ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಪೀಡಿತರಲ್ಲಿ ಕಾಣಿಸಿಕೊಳ್ಳುತ್ತಿದೆ ಮತ್ತೊಂದು ಮಾದರಿಯ ಸೋಂಕು, ಎಷ್ಟು ಅಪಾಯಕಾರಿ ಗೊತ್ತೇ?

|
Google Oneindia Kannada News

ನವದೆಹಲಿ,ಫೆಬ್ರವರಿ 04: ಭಾರತದಲ್ಲಿ ಕೊರೊನಾ ಪೀಡಿತರಲ್ಲಿಲಿ ಕಂಡುಬರುತ್ತಿರುವ ಹೊಸ ಸೋಂಕಿನಿಂದ ರೋಗಿಗಳ ಜೀವಕ್ಕೆ ಅಪಾಯ ಕಾದಿದೆ.

ಕೊರೊನಾದಿಂದ (Covid-19) ಗುಣಮುಖರಾಗಿರುವ ರೋಗಿಗಳಲ್ಲಿ ಹಲವು ಬಾರಿ ಕೆಮ್ಮು, ಜ್ವರ, ನೆಗಡಿಗಳಂತಹ ಲಕ್ಷಣಗಳು ಪದೇ ಪದೇ ಕಾಣಿಸಿಕೊಳ್ಳುತ್ತವೆ.

ಆದರೆ, ಇದರಿಂದ ಕೆಲ ಸಮಯದ ನಂತರ ಜನರು ಚೇತರಿಸಿಕೊಳ್ಳುತ್ತಾರೆ. ಆದರೆ, ಇದೀಗ ಭಾರತದಲ್ಲಿ ಕಾಣಿಸಿಕೊಂಡಿರುವ ಕೆಲ ಪ್ರಕರಣಗಳು ಬೀಚ್ಚಿಬೀಳಿಸಿವೆ. ಈ ಪ್ರಕರಣಗಳಲ್ಲಿ ಕೊರೊನಾದಿಂದ ಗುಣಮುಖರಾಗಿರುವ ರೋಗಿಗಳು ಹೊಸ ಮಾರಕ ಕಾಯಿಲೆಗೆ ಬಲಿಯಾಗುತ್ತಿದ್ದಾರೆ.

ಕೋವಿಡ್-19 ಲಸಿಕೆ: 1 ಕೋಟಿ ಕೋವಿಶೀಲ್ಡ್‌ ಲಸಿಕೆ ಆರ್ಡರ್ ಮಾಡಿದ ಕೇಂದ್ರ ಸರ್ಕಾರಕೋವಿಡ್-19 ಲಸಿಕೆ: 1 ಕೋಟಿ ಕೋವಿಶೀಲ್ಡ್‌ ಲಸಿಕೆ ಆರ್ಡರ್ ಮಾಡಿದ ಕೇಂದ್ರ ಸರ್ಕಾರ

ಈ ರೋಗದಲ್ಲಿ ರೋಗಿಗಳು ಸಾವನ್ನಪ್ಪುವ ಸಾಧ್ಯತೆ ಶೇ.50 ರಷ್ಟಿರುತ್ತದೆ ಎನ್ನಲಾಗಿದೆ. ಈ ಹೊಸ ರೋಗಕ್ಕೆ ಮ್ಯೂಕರ್ಮೈಕೊಸಿಸ್ (Mucormycosis) ಎಂದು ಹೆಸರಿಸಲಾಗಿದೆ.ಈ ಇನ್‌ಫೆಕ್ಷನ್ ಕ್ಯಾನ್ಸರ್‌ಗಿಂತಲೂ ಅಪಾಯಕಾರಿಯಾಗಿದ್ದು, ಅದಕ್ಕಿಂತಲೂ ವೇಗವಾಗಿ ದೇವಹವನ್ನು ಆವರಿಸಿಕೊಳ್ಳುತ್ತದೆ.

ಹಾಗಾದರೆ ಈ ಇನ್‌ಫೆಕ್ಷನ್ ಆವರಿಸಿಕೊಳ್ಳಲು ಕಾರಣವೇನೆಂಬುದನ್ನು ಹುಡುಕುತ್ತಾ ಹೋದರೆ ದೇಹದಲ್ಲಿರುವ ರೋಗ ನಿರೋಧಕ ಶಕ್ತಿ ಕೊರತೆಯೇ ಕಾರಣ ಎಂದು ಹೇಳಲಾಗಿದೆ.

ದೇಹವನ್ನು ಶುಚಿಯಾಗಿಟ್ಟುಕೊಳ್ಳುವುದು,ಶುಭ್ರ ಮಾಸ್ಕ್‌ಗಳನ್ನು ಧರಿಸುವುದು, ನಿತ್ಯ ಬ್ರಷ್ ಮಾಡುವುದರಿಂದ ಈ ಇನ್‌ಫೆಕ್ಷನ್ ದೂರ ಇಡಬಹುದು.

ಏನಿದು ಮ್ಯೂಕರ್ಮೈಕೊಸಿಸ್ (Mucormycosis)?

ಏನಿದು ಮ್ಯೂಕರ್ಮೈಕೊಸಿಸ್ (Mucormycosis)?

ಮ್ಯೂಕರ್ಮೈಕೊಸಿಸ್ (Mucormycosis) ಒಂದು ಫಂಗಲ್ ಇನ್ಫೆಕ್ಷನ್ ಕಾಯಿಲೆಯಾಗಿದೆ. ಇದರಿಂದ ರೋಗಿಗಳು ಬದುಕುಳಿಯುವ ಸಾಧ್ಯತೆ ಕೇವಲ ಶೇ.50 ರಷ್ಟು ಇರುತ್ತದೆ. ಕೊರೊನಾ ರೋಗದಿಂದ ಚೇತರಿಸಿಕೊಂಡ ಜನರಲ್ಲಿ ಈ ರೋಗ ಕಾಣಿಸಿಕೊಳ್ಳುತ್ತಿದೆ. ಇದರಲ್ಲಿ ಜನರ ಕಣ್ಣಿನ ಗುಡ್ಡೆಗಳು ಹೊರಬರುತ್ತವೆ. ಒಂದು ವೇಳೆ ರೋಗಿ ಈ ರೋಗದಿಂದ ಗುಣಮುಖನಾದರೂ ಕೂಡ ಆತ ದೃಷ್ಟಿ ಕಳೆದುಕೊಳ್ಳುತ್ತಾನೆ ಎನ್ನಲಾಗಿದೆ

ಕಳೆದ ಮೂರು ತಿಂಗಳಿನಲ್ಲಿ 40 ಕ್ಕೂ ಹೆಚ್ಚಿನ ಪ್ರಕರಣಗಳು

ಕಳೆದ ಮೂರು ತಿಂಗಳಿನಲ್ಲಿ 40 ಕ್ಕೂ ಹೆಚ್ಚಿನ ಪ್ರಕರಣಗಳು

ಮ್ಯೂಕರ್ಮೈಕೊಸಿಸ್ (Mucormycosis) ಕಾಯಿಲೆಯ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ಅಧ್ಯಯನ ನಡೆಸುತ್ತಿರುವ ಡಾ. ಅತುಲ್ ಪಟೇಲ್ ಹೇಳುವ ಪ್ರಕಾರ, ಕೊರೊನಾ ರೋಗಿಗಳಲ್ಲಿ ಈ ರೋಗ ವ್ಯಾಪಕವಾಗಿ ಹರಡುತ್ತಿದೆ ಎಂದಿದ್ದಾರೆ. ಕಳೆದ ಮೂರು ತಿಂಗಳಿನಲ್ಲಿ ಮ್ಯೂಕರ್ಮೈಕೊಸಿಸ್ (Mucormycosis)ನ 40 ಕ್ಕೂ ಹೆಚ್ಚಿನ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಅವರು ಹೇಳಿದ್ದಾರೆ. ಕೊರೊನಾ ರೋಗದಿಂದ ರೋಗ ಪ್ರತಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಡಯಾಬಿಟಿಸ್ ಹಾಗೂ ಚಟಕ್ಕೆ ಬಲಿಯಾದ ವ್ಯಕ್ತಿಗಳಲ್ಲಿಯೂ ಈ ಇನ್ಫೆಕ್ಷನ್ ಹರಡುವ ಸಾಧ್ಯತೆ ಹೆಚ್ಚು ಎಂದು ಡಾ.ಪಟೇಲ್ ಹೇಳಿದ್ದಾರೆ. ಮೊದಲು ತಿಂಗಳಿಗೆ ಒಂದು ಪ್ರಕರಣವನ್ನು ನೋಡುತ್ತಿದ್ದರೆ ಈಗ ದಿನಕ್ಕೆ ಎರಡರಿಂದ ಮೂರು ಪ್ರಕರಣಗಳು ಪತ್ತೆಯಾಗುತ್ತಿವೆ.

5 ರಲ್ಲಿ ಇಬ್ಬರು ರೋಗಿಗಳು ಸಾವು

5 ರಲ್ಲಿ ಇಬ್ಬರು ರೋಗಿಗಳು ಸಾವು

ಆಂಗ್ಲ ವೃತ್ತಪತ್ರಿಕೆ 'ದಿ ಟೈಮ್ಸ್ ಆಫ್ ಇಂಡಿಯಾ'ದಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ ಅಹ್ಮದಾಬಾದ್ ರೆಟಿನಾ ಅಂಡ್ ಆಕ್ಯುಲರ್ ಟ್ರಾಮಾ ಸರ್ಜನ್ ಡಾ.ಪಾರ್ಥ್ ರಾಣಾ ಈ ರೋಗದಿಂದ ಬಳಲುತ್ತಿರುವವರ ಕುರಿತು ಮಾಹಿತಿ ನೀಡಿದ್ದಾರೆ. ರೋಗದ ಕುರಿತು ಮಾಹಿತಿ ನೀಡಿರುವ ಅವರು, ಈ ರೋಗದಿಂದ ಬಳಲುತ್ತಿದ್ದ ಐವರು ರೋಗಿಗಳ ಪೈಕಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದಿದ್ದಾರೆ. ಬದುಕುಳಿದ ಇಬ್ಬರು ತಮ್ಮ ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾರೆ. ಈ ಎಲ್ಲಾ ರೋಗಿಗಳು ಕೊವಿಡ್ 19 (Covid-19) ರೋಗದಿಂದ ಚೇತರಿಸಿಕೊಂಡಿದವರಾಗಿದ್ದರು.

ಡಯಾಬಿಟಿಸ್ ರೋಗಿಗಳಿಗೆ ಹೆಚ್ಚು ಅಪಾಯ

ಡಯಾಬಿಟಿಸ್ ರೋಗಿಗಳಿಗೆ ಹೆಚ್ಚು ಅಪಾಯ

ಈ ರೋಗಕ್ಕೆ ತುತ್ತಾದ ರೋಗಿಗಳು ಸಕ್ಕರೆ ಕಾಯಿಲೆಗೆ ಗುರಿಯಾದ ರೋಗಿಗಳಾಗಿದ್ದರು ಅಥವಾ ಯಾವುದಾದರೊಂದು ಚಟಕ್ಕೆ ಬಲಿಯಾಗಿದ್ದರು. ಇವರಲ್ಲಿ ರೋಗ ಪ್ರತಿರೋಧಕ ಶಕ್ತಿ ತುಂಬಾ ಕಡಿಮೆಯಾಗಿತ್ತು. ಕೊರೊನಾ ಕಾಲಕ್ಕೂ ಮೊದಲು ಮ್ಯೂಕರ್ಮೈಕೊಸಿಸ್ (Mucormycosis)ಕಾಯಿಲೆ ಹರಡಲು 15 ರಿಂದ 30 ದಿನಗಳ ಕಾಲಾವಕಾಶ ಬೇಕಾಗುತ್ತಿತ್ತು. ಆದರೆ ಈ ಎಲ್ಲಾ ರೋಗಿಗಳಲ್ಲಿ ಈ ರೋಗ ಕೇವಲ 2-3 ದಿನಗಳಲ್ಲಿ ಗಂಭೀರ ಸ್ವರೂಪ ಪಡೆದುಕೊಂಡಿದೆ ಎಂದು ಡಾ.ರಾಣಾ ಮಾಹಿತಿ ನೀಡಿದ್ದಾರೆ.

English summary
Doctors are reporting a rise in cases of a rare black fungal infection, called Mucormycosis, among COVID-19 patients in India. The life-threatening infection often occurs in people with weak immune systems, such as severe diabetes. It can be fatal if left untreated.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X