ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಗಾರು ಅಧಿವೇಶನದಲ್ಲಿ ಕೈಗೆತ್ತಿಕೊಳ್ಳಲಿರುವ ಮಸೂದೆಗಳ ಪಟ್ಟಿ

|
Google Oneindia Kannada News

ನವದೆಹಲಿ, ಜುಲೈ 19: 2021ರ ಸಂಸತ್ತಿನ ಮುಂಗಾರು ಅಧಿವೇಶನವು ಜುಲೈ 19 ರ ಸೋಮವಾರದಿಂದ ಪ್ರಾರಂಭವಾಗಲಿದ್ದು, ಆಗಸ್ಟ್ 13 ರವರೆಗೆ ನಡೆಯಲಿದೆ ಎಂದು ಸಂಸದೀಯ ವ್ಯವಹಾರ ಖಾತೆ ಸಚಿವ ಪ್ರಲ್ಹಾದ್ ಜೋಶಿ ಮಾಹಿತಿ ನೀಡಿದ್ದಾರೆ. 19 ದಿನಗಳ ಅಧಿವೇಶನದಲ್ಲಿ, 31 ವಿಷಯಗಳನ್ನು (29 ಮಸೂದೆಗಳು ಮತ್ತು 2 ಹಣಕಾಸು ವಿಷಯಗಳು ಸೇರಿದಂತೆ) ಕೈಗೆತ್ತಿಕೊಳ್ಳಲಾಗುವುದು. ಸುಗ್ರೀವಾಜ್ಞೆಗಳನ್ನು ಬದಲಾಯಿಸಲು ಆರು ಮಸೂದೆಗಳನ್ನು ಮಂಡಿಸಲಾಗುವುದು ಎಂದರು.

2021 ರ ಮುಂಗಾರು ಅಧಿವೇಶನದಲ್ಲಿ ಕೈಗೆತ್ತಿಕೊಳ್ಳಲಿರುವ ಮಸೂದೆಗಳ ಪಟ್ಟಿ
I. ಕಾನೂನು ವಿಷಯಗಳು
1. ನ್ಯಾಯಮಂಡಳಿ ಸುಧಾರಣೆಗಳು (ತರ್ಕಬದ್ಧಗೊಳಿಸುವಿಕೆ ಮತ್ತು ಸೇವೆಯ ಷರತ್ತುಗಳು) ಮಸೂದೆ, 2021 - ಸುಗ್ರೀವಾಜ್ಞೆಯನ್ನು ಬದಲಿಸಲು.
2. ದಿವಾಳಿ ಮತ್ತು ದಿವಾಳಿತನ ಸಂಹಿತೆ (ತಿದ್ದುಪಡಿ) ಮಸೂದೆ, 2021- ಸುಗ್ರೀವಾಜ್ಞೆಯನ್ನು ಬದಲಾಯಿಸಲು.
3. ರಾಷ್ಟ್ರೀಯ ರಾಜಧಾನಿ ಪ್ರದೇಶ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವಾಯು ಗುಣಮಟ್ಟ ನಿರ್ವಹಣೆ ಆಯೋಗ ಮಸೂದೆ, 2021 - ಸುಗ್ರೀವಾಜ್ಞೆಯನ್ನು ಬದಲಾಯಿಸಲು.
4. ಅಗತ್ಯ ರಕ್ಷಣಾ ಸೇವಾ ಮಸೂದೆ, 2021- ಸುಗ್ರೀವಾಜ್ಞೆಯನ್ನು ಬದಲಾಯಿಸಲು.
5. ಇಂಡಿಯನ್ ಮೆಡಿಸಿನ್ ಸೆಂಟ್ರಲ್ ಕೌನ್ಸಿಲ್ (ತಿದ್ದುಪಡಿ) ಮಸೂದೆ, 2021 - ಸುಗ್ರೀವಾಜ್ಞೆಯನ್ನು ಬದಲಾಯಿಸಲು.

List of bills likely to be taken up during monsoon session, 2021

6. ಹೋಮಿಯೋಪತಿ ಸೆಂಟ್ರಲ್ ಕೌನ್ಸಿಲ್ (ತಿದ್ದುಪಡಿ) ಮಸೂದೆ, 2021 - ಸುಗ್ರೀವಾಜ್ಞೆಯನ್ನು ಬದಲಾಯಿಸಲು.
7. ಡಿಎನ್ಎ ತಂತ್ರಜ್ಞಾನ (ಬಳಕೆ ಮತ್ತು ಅನ್ವಯ) ನಿಯಂತ್ರಣ ಮಸೂದೆ, 2019.
8. ದಲ್ಲಾಳಿ ನಿಯಂತ್ರಣ (ತಿದ್ದುಪಡಿ) ಮಸೂದೆ, 2020
9. ಸಂತಾನೋತ್ಪತ್ತಿ ನೆರವಿನ ತಂತ್ರಜ್ಞಾನ ಟೆಕ್ನಾಲಜಿ (ನಿಯಂತ್ರಣ) ಮಸೂದೆ, 2020.
10. ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ (ತಿದ್ದುಪಡಿ) ಮಸೂದೆ, 2019.
11. ರಾಜ್ಯಸಭೆ ಅಂಗೀಕರಿಸಿದ ರಾಷ್ಟ್ರೀಯ ಆಹಾರ ತಂತ್ರಜ್ಞಾನ ಉದ್ಯಮಶೀಲತೆ ಮತ್ತು ನಿರ್ವಹಣಾ ಮಸೂದೆ, 2019.
12. ಲೋಕಸಭೆಯಿಂದ ಅಂಗೀಕರಿಸಲ್ಪಟ್ಟ ನ್ಯಾವಿಗೇಷನ್ ಸಾಗರ ಸಹಾಯಗಳು ಮಸೂದೆ, 2021.
13. ಬಾಲಾಪರಾಧಿ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ತಿದ್ದುಪಡಿ ಮಸೂದೆ, 2021 ಲೋಕಸಭೆಯಿಂದ ಅಂಗೀಕರಿಸಲ್ಪಟ್ಟಿದೆ.
14. ಬಾಡಿಗೆ ತಾಯ್ತನ (ನಿಯಂತ್ರಣ) ಮಸೂದೆ, 2019.
15. ಕಲ್ಲಿದ್ದಲು ಪ್ರದೇಶಗಳ (ಸ್ವಾಧೀನ ಮತ್ತು ಅಭಿವೃದ್ಧಿ) ತಿದ್ದುಪಡಿ ಮಸೂದೆ, 2021.
16. ಚಾರ್ಟರ್ಡ್ ಅಕೌಂಟೆಂಟ್ಸ್, ವೆಚ್ಚ ಮತ್ತು ಕೆಲಸಗಳ ಅಕೌಂಟೆಂಟ್ಸ್ ಮತ್ತು ಕಂಪನಿ ಸೆಕ್ರೆಟರಿಗಳ (ತಿದ್ದುಪಡಿ) ಮಸೂದೆ, 2021
17. ಸೀಮಿತ ಹೊಣೆಗಾರಿಕೆ ಸಹಭಾಗಿತ್ವ (ತಿದ್ದುಪಡಿ) ಮಸೂದೆ, 2021.
18. ಕಂಟೋನ್ಮೆಂಟ್ ಮಸೂದೆ, 2021.
19. ಭಾರತೀಯ ಅಂಟಾರ್ಕ್ಟಿಕಾ ಮಸೂದೆ, 2021.
20. ಕೇಂದ್ರೀಯ ವಿಶ್ವವಿದ್ಯಾಲಯಗಳ (ತಿದ್ದುಪಡಿ) ಮಸೂದೆ, 2021.
21. ಭಾರತೀಯ ಅರಣ್ಯ ನಿರ್ವಹಣಾ ಸಂಸ್ಥೆಯ ಮಸೂದೆ, 2021.
22. ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ಮಸೂದೆ, 2021.
23. ಠೇವಣಿ ವಿಮೆ ಮತ್ತು ಸಾಲ ಖಾತ್ರಿ ನಿಗಮ (ತಿದ್ದುಪಡಿ) ಮಸೂದೆ, 2021.
24. ಭಾರತೀಯ ಸಾಗರ ಮೀನುಗಾರಿಕೆ ಮಸೂದೆ, 2021.
25. ಪೆಟ್ರೋಲಿಯಂ ಮತ್ತು ಖನಿಜಗಳ ಪೈಪ್ಲೈನ್ ಗಳು (ತಿದ್ದುಪಡಿ) ಮಸೂದೆ, 2021.
26. ಒಳನಾಡಿನ ನೌಕೆಗಳ ಮಸೂದೆ, 2021.
27. ವಿದ್ಯುತ್ (ತಿದ್ದುಪಡಿ) ಮಸೂದೆ, 2021.
28. ವ್ಯಕ್ತಿಗಳ ಕಳ್ಳಸಾಗಣೆ (ತಡೆಗಟ್ಟುವಿಕೆ, ರಕ್ಷಣೆ ಮತ್ತು ಪುನರ್ವಸತಿ) ಮಸೂದೆ, 2021.
29. ತೆಂಗು ಅಭಿವೃದ್ಧಿ ಮಂಡಳಿ (ತಿದ್ದುಪಡಿ) ಮಸೂದೆ, 2021.
II - ಹಣಕಾಸು ವಿಷಯಗಳು
1. 2021-22ರ ಅನುದಾನಕ್ಕಾಗಿ ಪೂರಕ ಬೇಡಿಕೆಗಳ ಪ್ರಸ್ತುತಿ, ಚರ್ಚೆ ಮತ್ತು ಮತದಾನ ಮತ್ತು ಸಂಬಂಧಿತ ವಿನಿಯೋಜನೆ ಮಸೂದೆಯ ಮಂಡನೆ, ಪರಿಗಣನೆ ಮತ್ತು ಅಂಗೀಕಾರ
2. 2017-18ರ ಅನುದಾನಕ್ಕಾಗಿ ಹೆಚ್ಚುವರಿ ಬೇಡಿಕೆಗಳ ಪ್ರಸ್ತುತಿ, ಚರ್ಚೆ ಮತ್ತು ಮತದಾನ ಮತ್ತು ಸಂಬಂಧಿತ ಹಂಚಿಕೆ ಮಸೂದೆಯ ಮಂಡನೆ, ಪರಿಗಣನೆ ಮತ್ತು ಅಂಗೀಕಾರ.

ಕಾಂಗ್ರೆಸ್, ಟಿಎಂಸಿ, ಡಿಎಂಕೆ, ವೈ ಎಸ್ ಆರ್ ಪಿ, ಶಿವಸೇನೆ, ಜೆಡಿಯು, ಬಿಜೆಡಿ, ಎಸ್ ಪಿ, ಟಿ ಆರ್ ಎಸ್, ಎಐಡಿಎಂಕೆ, ಬಿ ಎಸ್ ಪಿ, ಎನ್ಸಿಪಿ, ಟಿಡಿಪಿ, ಅಕಾಲಿ ದಳ, ಆರ್ ಜೆ ಡಿ, ಎಎಪಿ, ಸಿಪಿಐ, ಸಿಪಿಐ(ಎಂ), ಐಯುಎಂಎಲ್, ಎಜೆಎಸ್ಯು, ಆರ್ ಎಲ್ ಪಿ, ಆರ್ ಎಸ್ ಪಿ, ಎಂಡಿಎಂಕೆ, ತಮಿಳು ಮಾನಿಲ ಕಾಂಗ್ರೆಸ್, ಕೇರಳ ಕಾಂಗ್ರೆಸ್, ಜೆಎಂಎಂ, ಎಂಎನ್ಎಫ್, ಆರ್ ಪಿಐ, ಎನ್ಪಿಎಫ್ ಸೇರಿದಂತೆ 33 ರಾಜಕೀಯ ಪಕ್ಷಗಳ ಮುಖಂಡರು ಸರ್ವಪಕ್ಷಗಳ ನಾಯಕರ ಸಭೆ ಭಾಗವಹಿಸಿದ್ದರು.

English summary
Monsoon Session of Parliament, 2021 will commence from Monday, the 19th of July, and continue till 13th August. During the 19 sittings of the session, 31 Government business items.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X