ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯವಾಗುತ್ತಿಲ್ಲ ಸೆಕ್ಷನ್ 377

|
Google Oneindia Kannada News

ಶ್ರೀನಗರ, ಸೆಪ್ಟೆಂಬರ್ 8: ಸೆಕ್ಷನ್ 377ನಲ್ಲಿನ ನಿರ್ಬಂಧಗಳನ್ನು ತೆರವುಗೊಳಿಸುವ ಮೂಲಕ ಸುಪ್ರೀಂಕೋರ್ಟ್ ಎಲ್‌ಜಿಬಿಟಿ ಸಮುದಾಯಕ್ಕೆ ನೆಮ್ಮದಿ ನೀಡಿದೆ. ಆದರೆ, ಈ ತೀರ್ಪು ಜಮ್ಮು ಮತ್ತು ಕಾಶ್ಮೀರದಲ್ಲಿ ಅನ್ವಯವಾಗುವುದಿಲ್ಲ.

ಸೆಕ್ಷನ್ 377 ಅನ್ವಯ ಕರ್ನಾಟಕದಲ್ಲಿ 377 ಕೇಸು ದಾಖಲುಸೆಕ್ಷನ್ 377 ಅನ್ವಯ ಕರ್ನಾಟಕದಲ್ಲಿ 377 ಕೇಸು ದಾಖಲು

ಸುಪ್ರೀಂಕೋರ್ಟ್‌ನ ತೀರ್ಪು ಅನ್ವಯವಾಗಬೇಕು ಎಂದರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಈ ಸಂಬಂಧ ನಿರ್ಣಯ ಅಂಗೀಕಾರವಾಗಬೇಕು.

LGBT Why the SC ruling on Section 377 is not yet applicable to J&K

ಏಕೆಂದರೆ ಸೆಕ್ಷನ್ 377 ಇಂಡಿಯನ್ ಪೀನಲ್ ಕೋಡ್ ಅಡಿಯಲ್ಲಿ ಇದ್ದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜ್ಯವು ರಣಬೀರ್ ಪೀನಲ್ ಕೋಡ್ ಅಡಿಯಲ್ಲಿದೆ.

ಆರ್‌ಪಿಎಸ್ ಸೆಕ್ಷನ್ 377 ಅಸ್ವಾಭಾವಿಕ ಅಪರಾಧಗಳ ಕುರಿತದ್ದಾಗಿದೆ. ನಿಸರ್ಗದ ನಿಯಮಗಳಿಗೆ ವಿರುದ್ಧವಾಗಿ ಯಾವುದೇ ಪುರುಷ, ಮಹಿಳೆ ಅಥವಾ ಪ್ರಾಣಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸುವವರನ್ನು ಜೀವಾವಧಿ ಶಿಕ್ಷೆಗೆ ಒಳಪಡಿಸಬಹುದು ಅಥವಾ 10 ವರ್ಷದವರೆಗೆ ವಿಸ್ತರಿಸಬಹುದಾದ ಒಂದು ನಿಗದಿತ ಅವಧಿವರೆಗೆ ಜೈಲು ಶಿಕ್ಷೆಗೆ ಒಳಪಡಿಸಬಹುದಾಗಿದೆ.

'ಸಲಿಂಗಿಗಳ ಪ್ರೇಮ, ಕಾಮ ಓಕೆ, ಮದುವೆ ಏಕೆ?''ಸಲಿಂಗಿಗಳ ಪ್ರೇಮ, ಕಾಮ ಓಕೆ, ಮದುವೆ ಏಕೆ?'

ಸುಪ್ರೀಂಕೋರ್ಟ್ ಆದೇಶ ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯ ಆಗದೆ ಇದ್ದರೂ, ಕಾನೂನು ತಜ್ಞರು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ನ 1995ರ ತೀರ್ಪನ್ನು ಪರಾಮರ್ಶಿಸುತ್ತಾರೆ. ಅದರ ಪ್ರಕಾರ, ಇಂಡಿಯನ್ ಪೀನಲ್ ಕೋಡ್‌ನಲ್ಲಿನ ಯಾವುದೇ ನಿಯಮವನ್ನು ಸಂವಿಧಾನದ ಉಲ್ಲಂಘನೆಯಾದ ನೆಲೆಗಟ್ಟಿನಲ್ಲಿ ರದ್ದುಗೊಂಡರೆ, ಅದಕ್ಕೆ ಸಂಬಂಧಿಸಿದ ಆರ್‌ಪಿಸಿಯ ಸೆಕ್ಷನ್ ಕೂಡ ರದ್ದುಗೊಳ್ಳುತ್ತದೆ.

ಸಲಿಂಗಕಾಮ ಅಪರಾಧವಲ್ಲ ಅನ್ನೋದಕ್ಕೆ ನಮ್ಮ ಸಹಮತವೂ ಇದೆ: ಆರೆಸ್ಸೆಸ್ಸಲಿಂಗಕಾಮ ಅಪರಾಧವಲ್ಲ ಅನ್ನೋದಕ್ಕೆ ನಮ್ಮ ಸಹಮತವೂ ಇದೆ: ಆರೆಸ್ಸೆಸ್

ಆದರೆ, ಕಾನೂನಿನ ಜಟಿಲತೆಗಳು ಒಂದೇ ರೀತಿಯದ್ದಾಗಿದ್ದರೆ ಮತ್ತು ಸಂಹಿತೆ ವಿಭಿನ್ನವಾಗಿದ್ದರೆ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬೇಕಾಗುತ್ತದೆ. ಇದನ್ನು ಜಮ್ಮು ಮತ್ತು ಕಾಶ್ಮೀರ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ಯಾವುದಾದರೂ ವ್ಯಕ್ತಿಯ ಹೊರತು ಇನ್ಯಾರೂ ಪ್ರಶ್ನಿಸಲು ಸಾಧ್ಯವಿಲ್ಲ.

ಸೆಕ್ಷನ್ 377 ಮತ್ತು ಆರ್‌ಪಿಸಿ ಸೆಕ್ಷನ್‌ಗಳೆರಡೂ ಒಂದೇ ರೀತಿಯದ್ದು ಎಂದು ಪರಿಗಣಿಸಿ ಹೈಕೋರ್ಟ್ ತೀರ್ಪು ನೀಡಲಿದೆಯೇ ಎನ್ನುವುದು ಮತ್ತೊಂದು ಗೊಂದಲವಾಗಿದೆ.

English summary
The Section 377 verdict may have come as a relief for many, but it is not applicable as yet in the state of Jammu and Kashmir.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X