ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೀಪಾವಳಿ ಸಮಯದಲ್ಲಿ ಮಕ್ಕಳು ಪಟಾಕಿ ಸಿಡಿಸಲಿ: ಜಗ್ಗಿ ವಾಸುದೇವ್

|
Google Oneindia Kannada News

ನವದೆಹಲಿ, ನವೆಂಬರ್ 3: ಪಟಾಕಿ ಸಿಡಿಸುವ ವಿಚಾರದಲ್ಲಿ ದೇಶ ಇಬ್ಭಾಗವಾಗಿರುವ ಈ ಸಂದರ್ಭದಲ್ಲಿ ಆಧ್ಯಾತ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವ್ ಅವರು, "ಮಕ್ಕಳು ಪಟಾಕಿಯ ಆನಂದವನ್ನು ಅನುಭವಿಸುವುದನ್ನು ತಡೆಯಲು ವಾಯು ಮಾಲಿನ್ಯದ ಬಗ್ಗೆ ಕಾಳಜಿ ಒಂದು ಕಾರಣವಲ್ಲ" ಎಂದು ಹೇಳಿದ್ದಾರೆ.

ದೇಶದಲ್ಲಿ ಪಟಾಕಿ ನಿಷೇಧವನ್ನು ಬೆಂಬಲಿಸುವ ಜನರ ಬಗ್ಗೆ ಮಾತನಾಡುತ್ತಾ ವಾಸುದೇವ್ ಅವರು "ಮಕ್ಕಳಿಗಾಗಿ ನೀವು ತ್ಯಾಗ ಮಾಡಿ. 3 ದಿನಗಳ ಕಾಲ ಅವರು ಪಟಾಕಿಗಳನ್ನು ಸಿಡಿಸುವುದನ್ನು ಆನಂದಿಸಲಿ" ಎಂದು ಹೇಳಿದ್ದಾರೆ.

ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ವಾಸುದೇವ್ ಅವರು "ನಾನು ಕೆಲವು ವರ್ಷಗಳಿಂದ ಪಟಾಕಿಯನ್ನು ಹೊತ್ತಿಸಿಲ್ಲ. ಆದರೆ ನಾನು ಚಿಕ್ಕವನಾಗಿದ್ದಾಗ, ಅದು ಎಷ್ಟು ಪಟಾಕಿ ಸಿಡಿಸುತ್ತಿದ್ದೆ. ಸೆಪ್ಟೆಂಬರ್ ತಿಂಗಳಿನಿಂದ ನಾವು ಪಟಾಕಿಗಳ ಕನಸು ಕಾಣುತ್ತಿದ್ದೆವು. ದೀಪಾವಳಿ ಮುಗಿದ ನಂತರ, ಮುಂದಿನ ಒಂದು-ಎರಡು ತಿಂಗಳು, ನಾವು ಪಟಾಕಿಗಳನ್ನು ಹಚ್ಚುತ್ತೇವೆ. ಪ್ರತಿದಿನ ಪಟಾಕಿಗಳನ್ನು ಸಿಡಿಸುತ್ತಲೇ ಇರುತ್ತೇದ್ದೆವು" ಎಂದು ಬರೆದಿದ್ದಾರೆ.

Let children burst crackers during Diwali - Jaggi Vasudev

ಎರಡು ದಿನಗಳ ಹಿಂದೆ, ಪಶ್ಚಿಮ ಬಂಗಾಳದ ಕಲ್ಕತ್ತಾ ಹೈಕೋರ್ಟ್ ವಿಧಿಸಿದ್ದ ಪಟಾಕಿ ನಿಷೇಧವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು. ಗಾಳಿಯ ಗುಣಮಟ್ಟ "ಉತ್ತಮ" ಅಥವಾ "ಮಧ್ಯಮ" ಇರುವ ಪ್ರದೇಶಗಳಲ್ಲಿ ಪ್ರಮಾಣೀಕೃತ ಹಸಿರು ಕ್ರ್ಯಾಕರ್‌ಗಳನ್ನು ಮಾರಾಟ ಮಾಡಬಹುದು ಮತ್ತು ಸಿಡಿಯಬಹುದು ಎಂದು ಪೀಠವು ತೀರ್ಪು ನೀಡಿದೆ. ಸುಪ್ರೀಂ ಕೋರ್ಟ್‌ನ ರಜಾಕಾಲದ ಪೀಠ ಈ ಆದೇಶ ನೀಡಿದೆ. ಹಸಿರು ಪಟಾಕಿ ಸೇರಿದಂತೆ ಪಟಾಕಿ ಕೊಲ್ಕತ್ತಾ ಹೈಕೋರ್ಟ್‌ನ ಕಂಬಳಿ ನಿಷೇಧವನ್ನು ಪ್ರಶ್ನಿಸಿ ಎರಡು ಅರ್ಜಿಗಳನ್ನು ಪೀಠವು ವಿಚಾರಣೆ ನಡೆಸುತ್ತಿದೆ. ಪಟಾಕಿ ವ್ಯಾಪಾರಿಗಳು ಈ ಅರ್ಜಿ ಸಲ್ಲಿಸಿದ್ದರು.

ಆದರೆ ಇತ್ತೀಚೆಗೆ ವಾಯುಮಾಲಿನ್ಯ ಹೆಚ್ಚಾಗುವ ಭೀತಿ ಉಂಟಾಗಿದೆ. ಇದರ ಬೆನ್ನಲ್ಲೆ ವಿವಿಧ ರಾಜ್ಯಗಳಲ್ಲಿ ಪಟಾಕಿ ನಿಷೇಧಿಸಲಾಗಿದ್ದರೆ ಇನ್ನೂ ಕೆಲ ರಾಜ್ಯಗಳಲ್ಲಿ ಹಸಿರು ಪಟಾಕಿಗೆ ಮಾತ್ರ ಅವಕಾಶ ನೀಡಲಾಗಿದೆ. ಹೀಗಾಗಿ ಪಟಾಕಿ ನಿಷೇಧದ ಕುರಿತು ದ್ವಂದ್ವ ನಿಲುವು ಇದೆ. ಯಾಕೆಂದರೆ ದೇಶದಲ್ಲಿ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿ ಎಲ್ಲವೂ ಸಹಜಸ್ಥಿತಿಯತ್ತ ಮರುಕಳಿಸುತ್ತಿದ್ದಂತೆ ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಾಗುತ್ತಿದೆ. ದೀಪಾವಳಿಗೆ ಮುಂಚಿತವಾಗಿಯೇ ದೆಹಲಿಯಲ್ಲಿ ವಾಯುಮಾಲಿನ್ಯ ಕಳೆಪೆಯಾಗಿರುವ ವರದಿ ಬಂದಿದೆ. ಕೊರೊನಾ ಕಾಲದಿಂದಲೂ ಮೊದಲ ಬಾರಿಗೆ "ಅತ್ಯಂತ ಕಳಪೆ" ವರ್ಗಕ್ಕೆ ಪ್ರವೇಶಿಸುವಷ್ಟು ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಹದಗೆಟ್ಟಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಕಾರ ಮಂಗಳವಾರ ನಗರದ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 303 ಆಗಿತ್ತು.

ದೆಹಲಿಯ ನೆರೆಹೊರೆಯ ನಗರಗಳಾದ ಫರಿದಾಬಾದ್ (306), ಘಾಜಿಯಾಬಾದ್ (334) ಮತ್ತು ನೋಯ್ಡಾ (303) ಕೂಡ ಕಳಪೆ ಗಾಳಿಯ ಗುಣಮಟ್ಟವನ್ನು ದಾಖಲಿಸಿದೆ. ಇದಕ್ಕೂ ಮೊದಲು ದೆಹಲಿಯಲ್ಲಿ (ಅಕ್ಟೋಬರ್ 17) ಕಳಪೆ ವಿಭಾಗದಲ್ಲಿ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 298 ದಾಖಲಾಗಿತ್ತು.

Let children burst crackers during Diwali - Jaggi Vasudev

ಗಾಳಿಯ ಗುಣಮಟ್ಟವನ್ನು ಈ ರೀತಿ ಪರಿಗಣಿಸಲಾಗುತ್ತದೆ- ಸೊನ್ನೆ ಮತ್ತು 50 ರ ನಡುವಿನ (AQI) ಸೂಚ್ಯಂಕವನ್ನು 'ಉತ್ತಮ' ಎಂದು ಪರಿಗಣಿಸಲಾಗುತ್ತದೆ, 51 ಮತ್ತು 100 ನಡುವಿನ (AQI) ಸೂಚ್ಯಂಕವನ್ನು 'ತೃಪ್ತಿಕರ' ಎನ್ನಲಾದರೆ, 101 ಮತ್ತು 200 ನಡುವಿನ (AQI) ಸೂಚ್ಯಂಕವನ್ನು 'ಮಧ್ಯಮ' ಎಂದು ಪರಿಗಣಿಸಲಾಗುತ್ತದೆ. ಇನ್ನೂ 201 ಮತ್ತು 300 'ಕಳಪೆ' ಹಾಗೂ 301 ಮತ್ತು 400 ನಡುವಿನ (AQI) ಸೂಚ್ಯಂಕವನ್ನು 'ಅತ್ಯಂತ ಕಳಪೆ' ಮತ್ತು 401- 500 ನಡುವಿನ (AQI) ಸೂಚ್ಯಂಕವನ್ನು 'ತೀವ್ರ' ಎಂದು ಪರಿಗಣಿಸಲಾಗುತ್ತದೆ.

Recommended Video

ಅಪ್ಪು ಸಾವಿನಿಂದ ಕಂಗೆಟ್ಟು ಜಯದೇವ ಆಸ್ಪತ್ರೆಯಲ್ಲಿ ತುಂಬಿದ ಜನಸಾಗರ | Oneindia Kannada

ಮಂಗಳವಾರ ದೆಹಲಿಯಲ್ಲಿ ಮಾಲಿನ್ಯದ ತೀವ್ರತೆಗೆ ಪಿಎಂ 2.5 ಮಾಲಿನ್ಯದ ಶೇಕಡಾ 6 ರಷ್ಟು ಸ್ಟಬಲ್ ಸುಡುವಿಕೆಯಾಗಿದೆ ಎಂದು ವಾಯು ಗುಣಮಟ್ಟದ ಮುನ್ಸೂಚನೆ ಸಂಸ್ಥೆ SAFAR ಹೇಳಿದೆ. ಉಳಿದ ಮಾಲಿನ್ಯಕ್ಕೆ ಸ್ಥಳೀಯ ಮೂಲಗಳು ಕಾರಣ ಎಂದು ಪಿಟಿಐ ವರದಿ ಮಾಡಿದೆ. "2019 ರ ಪಟಾಕಿ-ಸಂಬಂಧಿತ ಹೊರಸೂಸುವಿಕೆಯ 50 ಪ್ರತಿಶತವನ್ನು ನಾವು ಪರಿಗಣಿಸಿದ್ದರೂ ಸಹ, AQI ನವೆಂಬರ್ 4 ರಾತ್ರಿಯಿಂದ 'ತೀವ್ರ' ವರ್ಗಕ್ಕೆ ಕುಸಿಯುತ್ತದೆ ಮತ್ತು ನವೆಂಬರ್ 5 ರವರೆಗೆ ಇರುತ್ತದೆ ಎಂದು ಊಹಿಸಲಾಗಿದೆ" ಎಂದು SAFAR ಹೇಳಿದೆ. ಕಳೆದ ವರ್ಷ, ನವೆಂಬರ್ 5 ರಂದು ದೆಹಲಿಯ ಮಾಲಿನ್ಯದಲ್ಲಿ ಪಟಾಕಿ ಪಾಲು ಶೇಕಡಾ 42 ರಷ್ಟಿತ್ತು.

English summary
At a time when the country is divided over bursting firecrackers, spiritual leader Sadhguru Jaggi Vasudev said "concern about air pollution is not a reason to prevent kids from experiencing the joy of firecrackers".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X