ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಧಾರ್ ಹಾಗೂ ಸಿಮ್ ಜೋಡಣೆಯಾಗದಿದ್ದರೆ, ನಂಬರ್ ಏನಾಗಲಿದೆ?

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ನವೆಂಬರ್ 08 : ಫೆಬ್ರವರಿ 6ರೊಳಗೆ ಮೊಬೈಲ್ ಫೋನ್ ಸಿಮ್ ನಂಬರ್ ಹಾಗೂ ಆಧಾರ್ ವಿಶಿಷ್ಟ ಗುರುತಿನ ಚೀಟಿ ಸಂಖ್ಯೆ ಜೋಡಣೆ ಮಾಡುವುದು ಕಡ್ಡಾಯವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಫೆ.6 ರೊಳಗೆ ಮೊಬೈಲ್ ಫೋನ್ -ಆಧಾರ್ ಜೋಡಣೆ ಕಡ್ಡಾಯ ಫೆ.6 ರೊಳಗೆ ಮೊಬೈಲ್ ಫೋನ್ -ಆಧಾರ್ ಜೋಡಣೆ ಕಡ್ಡಾಯ

ಆದರೆ, ಕೊನೆ ದಿನಾಂಕದೊಳಗೆ ಜೋಡಣೆ ಸಾಧ್ಯವಾಗದಿದ್ದರೆ ಏನು ಮಾಡುವುದು? ನನ್ನ ಮೊಬೈಲ್ ನಂಬರ್ ಕತೆ ಏನಾಗಲಿದೆ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಸಿಮ್-ಆಧಾರ್ ಲಿಂಕ್: ಸುಪ್ರಿಂನಿಂದ ಕೇಂದ್ರಕ್ಕೆ ನೋಟಿಸ್ ಜಾರಿ ಸಿಮ್-ಆಧಾರ್ ಲಿಂಕ್: ಸುಪ್ರಿಂನಿಂದ ಕೇಂದ್ರಕ್ಕೆ ನೋಟಿಸ್ ಜಾರಿ

ವಿವಿಧ ಸೇವೆಗಳಿಗೆ ಆಧಾರ್ ಜೋಡಣೆ ಕಡ್ಡಾಯಗೊಳಿಸುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆ ಸುಪ್ರೀಂಕೋರ್ಟಿನಲ್ಲಿ ನಡೆದಿದೆ.

Linking Aadhaar with mobile: Number won’t be disconnected

ಟೆಲಿಕಾಂ ಇಲಾಖೆಯ ಕಾರ್ಯದರ್ಶಿ ಅರುಣಾ ಸುಂದರರಾಜನ್ ಅವರು ಪ್ರತಿಕ್ರಿಯಿಸಿ, ಆಧಾರ್ ಹಾಗೂ ಮೊಬೈಲ್ ನಂಬರ್ ಜೋಡಣೆ ಬಗ್ಗೆ ಸುಪ್ರೀಂಕೋರ್ಟಿನ ಅಂತಿಮ ಆದೇಶಕ್ಕಾಗಿ ಕಾಯುತ್ತಿದ್ದೇವೆ. ಸದ್ಯಕ್ಕೆ ಕೊನೆದಿನಾಂಕದ ನಂತರ ಜೋಡಣೆಯಾಗದ ನಂಬರ್ ಗಳನ್ನು ರದ್ದುಗೊಳಿಸುವ ಯಾವುದೇ ಆಲೋಚನೆ ಇಲಾಖೆಗೆ ಇಲ್ಲ ಎಂದಿದ್ದಾರೆ.

ಆನ್‌ಲೈನ್‌ ಮೂಲಕ ಮೊಬೈಲ್‌ SIM- ಆಧಾರ್‌ ಜೋಡಿಸಿಆನ್‌ಲೈನ್‌ ಮೂಲಕ ಮೊಬೈಲ್‌ SIM- ಆಧಾರ್‌ ಜೋಡಿಸಿ

ವಿಶಿಷ್ಟ ಗುರುತಿನ ಚೀಟಿ ಯುಐಡಿಎಐ ನಂಬರ್ ಹಾಗೂ ಫೋನ್ ನಂಬರ್ ಕನೆಕ್ಷನ್ ಸಾಧಿಸುವುದು ಈ ಮೂಲಕ ಅಕ್ರಮ ಬಳಕೆ, ಉಗ್ರ ಚಟುವಟಿಕೆಗಳನ್ನು ತಡೆಗಟ್ಟುವುದು ನಮ್ಮ ಗುರಿ, ಯಾವುದೇ ನಂಬರ್ ಕನೆಕ್ಷನ್ ಕಿತ್ತು ಹಾಕುವುದು ನಮ್ಮ ಉದ್ದೇಶವಲ್ಲ ಎಂದು ಟೆಲಿಕಾಂ ಸಚಿವ ಮನೋಜ್ ಸಿನ್ಹಾ ಹೇಳಿದ್ದಾರೆ.

ಕೇಂದ್ರ ಸರ್ಕಾರದ ಪರ ವಕೀಲ ಜೊಹೆಬ್ ಹುಸೇನ್ ಅವರು ಕಳೆದ ವಾರದ ವಿಚಾರಣೆ ವೇಳೆ 113 ಪುಟಗಳ ಹೊಸ ಅಫಿಡವಿಟ್ ಸಲ್ಲಿಸಿದು, ಮೊಬೈಲ್ ಫೋನ್ ಹಾಗೂ ಆಧಾರ್ ಜೋಡಣೆಗೆ ಫೆಬ್ರವರಿ 6 ಕೊನೆದಿನಾಂಕವಾಗಿದೆ ಎಂದಿದ್ದರು.

ಆಧಾರ್ ಜೋಡಣೆ: ಈ ನಾಲ್ಕು ಡೆಡ್ ಲೈನ್ ನೆನಪಿರಲಿ ಆಧಾರ್ ಜೋಡಣೆ: ಈ ನಾಲ್ಕು ಡೆಡ್ ಲೈನ್ ನೆನಪಿರಲಿ

ಆಧಾರ್ ಕಾರ್ಡ್ ಹಾಗೂ ಮೊಬೈಲ್ ಫೋನ್ ಜೋಡಣೆ ಏಕೆ ಮಾಡಬೇಕು? ಈ ಬಗ್ಗೆ ನಾಲ್ಕು ವಾರಗಳಲ್ಲಿ ವರದಿ ನೀಡಿ, ಎಂದು ಸುಪ್ರೀಂಕೋರ್ಟಿನ ದ್ವಿಸದಸ್ಯ ಪೀಠವು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

English summary
Mobiles not linked with Aadhaar will not be disconnected the Department of Telecommunication has said. This is in contrast to what the Centre had told the Supreme Court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X