ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾದಿಂದಾಗಿ ಭಾರತದಲ್ಲಿ ಜನರ ಜೀವಿತಾವಧಿ 2 ವರ್ಷ ಕಡಿತ

|
Google Oneindia Kannada News

ಮುಂಬೈ, ಅಕ್ಟೋಬರ್ 23: ಕೊರೊನಾ ಸೋಂಕಿನಿಂದಾಗಿ ಭಾರತದಲ್ಲಿ ಜನರ ಜೀವಿತಾವಧಿ 2 ವರ್ಷ ಕಡಿತಗೊಂಡಿದೆ ಎಂಬುದು ತಿಳಿದುಬಂದಿದೆ.

ಕೋವಿಡ್-19 ಸುಮಾರು ಎರಡು ವರ್ಷಗಳ ಕಾಲ ಭಾರತದಲ್ಲಿನ ಮನುಷ್ಯರ ಜೀವಿತಾವಧಿಯಲ್ಲಿ ಕುಸಿತವನ್ನುಉಂಟುಮಾಡಿದೆ ಎಂದು ನಗರ ಮೂಲದ ಅಂತಾರಾಷ್ಟ್ರೀಯ ಜನಸಂಖ್ಯಾ ಅಧ್ಯಯನ ಸಂಸ್ಥೆಯ ವಿಜ್ಞಾನಿಗಳ ಅಂಕಿಅಂಶಗಳ ವಿಶ್ಲೇಷಣೆ ತಿಳಿಸಿದೆ.

ಭಾರತದಲ್ಲಿ ಕೋವಿಡ್ 2ನೇ ಅಲೆಯಂತಹ ವಿನಾಶಕಾರಿ ಅಲೆಯ ಸಾಧ್ಯತೆ ಇಲ್ಲ: ತಜ್ಞರುಭಾರತದಲ್ಲಿ ಕೋವಿಡ್ 2ನೇ ಅಲೆಯಂತಹ ವಿನಾಶಕಾರಿ ಅಲೆಯ ಸಾಧ್ಯತೆ ಇಲ್ಲ: ತಜ್ಞರು

ಕೊರೊನಾ ವೈರಸ್ ಸಾಂಕ್ರಾಮಿಕವು ವಿವಿಧ ಹಂತಗಳಲ್ಲಿ ಜನರ ಜೀವನದ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಇದೀಗ ನೂತನ ಅಧ್ಯಯನವೊಂದರ ಪ್ರಕಾರ ಕೋವಿಡ್ ನಿಂದಾಗಿ ಭಾರತದಲ್ಲಿ ಮನುಷ್ಯರ ಜೀವಿತಾವಧಿಯಲ್ಲಿ ಎರಡು ವರ್ಷ ಕಡಿತವಾಗಿದೆ ಎಂದು ತಿಳಿದುಬಂದಿದೆ.

Life Expectancy In India Dropped By 2 Years Due To COVID-19: Study

ದೇಶದಲ್ಲಿನ ಮರಣದ ಮಾದರಿಗಳ ಮೇಲೆ ಕೋವಿಡ್-19 ನ ಹೊರೆಯ ಪರಿಣಾಮಗಳನ್ನು ನೋಡಲು ಈ ಅಧ್ಯಯನವನ್ನು ನಡೆಸಲಾಗಿತ್ತು. ನವಜಾತ ಶಿಶುವಿನ ಜನನದ ಸಮಯದಲ್ಲಿ ಮರಣ ಪ್ರಮಾಣವು ಭವಿಷ್ಯದಲ್ಲಿ ಸ್ಥಿರವಾಗಿರುವುದಾದರೆ ನವಜಾತ ಶಿಶುವಿನ ಸರಾಸರಿ ವರ್ಷಗಳ ಆಧಾರದ ಮೇಲೆ ಜನನದ ಜೀವಿತಾವಧಿಯನ್ನು ಲೆಕ್ಕಹಾಕಲಾಗುತ್ತದೆ.

ಪ್ರೊಫೆಸರ್ ಯಾದವ್ ಅವರು ಕೈಗೊಂಡ ಈ ಅಧ್ಯಯನವು 'ಜೀವಿತಾವಧಿಯ ಅಸಮಾನತೆಯ ಉದ್ದ' ಎಂಬ ಅಂಶವನ್ನು ಸಹ ಒಳಗೊಂಡಿದೆ ಮತ್ತು ಕೋವಿಡ್-19 ಸಾಂಕ್ರಾಮಿಕ 39 ರಿಂದ 69 ವಯಸ್ಸಿನ ಪುರುಷರ ಗರಿಷ್ಠ ಜೀವಗಳನ್ನು ಬಲಿ ತೆಗೆದುಕೊಂಡಿದೆ ಎಂದು ಕಂಡುಹಿಡಿದಿದೆ.

ಸಾಂಕ್ರಾಮಿಕ ರೋಗದಿಂದಾಗಿ ಪುರುಷರು ಮತ್ತು ಮಹಿಳೆಯರಲ್ಲಿ ಜನನದ ಸಮಯದಲ್ಲಿ ಜೀವಿತಾವಧಿಯಲ್ಲಿನ ಕುಸಿತವನ್ನು ಸೂಚಿಸುವ ವಿಶ್ಲೇಷಣಾತ್ಮಕ ವರದಿಯು ಇತ್ತೀಚೆಗೆ 'ಬಿಎಂಸಿ ಪಬ್ಲಿಕ್ ಹೆಲ್ತ್' ಜರ್ನಲ್‌ನಲ್ಲಿ ಪ್ರಕಟವಾಗಿತ್ತು.

ಈ ಕುರಿತು ಐಐಪಿಎಸ್ ಪ್ರೊಫೆಸರ್ ಸೂರ್ಯಕಾಂತ್ ಯಾದವ್ ಅವರು ವರದಿಯನ್ನು ಬರೆದಿದ್ದು, '2019 ರಲ್ಲಿ ಜನನದ ಸಮಯದಲ್ಲಿ ಪುರುಷರಿಗೆ 69. 5 ವರ್ಷಗಳು ಮತ್ತು ಮಹಿಳೆಯರಿಗೆ 72 ವರ್ಷಗಳು. ಇದು 2020 ರಲ್ಲಿ ಕ್ರಮವಾಗಿ 67.5 ವರ್ಷ ಮತ್ತು 69.8 ವರ್ಷಗಳಿಗೆ ಇಳಿದಿದೆ ಎಂದು ವರದಿ ಹೇಳಿದೆ.

ಐಐಪಿಎಸ್ ನಿರ್ದೇಶಕ ಡಾ.ಕೆ.ಎಸ್. ಜೇಮ್ಸ್ ಮಾತನಾಡಿ, "ಪ್ರತಿ ಸಲ ನಾವು ಕೆಲವು ಸಾಂಕ್ರಾಮಿಕ ರೋಗಗಳಿಗೆ ತುತ್ತಾದಾಗ, ಜನನದ ಅಂಕಿಅಂಶಗಳಲ್ಲಿನ ಜೀವಿತಾವಧಿಯು ಕ್ಷೀಣಿಸುತ್ತಿದೆ.

ಉದಾಹರಣೆಗೆ, ಆಫ್ರಿಕನ್ ರಾಷ್ಟ್ರಗಳಲ್ಲಿ ಎಚ್ಐವಿ-ಏಡ್ಸ್ ಸಾಂಕ್ರಾಮಿಕ ರೋಗದ ನಂತರ, ಜೀವಿತಾವಧಿಯ ಸರಾಸರಿ ಕುಸಿದಿತ್ತು ಎಂದು ಹೇಳಿದ್ದಾರೆ.
ಸಾಮಾನ್ಯ ವರ್ಷಗಳಿಗೆ ಹೋಲಿಸಿದರೆ 2020 ರಲ್ಲಿ 35ರಿಂದ 79 ವಯಸ್ಸಿನವರು ಕೋವಿಡ್-19ಗೆ ಹೆಚ್ಚು ಬಲಿಯಾಗಿದ್ದಾರೆ. ಇದು ಈ ಗುಂಪಿನ ವಯಸ್ಸಿನವರ ಸಂಖ್ಯೆಯ ಕುಸಿತಕ್ಕೆ ಕಾರಣವಾಗಿದೆ ಎಂದು ಯಾದವ್ ಅಭಿಪ್ರಾಯಪಟ್ಟಿದ್ದಾರೆ.

ಭಾರತವು ಗುರುವಾರ ಬೆಳಗ್ಗೆ ದಾಖಲೆಯ 100 ಕೋಟಿ ಡೋಸ್ ಲಸಿಕೆ ನೀಡುವ ಮುಖಾಂತರ ಹೊಸ ಮೈಲಿಗಲ್ಲಿಗೆ ಸಾಕ್ಷಿಯಾಗಿದ್ದು, ಲಸಿಕೆ ಅಭಿಯಾನ ಆರಂಭವಾಗ 279 ದಿನಗಳಲ್ಲಿ ಭಾರತ 100 ಕೋಟಿ ಡೋಸ್ ಲಸಿಕೆ ಸಾಧನೆ ಮಾಡಿದಂತಾಗಿದೆ. ಈ ನಡುವೆ ಹೆಚ್ಚು ಲಸಿಕೆ ನೀಡಿದ ರಾಜ್ಯಗಳ ಪೈಕಿ ಕರ್ನಾಟಕಕ್ಕೂ ಸ್ಥಾನ ಸಿಕ್ಕಿದೆ.

ಮಹಾಮಾರಿ ಕೊರೊನಾ ವೈಸರ್ ವಿರುದ್ಧದ ಹೋರಾಟದ ನಿಟ್ಟಿನಲ್ಲಿ ಇದೇ ವರ್ಷದ ಜನವರಿ 16ರಂದು ದೇಶದಾದ್ಯಂತ ಕೋವಿಡ್ ಲಸಿಕೆ ಅಭಿಯಾನ ಆರಂಭಿಸಲಾಗಿತ್ತು. ಅತ್ಯಂತ ಅಲ್ಪ ಸಮಯದಲ್ಲಿ ಭಾರವತು ಶತಕೋಟಿ ಸಂಖ್ಯೆ ದಾಟಿರುವುದು, ಕೋವಿಡ್ ವಿರುದ್ಧದ ಹೋರಾಟಕ್ಕೆ ದೇಶದ ಜನರು ಹಾಗೂ ಸರ್ಕಾರ ತೋರಿಸಿರುವ ಭದ್ಧತೆಗೆ ಸಾಕ್ಷಿಯಾಗಿದೆ.

ಭಾರತವು 100 ಕೋಟಿ ಡೋಸ್ ದಾಟುತ್ತಿರುವ ವಿಶ್ವದ 2ನೇ ರಾಷ್ಟ್ರವಾಗಿದೆ. ಇದಕ್ಕೂ ಮೊದಲು ಚೀನಾ ಈ ಸಾಧನೆ ಮಾಡಿದ್ದಾಗಿ ಹೇಳಿಕೊಂಡಿತ್ತು.

ಭಾರತವು ಲಸಿಕೆಗೆ ಅರ್ಹವಿರುವ ಒಟ್ಟಾರೆ ಜನಸಂಖ್ಯೆ ಪೈಕಿ ಶೇ.75ರಷ್ಟು ಮಂದಿಗೆ ಕನಿಷ್ಠ ಒಂದು ಡೋಸ್ ಲಸಿಕೆ ನೀಡಿದೆ ಜೊತೆಗೆ ಶೇ.31ರಷ್ಟು ಮಂದಿಗೆ ಎರಡೂ ಡೋಸ್ ಗಳನ್ನು ನೀಡಲಾಗಿದೆ.

ಒಟ್ಟಾರೆ ಲಸಿಕೆಗೆ ಅರ್ಹರಾಗಿರುವವರಲ್ಲಿ ಶೇ.93ರಷ್ಟು ಜನರಿಗೆ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. 9 ರಾಜ್ಯಗಳಲ್ಲಿ ಮೊದಲ ಡೋಸ್ ಲಸಿಕೆ ನೀಡಿಕೆ ಪೂರ್ಣಗೊಳಿಸಲಾಗಿದೆ. ಇನ್ನು ಈ ವರ್ಷಾಂತ್ಯದೊಳಗೆ ಎಲ್ಲರಿಗೂ ಎರಡೂ ಡೋಸ್ ನೀಡಿಕೆಯತ್ತ ಗಮನ ಹರಿಸಲಾಗುವುದು ಎಂದು ತಿಳಿಸಿದೆ.

ಈ ನಡುವೆ ಹೆಚ್ಚು ಲಸಿಕೆ ನೀಡಿದ ರಾಜ್ಯಗಳ ಪೈಕಿ ಕರ್ನಾಟಕಕ್ಕೂ ಸ್ಥಾನ ದೊರೆತಿದ್ದು, ಅಭಿಯಾನ ಆರಂಭವಾದ ದಿನದಿಂದ ಈ ವರೆಗೂ ರಾಜ್ಯದಲ್ಲಿ 6.21 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಈ ಸಾಧನೆಯನ್ನು ವೈದ್ಯಕೀಯ ವೃತ್ತಿಪರರು ಮತ್ತು ತಜ್ಞರು ಶ್ಲಾಘಿಸಿದ್ದಾರೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ತಿಳಿಸಿದ್ದಾರೆ.

English summary
The COVID-19 pandemic, which has affected the lives of people worldwide, has also caused a drop in the life expectancy in India by almost two years, a statistical analysis by scientists of the city-based International Institute for Population Studies (IIPS) has revealed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X