ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೌರಶಕ್ತಿ ಮೂಲಕ ಮನೆಯ ದೀಪ ಬೆಳಗಿಸಿ, ಹಣದೊಂದಿಗೆ ಪರಿಸರ ಉಳಿಸಿ

Google Oneindia Kannada News

ದಿನದಿನಕ್ಕೂ ಮಾಲಿನ್ಯ ಪ್ರಮಾಣ ಏರುತ್ತಿದೆ. ಇಂಧನದ ಸ್ವಾಭಾವಿಕ ಮೂಲಗಳೇ ಕಡಿಮೆ ಆಗುತ್ತಿದ್ದು. ಹಸಿರು ಹಾಗೂ ಸ್ಥಿರವಾದ ಇಂಧನ ಮೂಲಗಳು ಈ ಕ್ಷಣದ ಅಗತ್ಯವಾಗಿದೆ. ಮನೆಗಳಿಗೆ ಕೂಡ ಸೌರಶಕ್ತಿ ಬಳಕೆ ಮಾಡುವುದನ್ನು ಜನಪ್ರಿಯಗೊಳಿಸಿದ ಮೊದಲ ಕಂಪೆನಿಗಳಲ್ಲಿ ವರ್ಚಸ್ವ ಕೂಡ ಒಂದು.

ಜಗತ್ತಿನಲ್ಲೇ ಅತಿ ಹೆಚ್ಚು ಪ್ರಮಾಣದ ವಿದ್ಯುತ್ ಬಳಕೆ ಮಾಡುವ ರಾಷ್ಟ್ರಗಳ ಪೈಕಿ ಭಾರತಕ್ಕೆ ನಾಲ್ಕನೇ ಸ್ಥಾನ. ವಿದ್ಯುತ್ ಶಕ್ತಿಗೆ ದಿನದಿನಕ್ಕೂ ಬೇಡಿಕೆ ಹೆಚ್ಚುತ್ತಿದೆ. ಸ್ವಾಭಾವಿಕ ಶಕ್ತಿ ಮೂಲಗಳಿಂದ ಈ ಬೇಡಿಕೆಯನ್ನು ಪೂರೈಸುವುದು ಕಷ್ಟ. ಹೀಗೇ ಮುಂದುವರಿದರೆ ವಿದ್ಯುತ್ ಕೊರತೆ ಎದುರಾಗುತ್ತದೆ. ಆದ್ದರಿಂದಲೇ ಸೌರಶಕ್ತಿ ಎಂಬುದು ನಮ್ಮ ದೇಶಕ್ಕೆ ಬಹಳ ಮುಖ್ಯವಾದದ್ದು.

Light up your house with Solar power

ಸೋಲಾರ್ ಇಪಿಸಿ ಸೇವೆ, ಮನೆಯ ಮೇಲೆ ಹಾಕುವ ರೂಫ್ ಟಾಪ್ ಸಲ್ಯೂಷನ್, ಕಾರ್ಯ ಚಟುವಟಿಕೆ ಹಾಗೂ ನಿರ್ವಹಣೆಯನ್ನು 'ವರ್ಚಸ್ವ'ದಿಂದ ಮಾಡುತ್ತಿದ್ದು, ವಿವಿಧ ಸೌರಶಕ್ತಿಯ ಪರಿಹಾರ ಹಾಗೂ ಸೇವೆಗಳನ್ನು ಒದಗಿಸಲಾಗುತ್ತದೆ. 2011ರಲ್ಲಿ ಅರಂಭವಾದ ಈ ಕಂಪೆನಿಯು ಸೌರಶಕ್ತಿ ಹಾಗೂ ವಿದ್ಯುತ್ ಕ್ಷೇತ್ರದಲ್ಲಿ ಉತ್ತಮವಾದ ಕೆಲಸ ಮಾಡುತ್ತಿದೆ.

ವರ್ಚಸ್ವ ಕಂಪೆನಿಯಲ್ಲಿ ಅನುಭವಿಗಳ ಉತ್ತಮ ತಂಡವಿದೆ. ಇಲ್ಲಿಯವರೆಗೆ 100 ಮೆಗಾ ವಾಟ್ ಗಿಂತ ಹೆಚ್ಚಿನ ಸಾಮರ್ಥ್ಯದ ವಿದ್ಯುತ್ ಉತ್ಪಾದನೆಯ ಸೌರ ಉಪಕರಣಗಳನ್ನು ಅಳವಡಿಸಿದ ಅನುಭವ ಈ ತಂಡಕ್ಕೆ ಇದೆ. ಇದರಿಂದ ಬರೀ ಉಪಕರಣ ಅಳವಡಿಸುವುದಷ್ಟೇ ಅಲ್ಲ, ಯಾವ ಗ್ರಾಹಕರಿಗೆ ಏನು ಅಗತ್ಯ ಪೂರೈಸಬೇಕು ಎಂಬ ಬಗ್ಗೆ ಕೂಡ ಚೆನ್ನಾಗಿ ಯೋಜನೆ ರೂಪಿಸಬಲ್ಲವರಾಗಿದ್ದಾರೆ.

Light up your house with Solar power

ಈ ತಂಡವು ಹಲವು ಸೌರ ಯೋಜನೆಗಳನ್ನು ಸಾಕಾರಗೊಳಿಸಿದೆ. ಅವುಗಳಲ್ಲಿ ರೂಫ್ ಟಾಪ್ ಮತ್ತು ನೆಲದ ಮೇಲೆ ಅಳವಡಿಸುವ ಎಸ್ ಪಿವಿಗಳು ಕೂಡ ಸೇರಿವೆ. 80 ಕಿಲೋ ವಾಟ್ ನಿಂದ 10 ಮೆಗಾ ವಾಟ್ ವರೆಗೆ ಹಲವು ಯೋಜನೆಗಳನ್ನು ವರ್ಚಸ್ವ ಕಂಪೆನಿ ತುಂಬ ಯಶಸ್ವಿಯಾಗಿ ಮಾಡಿಕೊಟ್ಟಿದೆ.

ಭಾರತದ ವಿವಿಧ ರಾಜ್ಯಗಳಾದ ರಾಜಸ್ತಾನ, ಕರ್ನಾಟಕ ಹಾಗೂ ಮಧ್ಯಪ್ರದೇಶದಲ್ಲಿ ಅವುಗಳನ್ನು ನೋಡಬಹುದು. ವಿವಿಧ ಹೋತೆಲ್ ಗಳು, ಗೋದಾಮುಗಳು ಹಾಗೂ ಲಾಜಿಸ್ಟಿಕ್ಸ್ ಕಂಪೆನಿಗಳಿಗಾಗಿ ವರ್ಚಸ್ವದಿಂದ ಸೇವೆ ಒದಗಿಸಲಾಗುತ್ತಿದೆ.

Light up your house with Solar power

ಈ ರೀತಿ ಸೌರ ವಿದ್ಯುತ್ ಘಟಕಗಳ ಯೋಜನೆಗಳು ಮಾತ್ರವಲ್ಲ, ಇದರ ಹೊರತಾಗಿ ವರ್ಚಸ್ವ ಕಂಪೆನಿಯು ಸೌರ ಶಕ್ತಿ ಬಳಕೆ ಬಗ್ಗೆ ಜನರಿಗೆ ಅರಿವು ಮೂಡಿಸುತ್ತಿದೆ ಮತ್ತು ನವೀಕೃತ ಶಕ್ತಿ ಮೂಲಗಳ ಬಗ್ಗೆ ತಿಳಿವಳಿಕೆ ನೀಡುತ್ತಿದೆ.

ಸೌರ ಶಕ್ತಿ ಬಳಕೆಗೆ ಭಾರತದಲ್ಲಿ ಅಗಾಧವಾದ ಅವಕಾಶಗಳಿವೆ. ಏಕೆಂದರೆ, ದೇಶದ ಬಹುತೇಕ ಭಾಗದಲ್ಲಿ, ವರ್ಷದ ಬಹು ಸಮಯ ಸೂರ್ಯನ ಪ್ರಖರತೆ ಹೆಚ್ಚು. ಇಂಥ ಸೌರಶಕ್ತಿಯನ್ನು ಬಳಸುವುದರಿಂದ ಯಾವುದೇ ಕಾರ್ಬನ್ ಪ್ರಮಾಣ ವಾತಾವರಣಕ್ಕೆ ಬಿಡುಗಡೆಯಾಗುವುದಿಲ್ಲ. ಆದ್ದರಿಂದಲೇ ಸೌರಶಕ್ತಿಯು ಭಾರತದಲ್ಲಿ ಪ್ರಮುಖ ನವೀಕೃತ ಇಂಧನ ಮೂಲವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X