ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೆಸ್ಬಿಯನ್ಸ್, ಗೇಗಳು ತೃತೀಯಲಿಂಗಿಗಳಲ್ಲ: ಸುಪ್ರೀಂಕೋರ್ಟ್

By Mahesh
|
Google Oneindia Kannada News

ಬೆಂಗಳೂರು, ಜೂನ್ 30: ಲೆಸ್ಬಿಯನ್ಸ್,ಗೇ ಅಥವಾ ಸಲಿಂಗಕಾಮಿಗಳನ್ನು ತೃತೀಯಲಿಂಗಿಗಳು ಎಂದು ಕರೆಯಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.

ಈ ಮೂಲಕದ 2014ರ ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಯಾವುದೇ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಸುಪ್ರೀಂಕೋರ್ಟ್ ಮಂಗಳಮುಖಿ (ಟ್ರಾನ್ಸ್​ಜೆಂಡರ್) ಸಮುದಾಯವನ್ನು ಪುರುಷರು ಮತ್ತು ಸ್ತ್ರೀಯರ ಜೊತೆಗೆ ತೃತೀಯ ಲಿಂಗಿಗಳು ಎಂದು ಮಾನ್ಯ ಮಾಡಿತ್ತು.

ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ (ನ್ಯಾಷನಲ್ ಲೀಗಲ್ ಸರ್ವೀಸಸ್ ಅಥಾರಿಟಿ) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಬಳಿಕ ಸುಪ್ರೀಂಕೋರ್ಟ್ ಜಸ್ಟೀಸ್ ಎಕೆ ಸಿಕ್ರಿ ಹಾಗೂ ಎನ್ ವಿ ರಮಣ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ.[ಸಲಿಂಗಿಗಳಿಗೆ ಸದ್ಯಕ್ಕೆ ಸಿಹಿ ಸುದ್ದಿ ನೀಡಿದ ಸುಪ್ರೀಂಕೋರ್ಟ್]

ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರವೇಶ ಕಲ್ಪಿಸುವಾಗ ಮತ್ತು ಸರ್ಕಾರಿ ನೇಮಕಾತಿಗಳ ಸಂದರ್ಭದಲ್ಲಿ ಈ ತೃತೀಯ ಲಿಂಗಿಗಳನ್ನು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳು ಎಂಬುದಾಗಿ ಪರಿಗಣಿಸಬೇಕು ಎಂದು ಪೀಠವು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿತು.[ಐಪಿಸಿ 377 : ಸುಪ್ರೀಂ ತೀರ್ಪೂ, ಲೈಂಗಿಕ ಆಸಕ್ತಿಯೂ]

Lesbians, gays, bisexuals are not third gender, Supreme Court clarifies

ನ್ಯಾಯಮೂರ್ತಿಗಳಾದ ಕೆ.ಎಸ್. ರಾಧಾಕೃಷ್ಣನ್ ಮತ್ತು ಎ.ಕೆ. ಸಿಕ್ರಿ ಅವರನ್ನು ಒಳಗೊಂಡ ಸುಪ್ರೀಂಕೋರ್ಟ್ ಪೀಠವು ಪ್ರತ್ಯೇಕವಾದ ಆದರೆ ಒಟ್ಟಿಗೆ ನೀಡಿದ ತೀರ್ಪುಗಳಲ್ಲಿ ಅವಳಿ ಲಿಂಗಿಗಳ ಹೊರತಾಗಿ ನಪುಂಸಕರನ್ನು ಸಂವಿಧಾನದತ್ತವಾದ ಮತ್ತು ಸಂಸತ್ತು, ಶಾಸನ ಸಭೆಗಳಿಂದ ರಚಿತವಾದ ಕಾನೂನುಗಳ ಪ್ರಕಾರ ಅವರ ಹಕ್ಕುಗಳ ರಕ್ಷಣೆಯ ಸಲುವಾಗಿ ತೃತೀಯ ಲಿಂಗಿಗಳಾಗಿ ಪರಿಗಣಿಸಬೇಕು ಎಂದು ಈ ಹಿಂದೆ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಸೆಲೆಬ್ರಿಟಿ ಚೆಫ್ ರಿತು ದಾಲ್ಮಿಯಾ, ಹೊಟೇಲ್ ಉದ್ಯಮಿ ಅಮನ್​ನಾಥ, ನ್ಯತ್ಯಪಟು ಎನ್.ಎಸ್. ಜೋಹರ್ ಮತ್ತಿತರ ಸಿಲೆಬ್ರಿಟಿ ಸಲಿಂಗಕಾಮಿಗಳು ಸಲಿಂಗಕಾಮವನ್ನು ಕ್ರಿಮಿನಲ್ ಅಪರಾಧವಾಗಿ ಪರಿಗಣಿಸಿದ ಐಪಿಸಿ ಸೆಕ್ಷನ್ 377ರ ಸಿಂಧುತ್ವವನ್ನು ಪ್ರಶ್ನಿಸಿ ಬುಧವಾರ ಸಲ್ಲಿಸಿದ್ದ ಜಂಟಿ ಅರ್ಜಿಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದೆ. ಈ ಮೂಲಕ ಈ ಸೆಕ್ಷನ್ ದುರ್ಬಳಕೆಯಾಗುತ್ತಿರುವುದನ್ನು ತಡೆಗಟ್ಟುವಂತೆ ಸೂಚಿಸಿದೆ. [ಸಲಿಂಗಕಾಮ ರೋಗ ಲಕ್ಷಣವಲ್ಲ: ಮನೋರೋಗ ವೈದ್ಯರು]

ಈ ತೀರ್ಪಿನ ಪರಿಣಾಮವಾಗಿ ಜನನ ಪ್ರಮಾಣಪತ್ರ, ಪಾಸ್​ಪೋರ್ಟ್, ಪಡಿತರ ಚೀಟಿ, ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ ಎಲ್ಲಾ ಗುರುತಿನ ದಾಖಲೆಗಳಲ್ಲಿ ಮಂಗಳಮುಖಿಯರನ್ನು ತೃತೀಯ ಲಿಂಗಿಗಳು ಎಂಬುದಾಗಿ ಮಾನ್ಯ ಮಾಡಬೇಕಾಗುತ್ತದೆ. (ಪಿಟಿಐ)

English summary
The Supreme Court on Thursday refused to modify its 2014 order on transgenders while clarifying that lesbians, gays and bisexuals are not third gender.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X