ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಪೂ ಬರ್ತ್ ಡೇ ದಿನದಿಂದ 'ದಾನ ಉತ್ಸವ', ನಿಮ್ಮ ಕೈಲಾದ್ದು ನೀಡಿ...

Google Oneindia Kannada News

ಇದು ವಿಶಿಷ್ಟವಾದ ಉತ್ಸವ. ಭಾರತದ್ದೇ ಆದ ಹೆಮ್ಮೆಯ 'ದಾನ ಉತ್ಸವ'. ದಾನ ಮಾಡುವುದನ್ನು ಸಂಭ್ರಮಿಸುವ ಸಂದರ್ಭ ಇದು. ಪ್ರತಿ ವರ್ಷ ಅಕ್ಟೋಬರ್ 2ರಿಂದ 8ನೇ ತಾರೀಕಿನ ಮಧ್ಯೆ ಇದನ್ನು ಆಚರಿಸಲಾಗುತ್ತದೆ. ನಮ್ಮ ಸಮಯ, ಹಣ, ವಸ್ತು ಅಥವಾ ಕೌಶಲವನ್ನು ಅಗತ್ಯ ಇರುವ ವ್ಯಕ್ತಿ, ಸಂಸ್ಥೆ ಅಥವಾ ಉದ್ದೇಶಕ್ಕಾಗಿ ಮೀಸಲಿಡುವುದು ಈ ಉತ್ಸವದ ಉದ್ದೇಶ.

ದಾನ ಅಂದರೆ ನಮ್ಮೆಲ್ಲರ ಉದಾರತೆ. ದಿನ ನಿತ್ಯದ ಓಡಾಟ, ಕೆಲಸ, ಯಾರ್ಯಾರದೋ ಭೇಟಿ ಹೀಗೆ ಒತ್ತಡದಲ್ಲೇ ಈ ಆಧುನಿಕ ಜೀವನವನ್ನು ನಾವು ಕಳೆಯುತ್ತಾ ಇದ್ದೀವಿ. ನಮ್ಮ ಕುಟುಂಬ ಮತ್ತು ವೈಯಕ್ತಿಕ ಅಗತ್ಯ ಹಾಗೂ ಸವಾಲನ್ನು ಸರಿತೂಗಿಸುವಲ್ಲೇ ಬದುಕು ಏದುಸಿರು ಬಿಡುತ್ತಾ ಇದೆ.

ಸಾವು ಮತ್ತು ಗ್ರಾಹಕ ಬಾಗಿಲು ತಟ್ಟಿ ಬರಲ್ಲ, ಸಿದ್ಧವಾಗಿಯೇ ಇರಿ!ಸಾವು ಮತ್ತು ಗ್ರಾಹಕ ಬಾಗಿಲು ತಟ್ಟಿ ಬರಲ್ಲ, ಸಿದ್ಧವಾಗಿಯೇ ಇರಿ!

ಆದರೆ, ಇಂಥ ಸನ್ನಿವೇಶದ ಮಧ್ಯೆಯೂ ಕೆಲ ಸ್ಫೂರ್ತಿ ನೀಡುವ ಘಟನೆಗಳನ್ನು ಓದುತ್ತಾ ಇರುತ್ತೇವೆ. ಅದರಲ್ಲಿ ಇರುವ ಪಾತ್ರಧಾರಿಗಳು ನಮಗೆ ಆದರ್ಶವಾಗಿ ಕಾಣುತ್ತಾರೆ. ತಮ್ಮ ದಿನದ ಒಂದಿಷ್ಟು ಸಮಯವನ್ನು ಪಕ್ಕಕ್ಕೆ ತೆಗೆದಿಟ್ಟು ಇತರರಿಗೆ ಅಂತಲೇ ಮೀಸಲಿಡುತ್ತಾರೆ.

Lets celebrate Daan Utsav between October 2nd to 8th

ದಾನ ಉತ್ಸವ ಅಂದರೆ ನಮ್ಮ ಕೈಲಾದಷ್ಟು ಇತರರಿಗೆ ಸಹಾಯ ಮಾಡುವ ಅವಕಾಶ. ನಮ್ಮಿಂದ ಸಾಧ್ಯವಾದಷ್ಟನ್ನು ಗುರುತಿಸಿ, ಅದನ್ನು ಇತರರಿಗೆ ನೀಡಿ, ಅವರ ಮುಖದ ಮೇಲೊಂದು ನೆಮ್ಮದಿಯ ನಗೆಯೊಂದನ್ನು ನೋಡುವ ಸಂಭ್ರಮದ ಕ್ಷಣವಿದು. ಇದು ಖಂಡಿತಾ ಸಂಸ್ಥೆಯಂಥದ್ದಲ್ಲ. ಇಲ್ಲಿ ಅವರು ಮೇಲೆ, ಇವರು ಕೆಳಗೆ ಅನ್ನೋ ಏಣಿ ಇಲ್ಲ. ಆದರೆ ಈ ದಾನ ಉತ್ಸವವನ್ನು ಭಾರತದಾದ್ಯಂತ ನೂರಾರು ಮಂದಿ ಬೆಂಬಲಿಸುತ್ತಾ ಇದ್ದಾರೆ.

ಕಳೆದ ಹತ್ತು ವರ್ಷದಲ್ಲಿ ಈ ದಾನ ಉತ್ಸವದಿಂದ ದೇಶದ ಹತ್ತಾರು ಲಕ್ಷ ಮಂದಿ ಪ್ರೋತ್ಸಾಹಗೊಂಡಿದ್ದಾರೆ ಹಾಗೂ ಸ್ಫೂರ್ತಿಗೊಂಡಿದ್ದಾರೆ. ಆರಂಭದಲ್ಲಿ ಇದೊಂದು ಬಿಂದುವಿನಂತೆ ಸಣ್ಣ ಪ್ರಮಾಣದಲ್ಲೇ ಶುರುವಾಯಿತು. ಆದರೆ ಈಗ ಇದೊಂದು ದೊಡ್ಡ ಸಾರ್ವಜನಿಕ ಚಳವಳಿ. ಇದರಲ್ಲಿ ಕಾರ್ಪೊರೇಟ್ಸ್, ಶಾಲೆಗಳು, ಕಾಲೇಜುಗಳು, ಸರ್ಕಾರಗಳು ಮತ್ತು ಸಮುದಾಯದಿಂದ ಕೂಡ ಭಾಗಿಯಾಗುತ್ತಿವೆ.

ಸ್ವಯಂಪ್ರೇರಿತರಾಗಿ ಇಂಥ ಮಹತ್ತರ ಕಾರ್ಯದಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸುವ "ದಾನದ ಮಂಗಳವಾರ"ವನ್ನು ಭಾರತದಲ್ಲೂ ಆಚರಿಸಲಾಗುತ್ತಿದೆ. ದಾನ ಉತ್ಸವ ವಾರ ಈ ವರ್ಷದ ಅಕ್ಟೋಬರ್ ಎರಡನೇ ತಾರೀಕಿನ ಮಂಗಳವಾರದಿಂದ ಆರಂಭವಾಗಲಿದೆ.

ಇತರ ಕಂದಮ್ಮಗಳಿಗಾಗಿ ಅಮೃತ ಧಾರೆಯೆರೆದ ಮಮತಾಮಯಿಗಳುಇತರ ಕಂದಮ್ಮಗಳಿಗಾಗಿ ಅಮೃತ ಧಾರೆಯೆರೆದ ಮಮತಾಮಯಿಗಳು

ಈ ವರ್ಷದ ಅಕ್ಟೋಬರ್ 2ನೇ ತಾರೀಕು ಗಾಂಧಿ 150ನೇ ವರ್ಷಾಚರಣೆಯ ಆರಂಭ. ಸಮಾಜಕ್ಕೆ ನಾವು ಪಡೆದದ್ದನ್ನು ವಾಪಸ್ ನೀಡಬೇಕು ಎಂದು ಜಗತ್ತಿಗೇ ತೋರಿಸಿಕೊಟ್ಟ ಮಹಾನ್ ವ್ಯಕ್ತಿ ಅವರು. ಇನ್ನೂ ಹೆಚ್ಚಿನ ಒಳಿತನ್ನು ಮಾಡುವುದಕ್ಕೆ ನಮಗೆ ಇದಕ್ಕಿಂತ ಒಳ್ಳೆ ಸಮಯ ಇಲ್ಲ.

Lets celebrate Daan Utsav between October 2nd to 8th

ಈ ವರ್ಷ ನಿಮ್ಮನ್ನು ಸಹ ಇಂಥ ಸಂಭ್ರಮಾಚರಣೆಗೆ ಸೇರಲು ಆಹ್ವಾನ ಮಾಡುತ್ತಾ ಇದ್ದೀವಿ. ನಿಮ್ಮ ಕುಟುಂಬ, ಸ್ನೇಹಿತರು, ಸಹೋದ್ಯೋಗಿಗಳು ಮತ್ತು ನೆರೆಹೊರೆಯವರಿಗೂ ದಾನ ಉತ್ಸವದ ಬಗ್ಗೆ ತಿಳಿಸಿ. ಮತ್ತೊಬ್ಬರಿಗೆ ನೀಡುವುದರ ಖುಷಿಯನ್ನು ಮನಸಾರೆ ಅನುಭವಿಸಿ. ಅದು ಹಣದ ರೂಪದಲ್ಲೇ ಇರಬೇಕು ಅಂತೇನೂ ಇಲ್ಲ.

ವಯಸ್ಸಾದವರ ಜತೆಗೆ ಸಮಯ ಕಳೆಯಿರಿ. ಪುಸ್ತಕ, ಬೊಂಬೆ ಅಥವಾ ಇತರ ವಸ್ತುಗಳನ್ನು ಅವುಗಳ ಅಗತ್ಯ ಇರುವವರನ್ನು ಗುರುತಿಸಿ, ನೀಡಿ. ನಿಮ್ಮ ಮನೆ ಹತ್ತಿರದಲ್ಲಿ ಪ್ರಾಣಿಗಳ ಬಗ್ಗೆ ಕಾಳಜಿ ಮಾಡುವ ಸಂಘ-ಸಂಸ್ಥೆಗಳಿದ್ದರೆ ಅಲ್ಲಿಗೆ ನೀವು ನೀಡಬಹುದಾದ ನೆರವು ನೀಡಿ.

ಒಂದು ಉದಾಹರಣೆ ಕೇಳಿ. ಒಡಿಶಾದ ಬಡಂಬದಲ್ಲಿ ಆಟೋರಿಕ್ಷಾ ಚಾಲಕರು ಅಗತ್ಯ ಇರುವ ಹಿರಿಯರಿಗೆ ಹಳ್ಳಿಯಿಂದ ಸ್ಥಳೀಯ ವೈದ್ಯಕೀಯ ಕ್ಯಾಂಪ್ ಗೆ ಉಚಿತವಾಗಿ ಕರೆದೊಯ್ಯುತ್ತಾರೆ. ಚೆನ್ನೈನ ತರಕಾರಿ ಮಾರಾಟಗಾರರು ಸ್ಥಳೀಯ ಎನ್ ಜಿಒಗಳಿಗೆ ಅಥವಾ ಯುವ ಜನರಿಗೆ ಮೂಟೆಗಟ್ಟಲೆ ತರಕಾರಿಗಳನ್ನು ನೀಡುತ್ತಾರೆ.

ದೃಷ್ಟಿ ದೋಷ ಇರುವ ವ್ಯಕ್ತಿ ಮುಂಬೈನ ಸೆಂಟ್ರಲ್ ನಿಲ್ದಾಣದಲ್ಲಿ ತನ್ನ ಕೌಶಲದಿಂದ ಪೇಂಟ್ ಮಾಡುತ್ತಾರೆ. ಇವೆಲ್ಲ ಸಾವಿರಾರು ಉದಾಹರಣೆಗಳ ಮಧ್ಯೆ ನೀಡಿರುವ ಒಂದೆರಡು ನಿದರ್ಶನ ಅಷ್ಟೇ. ನಮ್ಮಲ್ಲಿ ಪ್ರತಿಯೊಬ್ಬರು ಈ ರೀತಿಯಾದ್ದನ್ನು ಮಾಡಲು ಅಥವಾ ಇದಕ್ಕೂ ಹೆಚ್ಚಿನದ್ದನ್ನು ಮಾಡಲು ಸಾಧ್ಯವಿದೆ.

ಅಜ್ಜನ ಸ್ವಾಭಿಮಾನ, ಯುವಕನ ಮಾನವೀಯತೆ, ಕಣ್ಣೀರುಕ್ಕಿಸುವ ವೈರಲ್ ವಿಡಿಯೋಅಜ್ಜನ ಸ್ವಾಭಿಮಾನ, ಯುವಕನ ಮಾನವೀಯತೆ, ಕಣ್ಣೀರುಕ್ಕಿಸುವ ವೈರಲ್ ವಿಡಿಯೋ

ಆಲೋಚನೆಗಳು ಹಾಗೂ ಉದಾರತೆಯನ್ನು ಪ್ರೋತ್ಸಾಹಿಸುವ ಕೆಲಸಗಳು ಸಾಕಷ್ಟಿವೆ. ನಿಮಗೇ ಸಾಕಷ್ಟು ಸಿಗುತ್ತವೆ. ತುಂಬ ಪ್ರಾಮಾಣಿಕವಾಗಿ ಇತರರಿಗೆ ನೆರವು ನೀಡುತ್ತಿರುವ ಸಂಸ್ಥೆಗಳು ನೀವು ನೀಡಬೇಕು ಎಂದುಕೊಂಡಿರುವ ಬೆಂಬಲ-ಸಹಾಯವನ್ನು ಸ್ವಾಗತಿಸುತ್ತವೆ. ಹಲವು ಸಂಸ್ಥೆಗಳು, ವೆಬ್ ಸೈಟ್ ಗಳು ಮತ್ತು ವೇದಿಕೆಗಳ ಮೂಲಕ ದಾನಕ್ಕೆ ಇರುವ ಅವಕಾಶಗಳನ್ನು ನೀವು ಹುಡುಕಬಹುದು.

ನಿಮ್ಮ ಹೃದಯವನ್ನು ಮುಟ್ಟುವ ಯಾವುದಾದರೂ ಒಂದನ್ನು ಅಥವಾ ನಿಮಗೆ ಈಗಾಗಲೇ ಗೊತ್ತಿರುವ ಅಂಥ ವ್ಯಕ್ತಿ-ಸಂಸ್ಥೆಗೆ ನೆರವಾಗಬಹುದು. ಆಯ್ಕೆ ಮತ್ತು ಸ್ಪಂದನೆ ನಿಮಗೇ ಬಿಟ್ಟಿದ್ದು. ಯಾವುದೇ ಸ್ವಾರ್ಥ ಇಲ್ಲದೆ ನೆರವು ನೀಡಿ. ಸಂತೋಷದಿಂದ ಸಹಾಯ ಮಾಡಿ.

ಈ ವರ್ಷದ ಆಚರಣೆಗೆ ನಾವು ಸಿದ್ಧರಾಗಿದ್ದೇವೆ. ನಾವು ಒಂದು ಹೆಜ್ಜೆ ಮುಂದಕ್ಕೆ ಇಟ್ಟಿದ್ದೇವೆ. ಕ್ರಿಸ್ ಮಸ್, ದೀಪಾವಳಿ, ಈದ್, ಹೊಸ ವರ್ಷ ಇದೇ ರೀತಿ ನಾನಾ ಹಬ್ಬಗಳನ್ನು ಭಾರತದಲ್ಲಿ ಆಚರಿಸುವಂತೆ ಅಕ್ಟೋಬರ್ 2ರಿಂದ 8ನೇ ತಾರೀಕು ನಮ್ಮ ಕ್ಯಾಲೆಂಡರ್ ನಲ್ಲಿ ದಾನ ಉತ್ಸವ ಎಂದು ಗುರುತು ಮಾಡಿಟ್ಟಿದ್ದೇವೆ. ಪ್ರತಿ ವರ್ಷ ನಾವು ನಿಮ್ಮ ಇದಕ್ಕಾಗಿ ಆಹ್ವಾನ ಮಾಡುತ್ತೇವೆ.

ಉದಾರತೆ ಎಂಬ ಸದ್ಗುಣವನ್ನು ನಾವು ಸದಾ ಸಂಭ್ರಮಿಸೋಣ.

ವಿಶ್ವಾಸಪೂರ್ವಕವಾಗಿ,

ಆಲಿಯಾ ಭಟ್

ಅಮಿತಾಬ್ ಬಚ್ಚನ್

ಅನು ಅಗಾ

ಅಜೀಂ ಪ್ರೇಮ್ ಜೀ

ಛವಿ ರಜವತ್

ದೇವಿ ಶೆಟ್ಟಿ

ನ್ಯಾ.ಶ್ರೀಕೃಷ್ಣ

ಲತಾ ಮಂಗೇಶ್ಕರ್

ಮೇರಿ ಕೋಮ್

ಸಚಿನ್ ತೆಂಡೂಲ್ಕರ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X