ್ಗರಿಟಾ, ಹಿಮಾಚಲ ಪ್ರದೇಶದಿಂದ ಡಾ. ಸಿಕಂದರ್ ಕುಮಾರ್, ನಾಗಾಲ್ಯಾಂಡ್‌ನಿಂದ ಎಸ್. ಫಾಂಗ್ನಾನ್ ಕೊನ್ಯಾಕ್ ಮತ್ತು ತ್ರಿಪುರದಿಂದ ಡಾ. ಮಾಣಿಕ್ ಸಹಾ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.

ಉಪ ಚುನಾವಣೆ: ಶತ್ರುಘ್ನ ಸಿನ್ಹಾ ವಿರುದ್ಧ ಅಗ್ನಿಮಿತ್ರಾ ಸ್ಪರ್ಧೆಉಪ ಚುನಾವಣೆ: ಶತ್ರುಘ್ನ ಸಿನ್ಹಾ ವಿರುದ್ಧ ಅಗ್ನಿಮಿತ್ರಾ ಸ್ಪರ್ಧೆ

ಐದು ರಾಜ್ಯಗಳ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾದ ಬಳಿಕ ಕಾಂಗ್ರೆಸ್‌ನ ಶೋಚನೀಯ ಸೋಲಿನ ಬಗ್ಗೆ ಶುಕ್ರವಾರ ಮಾತನಾಡಿದ್ದ ಮಮತಾ ಬ್ಯಾನರ್ಜಿ, "ಬಿಜೆಪಿ ವಿರುದ್ಧ ಹೋರಾಡಲು ಬಯಸಿರುವ ಎಲ್ಲ ರಾಜಕೀಯ ಪಕ್ಷಗಳೂ ಜತೆಗೂಡಬೇಕು. ಕಾಂಗ್ರೆಸ್ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿದೆ. ನಾವು ಕಾಂಗ್ರೆಸ್‌ ಅನ್ನು ಅವಲಂಬಿಸಲು ಸಾಧ್ಯವಿಲ್ಲ" ಎಂದು ಹೇಳಿದ್ದರು.

ಪಶ್ಚಿಮ ಬಂಗಾಳ ಬಿಜೆಪಿಯ ಪ್ರಧಾನ ಕಾರ್ಯದರ್ಶಿ, ಹಾಲಿ ಶಾಸಕಿ ಅಗ್ನಿಮಿತ್ರಾ ಪಾಲ್ ಅವರು ಅಸಾನೋಲ್ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ. 2021ರಲ್ಲಿ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಸಯಾನಿ ಘೋಶ್ ವಿರುದ್ಧ ಜಯ ದಾಖಲಿಸಿದ್ದರು. ಇನ್ನು ಬ್ಯಾಲಿಗುಂಜ್ ಉಪ ಚುನಾವಣೆಗೂ ಅಭ್ಯರ್ಥಿಯನ್ನು ಬಿಜೆಪಿ ಹೆಸರಿಸಿದ್ದು, ಕೇಯಾ ಘೋಶ್ ಅವರು ಸ್ಪರ್ಧಿಸಲಿದ್ದಾರೆ.

Recommended Video

PM ಕುರ್ಚಿ ಅಲುಗಾಡುತ್ತಿದ್ರೂ ಭಾರತವನ್ನು ಇಷ್ಟೊಂದು ಹೊಗಳಿದ್ಯಾಕೆ ಇಮ್ರಾನ್ ಖಾನ್? | Oneindia Kannada

English summary
After the results of the recent assembly elections in five states, by-elections to one Lok Sabha and four assembly seats are going to be held on April 12. The Election Commission had recently announced the date for by-elections in West Bengal, Chhattisgarh, Bihar and Maharashtra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X