ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Lapse ಆದ್ರೂ ಎಲ್ಐಸಿ ಪಾಲಿಸಿ ಪುನರ್ ಆರಂಭಿಸಲು ಅವಕಾಶ

|
Google Oneindia Kannada News

ನವದೆಹಲಿ, ನವೆಂಬರ್ 04: ಸರ್ಕಾರಿ ಸ್ವಾಮ್ಯದ ಅತಿದೊಡ್ಡ ವಿಮಾ ಸಂಸ್ಥೆ ಜೀವ ವಿಮಾ ನಿಗಮ(ಎಲ್ಐಸಿ) ತನ್ನ ಗ್ರಾಹಕರಿಗೆ ವಿಶೇಷ ಸೂಚನೆ ನೀಡಿದೆ. ಅವಧಿ ಮುಕ್ತಾಯಗೊಂಡು ನಿಷ್ಕ್ರಿಯಗೊಂಡ ವಿಮೆ ಯೋಜನೆಗಳನ್ನು ಪುನರ್ ಆರಂಭಿಸಲು ಅವಕಾಶ ಒದಗಿಸುತ್ತಿದೆ. ಈ ಮುಂಚೆ 2014ರ ಜನವರಿ 01ರ ನಂತರ ಪಡೆದ ಪಾಲಿಸಿಗಳು ಅವಧಿ ಮುಕ್ತಾಯವಾಗಿ ಲ್ಯಾಪ್ಸ್ ಆಗಿ ಎರಡು ವರ್ಷ ಕಳೆದಿದ್ದರೆ ಮತ್ತೊಮ್ಮೆ ಪುನರ್ ಆರಂಭಿಸಲು ಸಾಧ್ಯವಾಗುತ್ತಿರಲಿಲ್ಲ.

ಯಾವುದೇ ಪಾಲಿಸಿಯ ಪ್ರೀಮಿಯಂ ಅನ್ನು ದೀರ್ಘ ಕಾಲದವರೆಗೆ ಪಾವತಿಸದಿದ್ದರೆ ಮತ್ತು ಪ್ರೀಮಿಯಂ ಪಾವತಿಸದ ಕಾರಣ ನೀವು ಪಾಲಿಸಿ ಕಳೆದು ಹೋಗುತ್ತಿತ್ತು. ಆದರೆ ಈಗ ಇಂಥ ಪಾಲಿಸಿ ಮತ್ತೆ ಪ್ರಾರಂಭಿಸಬಹುದು. ಇದಕ್ಕಾಗಿ ಎಲ್‌ಐಸಿ ವಿಶೇಷ ಪುನರುಜ್ಜೀವನ ಅಭಿಯಾನವನ್ನು ನವೆಂಬರ್ 04ರಿಂದ ಆರಂಭಿಸಿದೆ.

LIC allows revival of lapsed policy of over 2 years

"ಈ ಪುನರುಜ್ಜೀವನ ಅಭಿಯಾನದಲ್ಲಿ ವಿಮೆ ಪಾಲಿಸಿಯನ್ನು ಪುನರ್ ಶುರು ಮಾಡಿದ್ರೆ ನೀವು ಪಾವತಿ ಮಾಡುವ ಹಣದಲ್ಲಿ ರಿಯಾಯಿತಿ ಸಿಗಲಿದೆ. ಆದರೆ ಮೂರು ವರ್ಷಕ್ಕಿಂತ ಕಡಿಮೆ ಅವಧಿಯಾಗಿದ್ದರೆ ನೀವು ಎಲ್‌ಐಸಿ ವಿಶೇಷ ಪುನರುಜ್ಜೀವನ ಅಭಿಯಾನದ ಪ್ರಯೋಜನ ಪಡೆಯಬಹುದು. ಈ ಸಮಯದಲ್ಲಿ ಪಾಲಿಸಿದಾರರು ತಮ್ಮ ಸ್ಥಗಿತಗೊಳಿಸಿದ ವಿಮೆಯನ್ನು ಪುನರಾರಂಭಿಸಲು ಸಾಧ್ಯವಾಗುತ್ತದೆ" ಎಂದು ಎಲ್ ಐಸಿ ವ್ಯವಸ್ಥಾಪಕ ನಿರ್ದೇಶಕ ವಿಪಿನ್ ಆನಂದ್ ಹೇಳಿದರು.

English summary
State-owned Life Insurance Corporation (LIC) on November 4 permitted its policyholders to revive their lapsed policies of over two years, a move that will help improve persistency ratio.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X