ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರ್ಷಕ್ಕೆ 850 ಮಿಲಿಯನ್ ಸ್ಪುಟ್ನಿಕ್ V ಲಸಿಕೆ ತಯಾರಿಸಲಿದೆ ಭಾರತ

|
Google Oneindia Kannada News

ನವದದೆಹಲಿ, ಏಪ್ರಿಲ್ 13: ಈಗಾಗಲೇ ರಷ್ಯಾದ ಸ್ಪುಟ್ನಿಕ್ V ಲಸಿಕೆಗೆ ಭಾರತದಲ್ಲಿ ಅನುಮೋದನೆ ದೊರೆತಿದೆ.

ಈಗಾಗಲೇ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್‌ಗೆ ಅನುಮತಿ ನೀಡಲಾಗಿದ್ದು, ಇದು ಮೂರನೇ ಲಸಿಕೆಯಾಗಿದೆ. ವರ್ಷಕ್ಕೆ ಭಾರತವು 850 ಮಿಲಿಯನ್ ಕೊರೊನಾ ಲಸಿಕೆಯನ್ನು ತಯಾರಿಸಲಿದೆ. ರಷ್ಯಾದ ನೇರ ಬಂಡವಾಳ ನಿಧಿ (ಆರ್ ಡಿಐಎಫ್) ಈ ಬಗ್ಗೆ ಮಾಹಿತಿ ನೀಡಿದ್ದು, ಭಾರತದಲ್ಲಿ 850 ಮಿಲಿಯನ್ ಡೋಸ್ ಲಸಿಕೆಗಳನ್ನು ಭಾರತ ತಯಾರಿಸಲಿದೆ ಎಂದು ಹೇಳಿದೆ.

ಭಾರತದ ಔಷಧ ನಿಯಂತ್ರಕ ಈ ಲಸಿಕೆಯನ್ನು ತುರ್ತು ಬಳಕೆಯ ಅಡಿಯಲ್ಲಿ ಬಳಕೆ ಮಾಡುವುದಕ್ಕೆ ನೋಂದಾಯಿಸಿದೆ. ರಷ್ಯಾದ ಸ್ಪುಟ್ನಿಕ್ ಲಸಿಕೆ ಬಳಕೆಗೆ ಅನುಮತಿ ನೀಡಿರುವ, ಅತಿ ಹೆಚ್ಚಿನ ಜನಸಂಖ್ಯೆ ಹೊಂದಿರುವ ರಾಷ್ಟ್ರ ಭಾರತವಾಗಿದ್ದು, ಮುಂಚೂಣಿಯಲ್ಲಿರುವ ಉತ್ಪಾದನಾ ಹಬ್ ಆಗಿದೆ ಎಂದು ರಷ್ಯಾ ತಿಳಿಸಿದೆ.

Limited Sputnik V Doses By April-End In India, 850 Million Doses Annually

ರಷ್ಯಾದ ಆರ್ ಡಿಐಎಫ್ ಭಾರತದ ಗ್ಲಾಂಡ್ ಫಾರ್ಮಾ, ಹೆಟೆರೊ ಬಯೋಫಾರ್ಮಾ, ಪ್ಯಾನೇಸಿಯಾ ಬಯೋಟೆಕ್, ಸ್ಟೆಲಿಸ್ ಬಯೋಫಾರ್ಮಾ ಮತ್ತು ವಿರ್ಚೋ ಬಯೋಟೆಕ್ ಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ವಾರ್ಷಿಕ 850 ಮಿಲಿಯನ್ ಡೋಸ್ ಗಳಷ್ಟು ಸ್ಪುಟ್ನಿಕ್ ಲಸಿಕೆಗಳನ್ನು ತಯಾರಿಸಲಿದೆ.

ರಷ್ಯಾದಲ್ಲಿ ನಡೆದಿರುವ ಕ್ಲಿನಿಕಲ್ ಟ್ರಯಲ್ ಗಳು ಹಾಗೂ ಭಾರತದಲ್ಲಿ ಡಾ. ರೆಡ್ಡೀಸ್ ಪ್ರಯೋಗಾಲಯದಲ್ಲಿ ನಡೆದಿರುವ ಮೂರನೇ ಹಂತದ ಹೆಚ್ಚುವರಿ ಸ್ಥಳೀಯ ಕ್ಲಿನಿಕಲ್ ಟ್ರಯಲ್ ಗಳ ದತ್ತಾಂಶಗಳನ್ನು ಪಡೆದು ಔಷಧ ನಿಯಂತ್ರಕ ಈ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಿದೆ.

English summary
Russian-made Covid vaccine Sputnik V, the third vaccine to be approved by India, will be manufactured by five pharma firms in the country and 850 million doses are going to be produced annually. However, limited doses are going to be available by the end of April.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X