ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರರ ವಶದಲ್ಲಿರುವ ಶಿಕ್ಷಕರ ಬಿಡುಗಡೆ ಯಾವಾಗ?

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಆಗಸ್ಟ್ 3 : ಐಸ್‌ಎಸ್‌ಐಎಸ್ ಉಗ್ರರು ಅಪಹರಣ ಮಾಡಿದ್ದ ಭಾರತೀಯ ಪೈಕಿ ಇಬ್ಬರು ಕನ್ನಡಿಗರನ್ನು ರಕ್ಷಣೆ ಮಾಡಲಾಗಿದೆ. ಇನ್ನೂ ಇಬ್ಬರು ಶಿಕ್ಷಕರು ಉಗ್ರರ ವಶದಲ್ಲಿದ್ದು, ಶೀಘ್ರದಲ್ಲೇ ಅವರು ಬಿಡುಗಡೆಯಾಗುವ ಸಾಧ್ಯತೆ ಇದೆ.

ತೆಲಂಗಾಣ ಮತ್ತು ಆಂಧ್ರಪ್ರದೇಶದ ಬಲರಾಮ್ ಹಾಗೂ ಗೋಪಿಕೃಷ್ಣ ಅವರು ಇನ್ನೂ ಉಗ್ರರ ವಶದಲ್ಲಿದ್ದಾರೆ. ಇಬ್ಬರು ಸುರಕ್ಷಿತವಾಗಿದ್ದಾರೆ ಎಂದು ವಿದೇಶಾಂಗ ಇಲಾಖೆ ಹೇಳುತ್ತಿದೆ. ಆದರೆ, ಯಾವಾಗ ಬಿಡುಗಡೆಯಾಗಲಿದ್ದಾರೆ? ಎಂಬ ಮಾಹಿತಿ ಮಾತ್ರ ಲಭ್ಯವಾಗಿಲ್ಲ. [ಉಗ್ರರ ವಶದಿಂದ ಇಬ್ಬರು ಕನ್ನಡಿಗರ ರಕ್ಷಣೆ]

hyderabad

ಕೋಲಾರದ ವಿಜಯ್‍ ಕುಮಾರ್, ರಾಯಚೂರಿನ ಲಕ್ಷ್ಮೀಕಾಂತ್ ಮತ್ತು ತೆಲಂಗಾಣ ಮತ್ತು ಆಂಧ್ರಪ್ರದೇಶದ ಇಬ್ಬರು ಸೇರಿ ನಾಲ್ವರು ಶಿಕ್ಷಕರನ್ನು ಉಗ್ರರು ಶುಕ್ರವಾರ ಅಪಹರಿಸಿದ್ದರು. ಇವರಲ್ಲಿ ಕರ್ನಾಟಕದವರನ್ನು ಅಂದು ಸಂಜೆಯೇ ಬಿಡುಗಡೆ ಮಾಡಲಾಗಿದೆ. ಆದರೆ, ಇನ್ನಿಬ್ಬರು ಮಾತ್ರ ಇನ್ನು ಉಗ್ರರ ವಶದಲ್ಲಿದ್ದಾರೆ.[ನಾಲ್ವರು ಭಾರತೀಯರ ಅಪಹರಣ]

ಎರಡು ವಾಹನದಲ್ಲಿ ಅಪಹರಿಸಿದ್ದರು : ಐಎಸ್‌ಐಎಸ್ ಉಗ್ರರು ಎರಡು ಪ್ರತ್ಯೇಕ ವಾಹನಗಳಲ್ಲಿ ನಾಲ್ವರು ಶಿಕ್ಷಕರನ್ನು ಅಪಹರಣ ಮಾಡಿದ್ದರು. ಕರ್ನಾಟಕದ ಇಬ್ಬರು ಇದ್ದ ವಾಹನ ಬಲರಾಮ್ ಹಾಗೂ ಗೋಪಿಕೃಷ್ಣ ಅವರು ಇದ್ದ ಕಾರಿಗಿಂತ ಮುಂದಿತ್ತು. ಉಗ್ರರು ಅವರನ್ನು ಬೇರೆ-ಬೇರೆ ಪ್ರದೇಶಗಳಲ್ಲಿ ಒತ್ತಾಯಾಳಾಗಿ ಇಟ್ಟುಕೊಂಡಿದ್ದಾರೆ.

ಕರ್ನಾಟಕ ಇಬ್ಬರನ್ನು ಕತ್ತಲೆ ಕೋಣೆಯೊಂದರಲ್ಲಿ ಕೂಡಿ ಹಾಕಲಾಗಿತ್ತು. ಕೆಲವು ಗಂಟೆಗಳ ಬಳಿಕ ಅವರ ಬಳಿ ಬಂದ ಉಗ್ರ ಅವರ ವಿವರ ಪಡೆದಿದ್ದಾನೆ. ಅವರು ಶಿಕ್ಷಕರು ಎಂದು ಹೇಳಿದ ತಕ್ಷಣ ಅವರನ್ನು ಬಿಡುಗಡೆ ಮಾಡಲಾಗಿದೆ.

ಎಲ್ಲಿದ್ದಾರೆ ಇನ್ನಿಬ್ಬರು : ಉಗ್ರರು ಅಪಹರಣ ಮಾಡಿರುವ ಬಲರಾಮ್ ಹಾಗೂ ಗೋಪಿಕೃಷ್ಣ ಅವರು ಸುರಕ್ಷಿತವಾಗಿದ್ದಾರೆ ಎಂದು ವಿದೇಶಾಂಗ ಇಲಾಖೆ ಹೇಳಿದೆ. ಅವರನ್ನು ಬಿಡುಗಡೆಗೊಳಿಸಲು ಪ್ರಯತ್ನ ನಡೆಸಲಾಗುತ್ತಿದೆ ಎಂದು ತಿಳಿಸಿದೆ. ಅಪಹರಣ ಮಾಡಿರುವ ಉಗ್ರರು ಇದುವರೆಗೂ ಯಾವುದೇ ಬೇಡಿಕೆಯನ್ನು ಮುಂದಿಟ್ಟಿಲ್ಲ. ಕುಟುಂಬದವರು ಇಬ್ಬರು ಸುರಕ್ಷಿತವಾಗಿ ಮರಳಿ ಬರಲಿ ಎಂದು ಪ್ರಾರ್ಥನೆ ಮಾಡುತ್ತಿದ್ದಾರೆ.

English summary
While two teachers walked into freedom, the other two abducted allegedly by ISIS militants continue to remain in captivity. While there is no word on what the negotiations were, going by the accounts of those in captivity, the militants had a change of heart because they were teachers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X