ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಷೇತ್ರ ಬದಲಾವಣೆಯತ್ತ ಪ್ರಧಾನಿ ಮೋದಿ ಚಿತ್ತ: ಏನಿದು ರಾಜಕೀಯ ಒಳಮರ್ಮ?

|
Google Oneindia Kannada News

Recommended Video

ಲೋಕಸಭಾ ಚುನಾವಣೆ 2019 : ನರೇಂದ್ರ ಮೋದಿ ಕ್ಷೇತ್ರ ಬದಲಾವಣೆ ಸಾಧ್ಯತೆ | Oneindia Kannada

ಜನಪ್ರಿಯ ನಾಯಕರೊಬ್ಬರು ತಮ್ಮ ರಾಜಕೀಯ ಕರ್ಮಭೂಮಿಯಿಂದ ಹೊರತಾಗಿ, ಬೇರೆ ಕಡೆಯಿಂದ ಸ್ಪರ್ಧಿಸಿದರೆ, ಅದರ ಹಿಂದೆ ಬೇರೇನೋ ಲೆಕ್ಕಾಚಾರವಿದೆ ಎಂದೇ ವ್ಯಾಖ್ಯಾನಿಸಲಾಗುತ್ತದೆ.

2014ರ ಲೋಕಸಭಾ ಚುನಾವಣೆಯನ್ನು ಉದಾಹರಣೆಗೆ ತೆಗೆದುಕೊಳ್ಳುವುದಾದರೆ ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿ ತಮಗೆ ರಾಜಕೀಯ ನೆಲೆ ತಂದುಕೊಟ್ಟ ಗುಜರಾತಿನ ವಡೋದರ ಕ್ಷೇತ್ರದ ಜೊತೆಗೆ ಹಿಂದೂಗಳ ಧಾರ್ಮಿಕ ತಾಣ ವಾರಣಾಸಿಯಿಂದಲೂ ಸ್ಪರ್ಧಿಸಿದ್ದರು.

ಇದು, ದೇಶದಲ್ಲಿ ಅತಿಹೆಚ್ಚು ಲೋಕಸಭಾ ಸ್ಥಾನವನ್ನು ಹೊಂದಿರುವ ಉತ್ತರಪ್ರದೇಶದಲ್ಲಿ ಬಿಜೆಪಿಗೆ ಊಹಿಸಲೂ ಅಸಾಧ್ಯವಾದ ಫಸಲನ್ನು ತಂದುಕೊಟ್ಟಿತ್ತು. 80ಕ್ಷೇತ್ರಗಳ ಪೈಕಿ, ಬಿಜೆಪಿ 71ಸ್ಥಾನವನ್ನು ಗೆದ್ದಿತ್ತು. ದೆಹಲಿ ಬಿಟ್ಟು ವಾರಣಾಸಿಯಿಂದ ಮೋದಿಗೆ ಪೈಪೋಟಿ ನೀಡಲು ಹೋಗಿದ್ದ ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಅವರೆದುರು ಮೋದಿ, 371,784 ಭಾರೀ ಮತಗಳ ಅಂತರದಿಂದ ಗೆದ್ದಿದ್ದರು.

ನಿಮ್ಮ ಆಯ್ಕೆಯ ನಾಯಕ ಯಾರು? ನರೇಂದ್ರ ಮೋದಿ ಅಥವಾ ರಾಹುಲ್ ಗಾಂಧಿ? ನಿಮ್ಮ ಆಯ್ಕೆಯ ನಾಯಕ ಯಾರು? ನರೇಂದ್ರ ಮೋದಿ ಅಥವಾ ರಾಹುಲ್ ಗಾಂಧಿ?

ಈಗಿನ ರಾಜಕೀಯ ಲೆಕ್ಕಾಚಾರದ ಪ್ರಕಾರ, ಸಮಾಜವಾದಿ ಪಕ್ಷ ಮತ್ತು ಬಿಎಸ್ಪಿ ಏನು ಬಿಜೆಪಿಗೆ ಭಾರೀ ಪೈಪೋಟಿ ನೀಡಲಿದೆ ಎಂದು ಹೇಳಲಾಗುತ್ತಿದೆಯೋ, ಅವೆರಡು ಕಳೆದ ಚುನಾವಣೆಯಲ್ಲಿ ಗೆದ್ದದ್ದು ಐದು ಮತ್ತು ಸೊನ್ನೆ. ಕಾಂಗ್ರೆಸ್ ಗೆದ್ದದ್ದು ಬರೀ ಎರಡು, ಅದೂ ಸೋನಿಯಾ ಮತ್ತು ರಾಹುಲ್ ಗಾಂಧಿಯವರ ಸೀಟು.

ಮುಂಬರುವ ಲೋಕಸಭಾ ಚುನಾವಣೆಯಲ್ಲೂ, ಪ್ರಧಾನಿ ಮೋದಿ, ಕ್ಷೇತ್ರ ಬದಲಾವಣೆ ಮಾಡುವ ಸಾಧ್ಯತೆಯಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಬಿಜೆಪಿಗೆ ಅಷ್ಟೇನೂ ನೆಲೆಯಿಲ್ಲದ ರಾಜ್ಯದಲ್ಲಿ ಚುನಾವಣಾ ಕಣಕ್ಕಿಳಿದು, ಕಳೆದ ಚುನಾವಣೆಯ ತಂತ್ರಗಾರಿಕೆಯನ್ನೇ ಅಮಿತ್ ಶಾ ಮತ್ತೆ ಪ್ರಯತ್ನಿಸಲು ಹೊರಟಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಕರ್ನಾಟಕದಲ್ಲಿ ಬಿಜೆಪಿಗೆ ನೆಲೆಯಿದೆ, ಹಾಗಿದ್ದರೆ, ಮೋದಿ ಎಲ್ಲಿಂದ ಕಣಕ್ಕಿಳಿಯುವ ಸಾಧ್ಯತೆಯಿದೆ, ಮುಂದೆ ಓದಿ..

ತೆಲಂಗಾಣದಿಂದ ಆಫರ್

ತೆಲಂಗಾಣದಿಂದ ಆಫರ್

ಇದೇ ಅಕ್ಟೋಬರ್ ಮೊದಲ ವಾರದಲ್ಲಿ ತೆಲಂಗಾಣದ ಹಿರಿಯ ಬಿಜೆಪಿ ಮುಖಂಡ ಮತ್ತು ಸಂಸದ ಬಂಡಾರು ದತ್ತಾತ್ರೇಯ, ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್ ಶಾಗೆ ಸಿಕಂದರಾಬಾದ್ ಕ್ಷೇತ್ರದಿಂದ ಮೋದಿಯನ್ನು ಕಣಕ್ಕಿಳಿಸಿ ಎನ್ನುವ ಆಫರ್ ನೀಡಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ದತ್ತಾತ್ರೇಯ ಇದೇ ಕ್ಷೇತ್ರದಿಂದ ಗೆದ್ದಿದ್ದರು. ಆಂಧ್ರ ಮತ್ತು ತೆಲಂಗಾಣದಲ್ಲಿ ಬಿಜೆಪಿಯ ಪ್ರಾಭಲ್ಯವಿರುವ ಕೆಲವೇ ಕೆಲವು ಕ್ಷೇತ್ರಗಳಲ್ಲಿ ಇದೂ ಒಂದು. ಮೋದಿಗಾಗಿ ಬಂಡಾರು ಈ ಕ್ಷೇತ್ರವನ್ನು ಬಿಟ್ಟುಕೊಡಲು ಮುಂದಾಗಿದ್ದಾರೆ.

ಕರ್ನಾಟಕದಿಂದ ಲೋಕಸಭೆಗೆ ಮೋದಿ ಸ್ಪರ್ಧೆ: ಬಿಎಸ್ವೈ ಪ್ರತಿಕ್ರಿಯೆ ಏನು? ಕರ್ನಾಟಕದಿಂದ ಲೋಕಸಭೆಗೆ ಮೋದಿ ಸ್ಪರ್ಧೆ: ಬಿಎಸ್ವೈ ಪ್ರತಿಕ್ರಿಯೆ ಏನು?

ಚಂದ್ರಬಾಬು ನಾಯ್ಡು ಈಗ ಬಿಜೆಪಿಯಿಂದ ದೂರವಾಗಿದ್ದಾರೆ

ಚಂದ್ರಬಾಬು ನಾಯ್ಡು ಈಗ ಬಿಜೆಪಿಯಿಂದ ದೂರವಾಗಿದ್ದಾರೆ

ಕಳೆದ ಚುನಾವಣೆಯಲ್ಲಿ ತೆಲುಗುದೇಶಂ ಎನ್ಡಿಎ ಮೈತ್ರಿಕೂಟದಲ್ಲಿತ್ತು, ಆದರೆ ಚಂದ್ರಬಾಬು ನಾಯ್ಡು ಈಗ ಬಿಜೆಪಿಯಿಂದ ದೂರವಾಗಿರುವುದರಿಂದ, ಆಂಧ್ರದಲ್ಲಿ ವೈಎಸ್ ಜಗನ್ ಮತ್ತು ತೆಲಂಗಾಣದಲ್ಲಿ ಕೆಸಿಆರ್ ಜೊತೆ ಅವಶ್ಯಕತೆ ಬಿದ್ದಲ್ಲಿ ಚುನಾವಾಣೋತ್ತರ ಮೈತ್ರಿಯಾಗುವ ಸಾಧ್ಯತೆಯಿದೆ. ಈ ಎರಡು ರಾಜ್ಯಗಳು ಒಟ್ಟು 42ಕ್ಷೇತ್ರಗಳನ್ನು ಹೊಂದಿದೆ. ಹಾಗಾಗಿ, ಸಿಕಂದರಾಬಾದ್ ಕ್ಷೇತ್ರದಿಂದ ಸ್ಪರ್ಧಿಸಿದರೆ, ಪಶ್ಚಿಮ ಭಾರತ ಗುಜರಾತ್ ಮೂಲದ ಮೋದಿ, ದಕ್ಷಿಣಭಾರತದ ಕ್ಷೇತ್ರವೊಂದರಲ್ಲಿ ಸ್ಪರ್ಧಿಸಿದರೆ ಪ್ರಾಂತ್ಯಾವಾರು ತಾರತಮ್ಯ, ಬಿಜಿಪಿಗೆ ಇಲ್ಲ ಎನ್ನುವ ಲೆಕ್ಕಾಚಾರ ಅಮಿತ್ ಶಾ ಅವರದ್ದು ಎನ್ನಲಾಗುತ್ತಿದೆ. ಇದೊಂದು ಸಾಧ್ಯತೆ..

ಗುಜರಾತ್‌ಅನ್ನು ದಕ್ಷಿಣ ಕೊರಿಯಾದಂತೆ ಪರಿವರ್ತಿಸಲು ಬಯಸಿದ್ದರಂತೆ ಮೋದಿಗುಜರಾತ್‌ಅನ್ನು ದಕ್ಷಿಣ ಕೊರಿಯಾದಂತೆ ಪರಿವರ್ತಿಸಲು ಬಯಸಿದ್ದರಂತೆ ಮೋದಿ

ಪೂರ್ವ ಭಾರತದತ್ತ ಹೋಗಲು ಬಿಜೆಪಿ ಸಿದ್ದತೆ

ಪೂರ್ವ ಭಾರತದತ್ತ ಹೋಗಲು ಬಿಜೆಪಿ ಸಿದ್ದತೆ

ಹಿಂದೂ ಧಾರ್ಮಿಕ ಕ್ಷೇತ್ರ ಎಂದಾಗ ಪ್ರಮುಖವಾಗಿ ಬರುವ ಹೆಸರು ವಾರಣಾಸಿ, ಕಳೆದ ಚುನಾವಣೆಯಲ್ಲಿ ಬಿಜೆಪಿ ಈ ರಾಜಕೀಯ ಲೆಕ್ಕಾಚಾರವನ್ನು ಪ್ರಯೋಗಿಸಿ ಸೈ ಎನಿಸಿಕೊಂಡಿತ್ತು. ಈಗ, ಉತ್ತರ ಭಾರತದಲ್ಲಿ ಕಳೆದ ಚುನಾವಣೆಯಲ್ಲಿ ಇದ್ದಷ್ಟು ಮೋದಿ ಹವಾ ಇಲ್ಲದೇ ಇರುವುದರಿಂದ, ಇದೇ ಮಂತ್ರವನ್ನು ಇಟ್ಟುಕೊಂಡು ಪೂರ್ವ ಭಾರತದತ್ತ ಹೋಗಲು ಬಿಜೆಪಿ ಸಿದ್ದತೆ ನಡೆಸುತ್ತಿದೆ ಎನ್ನುವುದು ಲೇಟೆಸ್ಟ್ ಸುದ್ದಿ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್, ರೋಡ್ ಶೋಗೆ ಜನಸಾಗರ: ಮೋದಿ ವಿರುದ್ದ ವಾಗ್ದಾಳಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್, ರೋಡ್ ಶೋಗೆ ಜನಸಾಗರ: ಮೋದಿ ವಿರುದ್ದ ವಾಗ್ದಾಳಿ

ಒರಿಸ್ಸಾದ ಪುರಿಯಿಂದ ಮೋದಿ ಕಣಕ್ಕಿಳಿಸಲು ಅಮಿತ್ ಶಾ ನಿರ್ಧಾರ?

ಒರಿಸ್ಸಾದ ಪುರಿಯಿಂದ ಮೋದಿ ಕಣಕ್ಕಿಳಿಸಲು ಅಮಿತ್ ಶಾ ನಿರ್ಧಾರ?

ಪೂರ್ವ ಭಾರತದ ಪ್ರಸಿದ್ದ ಧಾರ್ಮಿಕ ಕ್ಷೇತ್ರ ಒರಿಸ್ಸಾದ ಪುರಿಯಿಂದ ಮೋದಿಯನ್ನು ಕಣಕ್ಕಿಳಿಸಲು ಅಮಿತ್ ಶಾ ಆಲೋಚಿಸುತ್ತಿದ್ದಾರೆ ಎನ್ನುವ ಮಾಹಿತಿಯಿದೆ. ಚಂದ್ರಬಾಬು ನಾಯ್ಡು, ಎನ್ಡಿಎ ಸರಕಾರದ ವಿರುದ್ದ ಅವಿಶ್ವಾಸ ಗೊತ್ತುವಳಿ ಮಂಡಿಸಿದಾಗ, ನವೀನ್ ಪಟ್ನಾಯಕ್ ಅವರ ಬಿಜೆಡಿ ತಟಸ್ಥ ಧೋರಣೆ ತಾಳಿತ್ತು. ಇದು ಒಂದರ್ಧದಲ್ಲಿ ಬಿಜೆಪಿ ಜೊತೆ ಚುನಾವಣಾಪೂರ್ವ ಅಥವಾ ಚುನಾವಾಣೋತ್ತರ ಮೈತ್ರಿಯ ಸಂಕೇತವಾಗಿದೆ ಎಂದು ಬಿಂಬಿಸಲಾಗುತ್ತಿದೆ.

ಜ್ಯೋತಿಷ್ಯ ವಿಶ್ಲೇಷಣೆ: ರಷ್ಯಾ, ಅಮೆರಿಕ ಪೈಕಿ ಮೋದಿ ಆಯ್ಕೆ ಯಾವುದಿರಲಿ? ಜ್ಯೋತಿಷ್ಯ ವಿಶ್ಲೇಷಣೆ: ರಷ್ಯಾ, ಅಮೆರಿಕ ಪೈಕಿ ಮೋದಿ ಆಯ್ಕೆ ಯಾವುದಿರಲಿ?

ಪೂರ್ವ ಭಾರತದ ಕ್ಷೇತ್ರದಿಂದಲೂ ಮೋದಿ ಸ್ಪರ್ಧಿಸಿದರೆ ಆಶ್ಚರ್ಯವಿಲ್ಲ

ಪೂರ್ವ ಭಾರತದ ಕ್ಷೇತ್ರದಿಂದಲೂ ಮೋದಿ ಸ್ಪರ್ಧಿಸಿದರೆ ಆಶ್ಚರ್ಯವಿಲ್ಲ

ಕಳೆದ ಚುನಾವಣೆಯಲ್ಲಿ ಪುರಿ ಕ್ಷೇತ್ರದಿಂದ ಬಿಜೆಡಿ ಅಭ್ಯರ್ಥಿ ಜಯಸಾಧಿಸಿದ್ದರು, ಬಿಜೆಪಿ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತ್ತು. ಈಗ ಅಲ್ಲಿನ ಪರಿಸ್ಥಿತಿ ಹಿಂದಿನಂತಿಲ್ಲ, ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಬಿಜೆಪಿ ತನ್ನ ಬಲಪ್ರದರ್ಶನ ಮಾಡಿತ್ತು. ತಾನಾಯಿತು ತನ್ನ ರಾಜ್ಯವಾಯಿತು ಎನ್ನುವ ಲೆಕ್ಕಾಚಾರದಲ್ಲಿರುವ ನವೀನ್ ಪಟ್ನಾಯಕ್, ಹಿಂದಿನಿಂದಲೂ ಬಿಜೆಪಿ ಮೇಲೆ ಸ್ವಲ್ಪ ಸಾಫ್ಟ್ ಕಾರ್ನರ್ ಜಾಸ್ತಿ. ಹಾಗಾಗಿ, ಪೂರ್ವ ಭಾರತದ ಕ್ಷೇತ್ರದಿಂದಲೂ ಮೋದಿ ಸ್ಪರ್ಧಿಸಿದರೆ ಆಶ್ಚರ್ಯ ಪಡಬೇಕಾಗಿಲ್ಲ.

English summary
Like PM candiate Narendra Modi consted in Varanasi in Uttar Pradesh in the last parliament election: Will PM Modi may constest in any one of the constituency in East or South India in the upcoming general election 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X